ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಂಗಳ ಕೊಳದಲ್ಲಿ ಕಪ್ಪು ಚೆಲುವೆಯರು

ನಾ ಕರಿಯಳೆಂದು ನೀ ಜರಿಯಬೇಡ ಎಲೆ ಗೆಳತಿ ಗರ್ವದಿಂದ ಎಂಬುದಕ್ಕೆ ಸಾಕ್ಷಿಯೇನೋ ಎಂಬಂತೆ ಈ ಚಿತ್ರಗಳಿವೆ. ಇದು ಬಣ್ಣದ ಯುಗ. ಬಣ್ಣವೇ, ಬಣ್ಣ ಬಣ್ಣದ ಮಾತೇ ಎಲ್ಲರನ್ನೂ ಮರುಳುಗೊಳಿಸುತ್ತಿದೆ. ಆದರೇನು? ಕಪ್ಪು ಬಿಳುಪಿನ ಹಿರಿಮೆಗೆ ಒಂದಿಷ್ಟೂ ಕುಂದುಂಟಾಗಿಲ್ಲ. ನಾವು ನಮ್ಮ ಪುಸ್ತಕದಲ್ಲಿ ಅಡಗಿಸಿಟ್ಟ ನವಿಲುಗರಿಗಳೇನೋ ಎಂಬಂತೆ ಈ...

read more
ಕಥೆಗಳು ಬೆಳಗಲಿ “ಛಂದ”ದಿಂದ

ಸೊಂಡೂರಿನ ಬಾಗಿಲಲ್ಲೆ ಸಾಫ್ಟ್ ವೇರ್ ಲೋಕದ ಮೋಡ, ಮಳೆ, ಗಾಳಿ, ಬಿಸಿಲು... ಇವೆಲ್ಲ ಕಾಣುವಂತಾದರೆ ಹೇಗಿದ್ದೀತು? ಇಂಥ ಅಚ್ಚರಿಯನ್ನು ನಿಶ್ಚಯಿಸಿದವರು ಕಥೆಗಾರ ವಸುಧೇಂದ್ರ. ಒಂದು ಪುಟ್ಟ ಊರಿನಲ್ಲೂ ಓದುಗರ ಗ್ರಹಿಕೆಗೆ ದಕ್ಕುವ ಹಾಗೆ, ಎಲ್ಲ ಬೆರಗಿನಿಂದ ನೋಡುವ ಐಟಿ ಕ್ಷೇತ್ರದ ಮನುಷ್ಯಲೋಕವನ್ನು, ಮನಸ್ಸುಗಳ ಲೋಕವನ್ನು...

read more
ಅಪ್ಪ ಆಫೀಸಿಗೆ ಹೋಗಿರಲಿಲ್ಲ…

"ರಾಗಿ ರೊಟ್ಟಿ" ಕಾಲಂ ಊರ್ಮಿಳೆ ಗಲ್ಲಿ ಕ್ರಿಕೆಟ್- ಯಾವುದೇ ಗಲ್ಲಿಯಲ್ಲಿ ಕ್ರಿಕೆಟ್ ಆಡಿದರೂ ಅದರ ಫೂಟೇಜ್ ನಮಗೆ ಕಳಿಸಿಕೊಡಿ, ಪ್ರಸಾರ ಮಾಡುತ್ತೇವೆ. ಇಎಸ್ ಪಿಎನ್ ಸ್ಪೋರ್ಟ್ಸ್ ಚಾನಲ್ ನ ಗುಂಡಿ ಒತ್ತಿದಾಗ ಕಾಣಿಸಿದ ಮನವಿ ಇದು. ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್. ಹೊಲಗಳಲ್ಲಿ ಬೆಳೆ ಕಟಾವಾದ ನಂತರ ನಡೆಯುವ ಮೊದಲ ಹಬ್ಬವೇ...

read more
ಆ ಪುಟಗಳಲ್ಲಿತ್ತು, ಲವಲವಿಕೆಯೆಂಬ ಹಕ್ಕಿಗಳ ಕಲರವ

ಕಥೆಗಾರ ಜಯಂತ್ ಕಾಯ್ಕಿಣಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಾಗ ಅವರಿಗೂ ಗೊತ್ತಿಲ್ಲದ ಹಾಗೆ ಅವರೊಳಗೊಂದು ಸುಂದರ ಕನಸು ಇತ್ತು. ಅದಕ್ಕೆ ಅಷ್ಟೇ ಸೊಗಸಾದ ರೂಪವೂ ಸಿಕ್ಕಿದ್ದು ಅವರು "ಭಾವನಾ" ಮಾಸಿಕದ ಸಂಪಾದಕರಾದಾಗ. ಪತ್ರಿಕೋದ್ಯಮಕ್ಕೆ, ಅದರಲ್ಲೂ ಸಾಹಿತ್ಯಾಸಕ್ತರಿಗೆ ಹೊಸ ಗರಿಗಳ ಹಕ್ಕಿ "ಭಾವನಾ" ರೂಪದಲ್ಲಿ ಸಿಕ್ಕಿತ್ತು. ನಿಜಕ್ಕೂ...

read more
ಕೈ ಹಿಡಿದು ನಡೆಸಿದವ ನೀನಲ್ಲವೆ…

ಯಾಮಿನಿ ನನಗೆ ಗೊತ್ತು ಕಣೋ "ಚಂದಮಾಮ", ಅವತ್ತು ನೀನು ಮತ್ತೆ ಮತ್ತೆ ನಮ್ಮನ್ನು ಕರೆದು ಕೂರಿಸಿಕೊಂಡು ಕಥೆಗಳನ್ನು ಹೇಳದೇ ಇರುತ್ತಿದ್ದರೆ ಇವತ್ತು ಹೀಗೆ ನಿನ್ನೊಂದಿಗೆ ಮನಸು ತೆರೆದಿಟ್ಟು ಮಾತನಾಡಿಸುವುದಕ್ಕೂ ನನ್ನೊಳಗೊಂದು ಭಾವದೊರತೆ ಇರುತ್ತಿರಲಿಲ್ಲ. ಇಂದಿನ ಹುಡುಗರದ್ದಾದರೂ ಎಂಥ ಸ್ಥಿತಿ ನೋಡು. ಇಲ್ಲಿ ಇವರೆದುರು...

read more
ಜಗದ ಜಾಲಾಡಿಗರಿಗೆ ರುಚಿ ಹತ್ತಿಸಿದ “ಚುರುಮುರಿ”

"ಚುರುಮುರಿ" ಸ್ವಲ್ಪ ಸಿಹಿ, ಸ್ವಲ್ಪ ಸ್ಪೈಸಿ. ಹಾಯ್ ಬೆಂಗಳೂರ್ ಹೇಗೆ ಬೆಂಗಳೂರು ಆಚೆಗೂ ಭರ್ಜರಿಯಾಗಿ ಬೆಳೆದಿದೆಯೋ ಹಾಗೇನೇ ಈ ಚುರುಮುರಿ ಕಥೆ ಕೂಡ. ಹಾಯ್ ಮೈಸೂರ್ ಅಂತಲೇ ಆರಂಭವಾದ ಈ ಬ್ಲಾಗಿಗೆ ಮೈಸೂರು ಬಿಡಿ, ಕರ್ನಾಟಕ ಬಿಡಿ, ಇಂಡಿಯಾ ಬಿಡಿ, ಈ ಜಗತ್ತಿನಲ್ಲೇ ಸಿಕ್ಕಾಪಟ್ಟೆ ಓದುಗರಿದ್ದಾರೆ. ಮೈಸೂರಿನವರಿಗೆ ಕಡ್ಲೆಬೀಜ,...

read more
ಕರುಣಾಳು ಬಾ ಬೆಳಕೆ…

ಅವಧಿ ನಿತ್ಯವೂ ಹೊಸ ಬರಹಗಳನ್ನು ಒಳಗೊಳ್ಳುವ ಬ್ಲಾಗ್. ಅಕಸ್ಮಾತ್ ಆಗಿಲ್ಲವೆಂದರೆ, "ಕರುಣಾಳು" ಕೈಕೊಟ್ಟಿದ್ದಾನೆ ಎಂದರ್ಥ. ಈ ಮಳೆಯ ಸೀಸನ್ನಿನಲ್ಲಿ ಗಾಳಿ ಸ್ವಲ್ಪ ಜೋರಾಗಿ ಬೀಸಿದರೂ ಶುರುವಾಗುತ್ತದೆ ವಿದ್ಯುತ್ ಕಣ್ಣಾಮುಚ್ಚಾಲೆಯಾಟದ ಶಾಕ್. ಗಾಳಿಗೆ ಆರಿ ಹೋಗೋದು ಬುಡ್ಡಿದೀಪ ಮಾತ್ರವಲ್ಲ ಅನ್ನೋದು ಈಗ ಗೊತ್ತಾಗಿದೆ. ಈ ತಾಂತ್ರಿಕ...

read more
ಅಮೆರಿಕೆಯ ನೆಲದಲ್ಲಿ ಕನ್ನಡದ ದಾರ

ನೆಲ ಬದಲಾಗಬಹುದು. ಆದರೆ ಅದು ಕೊಟ್ಟ ಗಂಧಕ್ಕಿರುವ ಆಯಸ್ಸು ದೊಡ್ಡದು. ಹಾಗಾಗಿ ಕನಸುವ ಪರಿ, ತವಕಿಸುವ ಪರಿ ಮೂಲದಲ್ಲಿ ಒಂದೇ ಆಗಿರುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಕಳೆದುಕೊಂಡು ತೇಲುತ್ತಿರುವಾಗಲೂ ಮತ್ತೆ ಭೂಮಿಯನ್ನು ಮುಟ್ಟುವ ಕಾತುರ ಸುನಿತಾ ವಿಲಿಯಮ್ಸಳೊಳಗೆ ತೀವ್ರವಾಗೇ ಇರುತ್ತದೆ. ಅಮೆರಿಕಾದಲ್ಲಿ ನೆಲೆ...

read more
ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ…

ಪ್ರಿಯ ವಸುಧೇಂದ್ರ, ಪತ್ರಿಕೆಯೊಂದರಲ್ಲಿ ಬಂದ ನಿಮ್ಮ ಹೊಸ ಕಥೆ ತುಂಬಾ ಹಿಡಿಸಿತು. ಪ್ರಿಯ ಸುನಂದಾ ಕಡಮೆ, ನಿಮ್ಮ "ಪುಟ್ಟ ಪಾದದ ಗುರುತು" ಒಂದು ಸುಂದರ ಬರವಣಿಗೆ. ಪ್ರಿಯ ವಿಕ್ರಮ್ ವಿಸಾಜಿ, ನಿಮ್ಮ ಹೊಸ ಕವನ ಸಂಕಲನ ಪ್ರಕಟವಾಯಿತಂತೆ? ಹೊಸ ಪುಸ್ತಕ ತಂದವರ ಸಾಲಲ್ಲಿರುವ ಚಿದಾನಂದ ಸಾಲಿ, ಮಲ್ಲಿಕಾರ್ಜುನ ತೂಲಹಳ್ಳಿ(ಷರೀಫನ ಬೊಗಸೆ),...

read more
ಹಾಲು ಕುಡಿದಾ ಹುಡುಗನ ಬಲ್ಲಿರೇನ…

ರಷೀದ ನಮ್ಮ ನಡುವಿನ ಪ್ರೀತಿಯ ಹೆಸರು. ಒಮ್ಮೆ ಮಗುವಿನಂತೆ, ಮತ್ತೊಮ್ಮೆ ಸಂತನಂತೆ, ಮಗದೊಮ್ಮೆ ಕಿಲಾಡಿಯಂತೆ ಮಾತಾಡುವ ಇವರ ಬರಹಗಳೊಳಗಿನ ಹುಡುಗ ಪ್ರೀತಿ ಮಾಡೋ ಹೊತ್ತಲ್ಲಿ ಕಾಡು ಸುತ್ತುತ್ತಾನೆ. ಗಿಡಕ್ಕೆ ಪಾತಿ ಮಾಡಿ ನೀರು ಬಿಡುತ್ತಾನೆ. ಚೇಷ್ಟೆ ಮಾಡೋ ಹೊತ್ತಲ್ಲಿ ಗಂಭೀರವಾಗುತ್ತಾನೆ. ಇದು, ಕವಿ, ಕಥೆಗಾರ ಅಬ್ದುಲ್ ರಷೀದ್ ಬಗ್ಗೆ...

read more
ನಿರುತ್ತರನಾದನೆ ಚಾರ್ವಾಕ?

ಇದು ಅವಧಿಗಾಗಿ ಮಾತ್ರ  ಡಾ. ನಟರಾಜ್ ಹುಳಿಯಾರ್ ಸುಮಾರು ೩೫ ವರ್ಷಗಳ ಕಾಲ ಕರ್ನಾಟಕದ ಅನೇಕ ರೀತಿಯ ಚಳವಳಿಗಳನ್ನು ಜೀವಂತವಾಗಿರಿಸಿದವರು ಪ್ರೊ. ಕೆ ರಾಮದಾಸ್. ಮಹಾರಾಜ ಕಾಲೇಜಿನ ಕ್ಲಾಸುಗಳಲ್ಲಿ, ಮೈಸೂರಿನ ಮೂಲೆಗಳಲ್ಲಿ, ಕರ್ನಾಟಕದ ನೂರಾರು ಊರುಗಳಲ್ಲಿ ಮಾಡಿದ ಭಾಷಣದ ಮೂಲಕವೇ ನಾಡಿನ ರಾಜಕಾರಣ ಹಾಗೂ ಸಮಾಜವನ್ನು ಕಟುವಾಗಿ...

read more
ರಾಮದಾಸ್ ಗಳಿಗೆ

ರಾಮದಾಸ್ ಬದುಕಿನ ಅಪರೂಪದ ಕ್ಷಣಗಳು ಹೀಗೆ ಸೆರೆಯಾಗಿವೆ...   ಲಂಕೇಶ್, ತೇಜಸ್ವಿ ಜೊತೆ ರಾಮದಾಸ್  ರಾಮದಾಸ್ ಮದುವೆ ಆಮಂತ್ರಣ ಪತ್ರಿಕೆ ಹೀಗಿತ್ತು  ರಾಮದಾಸ್ ಚಿತ್ರ ಕ್ಲಿಕ್ಕಿಸುತ್ತಿರುವ ಮಗಳು ಸಮತಾ. ಜೊತೆಯಲ್ಲಿ ಪತ್ನಿ...

read more
ರಾಮದಾಸ್ ತೀರಿಕೊಂಡರು

ಹಿರಿಯ ಚಿಂತಕ ಪ್ರೊ. ಕೆ ರಾಮದಾಸ್ ಇನ್ನಿಲ್ಲ. ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ತೇಜಸ್ವಿ ನಿಧನದ ಬೆನ್ನಲ್ಲೇ ಸಾಂಸ್ಕೃತಿಕ ಲೋಕ ಮತ್ತೊಂದು ಸಾವಿನ ಆಘಾತ ಎದುರಿಸುವಂತಾಗಿದೆ. ನಮ್ಮ ತಲೆಮಾರಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಲಂಕೇಶ್, ತೇಜಸ್ವಿ, ರಾಮದಾಸ್ ತ್ರಿವಳಿಗಳ ಕೊನೆಯ ಕೊಂಡಿ ರಾಮದಾಸ್ ಇನ್ನಿಲ್ಲವಾಗಿದ್ದಾರೆ....

read more
ಪಿಜ್ಜಾ ಹಟ್ ನಲ್ಲಿ ರಾಗಿ ರೊಟ್ಟಿ!

ಊರ್ಮಿಳೆ ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ... ದಾಸರ ಪದ ಸಿ.ಡಿ. ತಟ್ಟೆಯಿಂದ ಚಿಮ್ಮಿ ಬರುತ್ತಿದೆ. ರಾಗಿ ಎಂಬುದನ್ನು ದಾಸರು ನೋಡಿದ ಬಗೆಯೇ ಬೇರೆ. ಯೋಗ್ಯ"ರಾಗಿ" ಭೋಗ್ಯ"ರಾಗಿ" ಭಾಗ್ಯವಂತ"ರಾಗಿ" ಎಂದು. "ಆಗುವುದು" ದಾಸರ ನೋಟದಲ್ಲಿ ರಾಗಿಯಾಯಿತು. ಮೊನ್ನೆ ಗೆಳೆಯರೊಬ್ಬರು ಹೇಳುತಿದ್ದರು. ಒಂದೊಂದು ಶಬ್ದಕ್ಕೂ ಒಂದೊಂದು...

read more
ರಾಗಿರೊಟ್ಟಿ ರೆಡಿ

"ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟ ಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಸಾಹಿತಿ ಈಗ ಇಂತಿಪ್ಪಲ್ಲಿ ವಾಸಿಸುತ್ತಿದ್ದಾರೆ ಎಂಬಿತ್ಯಾದಿ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣದಿಂದ... ಜಾನಕಿ ಎಂದರೆ ಅಪ್ಪನ ಮಗಳು ಎಂಬ "ಅರ್ಥ"ಪೂರ್ಣತೆಗೆ ಪರಿಚಯವನ್ನು ಸೀಮಿತಗೊಳಿಸಲಾಗಿದೆ."...

read more
ಶಿಕಾರಿಯ ಅಕ್ಷರ ಚಿತ್ರ

ಒಮ್ಮೆ ಪಶ್ಚಿಮ ಘಟ್ಟಗಳ ಕಾನನಕ್ಕೆ ಬನ್ನಿ. ಜೀ ಎನ್ನುವ ಜೀರುಂಡೆ, "ಮಲೆಗಳಲ್ಲಿ ಮದುಮಗಳು"ವಿನಲ್ಲಿ ಮಿಣುಕುವ ಮಿಂಚುಹುಳು... ಇವೆಲ್ಲವನ್ನೂ ಮೀರಿಸುವಂತೆ ಹುಲಿ, ಚಿರತೆಗಳು ಕಾಣಿಸುತ್ತವೆ.   ಅದರಲ್ಲೂ ಸುಳ್ಯದ ಮಲೆಗಳಿಗೆ ಕಾಲಿಟ್ಟರೆ ಕಾಡುಹಂದಿ ಕೋರೆ ಮುಸುಡಿ ತೋರಿಸುತ್ತ ಹೆದರಿಸಿ, ಕಾಡೊಳಗೆ ಪರಾರಿಯಾಗುತ್ತದೆ. ಹಾಂ, ಕಾಡುಹಂದಿ...

read more
ದೊಣ್ಣೆಯಿಂದಲೇ ಹುಲಿ ಹೊಡೆದ ವೀರ!

ಕೆದಂಬಾಡಿ ಜತ್ತಪ್ಪ ರೈ ಕೊಲ್ಯ ಸುಬ್ರಾಯ ಗೌಡರು ಬಂಟ್ರ ಬೋರ್ಡು ಶಾಲೆಯ ಸಂಸ್ಥಾಪಕ ಉಪಾಧ್ಯಾಯರು; ನನಗೆ ಶ್ರೀಕಾರ ಕಲಿಸಿದ ಪ್ರಥಮ ಗುರುಗಳು. ಊರವರ ಪ್ರೀತಿಪಾತ್ರರು. ನಿರಕ್ಷರಿಗಳಾದ ಬಂಟ್ರ ಗ್ರಾಮದವರ ಯಾವ ರಿಕಾರ್ಡು ಇದ್ದರೂ ಅದು ಮಾಸ್ತರರು ಬರೆದುದೇ! ಮೂಕರ್ಜಿಯೊಂದು ಬಿಟ್ಟರೆ ಊರಿನ ಪ್ರೊ-ನೋಟಿನಿಂದ ಹಿಡಿದು, ಗೇಣಿಚೀಟು,...

read more
ಕಣಿ

ಗಾರ್ಗ್ಯ ಎಲ್ಲಿ ಹೋದರು ಅವರು ಈಗ ಬಂದವರು? ಧ್ರುವಗಳನು ಜತೆಗೊಳಿಸುವ ಛಲದಲೊಪ್ಪಿದವರು ಜಲದ ಬಿಂದುವ ಹುಡುಕಿ ಜಗದ ದಾಹವ ಕಳೆವ ಮಾತು ಕೊಟ್ಟು ಜತೆ ತಂದ ಕೈಚೀಲವನ್ನೂ ಇಲ್ಲೇ ಬಿಟ್ಟು ಎಲ್ಲಿ ಹೋದರು ಅವರು? ಸುಮ್ಮನೆ ತೇಲಿ ಹೋದವು ಮೋಡಗಳು ಎಲ್ಲಿಗೆ ಹೋದವು ಅವು? ಹಕ್ಕಿ ಬಾಂದಳದಲ್ಲಿ ಚೆಲ್ಲಿದ ಗರಿ ತೇಲುತ್ತಾ ತೇಲುತ್ತಾ ತೇಲುತ್ತಾ...

read more
ಎಲ್ಲೋ ಜೋಗಪ್ಪ ನಿನ್ನರಮನೆ…

ಜೋಗಿ. ಗೊತ್ತಿರುವವರಿಗೆ ಇಷ್ಟೆ ಸಾಕು. ಬರವಣಿಗೆಯಲ್ಲಿ ಗಾಢತೆ. ಅಷ್ಟೇ ಮೊನಚು. ಲಘು ಧಾಟಿಯಲ್ಲೂ ಲಂಘನದ ತಾಕತ್ತು. ಜೋಕಿನಲ್ಲೂ ಗಾಂಭೀರ್ಯದ ಜೀಕು. ಓದಿನ ವಿಸ್ತಾರ ಮತ್ತು ನಿರಂತರತೆ. ಅದರಿಂದ ಬರವಣಿಗೆಗೆ, ಇಬ್ಬನಿ ಅಂಟಿಸಿಕೊಂಡ ಹೂವಿನ ತಾಜಾತನ. ಸಾಮಾನ್ಯ ಓದುಗನಿಗೂ ಗ್ರಹಿಕೆಗೆ ಬರುವಂತೆ ಬರವಣಿಗೆಯ ಶೈಲಿ... ಇವೆಲ್ಲ ಜೋಗಿಯವರ...

read more
ಕುಮಟೆಗೆ ಬಂದಾ ಕಿಂದರಿ ಜೋಗಿ

ಕಥನ ಕವನಗಳ ಪರಂಪರೆಗೆ ಹೊಸದೊಂದು ದಿಕ್ಕು ಕಾಣಿಸಿದ ಮತ್ತು ಸಮಾಜವಾದಿ ಚೈತನ್ಯವನ್ನು ಕಾವ್ಯದ ಅಂಗಳದಲ್ಲಿ ಹೊಳೆಯಿಸಿದ ಕವಿ ಸು ರಂ ಎಕ್ಕುಂಡಿಯವರು. ಬಾನಿಗೇ ಗೆರೆ ಬರೆವ ಬೆಳ್ಳಕ್ಕಿಗಳ ಸಾಲಿನಲ್ಲಿ ಅವರು ಮತ್ತಾವುದೋ ಲೋಕದ ಬಾಗಿಲು ಕಂಡವರು. ಅವರ ಕಾವ್ಯ ಅಂಥ ಉಲ್ಲಸಿತ ಮತ್ತು ಅವಿಶ್ರಾಂತ ಪಥದ ಬೆಳಕಿಗೆ ಆಶಿಸಿದ್ದಾಗಿದೆ. ಅವರ...

read more
ಬಂಡೆ ಮತ್ತು ಚಿಟ್ಟೆ

ಜಿ ಎನ್ ಮೋಹನ್ ಅದೇ ಉರಿಬಿಸಿಲು, ಕೆಂಪುಹುಡಿ, ಅದೇ ಮರದ ನೆರಳು, ಬೀಸಿ ಬರುವ ಅದೇ ತೆಂಕಣಗಾಳಿ, ಮಾವಿನೆಳೆ ಚಿಗುರಿನಲ್ಲಿ ಚಿಮ್ಮುವ ಅದೇ ಹಾಡು. ಕವಚವ ತೊಟ್ಟು ಖಡ್ಗವನ್ನು ಟೊಂಕದಲ್ಲಿ ಬಿಗಿದಿಟ್ಟು ಕುದುರೆಗೆ ಥಡಿ ಹಾಕಿ ಮತ್ತೆ ಪಯಣಕ್ಕೆ ಸಿದ್ಧನಾದ ಆತನನ್ನು ಹೆಂಗಸು ಕೇಳುವ ಅದೇ ಪ್ರಶ್ನೆ- ಮರೆತು ಬಿಟ್ಟೆನು ನಿಮ್ಮ ಹೆಸರು...

read more

Pin It on Pinterest

Share This