ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಹಮ್ಮದ್ ಮ್ಯಾಜಿಕ್
ಹಿಡಿಯಲ್ಲಿ ಅಗಾಧ ವಿಷಯ ಹಿಡಿದು ಕೊಡುವ ಮೊನಚು ನೋಟದ ಪಿ ಮಹಮ್ಮದ್ ಇನ್ನು ಮುಂದೆ ಅವಧಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಜಾವಾಣಿಯ ವ್ಯಂಗ್ಯಚಿತ್ರಕಾರರಾದ ಮಹಮ್ಮದ್ ಟಿ ಪಿ ಕೈಲಾಸಂ ಬಣ್ಣಿಸಿದಂತೆ 'ಕಿರು ಆಳದ ನಗೆ ನೀರಿನ ಮೇಲೆ ತಿರುಗುತ ಬಹುವೇಳೆ ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು' ಹಿಡಿಯಬಲ್ಲವರು. ಮಹಮ್ಮದ್ ರೇಖೆಗಳು...
ನೇರಳೆ ಮರ ಎಂಬ ರೂಪಕ
ಚಿತ್ರ: ಎಂ ಎಸ್ ಮೂರ್ತಿ ಒಂದು ಸುಂದರ ಪುಸ್ತಕ ಕನ್ನಡ ಲೋಕಕ್ಕೆ ಸಂದಿದೆ. ಕಥೆಗಾರ ಕೇಶವ ಮಳಗಿ ಈ ಪುಸ್ತಕವನ್ನು ಕೊಟ್ಟಿದ್ದಾರೆ. ಕಥೆಗಾರ ಕಂಡ ರೂಪಕ ಲೋಕದ ಕಥನ ಮಳಗಿ ಅವರ ಕೈಚಳಕದಲ್ಲಿ 'ನೇರಳೆ ಮರ' ವಾಗಿದೆ. ಇಡೀ ಪುಸ್ತಕ ನೇರಳೆ ಬಣ್ಣದಲ್ಲಿದೆ ಎಂಬುದು ಇದರ ಹೆಚ್ಚುಗಾರಿಕೆ. ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೆ...
ಕಚ್ಚಿದ ೨೪ ಫ್ರೇಮ್ …
ಅಭಯ ಸಿಂಹ ಆರ್ಥಾತ್ ಅಭಯ. ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ಕಲಿತು ಬಂದ ಈತ ಈಗಾಗಲೇ ಗಾಂಧಿನಗರದಲ್ಲಿ ಹೆಜ್ಜೆ ಊರಿದ್ದಾನೆ. 'ಗುಬ್ಬಚ್ಚಿಗಳು' ಈತನ ನಿರ್ದೇಶನದ ಮೊದಲ ಚಿತ್ರ. ಕಡಲ ದಂಡೆಯಿಂದ ಎದ್ದು ಬಂದ ಅಭಯ ಹಿಡಿದ ಪಟ್ಟು ಬಿಡುವ ಹುಡುಗನಲ್ಲ. ಥೇಟ್ ತಂದೆಯಂತೆ, ಅಥವಾ ಅಜ್ಜನಂತೆ. ಜಿ. ಟಿ. ನಾರಾಯಣರಾಯರ...
ಹಳೆಯ ನೆನಪೇ…..
ಚಿತ್ರ: ಜಿ ಎನ್ ಮೋಹನ್ ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ.....
‘ಚೆ’ ನೆನಪಲ್ಲಿ ನನ್ನೊಳಗಿನ ಹಾಡು ಕ್ಯೂಬಾ
ನಾನು ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಓದಿದಾಗ ಒಳಗಿನ ಹೂರಣದಷ್ಟೇ ಕಾಡಿದ್ದು ಅದರ ಮುಖಪುಟ. ಇಂದಿಗೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಯಾವುದೆಂದು ಕೇಳಿದರೆ ಅದು 'ನಹಾಕ್ಯೂ' ನೆ. ಕ್ಯುಬಾದಂತಹ ಪುಟ್ಟ ರಾಷ್ಟ್ರ ಕಿರಾತಕ ಅಮೆರಿಕಾಗೆ ಸೆಡ್ಡ ಹೊಡೆದು ನಿಂತದ್ದಿದೆಯಲ್ಲ ನಿಜಕ್ಕೂ ಅದು ಗ್ರೇಟ್. ಇನ್ನು ನನ್ನ 'ಚೆ'. ಆತ...
ರಂಗದಿಂದಾಚೆ, ಒಂದಿಷ್ಟು ದೂರ…
ಇಕ್ಬಾಲ್ ಎಂದರೆ ನೆನಪಾಗುವುದು ನಾಟಕ. ರಂಗದ ಮೇಲೆ ಒಂದು ಭಿನ್ನ ಅನುಭವವನ್ನೇ ಕಟ್ಟಿಕೊಡುವ ಇಕ್ಬಾಲ್ ರಂಗದ ಆಚೆಗೂ ಜಾದೂ ನಡೆಸುತ್ತಾರೆ. ಇವರ ರೇಖೆಗಳು ಹತ್ತು ಹಲವು ಅನುಭವಗಳನ್ನು ನಮ್ಮ ಒಡಲಲ್ಲಿ ತಂದು ಕೂರಿಸುತ್ತದೆ. ದೇಸಿ ಸಂಸ್ಕೃತಿ ಹರಡಲೆಂದೇ 'ಗುಡಿ' ಹೆಸರಿನಲ್ಲಿ ವಿಶಿಷ್ಟ ಮಳಿಗೆ ತೆರೆದಿದ್ದಾರೆ. ಇಕ್ಬಾಲ್ ಆ ಮಳಿಗೆಗೂ...
ಹೋಗೇ ಸುಮ್ಮನೆ!
ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ. ಪ್ರತಿ ದಿನವೂ ಪ್ರೀತಿಸೋಣ. ಆ ನೆಪದಲ್ಲಿ ಇಲ್ಲಿದೆ 'ಅಪಾರ' ಅವರ ಒಂದು ಸುಂದರ ಕವಿತೆ. ಇದು ನಿಮ್ಮದೇ ಎಂದು ಹೇಳಿಕೊಂಡು ಪ್ರೆಸೆಂಟ್ ಮಾಡಲು ಅಡ್ಡಿಯಿಲ್ಲ.. ಹೋಗೇ ಸುಮ್ಮನೆ! 1 ಮಧ್ಯಾಹ್ನವ ಕಳೆಯುತಿದ್ದ ಉದ್ಯಾನದ ಬೆಂಚು ಮಳೆಯ ರಾತ್ರಿ ಹೊಳೆಯುತಿದ್ದ ಒದ್ದೆ ಮುಖದ ಮಿಂಚು ಒಬ್ಬರಿಗೆ...
ಒಂದು ಕೃತಿ -ಒಂದು ಕಲಾ ಕೃತಿ
ಇಲ್ಲೊಂದು ಕೃತಿಯಿದೆ-ಕಲಾಕೃತಿಯೂ ಇದೆ. ಎರಡೂ ಸುದೇಶ್ ಮಹಾನ್ ರಚನೆ. ಚೆ ಗೆವಾರ ಸುದೇಶರ ಪ್ರೀತಿಯ ಹೀರೋ. ಜಿ ಎನ್ ಮೋಹನ್ ಕ್ಯೂಬಾ ಪ್ರವಾಸ ಕಥನ ಬರೆದಾಗ ಅದರ ಮುಖಪುಟಕ್ಕಾಗಿ ಕುಂಚ ಕೈಗೆತ್ತಿಕೊಂಡರು. ಒಂದು ಪುಸ್ತಕಕ್ಕೆ ಬರೆದ ಕಲೆ ಬರೆದವರನ್ನೇ ಕಾಡುವುದು ಅಪರೂಪ. ಆದರೆ ಇಲ್ಲಿ ಹಾಗಾಗಲಿಲ್ಲ. ಸುದೇಶ್ ಈ ಕೃತಿ ಬರೆದ ಹಲವಾರು...
ಕುಡಿಯೊಡೆದಿದೆ ಒಂದು ನೆನಪು- ಅದು ‘ನಿನ್ನ ನೆನಪು’
ಇದು ನೆನಪು- ನಿನ್ನ ನೆನಪು. ಕಾಡುವ ನೆನಪು. ಕೊಲ್ಲುವ ನೆನಪು. ಓಹ ಎನಿಸುವಂತೆ ಮೂಡಿ ಬಂದ ಒಂದು ಹೊಚ್ಚ ಹೊಸ ಕ್ಯಾಸೆಟ್ ನ ಹೆಸರು- ನಿನ್ನ ನೆನಪು. 'ಇಲ್ಲಿವೆ ಕೆಲವು ಸೂಕ್ಷ್ಮ ಕವನಗಳು, ಇವುಗಳ ಭಾವನಾತ್ಮಕ ತುಡಿತ, ಅಧುನಿಕ ಸಂಗೀತದ ದ್ವನಿಯಲ್ಲಿ ಹೊಮ್ಮಿದೆ' ಎನ್ನುತ್ತಾರೆ ಕ್ಯಾಸೆಟ್ ಕನಸು ಕಟ್ಟಿದವರು. ಇದು ಒಂದು ಕನಸುಗಾರರ...
ಮೂಕವಾಗಿದೆ ಮಾತು ಬರಿ ರೋಧನ…
ಇಲ್ಲಿ ಕಾಲ ಚಲಿಸುತ್ತಿಲ್ಲ. ಮೌನದ ಮೊರೆ ಹೋಗಿದೆ. ಕುಪ್ಪಳ್ಳಿಯ ಮನೆಗೊಮ್ಮೆ ಹೋಗಿ ಬನ್ನಿ. ಆ ಕವಿಯನ್ನು ಕಳೆದುಕೊಂಡ ದುಃಖ ಆ ಮನೆಯ ಗಡಿಯಾರವನ್ನೂ ಹೊಕ್ಕು ನಿಂತಿದೆ. ಕುವೆಂಪು ಇಲ್ಲವಾದ ಸಮಯಕ್ಕೆ ಸರಿಯಾಗಿ ಗಡಿಯಾರವೂ ಮೂಕವಾಗಿದೆ. ಕುವೆಂಪು ಇಲ್ಲವಾದ ಆ ಘಳಿಗೆಯನ್ನು...
ಗುಜ್ಜಾರ್ ಗೆರೆ
ಗುಜ್ಜಾರ್ ಕಂಡಂತೆ ದೇಶದ ಆಗುಹೋಗು ಆಗೀಗ ನಿಮ್ಮ ಮುಂದೆ. ಬರಲಿರುವ ಕನ್ನಡ ಟೈಮ್ಸ್ ಸಂಚಿಕೆಯ ಈ ರೇಖೆಗಳು ಮುಂಗಡವಾಗಿ...
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?
ಸುಧನ್ವಾ ದೇರಾಜೆ ತಮ್ಮ ಸಿಟಿಯೆಡೆಗಿನ ಕಾವ್ಯ ನೋಟವನ್ನು ಮುಂದುವರೆಸಿದ್ದಾರೆ. ಕಾನನದ ನಡುವಿನಿಂದ ಎದ್ದು ಬಂದ ಹುಡುಗನೊಬ್ಬ ಬೆಂಗಳೂರು ಎಂಬ ನಗರಿಯನ್ನು ಕಂಡ ಬಗೆ ಇಲ್ಲಿದೆ. ಎಕ್ಸ್ಕ್ಯೂಸ್ ಮಿ .. ಇದು ಸಖೀ ಗೀತ ಅಲ್ಲ ಸಿಟಿ ಗೀತ.. 3 ಗಲಗಲ ಅಲುಗುತ್ತಿದೆ ಈ ನಗರ ಬೆಳೆದು ಅಗಲಗಲ ಜಗದಗಲ. ಇವತ್ತು ಬರ್ಲಾ, ನಾಳೆ ಆಗಲ್ಲ...
ರೀ…ಇದು ಕಾಮೆಂಟ್ ರೀ..
ಹೆಸರು ಮಾತ್ರ ಅಪಾರ, ಆದರೆ ದಿನವೆಲ್ಲಾ ಈತನ ಮುಂದೆ ಕುಳಿತರೂ ಮಾತನಾಡುವುದು ಮೂರೇ ಪ್ಯಾರ- ಇದು ಅಪಾರ ಅವರನ್ನು ಬಲ್ಲ ಎಲ್ಲರ ಅನುಭವ. 'ಮಾತು ಕಡಿಮೆ, ಬರೀ ದುಡಿಮೆ' ಅಂತೇನಾದರೂ ಇವರು ನಿರ್ಧಾರ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಕನ್ನಡ ಪುಸ್ತಕ ಲೋಕಕ್ಕಂತೂ ನಿಜಕ್ಕೂ 'ಅಪಾರ' ಕೊಡುಗೆ ನೀಡಿದ್ದಾರೆ. ಅಪಾರ ಮಾಡುವ ಮುಖಪುಟವೂ ಚೆನ್ನ...
ಬರಹ ನೂಪುರ
ಯು ಬಿ ರಾಜಲಕ್ಷ್ಮಿ ತರಂಗದ ಮೂಲಕ ಹೆಸರಾದವರು. ತರಂಗಕ್ಕಾಗಿ ಆಕೆ ನಾಡಿನ ತುಂಬಾ ಸುತ್ತಾಡಿದ್ದಾರೆ. ಈಗ ತರಂಗದ ಕಾರ್ಯನಿರ್ವಾಹಕ ಸಂಪಾದಕಿ. ರಾಜಲಕ್ಷ್ಮಿ ಉಡುಪಿ ಅಡಿಗೆಯ ಬಗ್ಗೆ ಬರೆದ ಪುಸ್ತಕಗಳು ತುಂಬಾ ಹೆಸರು ಮಾಡಿದೆ. ಕುಕ್ ಬುಕ್ ಗಳು ಈಗ ಎಲ್ಲೆಡೆ ಹಾಟ್ ಸೇಲ್ ವಸ್ತುವಾಗಿರುವಾಗ ರಾಜಲಕ್ಷ್ಮಿ ಅತ್ಯಂತ ನವಿರಾದ ಭಾಷೆಯಲ್ಲಿ...
ಎಲ್ಲ ಮರೆತಿರುವಾಗ…
ಇದು ಪಿ ಮಹಮದ್ ಕಂಡ ನೋಟ. ಪಿ ಮಹಮದ್ ನೋಟ ಹರಿತ ಎಂಬುದಕ್ಕೆ ಇಲ್ಲಿರುವ ಕಾರ್ಟೂನ್ ಗಳೇ ಸಾಕ್ಷಿ. ಮಹಮದ್ ರ ಈ ನೋಟಕ್ಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ತನ್ನನ್ನು ಗೌರವಿಸಿಕೊಂಡಿದೆ. 'ಎಲ್ಲ ಮರೆತಿರುವಾಗ...' ಮತ್ತೆ ಕರ್ನಾಟಕದ ರಾಜಕಾರಣವನ್ನು ನೆನಪಿಸಿಕೊಳ್ಳಲು ಮಹಮದ್ ರಿಗೆ ಸಿಕ್ಕ ಪ್ರಶಸ್ತಿ ಒಂದು ನೆಪವಾಗಿದೆ. ಮಹಮದ್...
ಕುವೆಂಪುವಿಗೆ ಇಲ್ಲೂ ಒಂದು ಮನೆ
ಕುಪ್ಪಳ್ಳಿ, ವೆಂಕಟಪ್ಪ ಹಾಗೂ ಪುಟ್ಟಪ್ಪ ಮೂರೂ ನೆನಪುಗಳನ್ನು ಒಂದೇ ಕಡೆ ಹಿಡಿದಿಡಲಾಗಿದೆ. ತೇಜಸ್ವಿ ಕುಟುಂಬ ಕುವೆಂಪು ಅವರನ್ನೂ, ಅವರ ನೆನಪುಗಳನ್ನೂ ಇನ್ನಿಲ್ಲದಂತೆ ಕಾಪಾಡಿದೆ. ಅವರ ಪುಸ್ತಕಗಳು ಎಲ್ಲರಿಗೂ ದಕ್ಕುವಂತೆ ನೋಡಿಕೊಂಡಿದೆ. ಸುಂದರವಾಗಿ ಮುದ್ರಿಸಿ ಪ್ರತಿಯೊಬ್ಬರೂ ಕೊಳ್ಳುವಂತೆ ಮಾಡಿದೆ. ಬೇಂದ್ರೆ ಪುಸ್ತಕಗಳಿಗಾಗಿ...
ಸಖೀ ಗೀತ ಅಲ್ಲ….ಸಿಟಿ ಗೀತ….
ಕುಮಾರ ಪರ್ವತವನ್ನು ಇನ್ನೇನು ಚುಂಬಿಸಿಯೇಬಿಡುತ್ತೇನೆ ಎನ್ನುವಷ್ಟು ಹತ್ತಿರದಲ್ಲಿರುವ ನಾರ್ಣಕಜೆ, ಚೊಕ್ಕಾಡಿ, ಎಲಿಮಲೆ, ಕುಕ್ಕುಜಡ್ಕ... ಇವೆಲ್ಲವೂ ಕವಿತೆ ಅರಳಲು ಹೇಳಿ ಮಾಡಿಸಿದ ತಾಣಗಳು. ಇಂತಹ ಹಸಿರಿನ ಮಧ್ಯದಿಂದ ಎದ್ದು ಬಂದಾತ ಸುಧನ್ವಾ ದೇರಾಜೆ. ಅಷ್ಟು ಚೆನ್ನಾಗಿ ಕವನ ಬರೆಯುವ ಈತ ಪತ್ರಿಕೋದ್ಯಮಕ್ಕೆ ಏಕೆ ಜೋತು ಬಿದ್ದನೋ?...
ಜಾರ್ಜ್ ಬುಶ್ ಕೇವಲ 259 ಸುಳ್ಳು ಹೇಳಿದರು…
ಗಾಳಿ ಬೆಳಕು ನಟರಾಜ್ ಹುಳಿಯಾರ್ "ಅಮೆರಿಕಾ ಅಧ್ಯಕ್ಷಗಿರಿಯಿಂದ ಇನ್ನೇನು ಇಳಿಯಲಿರುವ ಜಾರ್ಜ್ ಬುಶ್ ಸುಮಾರು ೨೫೯ ಸುಳ್ಳು ಹೇಳಿದ್ದಾರೆ" ಎಂದು ವಾಷಿಂಗ್ಟನ್ನಿನ ಎರಡು ಸುದ್ದಿ ಸಂಸ್ಥೆಗಳ ಅಧ್ಯಯನ ಹೇಳುತ್ತದೆ. ಈ ಅಧ್ಯಯನದ ಪ್ರಕಾರ ೨೦೦೧ರಲ್ಲಿ ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿಯಾದ ಮೇಲೆ ಇರಾಕಿನಿಂದ ಅಮೆರಿಕಾದ ಭದ್ರತೆಗೆ ಎಷ್ಟು...
ನಾಲ್ಕು ಮಾತಿಗೂ ಮಕ್ಕಳು ಹುಟ್ಟೋದಕ್ಕೂ ಏನು ಸಂಬಂಧ?
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಘಮ್ಮನೆ ಮಲ್ಲಿಗೆ ಮಾಲೆ ನೇತುಬಿಟ್ಟ ಹೂ ಮಂಚ. ಗೋಡೆ ತುಂಬೆಲ್ಲ ಸೆಲ್ಲೋಟೇಪಲ್ಲಿ ಬಿಗಿದು ನಿಂತ ಕೆಂಪು ಗುಲಾಬಿಗಳು. ರೂಮಿನ ತುಂಬ ಪೋಲಿ ಪೋಲಿ ಸ್ಲೋಗನ್ ಹೊತ್ತ ಪೋಸ್ಟರುಗಳು. ಮಂಚದಡಿ ಎರಡು ಮೂರು ಅಲರಾಮ್ ಗಡಿಯಾರ. ಕಿಟಕಿ ಸಂದಿಯಲ್ಲಿ ಬಲೂನು. ಅಲ್ಲೆಲ್ಲೋ ಆಚೆ ಪಟಾಕಿಗಳ ದಾಂಧಲೆ... ಅವನ...
ಮೋಟುಗೋಡೆಯ ಗೆಳೆಯರೇನು ಬರೆದವರೆ?
ಮೋಟುಗೋಡೆಯಾಚೆ ಇಣುಕಿ. ಈ ಬ್ಲಾಗ್ ಹೆಸರು ಕೇಳಿಯೇ ಇರುತ್ತೀರಿ. ಈ ಬ್ಲಾಗ್ ಮೂಲಕ ಬ್ಲಾಗಮಂಡಲದ ಎಲ್ಲ ಜೀವಿಗಳಿಗೆ ಕಚಗುಳಿ ಇಡುತ್ತಿರುವವರು ಮಿತ್ರ ಸುಶ್ರುತ ದೊಡ್ಡೇರಿ ಮತ್ತವರ ತಂಡ. ಸುಶ್ರುತ ದೊಡ್ಡೇರಿ ಈಗ ಬ್ಲಾಗ್ ಲೋಕದಿಂದ ಪುಸ್ತಕ ಲೋಕಕ್ಕೆ ಜಿಗಿಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಸೇರಿ ಒಂದು ಪುಸ್ತಕ ಬರೆದಿದ್ದಾರೆ....
“ಡೋಂಟ್ ಶೂಟ್ ಅವರ್ ರೈನ್ ಬೋ”
"ಡೋರ್ ನಂ 142" ಬಹುರೂಪಿ ಅವತ್ತು ಸ್ಕೂಲಿಂದ ವಾಪಸ್ ಬರ್ತಾ ಇರೋವಾಗ ವಿಚಿತ್ರವಾದ ದೃಶ್ಯ ಕಣ್ಣಿಗೆ ಬಿತ್ತು. ಎಷ್ಟೊಂದು ಜನ ಕೈಯಲ್ಲಿ ಕಪ್ಪು ಕಾಗದ, ಗೋಂದು, ಏಣಿ ಹಿಡ್ಕೊಂಡು ಬೀದೀಲಿರೋ ದೀಪದ ಕಂಬ ಸುತ್ತುತ್ತಿದ್ದರು. ಎಲ್ಲೆಲ್ಲಿ ಬೆಳಕು ಬರೋ ದೀಪ ಇದೆಯೋ ಅಲ್ಲೆಲ್ಲಾ ಏಣಿ ಹಾಕಿ ಹತ್ತಿ ಆ ಕಪ್ಪು ಕಾಗದ ಮೆತ್ತುತಾ ಇದ್ರು....
