ಒಂದೇ ಒಂದು ಇಂಜೆಕ್ಷನ್!

ಮ್ಮ ಅವಧಿಯ ಓದುಗರಾದ ದಿ ಅಡ್ವೆಂಚರರ್ಸ್ ನ ಎಸ್ ಎಲ್ ಎನ್ ಸ್ವಾಮಿ ಇತ್ತೀಚೆಗಷ್ಟೇ ಬ್ರೆಜಿಲ್ ಗೆ ಹೊರಟು ನಿಂತಿದ್ದರು. ಪಾಸ್ ಪೋರ್ಟ್ ಇತ್ತು. ವೀಸಾ ಬಂದಾಗಿತ್ತು. ಆದರೆ ಕೇವಲ ಒಂದೇ ಒಂದು ಇಂಜೆಕ್ಷನ್ ಅವರ ಇಡೀ ಪ್ರವಾಸವನ್ನೇ ಕೊನೆಗಾಣಿಸಲು ಸಜ್ಜಾಗಿತ್ತು. ಅಮೆರಿಕಾಗೆ ಹಾರುವಾಗ, ಇಂಗ್ಲೆಂಡ್ ಬಾಗಿಲು ತಟ್ಟುವಾಗ ವೀಸಾದ್ದೇ ಪ್ರಾಬ್ಲಂ. ಆದರೆ ಇದ್ಯಾವುದಪ್ಪಾ ಇಂಜೆಕ್ಷನ್ ರಗಳೆ? ಇಡೀ ಬೆಂಗಳೂರು ಹುಡುಕಾಡಿ ಸಿಗದೆ, ಮುಂಬಯಿಗೆ ದೌಡಾಯಿಸಿ, ಕಾಡಿ ಬೇಡಿ, ದಿನಗಟ್ಟಲೆ ಬೆನ್ನತ್ತಿ ಒಂದು ಇಂಜೆಕ್ಷನ್ ಚುಚ್ಚಿಸಿಕೊಂಡದ್ದಾಯ್ತು. ಬಾಗಿಲು ತೆರೆಯೇ ಸೇಸಮ್ಮ ಎಂಬ ಮಂತ್ರ ಗುಣುಗುಣಿಸಿದ ತಕ್ಷಣ ಗುಹೆ ಬಾಯ್ತೆರೆವಂತೆ ಇಂಜೆಕ್ಷನ್ ಚುಚ್ಚಿಸಿಕೊಂಡ ತಕ್ಷಣವೇ ಬ್ರೆಜಿಲ್ ಬಾಗಿಲೂ ತೆರೆದುಕೊಂಡಿತ್ತು. ಜನನಿಬಿಡ ಟ್ರಾಫಿಕ್ಕಿನಲ್ಲೂ ಪ್ರಧಾನಿ ಕಾರಿಗೆ ದಾರಿ ಸಿಗುವ ಹಾಗೆ ಕೇವಲ ಒಂದು ಇಂಜೆಕ್ಷನ್ ಬ್ರೆಜಿಲ್ ವರೆಗಿನ ದಾರಿಯನ್ನು ಸುಗಮ ಮಾಡಿಕೊಟ್ಟಿತ್ತು.

ಇದೆಲ್ಲ ಕೇಳುವಾಗ ನಮಗೆ ಥಟ್ಟನೆ ನೆನಪಿಗೆ ಬಂದದ್ದು ಪತ್ರಕರ್ತ ನಾಗೇಶ ಹೆಗಡೆಯವರ “ಗಗನ ಸಖಿಯರ ಸೆರಗು ಹಿಡಿದು” ಪ್ರವಾಸ ಕಥನ. ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳದ ಕಾರಣಕ್ಕೆ ಜೈಲಿನ ಕಂಬಿ ಎಣಿಸಬೇಕಾದ ಪರಿಸ್ಥಿತಿ ನಾಗೇಶ ಹೆಗಡೆಯವರಿಗೆ ಸಿಕ್ಕಿತ್ತು. ತಮ್ಮ ಟ್ರಂಪ್ ಕಾರ್ಡ್ ಹಾಸ್ಯದಲ್ಲಿ ನಾಗೇಶ ಹೆಗಡೆ ಇಡೀ ಘಟನೆಯನ್ನು ಬಣ್ಣಿಸಿದ್ದರ ಒಂದು ತುಣುಕು ಇಲ್ಲಿದೆ.

‍ಲೇಖಕರು avadhi

August 29, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: