ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನ್ಯೂಯಾರ್ಕಿಗೆ ನು಼ಂಗಲಾರದ ತುತ್ತು!

"ವೆಂಕಿ ಬರ್ಗರ್"       ವೆಂಕಿ ಆ ವಾರ ನ್ಯೂಯಾರ್ಕಿಗೆ ಇರಾನ್ ಅಧ್ಯಕ್ಷ ಅಹಮದಿನೆಜಾದ್ ಬಂದಿದ್ದ. ಎಲ್ಲರ ಬಾಯಲ್ಲೂ ಆತನದೇ ಹೆಸರು. ನ್ಯೂಯಾರ್ಕಿನ ಆತಿಥ್ಯ ಗುಣಕ್ಕಂತೂ ಅಗ್ನಿಪರೀಕ್ಷೆಯೇ ಎದುರಾದಂತಿತ್ತು. ಆ ವಾರ, ವಿಶ್ವಸಂಸ್ಥೆಯ ಮಹಾಧಿವೇಶನದ ಕಾರಣದಿಂದಾಗಿ ಅದರ ಹೆಡ್ ಕ್ವಾರ್ಟರ್ ಆದ ನ್ಯೂಯಾರ್ಕಿನಲ್ಲಿ...

read more
ಕನ್ನಡ ಭಾಷೆ: ಉಚ್ಚಾರಣೆಯಲ್ಲಿನ ರಾಜಕಾರಣ

ಡಾ. ಪಿ ಮಹಾದೇವಯ್ಯ ಕನ್ನಡದಲ್ಲಿ ಎರಡು ಮಾದರಿ ಪದಗಳು ಉಚ್ಚಾರಣೆಯಲ್ಲಿವೆ. ಒಂದು, ಮಾತಿನಂತೆ ಬರಹ ಇರುವ ಪದಗಳು. ಎರಡು, ಬರಹದಂತೆ ಮಾತಿರಬೇಕೆಂಬ ಪದಗಳು. ಮೊದಲನೆಯ ಪದಗಳು ಒಂದು ಭಾಷೆಯನ್ನು ಬಲಗೊಳಿಸುತ್ತವೆ. ಅಂದರೆ ಇವು ಕಿವಿ ಭಾಷೆಯಾಗಿರುತ್ತವೆ. ಎರ್ಡನೇ ಮಾದರಿ ಪದಗಳು ಕನ್ನಡದಲ್ಲಿರುವ ಸಂಸ್ಕೃತ ಪದಗಳು. ಇವು ತತ್ಸಮಗಳು. ಇವು...

read more
ದತ್ತ ಯಾತ್ರೆ ಮತ್ತು ಉದಾತ್ತ ಯಾತ್ರೆ

"ಗಾಳಿ ಬೆಳಕು"     ನಟರಾಜ್ ಹುಳಿಯಾರ್ ಕಳೆದ ವರ್ಷ ಹಾಗೂ ಈ ವರ್ಷ ದತ್ತ ಯಾತ್ರೆಯ ಭೀಕರ ಚೀರಾಟ ಕಂಡ ಯಾವ ದೈವಭಕ್ತನಿಗಾದರೂ ಈ ದತ ರಾಜಕಾರ್‍ಅಣಿಗಳಿಗೂ ದೇವರಿಗೂ ಯಾವುದೇ ಸಂಬಂಧವಿಲ್ಲವೆಂಬುದು ಗೊತ್ತಿರುತ್ತದೆ. ಪ್ರತಿಯೊಂದು ಚೀರಾಟ ಹಾಗೂ ದ್ವೇಷದ ಮಾತುಗಳಿಂದ ತಮ್ಮ ವೋಟಿನ ಬಲ ಹೆಚ್ಚುತ್ತದೆ ಎಂಬ ದುರಾಸೆಯ...

read more
ಈ ಪರಿಯ ಸೊಬಗು…

ಗೊತ್ತಿತ್ತು: ಪುಸ್ತಕ ಪ್ರಕಟವಾದಾಗ ಅದರ ಬಿಡುಗಡೆ ಕಾರ್ಯಕ್ರಮಕ್ಕೊಂದು ಇನ್ವಿಟೇಷನ್ ಕಾರ್ಡ್ ಬರುತ್ತದೆ ಅನ್ನೋದು. ಗೊತ್ತಿರಲಿಲ್ಲ: ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಯದಿದ್ದಾಗಲೂ ಸೊಗಸಾದ ಕಾರ್ಡ್ ಒಂದು ತಲುಪಿ ಅಚ್ಚರಿ ಹುಟ್ಟಿಸುತ್ತದೆ ಅನ್ನೋದು. ಯಾವುದೀ ಪರಿಯ ಸೊಬಗು? ನೋಡಿ: ಬುಕ್...

read more
ಅಫ್ರೋದಿತೆಯ ಮುಂದೆ ಪ್ರೇಮಾಲಾಪ…

ಅಮರ ಪ್ರೇಮದ ಅಧಿದೇವತೆ ಅಫ್ರೋದಿತೆ, ವೈಭವ ಸಿಂಹಾಸನದ ಒಡೆಯ ಸ್ಯೂಸ್ ದೇವನ ಪುತ್ರಿ, ಮೋಹದ ಬಲೆಯ ನೇಯುವಾಕೆ, ನನ್ನ ಶೋಕತಪ್ತ ಹೃದಯವನ್ನು ಒಡೆಯದಿರು. ಬೇಡಿಕೊಳ್ಳುವೆನು ಓ ರಾಣಿ, ಬಾ ನನ್ನ ಬಳಿಗೆ. ದೂರ ನಿಂತರೆ ನನ್ನ ದನಿ ಕೇಳಿಸದು ನಿನಗೆ, ನಿನ್ನ ತಂದೆಯ ಹೊನ್ನ ಅರಮನೆಯ ತೊರೆದು ಬಾ ರಥವೇರಿ. ಅಂದದ ಗುಬ್ಬಿಗಳ ಹಿಂಡಿನ...

read more
ಅವನ ನಗು ಹೊತ್ತ ಮಗು

"ಭಾಮಿನಿ ಷಟ್ಪದಿ"       ಚೇತನಾ ತೀರ್ಥಹಳ್ಳಿ ಮಗು. ಅರೆ! ನನ್ನದೇ ಜೀವ. ನನ್ನ ನಿರಂತರತೆ. ಆದರೆ, ಅದು ನಾನಲ್ಲ. ಅದು ನಾನು ಮಾತ್ರ ಅಲ್ಲ. ಅಂವ ಕೂಡ ಅಂದ್ಕೊಳ್ತಾನೇನೋ, " ನನ್ನ ಮಗು, ನನ್ನದೇ ನಿರಂತರತೆ!" ಮಗು... ಈಗ ತಾನೇ ಕಡೆದು ತೆಗೆದ ಮೆದು ಬೆಣ್ಣೆ. ಕಾದು ಕಾದು ಹೊನ್ನುಗಟ್ಟಿದ ಹಾಲು ಕೆನೆ. ಮಗು,...

read more
ನನ್ನ ಸಂಗೀತ ರಸಮಂಜರಿ…

"ಹಂಗಾಮ"ದಿಂದ ಹೆಕ್ಕಿದ್ದು  ಶ್ರೀನಿಧಿ ಕರ್ಜೆ "ಹಾಡುವುದು" ಅಂದ್ರೆ ನಂಗೆ ಭಯಂಕರ ಇಷ್ಟ ಮಾರಾಯ್ರೆ. ನಾನು ಮನೇಲಿ ಇದ್ರೆ ಇಡೀ ದಿನಾ ಹಾಡ್ತಾನೇ ಇರುವುದು. "ಗಾತಾ ರಹೇ ಮೇರಾ ದಿಲ್...." ಅನ್ನುವುದನ್ನು ಅಕ್ಷರಶಃ ಪಾಲಿಸಲು ಹೊರಟವಳ ಹಾಗೇನೇ... ಆದ್ರೆ ಈ ನನ್ನ ಹಾಡುವ "ಮೂಡ್" ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಹೇಳುವುದು ಮಾತ್ರ...

read more
ಜಸ್ಟ್ ಔಟ್!

ಕಾವ್ಯ ಕಾರಣ ಕೆ ವಿ ತಿರುಮಲೇಶ್ | ಪ್ರಸಾರಾಂಗ | ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-೫೮೩೨೭೬ ವಿವರಗಳಿಗಾಗಿ ನೋಡಿ: ಬುಕ್...

read more
ಹೊಸ ಪುಸ್ತಕದ ಖುಷಿಗೆ ಹಳೇ ಕವಿತೆ!

ಮಮತಾ ಜಿ ಸಾಗರ ಅವರ ಮೂರನೇ ಕಾವ್ಯ ಸಂಕಲನ ಹೊರಬಂದಿದೆ. ಈ ಸಂದರ್ಭದಲ್ಲಿ ಅವರ ಹಳೆಯ ಕವಿತೆಯೊಂದನ್ನು ಇಲ್ಲಿ ಕೊಡುತ್ತಿದ್ದೇವೆ. ಇದು ಅವರು ಸುಮಾರು ೨೦ ವರ್ಷಗಳಷ್ಟು ಹಿಂದೆ ಬರೆದದ್ದು. * * *  ವೃದ್ಧಿ ಮಮತಾ ಜಿ ಸಾಗರ್ ಮುತ್ತಿ ಕಿತ್ತುವ ಕಿಚ್ಚು ಬಿಚ್ಚಿಕೊಳ್ಳುವ ತೊಗಟೆ ತಳದ ಕಂದರದಲ್ಲಿ ಮುಚ್ಚುಕೊಳ್ಳುವ ಕೊಳಕು ಬಚ್ಚಿಟ್ಟ...

read more
ಜಸ್ಟ್ ಔಟ್!

ಹೀಗೆ ಹಾಳೆಯ ಮೇಲೆ ಹಾಡು ಮಮತಾ ಜಿ ಸಾಗರ್ | ಅಭಿನವ | ಬೆಂಗಳೂರು | ದೂರವಾಣಿ: ೦೮೦-೨೩೫೦೫೮೨೫ ೧೭-೧೮/೨, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-೫೬೦೦೪೦ * * * ಚಾರು ಚರಿತ   ಕೆ ಕೇಶವ ಶರ್ಮ | ಅಭಿನವ |...

read more
ನನ್ನೊಳಗಿನ ಚೇಳು

"ಡೋರ್ ನಂ. 142"      ಬಹುರೂಪಿ ಥೇಟ್ ನಿಮ್ಮಪ್ಪನ ಹಾಗೇ... ಇನ್ನೂ ಅಮ್ಮ ಮಾತು ಮುಗಿಸಿರಲಿಲ್ಲ. ನಾನು ಬೆಚ್ಚುಬಿದ್ದೆ. ಒಂದೆರಡು ದಿನಕ್ಕೆ ಅಂತಾ ದೂರದೂರಿನಿಂದ ಬಂದಿದ್ದೆ. ಅಮ್ಮನ ಕೈಯಡುಗೆ ಬೇಕು ಅನ್ನಿಸಿತ್ತು. ಸೋರುತ್ತಿದ್ದ ಮೂಗು, ಕಟ್ಟಿದ ಗಂಟಲು ಸಹ "ಅಮ್ಮ" ಎಂಬ ಡಾಕ್ಟರತ್ತಲೇ ಬೆರಳು ತೋರಿಸಿತ್ತು. ಮೆಣಸಿನ...

read more
ರಾಧೆಯ ಪಾಲು

"ಭಾಮಿನಿ ಷಟ್ಪದಿ"       ಚೇತನಾ ತೀರ್ಥಹಳ್ಳಿ ಕೃಷ್ಣ, ಬಿದಿರ ಕೊಳವೆಯೂದಿದ. ಕೊಳಲಾಗಿಸಿದಳು ರಾಧೆ! ಹೌದು. ಗೀತಾ ಮಾಸ್ತರು ಕೃಷ್ಣನ ಕೊಳಲಿಗೆ ದನಿ ತುಂಬಿದ್ದೇ ಅವಳು. ಹಾಗವಳು ಸುಮ್ಮಸುಮ್ಮನೆ ರಾಧೆಯಾದವಳಲ್ಲ. ಆರಾಧನೆಯೇ ಅವಳಾಗಿ, ವ್ಯಾಕರಣದ ಮೂಲಧಾತುಗಳೆಲ್ಲ ಬಸಿದಿಳಿದು, 'ರಾಧಾ' ಉಳಿದಳು, ರಾಧೆಯಾದಳು....

read more
ಕೇಂದ್ರದ “ಎಡಬಾಧೆ” ಮತ್ತು ಮೀಡಿಯಾ ರಾಜಕಾರಣ…

"ಗಾಳಿ ಬೆಳಕು"     ನಟರಾಜ್ ಹುಳಿಯಾರ್ "ಈಗ ಕೇಂದ್ರದಲ್ಲಿ ಚುನಾವಣೆ ನಡೆಸಿದರೆ ಕಾಂಗ್ರೆಸ್ಸಿಗೆ ಅನುಕೂಲ" ಎಂದು ದಿಲ್ಲಿ ರಾಜಕೀಯ ಪಂಡಿತರು ಕಳೆದೆರಡು ತಿಂಗಳಿನಿಂದ ಬರೆಯುತ್ತಿದ್ದಾರೆ. ಇಂಗ್ಲಿಷ್ ನ್ಯೂಸ್ ಚಾನಲ್ಲುಗಳಂತೂ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿನವರ ನಡುವಣ ಸಂಬಂಧವನ್ನು ಏನಾದರೂ ಮಾಡಿ ಮುರಿಯಲೇಬೇಕೆಂದು...

read more
ವೈವಿಧ್ಯದ ಊರುಗಳ ರಾಣಿ!

"ವೆಂಕಿ ಬರ್ಗರ್"       ವೆಂಕಿ ಜಾಗತೀಕರಣಗೊಂಡ ಅರ್ಥವ್ಯವಸ್ಥೆಗೊಂದು ಥ್ಯಾಂಕ್ಸ್; "ಮೆಲ್ಟಿಂಗ್ ಪಾಟ್" ಅನ್ನೋ ನುಡಿಗಟ್ಟು ಈಚಿನ ದಿನಗಳಲ್ಲಿ ಕ್ಲೀಷೆ ಅನ್ನಿಸೋವಷ್ಟು ಕಾಣಿಸಿಕೊಳ್ಳಲು ಕಾರಣವಾಗಿರೋದಕ್ಕೆ. ನಮ್ಮದೇ ಬೆಂಗಳೂರು, ಮೈಸೂರು ಸಿಟಿಗಳಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆದರೆ ಕೆಲವು...

read more
ದೇವರಿಗೆ ಆತ ಮತ್ತೆ ಬರೆದ!

ಒಂದು ಸಲ ಒಬ್ಬ ಬಡವ ದೇವರಿಗೆ ಒಂದು ಕಾಗದ ಬರೆದನಂತೆ: "ದೇವರೇ, ನನಗೆ ನೂರು ರೂಪಾಯಿ ಬೇಕಾಗಿದೆ. ದಯವಿಟ್ಟು ಕಳಿಸು" ಅಂತ. ಕಾಗದದ ಮೇಲೆ, "ಸ್ವರ್ಗದಲ್ಲಿರುವ ದೇವರಿಗೆ" ಅಂತ ವಿಳಾಸ ಬರೆದು ಅಂಚೆಪೆಟ್ಟಿಗೆಯಲ್ಲಿ ಹಾಕಿದನಂತೆ. ಪೋಸ್ಟಾಫೀಸಿನವರು ಆ ಕಾಗದವನ್ನು ನೋಡಿ ನಕ್ಕು "ನಮ್ಮ ರಾಜ್ಯದಲ್ಲಿ ಎಂಥೆಂಥವರಿದ್ದಾರೆ ಎಂಬುದನ್ನು ನಮ್ಮ...

read more
ನಿಯತ್ತು

ಲಲಿತಾ ಸಿದ್ಧಬಸವಯ್ಯ ಇತತ ಜರುಗಬ್ಯಾಡ, ಮಗು ಮಲಗೈತೆ ಅತ್ತೂ ಅತ್ತೂ ಈಗಿನ್ನ ಹಂಗೆ ಕಣ್ಣು ಮುಚ್ಚೈತೆ ತೋ, ಬಿಡು ಎದೆ, ನಂದಿನ್ನಾ ಕುಡಿಯೋ ಮಗು ಕಿರುಚಬ್ಯಾಡ, ಬೇಕಾದ್ರಿರು ಬ್ಯಾಡದಿದ್ರೆ ಎದ್ದೋಗು ಏನಂದೆ, ಉಪವಾಸ ಬೀಳ್ತಿಯೇ ಬೋಸುಡಿ ಅಂದಾ ಹೊಸದಲ್ಲ, ಕಂಡಿದೀನಿ ಹೋಗು ಹುಟ್ಟಿದಾಗಿನಿಂದ ಜಂಬೂ ಸವಾರಿ ತೋರಿಸ್ತಾರಾ, ನಿನ್ನಿಪ್ಪತ್ತು...

read more
ಮಾರ್ಕ್ ಟ್ವೇನ್ ಉಪನ್ಯಾಸಕ್ಕೆ…

ಮಾರ್ಕ್ ಟ್ವೇನ್ ಒಮ್ಮೆ ಪುಟ್ಟದೊಂದು ಊರಲ್ಲಿ ಉಪನ್ಯಾಸ ನೀಡಬೇಕಾಗಿತ್ತು. ತಮ್ಮ ಗಡ್ಡವನ್ನು ಶೇವ್ ಮಾಡಿಸಲು ಹತ್ತಿರದ ಸಲೂನಿಗೆ ನುಗ್ಗಿದರು. "ಸಾಹೇಬ್ರು ಊರಿಗೆ ಹೊಸಬ್ರೂಂತ ಕಾಣುತ್ತೆ" ಸಲೂನಿನವ ಕೇಳಿದ. "ಹೌದು" "ನೋಡಿದ್ರಾ! ನಿಮ್ಮ ಮುಖ ನೋಡಿದ ತಕ್ಷಣ ಗೊತ್ತಾಯ್ತು ನಂಗೆ... ಅಂದಹಾಗೆ ಇವತ್ತು ಸಂಜೆ ಫೇಮಸ್ ರೈಟರ್ ಮಾರ್ಕ್...

read more
ಅನುಭಾವಿ ಬಂಡುಕೋರರ ಸಾಹಚರ್ಯದಲ್ಲಿ…

ಕವಿ ಎಚ್ ಎಸ್ ಶಿವಪ್ರಕಾಶ್ ಅವರು ೧೯೯೦ರಲ್ಲಿ ಪ್ರಕಟವಾದ ತಮ್ಮ "ಅಣುಕ್ಷಣ ಚರಿತೆ" ಕವನ ಸಂಕಲನಕ್ಕೆ ಪ್ರಾಸ್ತಾವಿಕವಾಗಿ ಬರೆದ "ಬರೆಯಲಾಗದ ಸ್ವಕೀಯ ಚರಿತ್ರೆ ಒಂದು ಚೂರು" ಅನೇಕ ಕಾರಣಗಳಿಗಾಗಿ ಗಮನೀಯ. ಅದರ ಕೆಲವು ಸಾಲುಗಳು. * ಅಪನಂಬಿಕೆಯನ್ನೇ ಸ್ವಯಂಪೂರ್ಣವಾದ ಗುರಿಯಾಗಿಸಿಕೊಂಡ "ನವ್ಯ" ಪ್ರವೃತ್ತಿ ಭೀಕರವಾದುದು. ಇಂಥ ಮನೋಧರ್ಮ...

read more
ಹೇನು

ಶಶಿ ಭಾಟಿಯ ಅದೊಂದು ಅವಿಭಕ್ತ ಕುಟುಂಬ. ಊರು ತುಂಬ ತುಂಬಿದ ಸಾಗುವಳಿ ಕುಟುಂಬ. ಊರಿಗೇ ತುಂಬಿದ ಮನೆ. ಮನೆಯ ಮಕ್ಕಳ ಆಧುನಿಕ ರೀತಿ ಕಂಡು ತಾಯಿಯಾದವಳಿಗೆ ಬೊಡಿದು ಹೋಯಿತು. ಒಂದು ಮಾತಿಲ್ಲ, ನಗುವಿಲ್ಲ. ಮಕ್ಕಳಿಗೆ ಮದುವೆಯಾದ ಮೇಲೆ ಓಟ್ಟಿಗೆ ಊಟಕ್ಕೆ ಕೂರುವುದೂ ನಿಂತುಹೋಗಿದೆ. ಅವರವರಿಗೆ ಅವರವರ ಹೆಂಡಿರು, ಮಕ್ಕಳು. ಅಲ್ಲಿಗೆ...

read more

Pin It on Pinterest

Share This