ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೋಡಿ ಸ್ವಾಮಿ, ನಾವಿರೋದೇ ಹೀಗೆ…
"ಶಿವಾ ಮಡಗಿದಂಗಿರು" ಅಂತಾರೆ. ಎಲ್ಲರೂ ಹೀಗೆ ಮಡಗಿದಂಗಿರೋದು ಅವರವರ ಸ್ವಂತ ಚರಿತ್ರೆಗಳಲ್ಲಿ ಮಾತ್ರ. ಅಂದರೆ ಪ್ರೊಫೈಲುಗಳಲ್ಲಿ. ಮೊನ್ನೆ ಒಂದಿಷ್ಟು ಪುಸ್ತಕ ಎದುರಿಗಿಟ್ಟುಕೊಂಡು ಕೂತಾಗ ಯಾಕೋ ಈ ಪ್ರೊಫೈಲುಗಳ ಕಡೆ ಮನಸ್ಸು ಹೊರಳಿತು. ಇದಕ್ಕಾಗಿ ಕನ್ನಡದ ಹಲವು ಬ್ಲಾಗುಗಳನ್ನೂ ಹೊಕ್ಕಿ ಬಂದದ್ದಾಯಿತು. ಲೇಖಕರು, "ಬ್ಲಾಗಿ"ಗಳು...
ಹೀಗೊಂದು ಶಬ್ದರೋಗದ ನೋವಿನಲ್ಲಿ…
"ರಾಗಿರೊಟ್ಟಿ" ಕಾಲಂ ಊರ್ಮಿಳೆ ಆರಾಮವಾಗಿ ಊಟ ಎಂಜಾಯ್ ಮಾಡ್ತಿದ್ದೆ. ಇನ್ನೊಂದು ತುತ್ತು ಬಾಯಿಗಿಡಬೇಕು ಆಗ ಬಂತು ಒಂದು ಸಣ್ಣ ಗದರಿಕೆ "ಯಾಕಷ್ಟು ಶಬ್ದ ಮಾಡ್ತೀಯಾ, ಸದ್ದಿಲ್ಲದೆ ತಿನ್ನು". ಅಂತಹವರೆಗೂ ಆ ದಿನದವರೆಗೂ ನನಗೆ ಹೇಗೆ ತಿನ್ತೀನಿ ನಾನು ಅನ್ನೋದೇ ಗೊತ್ತಿರಲಿಲ್ಲ. ಅಥವಾ, ತಿನ್ನೋದಕ್ಕೂ ಒಂದು ರೀತಿ ನೀತಿ ಇರುತ್ತೆ...
ಎಂ ಎಸ್ ಮೂರ್ತಿ ಟು ಅವಧಿ
ಕಾರಂತರು ಮತ್ತು ಮೋಟುಗೋಡೆಯಾಚೆ ಇಣುಕಿ ಕುರಿತ ಅವಧಿಯ ಲೇಖನಿಗಳಿಗೆ ಕಲಾವಿದ ಎಂ ಎಸ್ ಮೂರ್ತಿ ಅವರ ಸ್ಟ್ರೋಕ್ ಇಲ್ಲಿದೆ.
ಅರಣ್ಯದ ರಾಜಾನೆ
ರಾಮಚಂದ್ರ ಗುಹಾ ಬೆಕ್ಕಿಗೆ ಒಂಭತ್ತು ಜೀವ ಎನ್ನುತ್ತಾರೆ. ವಿಷ್ಣುವಿಗೆ ಹತ್ತು ಅವತಾರಗಳು. ಆದರೆ ಶಿವರಾಮ ಕಾರಂತರಿಗೋ ಹದಿನಾರು ಕ್ಷೇತ್ರಗಳು. ರಾಷ್ಟ್ರೀಯತೆ, ಸಮಾಜ ಸುಧಾರಣೆ, ವಾಣಿಜ್ಯ, ಪತ್ರಿಕೋದ್ಯಮ, ಛಾಯಾಗ್ರಹಣ, ಅಭಿನಯ, ನೃತ್ಯ, ಚಿತ್ರಕಲೆ, ಸಂಗೀತ, ಸಿನೆಮಾ, ಶಿಕ್ಷಣದಲ್ಲಿನ ಪ್ರಯೋಗ, ಗ್ರಾಮೀಣ ಅಭ್ಯುದಯ, ವಿಜ್ಞಾನ...
ವೇಷ ಕಳಚಿದ ಕಾರಂತಜ್ಜ
ಇಲ್ಲೇ ಎಲ್ಲೋ ಇದ್ದಾರೆ ಕಾರಂತಜ್ಜ... ಎಂಬ ಭಾವನೆ ಈಗಲೂ ನಮ್ಮ ನಿಮ್ಮೆಲ್ಲರಲ್ಲೂ ಮನೆ ಮಾಡಿದೆ. ಕಾರಂತಜ್ಜನಿಗೆ ಕಾರಂತಜ್ಜನೇ ಸಾಟಿ. ಎಷ್ಟೆಲ್ಲಾ ವೇಷಗಳಪ್ಪ! ಅವರೇ ಬಣ್ಣಿಸಿಕೊಂಡಂತೆ ಕಾರಂತ ಎಂಬ ಹುಚ್ಚು ಮನಸ್ಸಿಗೆ ಹತ್ತು ಮುಖಗಳು. ಕಾಲಿನ ಗೆಜ್ಜೆಯ ಕಿಣಿಕಿಣಿ, ಮೂಗಿನ ಮೇಲಿನ ಸಿಟ್ಟು, ಬಾಯ್ತುಂಬಿ ತುಂಬಿ...
ಬಲ್ಲಿರೇನಯ್ಯ…?
ಬಲ್ಲಿರೇನಯ್ಯ...? ಕಾರಂತರು ಹೀಗೆ ಗುಡುಗು ಹಾಕಿದಾಗ ಎಷ್ಟೋ ಜನಕ್ಕೆ ಯಕ್ಷಗಾನವನ್ನು ಹೇಗೆಲ್ಲಾ ಬದಲಿಸಬಹುದು ಎಂಬುದು ಗೊತ್ತಿರಲಿಲ್ಲ. ಯಕ್ಷಗಾನವನ್ನು ಗಡಿಯಾಚೆ ಕೊಂಡೊಯ್ಯುವ ಸಾಹಸಕ್ಕೆ ಸ್ವತಃ ಕಾರಂತರೇ ಗೆಜ್ಜೆ ಕಟ್ಟಿಕೊಂಡರು. ಯಕ್ಷಗಾನ ಉಳಿದು ಒಂದು ಅದ್ಭುತ ಕಲೆಯಾಗಬೇಕಾದರೆ ಏನೆಲ್ಲಾ ಬದಲಾಗಬೇಕು ಎಂಬ ನಿಚ್ಚಳ ನೋಟ...
ದೇವರೇ ಹೇಳಿದ ಮೇಲೆ…
ಮೂವರು ಗೆಳೆಯರು ಬಹಳ ದಿನದ ನಂತರ ಭೇಟಿಯಾದರು. ಅವರಿಗೆ, ಹಂಚಿಕೊಂಡು ತಿನ್ನಲೂ ಆಗದಷ್ಟು ಚಿಕ್ಕ ಹಲ್ವಾ ತುಂಡು ಸಿಕ್ಕಿತು. ಈ ರಾತ್ರಿ ಯಾರಿಗೆ ವಿಶೇಷವಾದ ಕನಸು ಬೀಳುವುದೋ ಅವರು ಇದನ್ನು ತಿನ್ನುವುದೆಂದು ನಿರ್ಧರಿಸಿ ಅವರು ಆ ಹಲ್ವಾ ತುಂಡನ್ನು ಡಬ್ಬದಲ್ಲಿಟ್ಟು ಮಲಗಿದರು. ಮಾರನೆ ಬೆಳಗು ಮೂವರೂ ತಮ್ಮ ತಮ್ಮ ಕನಸಿನ ಬಗ್ಗೆ...
ಇದು “ಏಳಾಟ”ವಯ್ಯ!
ಟೈಂ ಪಾಸ್ ಕಡ್ಲೆಕಾಯ್ "ಎದ್ದೇಳೋ ಮಾದಪ್ಪ ಎಷ್ಟೊತ್ತು ಸುಖ ನಿದ್ರೆ" ಎಂಬ ಸುಪ್ರಭಾತ ಕೇಳಿದವರಂತೆ ಸುಳ್ಯ ಸಾಹಿತಿ ಪ್ರಭಾಕರ ಶಿಶಿಲ ಧಡಕ್ಕನೆ ಎದ್ದು ಕೂತಿದ್ದಾರೆ. ಏಳು ಏಳ್ಲಿ ಎಷ್ಟು ಅಂತ ಎಲ್ಲಾರ್ಗೂ ಕೇಳೋವಷ್ಟು ಏಳರ ಸಂಖ್ಯೆಯ ಗಾಳಿ ಬೀಸಿಸಿಕೊಂಡಿದ್ದಾರೆ. ವಿಷ್ಯ ಇಷ್ಟೆ: ಈ ಸಲದ ಜುಲೈ ೭ ಸ್ವಲ್ಪ ವಿಚಿತ್ರ. ೭-೭-೭....
ಮೋಟುಗೋಡೆ ಕಥೆ ಗೊತ್ತಾ?
ಮನುಷ್ಯನಿಗೆ ಇರೋ ಚಟಗಳು ಏನಾದರೂ ಇದ್ದುಕೊಂಡು ಹೋಗಲಿ. ಆದರೆ ಈ ತರಲೆ ಮನಸ್ಸು ಇದೆಯಲ್ಲ, ಅದರ ಹಣಿಕಿಕ್ಕೋ ಚಟ ಮಾತ್ರ ಅದರಪ್ಪನಷ್ಟು ತರಲೆ. ಇದ್ದಬದ್ದ ವಿಚಾರಗಳಿಗೆಲ್ಲಾ ಅದು ಕಿವಿಯಾಗುತ್ತೆ. ಬಲು ಕುತೂಹಲ ಅದಕ್ಕೆ. ಎಲ್ಲರ ಗುಟ್ಟುಗಳನ್ನೂ ಗೊತ್ತು ಮಾಡ್ಕೋಬೇಕು ಅಂತಾ ಆಸೆ. ತನ್ನ ಗುಟ್ಟುಗಳನ್ನು ಬಿಟ್ಟು ಕೊಡಬಾರದು ಅಂತಲೂ...
“ಪೋಲಿ” ಡ್ರಾಪ್ಸ್
ಎಚ್ ಡುಂಡಿರಾಜ್ ಯೋಜನೆ ನಾವಿಬ್ಬರು ನಮಗಿಬ್ಬರು ಮೂರಾಗದಂತೆ ರಬ್ಬರು ಆ-ಶ್ರಮ ಕಟ್ಟಾ ಬ್ರಹ್ಮಚಾರಿಯಾಗಿದ್ದವ ಪ್ರಸ್ತದ ಮರುದಿನ ಏದುಸಿರು ಬಿಡುತ್ತಾ ಹೇಳಿದ- ಅಬ್ಬಾ! ಎಂಥಾ ಶ್ರಮ ಈ ಗೃಹಸ್ಥಾಶ್ರಮ! ಬದಲಾವಣೆ ಕಾಶಿ, ರಾಮೇಶ್ವರ ಎನ್ನುತ್ತಿದ್ದ ತಾತ ಶುರುಮಾಡಿದ್ದಾನೆ ಈಗ ಹೊಸ ವರಾತ: ನೋಡಬೇಕಂತೆ ಸಿಮ್ಲಾ, ಕಾಶ್ಮೀರ, ಆಗ್ರ ಎಲ್ಲೋ...
ಮುಂದಿನ ದಿನಗಳಿಗೆ ದಾರಿ
ಜಿ ಎನ್ ಮೋಹನ್ ನಟರಾಜ್ ಹುಳಿಯಾರ್ ಮತ್ತು ಅವನ ಸಾಂಸ್ಕೃತಿಕ ಬರಹಗಳ ಸಂಕಲನ "ಗಾಳಿ ಬೆಳಕು" ಬಗ್ಗೆ ಬರೆದದ್ದು ಓದಿದೆ. ನಾನು ಈ ಹಿಂದೆ "ಹೊಸತು"ವಿನಲ್ಲಿ ಬರೆದಿದ್ದ ಬರಹ ನೆನಪಾಯಿತು. "ಗಾಳಿ ಬೆಳಕು" ಕುರಿತು ನನ್ನ ನೋಟದ ಆಯ್ದ ಭಾಗಗಳನ್ನು ನಿಮಗೆ ಕಳಿಸುತ್ತಿದ್ದೇನೆ. * ನಟರಾಜ್ ಬರಹ ನನ್ನನ್ನು ಕಾಡಿಸಲು ಹಲವು ಕಾರಣಗಳಿವೆ....
ನಟರಾಜ್ ನನಗೇಕೆ ಇಷ್ಟ?
ಲಂಕೇಶ್ ಪತ್ರಿಕೆ ಕಾಲದಿಂದ ನಟರಾಜನ "ಗಾಳಿ ಬೆಳಕು" ಅಂಕಣವನ್ನು ಇಷ್ಟಪಟ್ಟು ಓದಿಕೊಂಡು ಬಂದವರಲ್ಲಿ ನಾನೂ ಒಬ್ಬ. ವರ್ಷಾಂತರಗಳ ಕಾಲ ನಟರಾಜ್ ಬರೆಯದಿದ್ದಾಗಲೂ, ಅವನ ಪುಸ್ತಕದ ಕೆಲವು ಲೇಖನಗಳನ್ನು ನೆನೆಸಿಕೊಂಡು ಓದುತ್ತಿದ್ದೆ. ಬರಹದ ವಿಷಯದಲ್ಲಿ, ನಮಗೆ ಆ ಕ್ಷಣಕ್ಕೆ ಅನಿಸಿದ್ದನ್ನು ನಿಷ್ಠುರವಾಗಿ ಹೇಳುವುದೇ ಪ್ರಾಮಾಣಿಕತೆ ಎಂಬುದು...
ನಿರೀಕ್ಷಿಸಿ, “ವೆಂಕಿ ಬರ್ಗರ್”
ಟೈಂ ಪಾಸ್ ಕಡ್ಲೆಕಾಯ್
ಮುಧೋಳ ಸಾಹಿತ್ಯ ಸಮ್ಮೇಳನದಲ್ಲಿ ರವಿ ಬೆಳಗೆರೆ, ಚಂಪಾ ಮೀಟ್ ಆದ್ರು. ಚಂಪಾ ಹೇಳಿದ್ರು- ರವಿ, ಹೊಸ ಪುಸ್ತಕ ತರ್ತಿದೀನಿ "ಲೇಖಕರ ವಿಳಾಸಗಳು" ಅಂತ... ತಕ್ಷಣ ರವಿ ಬೆಳಗೆರೆ ಹೇಳಿದ್ರು- ಚಂಪಾ, ಆ ಹೆಸ್ರು ಬೇಡ "ಲೇಖಕರ ವಿಲಾಸಗಳು" ಅಂತ ಇಡಿ. ಸಖತ್ತಾಗಿ ಸೇಲಾಗುತ್ತೆ... * * * ಸಂಕ್ರಮಣ ಚಂದಾ ಕ್ಯಾಂಪೈನ್...
ಹೊನ್ನೆ ರುಕ್ಕುವಿನ ಅಂತರಂಗ ಶುದ್ಧಿ
ವಿಜಿ "ನೆರೆ ಬಂದ್ರೂ ಗೊರ್ಕೆ ಹೊಡೀತಾ ಮಲ್ಕಂಡಿದ್ದವ ದುಡ್ಡು ಅಂದದ್ದಕ್ಕೆ ಧಡಕ್ಕಂತಾ ಎದ್ದು ಕೂತಿದ್ದ". "ದುಡ್ಡು ದುಡ್ಡು ಅಂತ ಹೇಳ್ಕೊಂಡು ಹೋಗ್ತಾ ಇದ್ರೆ, ಹಿಂದೆ ನಿಮ್ಮ ನೆರಳಿಲ್ಲದೇ ಇದ್ರೂ ಇಂವ ಮಾತ್ರ ಇರ್ತ". ಇಂತಾ ಮಾತುಗಳು ಊರೊಳಗೆ ಕೇಳಿಸಿದವೆಂದರೆ, ಅವು ಹೊನ್ನೆ ರುಕ್ಕುವಿನ ಕುರಿತ ಕಾಮೆಂಟುಗಳಾಗಿರುತ್ತವೆ. ಹೊನ್ನ...
ನಟರಾಜ್ ಬಗ್ಗೆ ಅನಂತಮೂರ್ತಿ
ನಟರಾಜ್ ಹುಳಿಯಾರ್ ಬಗ್ಗೆ ಪ್ರಾಮಾಣಿಕ ಮೆಚ್ಚುಗೆಯ ಮಾತುಗಳನ್ನು ಓದಿ ಸಂತೋಷವಾಯಿತು. ಒಂದು ಹೊಸ ಕವಿತೆ ಓದಿದರೆ ಒಂದು ಹೊಸ ಕಥೆ ಓದಿದರೆ ಅದರ ಬಗ್ಗೆ ಖುಶಿಯಾಗಿ ನಾವೆಲ್ಲರೂ ಹಿಂದೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತ ಇದ್ದೆವು. ಜಗಳವಾಡುತ್ತ ಇದ್ದೆವು. ಸಾಹಿತ್ಯ ಜೀವಂತವಾಗಿತ್ತು. ಅದರಲ್ಲಿ ಸಣ್ಣ ಪೊಲಿಟಿಕ್ಸ್ ಇರಲಿಲ್ಲ. ನಟರಾಜ್...
ನಟರಾಜ್ ಹುಳಿಯಾರ್ ಲೈನಲ್ಲಿದ್ದಾರೆ…
ಹು ಲ ನಟರಾಜ್ - ಎಂದರೆ ಯಾರು ಎಂಬ ಪ್ರಶ್ನೆ ಸಹಜ. ನಟರಾಜ್ ಹುಳಿಯಾರ್ ಒಂದು ಕಾಲಕ್ಕೆ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ (ಅವರಿಗೂ ಮರೆತುಹೋಗಿರಬಹುದು). ಹು ಲ ನಟರಾಜ್ ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾರ್ಟೂನಿಸ್ಟ್ ಇಂದು ಕನ್ನಡದ ಮಹತ್ವದ ವಿಮರ್ಶಕ. ಡಿ ಆರ್...
ಲಂಕೇಶ್ ಕಂಡಂತೆ ನಟರಾಜ್ ಹುಳಿಯಾರ್
ನಟರಾಜ್ ಅನೇಕ ಕಾರಣಕ್ಕೆ ಎಲ್ಲರ ಕುತೂಹಲ ಕೆರಳಿಸಿರುವ ವ್ಯಕ್ತಿ. ಪುಸ್ತಕದ ಸಂವೇದನೆಯನ್ನು ಪರೀಕ್ಷಿಸಿ ಬೆಲೆ ಕಟ್ಟಬಲ್ಲ ಈತ, ಮಹಾ ನಿಷ್ಠುರ ವ್ಯಕ್ತಿ. ಸಾಹಿತಿ ತನ್ನ ಅನುಭವ ನಿಷ್ಠೆ ಮತ್ತು ವಿಪರ್ಯಾಸ ಪ್ರಜ್ಞೆಯನ್ನು ಕಳೆದುಕೊಂಡರೆ ಛೀತ್ಕಾರ ಮತ್ತು ಕಾಡು ಹರಟೆಯಲ್ಲಿ ಪರ್ಯವಸಾನಗೊಳ್ಳುತ್ತದೆ ಎಂಬುದನ್ನು ನಟರಾಜ್ ಅರಿತಿದ್ದಾನೆ....
ಧರ್ಮ ಎಂಬ ಮೋಹಕ ಭಯೋತ್ಪಾದನೆ…
"ಗಾಳಿ ಬೆಳಕು" ಕಾಲಂ ನಟರಾಜ್ ಹುಳಿಯಾರ್ ಮೌಲಾನ ಮಸೂದ್ ಅಜರ್ ಹೆಸರನ್ನು ನೀವು ಕೇಳಿರಬಹುದು. ಕಂದಹಾರ್ ವಿಮಾನ ಅಪಹರಣಕಾರರು ಈ ಅಜರ್ ನನ್ನು ಬಿಡುಗಡೆ ಮಾಡಿಸಿದ ಕಥೆ ಹಳೆಯದು. ಅದಕ್ಕಿಂತ ಮೊದಲು ಅಜರ್ ಜಮ್ಮುವಿನ ಜೈಲಿನಲ್ಲಿದ್ದ. ಅವನ ಜೊತೆ ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧನಕ್ಕೊಳಗಾಗಿದ್ದ ಸಜ್ಜಾದ್ ಕೂಡ ಇದ್ದ. ಒಂದು ದಿನ...
ಬಣ್ಣದ ಟಪಾಲು
ನಿನ್ನೆ ನಮಗೆ ಕಾದು ಕೂತಿದ್ದ ಟಪಾಲುಗಳಲ್ಲಿ ಬಣ್ಣಗಳೇ ತುಂಬಿದ್ದ ಟಪಾಲೂ ಒಂದಿತ್ತು. ಓಹ್ ಅನ್ನಿಸಿತು. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅನ್ನಿಸಿತು. ಇಲ್ಲಿದೆ ಆ ಬಣ್ಣದ ಹುಡಿ. * ಬ್ರೌಸ್ ಮಾಡ್ತಿದ್ದಾಗ ಅಕಸ್ಮಾತ್ತಾಗಿ ಅವಧಿ ನೋಡಿದೆ. ಜರ್ಮನಿಯ ಛಾಯಾಗ್ರಹಕ ಲಿಯೋ ರೆಗ್ನಿಯರ್ ಸೆರೆಹಿಡಿದ ಕಪ್ಪು ಬಿಳುಪು ಚಿತ್ರಗಳನ್ನು...
ಶೀತಲಬಾವಿ ರಹಸ್ಯ
ನಾಗೇಶ ಹೆಗಡೆಯವರ ಕುರಿತ ಬರಹಕ್ಕೆ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಪ್ರತಿಕ್ರಿಯೆಯಲ್ಲಿ ಒಂದು ಸ್ವಾರಸ್ಯಕರ ಸಂಗತಿಯಿದೆ. ಹಾಗಾಗಿ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆನ್ನಿಸುತ್ತಿದೆ. ಅದು ಹೀಗಿದೆ: ಮೊದಲ ಬಾರಿ ನಾಗೇಶ ಹೆಗಡೆಯವರನ್ನು ಭೇಟಿಯಾದಾಗಿನ ಸಂದರ್ಭ. ಮಾತನಾಡಲು ಶಬ್ದಗಳನ್ನು ಹುಡುಕುತ್ತಿದ್ದವನು, "ನಿಮ್ಮ ಲೇಖನದ...
