ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಹಿಳಾ ದಿನಾಚರಣೆ: ನಿಗ್ರಹ ಮಾತ್ರ ಸಾಲದು, ಸಂವೇದನೆಯೂ ಅಗತ್ಯ
ಜಗತ್ತು ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ಭಾರತದ ಸಂದರ್ಭದಲ್ಲಿ ಈ ದಿನ ಕೇವಲ ಆಚರಣೆಯ ದಿನವಾಗದೆ ಆತ್ಮಾವಲೋಕನದ ದಿನವಾಗಲಿದೆ. ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ಸಮಾಜ ಭಾರತೀಯ ಸಂದರ್ಭದಲ್ಲಿ ಇತ್ತೀಚೆಗೆ ಮಹಿಳೆಯರ ದೇಹವನ್ನು ಬಳಸಿ ಬಿಸಾಡುವ ವಸ್ತುವಿನಂತೆ ಕಾಣುತ್ತಿರುವುದು...
ಆಕೃತಿ ಅಂಗಳದಲ್ಲಿ..
’ಡಾ. ಶಿವರಾಮ ಕಾರಂತರ ಸ್ತ್ರೀಪಾತ್ರಗಳು’ – ಭಾಗ ೨
ಉಷಾ ಪಿ ರೈ ಈ ಮೊದಲು.. ಈ ಹಿನ್ನೆಲೆಯಲ್ಲಿ ಅವರ ಸ್ತ್ರೀಪಾತ್ರಗಳನ್ನು ಐದು ವಗ9ಗಳಾಗಿ ವಿ0ಗಡಿಸಿ ವಿಶ್ಲೇಶಿಸಲು ಇಷ್ಟಪಡುತ್ತೇನೆ. ಒ0ದನೇಯದಾಗಿ ಸಾ0ಪ್ರದಾಯಿಕ ಕಟ್ಟು ನಿಟ್ಟುಗಳನ್ನು, ಸ್ವಾತ0ತ್ರ್ಯ ಪೂವ9ದಲ್ಲಿ ಬೇರೂರಿದ್ದ ಸಾಮಾಜಿಕ ಮಿತಿಗಳನ್ನು ಮೀರದ, ಜೀವನವನ್ನು ಇದ್ದಹಾಗೇ ತೆಗೆದುಕೊ0ಡು ಪ್ರಕೃತಿಯ ಮಡಿಲಲ್ಲಿ ತಮ್ಮೆಲ್ಲ...
ಸಂಪು ಕಾಲಂ : ಬಿಟ್ಟೆನೆಂದರೆ ಬಿಡದೀ ಮಾಯೆ
ಅವಧಿಯ ನನ್ನ ಮೊಟ್ಟ ಮೊದಲ ಲೇಖನದಲ್ಲಿ ನಾನು ಒಬ್ಬ ಯುರೋಪ್ ದೇಶದ 'ದೇಶಾಭಿಮಾನಿ'ಯೂ 'ವಿದೇಶೀ ದ್ವೇಷಿ'ಯೂ ಆದ ಹಿರಿಯನ ಭೇಟಿಯ ಕುರಿತು ಬರೆದಿದ್ದೆ. ಆತನ ಅನುಭವ, ಜ್ಞಾನಭಂಡಾರವನ್ನು ಮೆಚ್ಚಬೇಕಾದ್ದೆ ಸೈ. ಆದರೆ ಅಷ್ಟು ಬಹುಶ್ರುತನಾದ, ಲೋಕಾನುಭವ ಪಡೆದ ಈತ ತನ್ನ ದೇಶವನ್ನು ಹೊರತು ಪಡಿಸಿ ಉಳಿದೆಲ್ಲ ಜಗತ್ತೂ ತುಚ್ಚ ಎಂದು...
ಜುಗಾರಿ ಕ್ರಾಸ್ ನಲ್ಲಿ 'ಬಾಡೂಟ'
ನಾಗರಾಜ್ ಹೆತ್ತೂರು ಅವರು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ಬಾಡೂಟ, ಅದಕ್ಕೆ ಬಂದಿರುವ ಟೀಕೆಯ ಬಗ್ಗೆ ಅವರ ನೋಟವನ್ನು ಅವಧಿಯಲ್ಲಿ ಮಂಡಿಸಿದ್ದರು. ಆ ಲೇಖನ ಇಲ್ಲಿದೆ. ಈ ಲೇಖನಕ್ಕೆ ಬಿ ವಿ ಭಾರತಿ ಬರೆದ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದೇವೆ. ಈ ಲೇಖನವನ್ನು ಹಾಗೂ ಭಾರತಿ ಅವರ ಪ್ರತಿಕ್ರಿಯೆಯನ್ನು ಜುಗಾರಿ...
ಶೋಭಾ ದಿನೇಶ್ ಕವಿತೆ: ಥೇಟ್ ಮಳೆಯಂತೆಯೇ ಅವನ ಪ್ರೀತಿ..
ಶೋಭಾ ದಿನೇಶ್ ನನ್ನೂರಿಗೆ ಮೊದಲ ಮಳೆಯ ಆಗಮನ.. ಬೇಡವೆಂದರೂ ಎದೆಯಲ್ಲಿ ಮರೆತ ಗೆಳೆಯನ ನೆನಪುಗಳ ಸಿಂಚನ... ಥೇಟ್ ಮಳೆಯಂತೆಯೇ ಅವನ ಪ್ರೀತಿ.. ಯಾವ ಸುಳಿವು ನೀಡದೆ ಬಂದೆರೆಗುವ ಮುಂಗಾರಿನ ಮಳೆಯ ರೀತಿ... ಒಮ್ಮೊಮ್ಮೆ ಭೋರ್ಗರೆತ, ಮಗದೊಮ್ಮೆ ತಣ್ಣನೆಯ ಸೆಳೆತ... ಸದ್ದಿಲ್ಲದೇ ಹರಿದುಹೋದ.. ಜೊತೆಯಲ್ಲೇ ಕೊಂಡೊಯ್ದ...
'ಮೂವರು ಹೆಂಗಸರು' – ಒಂದು ಕಥೆ
ಮೋಹನ್ ವಿ ಕೊಳ್ಳೇಗಾಲ ಸೆಕೆಗಾಲದಲ್ಲಿ ಪ್ರಯಾಣ ಮಾಡುವುದೆಂದರೆ ಕಾದ ಒಲೆ ಮೇಲೆ ಕುಳಿತ ಹಾಗೆ. ಚಳಿ ಮಳೆಗಾಲದಲ್ಲಿ ಕಷ್ಟವೋ ಸುಖವೋ ಎಮ್ಮೆ ಚರ್ಮದ ಸ್ವೆಟರ್, ಮಫ್ಲರ್ ಹಾಕಿಕೊಂಡು ದೂರದ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬಂದುಬಿಡುತ್ತೇನೆ. ಬೇಸಿಗೆಯಲ್ಲಿ ಪ್ರಯಾಣಿಸಲು ನಾನು ಎಂದಿಗೂ ಇಷ್ಟಪಟ್ಟವನಲ್ಲ. ಆದರೂ ಒಮ್ಮೊಮ್ಮೆ...
ಚಿತ್ರದುರ್ಗದಲ್ಲಿ ’ಜೋಗಜ್ಜನ ಹಾಡು’
ಡೈಲಿ ಬುಕ್: ಬಿಸಿಲ ಉಡಿಯ ಕತೆಗಳು
ರಾಜಶೇಖರ ಅವರು ವೃದ್ಧರ ನೆಲೆಯಲ್ಲಿ ನಿಂತು ಯುವಜನಾಂಗವನ್ನು; ಗ್ರಾಮೀಣ ಜನರ ನೆಲೆಯಲ್ಲಿ ನಿಂತು ಆಧುನಿಕತೆ ಮತ್ತು ಬೃಹತ್ ಯಂಗ್ರಗಳನ್ನು; ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ನಿಂತು ಯಾಂತ್ರಿಕ ಭೌತಿಕ ಜೀವನ ಶೈಲಿಯನ್ನು ನೋಡುತ್ತಾರೆ. ಈ ಮೂಲಕ ಶೀಥಿಲಗೊಳ್ಳುತ್ತಿರುವ ‘ಗ್ರಾಮಮೌಲ್ಯ’ಗಳನ್ನು ಶೋಧಿಸುವ ತೀವ್ರ ತುಡಿತ ಇವರ ಕಥೆಗಳ...
ಅಪಾರ, ಪಲ್ಲವ ಪ್ರಕಾಶನ, ಸ್ವಾನ್ ಪ್ರಿಂಟರ್ಸ್ ಗೆ ಪ್ರಶಸ್ತಿಯ ಗರಿ
ನಮ್ಮೆಲ್ಲರ ಪ್ರೀತಿಯ ಅಪಾರ ರೂಪಿಸಿದ ಎರಡು ಮುಖಪುಟಗಳು ಎಂದಿನಂತೆ ಈ ಬಾರಿಯೂ ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನಕ್ಕೆ ಪಾತ್ರವಾಗಿದೆ ಉತ್ತಮ ಮುಖಪುಟ, ವಿನ್ಯಾಸಕ್ಕೆ ಪುಸ್ತಕ ಸೊಗಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಅಪಾರ ಈ ಸಾಲಿನಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಿದ ಅಮೀರ್ ಬಾಯಿ ಕರ್ನಾಟಕಿ ಹಾಗೂ ಅಂಕಿತ ಪ್ರಕಾಶನ...
’ಡಾ. ಶಿವರಾಮ ಕಾರಂತರು ಚಿತ್ರಿಸಿರುವ ಸ್ತ್ರೀಪಾತ್ರಗಳು’ – ಉಷಾ ರೈ
ಉಷಾ ಪಿ ರೈ [ಶಿವರಾಮ ಕಾರಂತರ ಕಾದಂಬರಿಗಳೆಂದರೆ ಅವು ಸಾರ್ವಕಾಲೀಕ ಕಥನಗಳು. ಅಲ್ಲಿನ ಪಾತ್ರ ಚಿತ್ರಣ, ವ್ಯಕ್ತಿ ಚಿತ್ರಣ ಎಲ್ಲವೂ ಅದ್ಭುತ. ಇನ್ನು ಅವರ ಕಾದಂಬರಿಗಳ ಸ್ತ್ರೀ ಪಾತ್ರಗಳೋ ... ಮೂಕಜ್ಜಿಯಾಗಲೀ, ಮಂಜಿಯಾಗಲೀ ಜೀವನದ ಅನುಭವವನ್ನು, ಅದರೊಡನೆ ಅನುಭಾವವನ್ನೂ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡವರು. ಈ...
ಅಹವಿ ಹಾಡು – ’ಎಲ್ಲಿ ಹೋದ ನನ್ನ ಮಣಿರತ್ನಂ …. ?’
ಭಾರತಿ ಬಿ ವಿ ತೀರಾ ಸಣ್ಣ ವಯಸ್ಸಿನಿಂದಲೇ ನನಗೆ ಅಸಾಧ್ಯ ಸಿನೆಮಾ ಹುಚ್ಚು. ಎಲ್ಲರೂ ಸಿನೆಮಾ ತೆಗೆಯೋದೇ ನಾನು ನೋಡಲಿ ಅಂತಲೇನೋ ಅಂದುಕೊಂಡು ಬಿಟ್ಟಿದ್ದೆ. ನಾನು ನೋಡದಿದ್ದರೆ ಪಾಪ ಆ ಪ್ರೊಡ್ಯುಸರ್‌ಗಳ ಗತಿ ಏನಾಗತ್ತೋ ಅನ್ನುವ ಹಾಗೆ ರಿಲೀಸ್ ಆದ ಎಲ್ಲ ಸಿನೆಮಾ ಕೂಡಾ ನಾನು ನೋಡಲೇಬೇಕು! ಅದರಲ್ಲಿ ಅರ್ಧದಷ್ಟು ನಿಜಕ್ಕೂ ತುಂಬ...
ಈಗ್ಲೂ ನೆನಪಾಗ್ತಿದೆ ಗೋಲಿ ಡಬ್ಬ!
ಶಾಲೆಗಿಂತ ಆಟವೇ ಇಷ್ಟ...! ಮಂಜುನಾಥ ದಾಸನಪುರ ಚಿಕ್ಕಂದಿನಲ್ಲಿ ನನ್ನ ಮನಸ್ಸಿಗೆ ತುಂಬಾ ಬೇಜಾರು ತರುತ್ತಿದ್ದ ವಿಷಯವೆಂದರೆ ಸ್ಕೂಲಿಗೆ ಹೋಗುವುದು. ಬೆಳಗ್ಗೆ ಕಣ್ಣು ಬಿಟ್ಟರೆ ನನ್ನ ಬಾಯಿಂದ ಹೊರಡುತ್ತಿದ್ದ ಶಬ್ದ 'ಥೂ..!' ಎಂದು. ಹಾಸಿಗೆಯಿಂದ ಏದ್ದೇಳುವುದಕ್ಕೆ ಮೊದಲೇ ಅಮ್ಮ ಮೂಲೆ ಮನೆಯಿಂದ 'ದೇವರ ಫೊಟೊ ನೋಡೋ' ಎಂದು...
ಚಂದಿನ ಕವಿತೆ: ಗರ್ಭಪಾತ
ಗರ್ಭಪಾತ ಮೂಲ : ಯೂನೂಸ್ ಪೀರ್ಬೊಕಸ್ ಕನ್ನಡಕ್ಕೆ: ಚಂದಿನ ಮುಗ್ಧತೆಯ ಸುತ್ತಿಕೊಂಡು ನಾಳೆಯು ಬರುವಂತೆ ನಿನ್ನ ಬೆಚ್ಚಗಿನ ಗರ್ಭದೊಳಗೆ ನಾನು ಬಂದೆ ಅಮ್ಮ…. ಅದು ನಿನ್ನ, ಅಥವಾ ನನ್ನ ಆಯ್ಕೆಯೊಂದಿಗೆ ಅಲ್ಲ ಸಮಯ ನಿರ್ಧರಿಸಿದಂತೆ ಸಮಯಕ್ಕೆ ತಕ್ಕಂತೆ ಬದುಕಲು ನಮ್ಮ ಮನುಕುಲದ ಮರದಲ್ಲಿ ಆದರೆ ಮನುಷ್ಯ ಪ್ರೀತಿ ದೇಹವಾಗಿ,...
ಬಾಡೂಟ ಮಾಡಿದ್ರೆ ತಪ್ಪೇನು?
ಸಾಹಿತ್ಯ ಪರಿಷತ್ ಭವನದಲ್ಲಿ 'ಕೊರಬಾಡು ಮೇಳ' ನಡೆಸಿದರೆ ತಪ್ಪೇನು.. ನಾಗರಾಜ್ ಹೆತ್ತೂರು 'ಚಲನೆಯನ್ನು ಒಪ್ಪಿಕೊಳ್ಳದ ಧರ್ಮ ಅಥವಾ ವ್ಯಕ್ತಿ ಇದ್ದೂ ಸತ್ತಂತೆ' ಇದನ್ನು ಬುದ್ದ ಯಾವತ್ತೋ ಹೇಳಿದ್ದಾನೆ. ಚಲನೆ ಎಂದರೆ ನಿಂತ ನೀರಾಗದೆ ಸದಾ ನಿರಂತರವಾಗಿರುವುದು. ಈ ಕಾರಣಕ್ಕಾಗಿ ನಮ್ಮ ಚಿತ್ರ ಕಲಾವಿದರಾದ ಕೆಟಿ ಶಿವಪ್ರಸಾದ್ ಸದಾ...
ಅಮ್ಮನ ನೆನಪಿನಲ್ಲಿ…
ವಿಕ್ರಂ ಹತ್ವಾರ್ ಮತ್ತು ಅವರ ಕಥೆಗಳೊಂದಿಗೆ ಒಂದು ಸಂಜೆ
ಡೈಲಿ ಬುಕ್ – ’ಕಾಲದಲೆಯ ಮೇಲೆ’
ಕವಿತೆಯಂತೆಯೇ ಇದ್ದವಳು, ನಿತ್ಯ ಜೊತೆಗಿಲ್ಲದಿದ್ದರೂ ಜೊತೆಗೇ ಇದ್ದವಳು, ‘ನಮ್ಮ ಪ್ರೀತಿಯ ಪೂರ್ಣಿಮಾ’ ಅವಳು. ಕವಿತೆಗಳನ್ನು ಬರೆದೂ ಬರೆಯದವಳಂತೆ ಪ್ರಕಟಮಾಡದೆ ಹಾಯಾಗಿ ಇದ್ದಳಲ್ಲ, ಆ ಶಕ್ತಿ ಅಂಥ ಅವಳಿಗೆ ಮಾತ್ರ. ಆದರೂ ತರವಲ್ಲವಿದು ನಿನಗೆ ಪೂರ್ಣಿಮಾ, ಪ್ರಕಟಿಸಬೇಕಿತ್ತು ಅಂತಂದರೆ ನಕ್ಕು ಮಾತು ತೇಲಿಸಿ ಮರೆಸುವ ಅವಳ ನಗೆಬಗೆ...
'ಶತ್ರುವಿಲ್ಲದ' ಹೊಸಬಗೆಯ ಸಮರಕ್ಕೆ ಜಗತ್ತು ಸಜ್ಜಾಗಬೇಕಿದೆ..
ನಾಗೇಶ ಹೆಗಡೆ ಅವರು ಉತ್ತರ ಕನ್ನಡದ ಕವಂಚೂರಿನಲ್ಲಿ ಜರುಗಿದ ಸಿದ್ಧಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದ ಅಧ್ಯಕ್ಷ ಭಾಷಣ ಭಿನ್ನವಾಗಿತ್ತು. ಸಾಹಿತ್ಯ ಪರಿಸರದ ಜೊತೆ ನಡೆಸಬೇಕಾದ ಪಿಸುಮಾತಿನ ಬಗ್ಗೆ, ಸಾಹಿತ್ಯ ಪರಿಸರವನ್ನೂ, ಪರಿಸರ ಸಾಹಿತ್ಯವನ್ನೂ ಉಳಿಸಬೇಕಾದ ಅಗತ್ಯದ ಬಗ್ಗೆ ನಾಗೇಶ ಹೆಗಡೆ...
ಗಂಗಾಮಾಯಿಯ ನೆನಪಿನಲ್ಲಿ…
ಗೋಪಾಲ ವಾಜಪೇಯಿ ''ಐದು ಹತ್ತು ಮಿನಟು ಕೂಡೂದಿದ್ರ ನೀವು ನಮ್ಮ ಮನೀಗೇ ಬರಬ್ಯಾಡ್ರಿ... ಹೌದು... ಹೀಂಗ್ ಬಂದು ಹಾಂಗ್ ಹೋಗಿಬಿಡತೀರೆಪಾ..'' ಎಂದು ಹುಸಿಮುನಿಸು ತೋರಿಸುತ್ತಲೇ ಅವರು ನಮ್ಮನ್ನು ಒಳಗೆ ಕರೆಯುತ್ತಿದ್ದರು. ''ಮದಲ ಕೂಡ್ರಿ... ಕೂತು ಮಾತಾಡ್ರಿ...'' ಅಂತ ಒತ್ತಾಯಿಸುತ್ತಿದ್ದರು ಅಕ್ಕ. ನಾವು...
’ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..’ – ದೀಪಾ ಗಿರೀಶ್
ದೀಪಾ ಗಿರೀಶ್ ಪ್ಯಾಂಟಿನೊಳಕ್ಕೆ ಕಾಲತೂರಿಸಿ ಬಕಲ್ಲು ಬಿಗಿದು ಕ್ರಾಪು ತೀಡಿ ಹೆಚ್ಚೆಂದರೆ ಮುಖಕ್ಕೆ ನಾಕು ಹನಿ ನೀರು ಯಾರಾದರೂ ಹೇಳಬಲ್ಲರೇ ಏನೋ ನಡೆದಿರಬಹುದೆಂದು ನಿನ್ನ ಕಂಡು..? ತಲೆಯಿಂದ ಮಿಂದೆದ್ದು ಪಿನ್ನು, ಬಾಚಣಿಗೆ, ಪೌಡರು, ಕ್ರೀಮು ಉಟ್ಟಸೀರೆಯ ಒಪ್ಪಮಾಡಿ ಏನಮಾಡಿದರೇನು ಮರೆಸದಾದೆ ನಾನು ನುಡಿಯುವುದು ನನ್ನ...




















