ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾ ಚಡಪಡಿಸಿ ಸಿಡಿದ ಸಿಲ್ವಿಯಾ ಪ್ಲಾಥ್
ಟೀನಾ ಅಮೆರಿಕನ್ ಕವಯಿತ್ರಿ ಸಿಲ್ವಿಯಾ ಪ್ಲಾಥ್ ತನ್ನ ಮೊದಲನೇ ಕವಿತೆಯನ್ನು ಬರೆದು ಪ್ರಕಟಿಸಿದ್ದು ಆಕೆಯ ಎಂಟನೆಯ ವಯಸ್ಸಿನಲ್ಲಿ. ಆಕೆ ತನ್ನ ಪರಿವಾರದಲ್ಲಿಯೇ ಅತ್ಯಂತ ಬುದ್ಧಿವಂತ ಹುಡುಗಿ. ಶಾಲೆಯಲ್ಲಿ ಯಾವಾಗಲೂ ಉನ್ನತ ಶ್ರೇಣಿ. ಯಾವ ವಿಷಯಗಳೆಡೆ ಆಸಕ್ತಿ ಹರಿಯುತ್ತಿತ್ತೊ, ಅದರಲ್ಲಿ ಪರಿಣತಿ ಸಾಧಿಸುವ ತನಕ ಸುಮ್ಮನಿರದ ತರಳೆ....
ರೋಷದ ರಾಗಗಳು
"ಡೋರ್ ನಂ. 142" ಕಾಲಂ ಬಹುರೂಪಿ ದಿಢೀರನೆ ಅಪ್ಪನ ದೊಡ್ಡ ದನಿ ಕೇಳಿ ಬೆಚ್ಚಿದೆ. ಅಪ್ಪನ ಕೋಪ ತಾಪ ಎಲ್ಲರಿಗೂ ಗೊತ್ತಿತ್ತು. ರೂಢಿಯಾಗಿ ಹೋಗಿತ್ತು. ಆದರೆ ಬಂದವರ ಮುಂದೆ ಅಪ್ಪ ಈ ರೀತಿ ದನಿ ಎತ್ತುವುದು ತೀರಾ ಅಪರೂಪ. "ಊರಿಗೆ ಉಪಕಾರಿ, ಮನೆಗೆ ಮಾರಿ" ಅಂತಾನೇ ನಂಬಿಬಿಟ್ಟಿದ್ದೆವು. ಊರವರಿಗೆಲ್ಲ ಅಪ್ಪ ಅಂದ್ರೆ ತುಂಬಾ ಇಷ್ಟ....
ಸಾನಿಯಾ ಮಿಂಚಿನಲ್ಲಿ ನೆನಪಾಗುತ್ತಿರುವ ಆರ್ಥರ್!
"ವೆಂಕಿ ಬರ್ಗರ್" ವೆಂಕಿ ಹೈದ್ರಾಬಾದ್ ಎಲ್ಲೆಲ್ಲೂ ಸದ್ದು ಮಾಡುತ್ತಿರುವಾಗ ನ್ಯೂಯಾರ್ಕಿನಲ್ಲಿ ಹೈದ್ರಾಬಾದಿಯೊಬ್ಬಳು ಸುದ್ದಿ ಮಾಡುತ್ತಿದ್ದಾಳೆ. ಕನಿಷ್ಠ ನ್ಯೂಯಾರ್ಕಿನಲ್ಲಿರುವ ಭಾರತೀಯರ ಮಧ್ಯೆ. ಅದು ಇನ್ಯಾರು? ಹೈದ್ರಾಬಾದ್ ಮುತ್ತು ಎಂದೇ ಹೆಸರಾದ ಸಾನಿಯಾ! ಕಚೇರಿಗಳಲ್ಲಿ, ಭಾರತೀಯರ ಡಿನ್ನರ್ ಪಾರ್ಟಿಗಳಲ್ಲಿ, ದಿನಸಿ...
ಎಲ್ಲರಂಥವರಲ್ಲ ಈ ರಾಧೆಯರು!
ಶ್ರಾವಣಿ ಈ ಸಲದ ಸುಗ್ಗಿಯೂ ಎದ್ದಾಯಿತು. ಹಗ್ಣದ ಗಾಡಿಗಳು. ಉಂಗ್ಲ ಚಪ್ಪರ. ಹಣ್ಣಿನಂಗಡಿಗಳು. ಐಯ್ಸ್ ಕ್ರೀಮು ಡಬ್ಬಿಗಳು. ಮರಕಾಲು ಕೊಣ್ತಗಳು. ಕರಡಿ ಯಾಸಗಳು. ಕಾಗದದ ಹುಲಿಗಳು. ಬೇಲೆಗೆ ಬಂದು ಬಡಿಯುತ್ತಲೇ ಇರುವ ಕಡ್ಲ ತೆರೆಗಳಂತೆ ಅಲೆಯುತ್ತಿರುವ ಜನ. ಅವರ ನಡುವೆ ಜಾನಕಿ. ಅವಳೊಂದಿಗೆ ಅವಳ ನಿರೀಕ್ಷೆ, ಕಾತರ, ಬಯಕೆ, ಲಜ್ಜೆ....
ಕತೆಯ ಪಾತ್ರವೊಂದು ಎದುರಲ್ಲಿ ನಿಂತಾಗ…
ಅಮರೇಶ ನುಗಡೋಣಿ ಹಿಂದಿನ ವಾರ ಊರಿಗೆ ಹೋದಾಗ ಕ್ಷೌರಿಕ ಮಹಂತೇಶ ಭೇಟಿಯಾಗಿ ಮಾತಾಡಿಸಿದ್ದ. ಆತನ ತಂದೆ ರಾಚಪ್ಪ ನಮ್ಮೂರಿಗೆ ವಲಸೆ ಬಂದು ಕ್ಷೌರಿಕ ಕಸುಬನ್ನು ಶುರು ಮಾಡಿದ್ದನು. ಅವರು ೩೦ ವರ್ಷಗಳಿಂದ ನಮ್ಮೂರಲ್ಲಿದ್ದಾರೆ. ಆದರೆ ರಾಜಪ್ಪ ಟೀಬಿ ಕಾಯಿಲೆಯಿಂದ ತೀರಿಕೊಂಡಿದ್ದನು. ಮಗ ಮಹಂತೇಶ ಕಸುಬನ್ನು ಮುಂದುವರಿಸಿದ್ದ. ರಾಚಪ್ಪ ಮನೆ...
ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…
ಅವಧಿಯ ಬಗೆಗೆ ಬರುತ್ತಿರುವ ಮೆಚ್ಚುಗೆ ನಮ್ಮನ್ನು ಬೆಚ್ಚಗಾಗಿಸಿದೆ. ಹೊಸ ಗೆಳೆಯರು ಸಿಗುತ್ತಿದ್ದಾರೆ. ಇದೆಲ್ಲ ನಮ್ಮನ್ನು ಹೊಸ ಉತ್ಸಾಹದ ಕಡೆಗೆ ಕರೆಯುತ್ತಿದೆ. ನೀವೂ ನಮ್ಮ ಬಳಗದವರಾಗಲು ಬಯಸುವುದಾದರೆ ಬಾಗಿಲು ತೆರೆದೇ ಇದೆ. ಅವಧಿಗೆ ಸಬ್ ಸ್ಕ್ರೈಬರ್ ಆಗುವುದು ಕೂಡ ಸುಲಭ. ಇಲ್ಲಿ ಬಲಬದಿಯಲ್ಲಿನ ಸೈಡ್ ಬಾರಲ್ಲಿ ಸರ್ಚ್ ಕೆಳಗೆ...
ಧರ್ಮೇಚ ಕಾಮೇಚ ಅರ್ಥೇಚ ಪೋಸು
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಅಲ್ಲಿ ಆಲ್ಬಮ್ಮಿನ ಹಾಳೆಗಳಲ್ಲಿ ನೀ ನಗುತ್ತಿದ್ದಿ. ನನ್ನ ಹಣೆಗೆ ಸಿಂಧೂರ, ಕೊರಳಿಗೆ ಹಾರ. "ಬಲೀ ಕಾ ಬಕ್ರಾ" ಅಂದರೆ ಅದೇ ಅಂತ ಈಗ ಹೊಳೆಯುತ್ತಿದೆ ನನಗೆ. ಅಗೋ ಅಲ್ಲಿ, ಲಾಜಾ ಹೋಮಕ್ಕೆ ಅರಲು ಸುರಿಯುತ್ತಿದ್ದಾನೆ ಅಣ್ಣ. ಈಗ, ಇಲ್ಲಿ? ಉರಿದು ಬೂದಿಯಾಗಿದ್ದೇನೆ ನಾನು, ಅಸ್ತಿತ್ವವೇ...
…ಹಾಗಂತ ಬೆತ್ತಲಾಗಿ ಓಡಾಡೋಕ್ಕಾಗುತ್ತಾ?
ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ...
ನಮ್ಮ ಕಾಲದ ಬಗ್ಗೆ ಅಜ್ಜಿ ಹೇಳಿದ ಕತೆ…
ಕಿರಣ್ ಕುಮಾರ್ ಕೆ ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ "ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?" ಅಂತಲೂ ಕೇಳಿದ. ಕ್ಷಣ ಕಾಲ ಸುಮ್ಮನೇ ಯೋಚಿಸಿದ ಅಜ್ಜಿ ಹೇಳಿದಳು: "ನಾನು ಹುಟ್ಟಿದಾಗ ಇನ್ನೂ ಟಿ.ವಿ., ಪೆನ್ಸಿಲಿನ್, ಪೋಲಿಯೋ...
ಒಂದು ಜಾಮಿಟ್ರಿಯ ಕತೆ
ಶೈಲಜ ನಾಗರಘಟ್ಟ ಆಗ ನಾನು ಎರಡನೇ ತರಗತಿಯ ಹುಡುಗಿ. ಜಾಮಿಟ್ರಿ ಬಾಕ್ಸ್ ಎಂದರೆ ವಿಚಿತ್ರವಾದ ಕುತೂಹಲ. ಏನಾದರೂ ಮಾಡಿ ಒಂದು ಜಾಮಿಟ್ರಿಯನ್ನು ದಕ್ಕಿಸಿಕೊಳ್ಳಬೇಕೆಂಬ ಕನಸು. ಅಕ್ಕನ ಜಾಮಿಟ್ರಿ ಬಾಕ್ಸ್ ಮುಟ್ಟಿದರೆ ಅಯ್ಯ; "ನಿಂಗೆ ಈಗ್ಲೆ ಯಾಕ್ ಜಾಮಿಟ್ರಿ. ನೀನೂ ಐದನೇ ಕ್ಲಾಸ್ ಪಾಸ್ ಮಾಡು ತಂದ್ಕೊಡ್ತೀನಿ" ಎಂದು ಗದರಿಸುತ್ತಿದ್ದ....
ಕ್ರಿಕೆಟ್ ಬ್ಯಾಟಿನಲ್ಲಿ ಚಿಮ್ಮಿದ ಲತಾ ಮಂಗೇಶ್ಕರ್ ಹಾಡು
"ಡೋರ್ ನಂ. 142" ಕಾಲಂ ಬಹುರೂಪಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಟೊಪ್ಪಿಗೆ, ಕಿವಿಗೆ ಸದಾ ತಗುಲಿಕೊಂಡಿರುವ ಪಾಕೆಟ್ ಟ್ರಾನ್ಸಿಸ್ಟರ್. ಬೆಂಗಳೂರು ಎಂಬ ಸಂತೆಯಲ್ಲಿ ಕಂಡ ಈ ಮುಖ ನನ್ನೊಳಗೆ ಸದಾ ಕುತೂಹಲ ಹುಟ್ಟುಹಾಕಿತ್ತು. ಟಿವಿ ಇಲ್ಲದ ಕಾಲದಲ್ಲಿ, ಕ್ರಿಕೆಟ್ ಎಂಬುದು ಸಾಂಕ್ರಾಮಿಕ ರೋಗವಾಗಿರದಿದ್ದ ಕಾಲದಲ್ಲಿ ಇಳಿವಯಸ್ಸಿನ...
ಮೋಡಿಯ ಮಾಡಿದೋಳ ಪರಸಂಗ ಐತೆ!
ಎಸ್ ಕೃಷ್ಣಪ್ಪ ಕೇವಲ ಐವತ್ತು ಮನೆಗಳ ಗ್ರಾಮವಾದ ನಮ್ಮ ಹಳ್ಳಿಯಲ್ಲಿ ಸುಮಾರು ೩೦೦ ಜನರಿದ್ದು ಇಲ್ಲಿಗೆ ಹತ್ತು ವರ್ಷಗಳ ಹಿಂದೆ ವ್ಯವಸಾಯವೇ ಮುಖ್ಯ ಕಸುಬು. ಅದರೊಟ್ಟಿಗೆ ಬದುಕುತ್ತಿದ್ದ ಈ ಜನರೆಲ್ಲಾ ಬಾರದ ಮಳೆಗಾಗಿ "ನಗಾರಿ" ಬಾರಿಸಿ ಊರ ಮುಂದೆ ಕುಣಿದು ಕುಪ್ಪಳಿಸಿ ಕೂಗುತ್ತಾ ಹನಿ ಮಳೆಯಿಂದ ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದರು....
ಹೆಸರೇ ಇಲ್ಲದ ಮನುಷ್ಯ ಮತ್ತು ಅಂತಃಪುರ
ವಿಜಿ ಹೆಸರಿಗೊಂದು ಹೆಸರೂ ಇಲ್ಲದ ವಿಚಿತ್ರ ಮನುಷ್ಯನೊಬ್ಬನಿದ್ದ. ಜಾತಿ-ಗೀತಿಯೆಂಬ ನಾಗರಿಕ ದಾಖಲಾತಿಗಳಿಗೆ ಅತೀತನಾಗಿದ್ದಂತಹ ಅವನಿಗೆ ಕೆಲವರು ತಮ್ಮ ಜಾತಿಯವ, ಇಲ್ಲ ತಮ್ಮ ಜಾತಿಯವ ಎಂದು ಜಾತಿಯ ಕಾರ್ಡು ಕೊಡಲು ಪೈಪೋಟಿಗಿಳಿದದ್ದು ಮಾತ್ರ ವಿಚಿತ್ರವಾಗಿತ್ತು. ಅವನು ಊರಿನ ಮೊಟ್ಟ ಮೊದಲ ಡಾಕ್ಟರ್. ಯಾರಿಗೆ ಗೊತ್ತು, ಅವನೇ ಈ ದೇಶದ...
ಒಂದೇ ಒಂದು ಇಂಜೆಕ್ಷನ್!
ನಮ್ಮ ಅವಧಿಯ ಓದುಗರಾದ ದಿ ಅಡ್ವೆಂಚರರ್ಸ್ ನ ಎಸ್ ಎಲ್ ಎನ್ ಸ್ವಾಮಿ ಇತ್ತೀಚೆಗಷ್ಟೇ ಬ್ರೆಜಿಲ್ ಗೆ ಹೊರಟು ನಿಂತಿದ್ದರು. ಪಾಸ್ ಪೋರ್ಟ್ ಇತ್ತು. ವೀಸಾ ಬಂದಾಗಿತ್ತು. ಆದರೆ ಕೇವಲ ಒಂದೇ ಒಂದು ಇಂಜೆಕ್ಷನ್ ಅವರ ಇಡೀ ಪ್ರವಾಸವನ್ನೇ ಕೊನೆಗಾಣಿಸಲು ಸಜ್ಜಾಗಿತ್ತು. ಅಮೆರಿಕಾಗೆ ಹಾರುವಾಗ, ಇಂಗ್ಲೆಂಡ್ ಬಾಗಿಲು ತಟ್ಟುವಾಗ ವೀಸಾದ್ದೇ...
ಜೈಲಿಗೆ ತಳ್ಳಿತ್ತು ಹಳದಿ ಜ್ವರ!
ನಾಗೇಶ ಹೆಗಡೆ ಕೆನ್ಯಾದ ನಾಲ್ಕು ದಿನಗಳ ಪ್ರವಾಸ ಮುಗಿಸಿಕೊಂಡು ಅದೇ ತಾನೇ ಹಿಂದಿರುಗುತ್ತಿದ್ದೆ. ವಿಮಾನ ಸಾಂತಾಕ್ರೂಸ್ ನಲ್ಲಿ ನೆಲ ಸ್ಪರ್ಶ ಮಾಡಿ ದಡಬಡ ಸದ್ದಿನೊಂದಿಗೆ ಅದೇ ವೇಗದಲ್ಲಿ ರೊಯ್ಯೆಂದು ಸಾಗಿ ಮತ್ತೆ ಅರಬ್ಬಿ ಸಮುದ್ರಕ್ಕೇ ಧಾವಿಸಿದಂತೆ ಹೋಗಿ ಹೋಗಿ ಹೋಗಿ ಕೊನೆಗೂ ಮುಖ ತಿರುಗಿಸಿ ನಿಂತಿತು. ಆ ಚುಮುಚುಮು ನಸುಕಿನಲ್ಲಿ...
ಜಸ್ಟ್ ಔಟ್!
ತತ್ರಾಣಿ ಬಸವರಾಜ್ ಹೂಗಾರ ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಮೊಬೈಲ್: ೯೪೮೦೧೯೭೫೧೧ ಪ್ರ: ಲಡಾಯಿ ಪ್ರಕಾಶನ, ೪೨, ಪ್ರಸಾದ್ ಲಾಡ್ಜ್,...
ಆ ಮಾತುಗಳಲ್ಲೇಕೋ ಅಮ್ಮ ಸಿಗಲಿಲ್ಲ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಮೂರು ವರ್ಷ! ಸಾವಿರ ದಿನಗಳು ಅಂದ್ರೆ ಸುಮ್ನೆ ಅಲ್ಲ. ಅವತ್ತು ಹೊಸಿಲು ದಾಟುವಾಗ ಹುಚ್ಚು ಹುಮ್ಮಸ್ಸು. ಇವತ್ತೇಕೋ ಒಳ ಹೊಕ್ಕುವಾಗ ಎದೆ ಡವಡವ. * * * * "ಹೆಂಗಿದ್ರೂ ಬರಲ್ಲ. ಹಂಗಂತ ಕರೀದಿದ್ರೆ ತಪ್ಪಾಗತ್ತಲ್ಲ?" ಅಂತ ಅಪ್ಪನ ಪಕ್ಕ ಮಗ್ಗಲು ಬದಲಿಸಿದ ಅಮ್ಮ, ತಂಗಿ ಮದುವೆ ಇನ್ವಿಟೇಷನ್ನು...
ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…
ಅವಧಿಯ ಬಗೆಗೆ ಬರುತ್ತಿರುವ ಮೆಚ್ಚುಗೆ ನಮ್ಮನ್ನು ಬೆಚ್ಚಗಾಗಿಸಿದೆ. ಹೊಸ ಗೆಳೆಯರು ಸಿಗುತ್ತಿದ್ದಾರೆ. ಇದೆಲ್ಲ ನಮ್ಮನ್ನು ಹೊಸ ಉತ್ಸಾಹದ ಕಡೆಗೆ ಕರೆಯುತ್ತಿದೆ. ನೀವೂ ನಮ್ಮ ಬಳಗದವರಾಗಲು ಬಯಸುವುದಾದರೆ ಬಾಗಿಲು ತೆರೆದೇ ಇದೆ. ಅವಧಿಗೆ ಸಬ್ ಸ್ಕ್ರೈಬರ್ ಆಗುವುದು ಕೂಡ ಸುಲಭ. ಇಲ್ಲಿ ಬಲಬದಿಯಲ್ಲಿನ ಸೈಡ್ ಬಾರಲ್ಲಿ ಸರ್ಚ್ ಕೆಳಗೆ...
ಬೇಡವೇ ಬೇಡ!
ಕೊಳ್ಳುಬಾಕ ಸಂಸ್ಕೃತಿ. ಇದೊಂದು ದೈತ್ಯ ಪಿಶಾಚಿ. ಎಲ್ಲೆಲ್ಲೂ ಇದರ ವಿರಾಟ್ ಅವತಾರವನ್ನು ಕಾಣುತ್ತಿದ್ದೇವೆ. ಆಸೆಯ ಗಾಲಿಗಳ ಮೇಲೆ ಸಾಗಿದ್ದೇವೆ. "ಬೇಕು" ಎಂಬುದು ಸರ್ವತ್ರ ಮಂತ್ರವಾಗಿದೆ. ಈ ಕೊಳ್ಳುವ ಸಂಸ್ಕೃತಿಯ ಮೈನೇವರಿಸಲು ಕಲಿಸಿದ ಅಮೆರಿಕೆಯಲ್ಲೂ ಇದರ ಹಾವಳಿ ಈಗ ಕಡಿಮೆಯಿಲ್ಲ. ಅದರ ವಿರುದ್ಧ ಆಂದೋಲನವೇ ಶುರುವಾಗಿದೆ....
ದಕ್ಷಿಣ ಏಷ್ಯಾದ ಮಾಂತ್ರಿಕರು ಸಿಕ್ಕಿದ್ದರು!
"ವೆಂಕಿ ಬರ್ಗರ್" ವೆಂಕಿ ಕ್ಯಾಬ್ ನ ಹೊಟ್ಟೆಯೊಳಗೆ ತೂರಿಕೊಂಡಾಗ ಆಗ ಇನ್ನೂ ಬೆಳಗ್ಗೆ ೭.೩೦. ವರ್ಜೀನಿಯದಿಂದ ನ್ಯೂಯಾರ್ಕ್ ನ ಇನ್ನೊಂದು ವಿಮಾನ ನಿಲ್ದಾಣ ಲಾ ಗಾರ್ಡಿಯಾಗೆ ಬಂದವನಿಗೆ ಕಣ್ಣಿನ ರೆಪ್ಪೆಯ ಮೇಲೆ ಇನ್ನೂ ನಿದ್ದೆ ಕುಳಿತಿತ್ತು. ಕ್ಯಾಬ್ ನಲ್ಲಿ ಹಾಗೇ ಒರಗಿ ಒಂದಿಷ್ಟು ಜೊಂಪು ತೆಗೆಯಬೇಕು ಎಂದುಕೊಂಡೆ. ಆದರೆ...
ತೊಕ್ ಮತ್ತು ಸೂಪರ್ ಬರ್ಗರ್
ಅವಧಿಯಲ್ಲಿ ಪ್ರತಿ ವಾರ ವೆಂಕಿ ಬರ್ಗರ್ ಟೇಸ್ಟ್ ನೋಡಿದ್ದೀರಿ. ಆದರೆ ಮತ್ತೆರಡು ಹೊಸ ಬಗೆಯ ಬರ್ಗರ್ ಬಗ್ಗೆ ನಮಗೆ ಇತ್ತೀಚೆಗೆ ಗೊತ್ತಾಯಿತು. ಅಮೆರಿಕೆಯಲ್ಲಿರುವ ಮತ್ತೋರ್ವ ಕನ್ನಡಿಗ ನಾಗ ಐತಾಳ ಅವರು ತಮ್ಮ "ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ" (ಪ್ರಕಾಶಕರು: ವಸಂತ ಪ್ರಕಾಸನ, ನಂ. ೧೦, ತುಳಸಿವನಂ, ಬೆಂಗಳೂರು - ೫೬೦೦೫೩)...
