ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉದಯ್ ಇಟಗಿ ಲಿಬ್ಯಾ ಡೈರಿ : ಗಡಾಫಿಯ ನಾಡಲ್ಲಿ..
ಉದಯ್ ಇಟಗಿ ಲಿಬ್ಯಾ ಡೈರಿ : ಗಡಾಫಿಯ ನಾಡಲ್ಲಿ..

‘ಅವಧಿ’ಬಳಗವು ನನ್ನನ್ನು ಲಿಬಿಯಾದ ಬಗ್ಗೆ ಬರೆದು ಕೊಡಿ ಎಂದು ಕೇಳಿದಾಗ ನನಗೆ ತಕ್ಷಣ ಎಲ್ಲಿಂದ ಆರಂಭಿಸಬೇಕೆಂದು ತಿಳಿಯಲಿಲ್ಲ. ನಾನು ಮೊಟ್ಟ ಮೊದಲಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿ ಸಮಾನತೆಯ ಸಿದ್ಧಾಂತಕ್ಕೆ ಸಂಬಂಧಪಟ್ಟ ಹಾಗೆ ನನ್ನನ್ನು ಬಹುವಾಗಿ ಆಕರ್ಷಿಸಿದ...

read more
ಜಿ ಎನ್ ಮೋಹನ್ ಕಾಲಂ: ಆನುದೇವಾ ಹೊರಗಣವನು..
ಜಿ ಎನ್ ಮೋಹನ್ ಕಾಲಂ: ಆನುದೇವಾ ಹೊರಗಣವನು..

ನಿಷೇಧಿತ ಪುಸ್ತಕಕ್ಕೂ ಒಂದು ವಾರ.. ಜಿ ಎನ್ ಮೋಹನ್ ಜಿ ರಾಮಕೃಷ್ಣ ಅವರು ಮನೆಗೆ ಬಂದಿದ್ದರು. ಪುಸ್ತಕಗಳ ಕಪಾಟಿನ ನಡುವೆ ಕೈಯಾಡಿಸುತ್ತಾ ಇದ್ದ ಅವರು ಆಗ ತಾನೇ ನಾಲ್ಕನೇ ತರಗತಿಗೆ ಹೆಜ್ಜೆಯಿಡುತ್ತಿದ್ದ ನನ್ನ ಮಗಳನ್ನು ಕಂಡವರೇ ನೀನು ಹಕಲ್ ಬರಿ ಫಿನ್ ಪುಸ್ತಕ ಓದಿದ್ದೀಯಾ? ಎಂದರು. ನಮ್ಮ ಕಪಾಟಿನಲ್ಲಿ ಆ ಪುಸ್ತಕ ಇರಲಿಲ್ಲ. ಮಾರನೆಯ...

read more
ಅಲ್ಲೊಬ್ಬ ಚಿನುವಾ, ಇಲ್ಲೊಬ್ಬ ಚಿನುವಾ..
ಅಲ್ಲೊಬ್ಬ ಚಿನುವಾ, ಇಲ್ಲೊಬ್ಬ ಚಿನುವಾ..

ಆಫ್ರಿಕಾವನ್ನು ವಿಶ್ವಕ್ಕೆ ಪರಿಚಯಿಸಿದ ಚಿನುವಾ ಅಚಿಬೆ - ಅನಿತಾ ಪೈಲೂರ್ "The white man is very clever. He came quietly and peaceably with his religion. We were amused at his foolishness and allowed him to stay. Now he has won our brothers, and our clan can no longer act like...

read more
ತರವಲ್ಲ ತಗಿ ನಿನ್ನ ತಂಬೂರಿ…
ತರವಲ್ಲ ತಗಿ ನಿನ್ನ ತಂಬೂರಿ…

ಹೀಗೊಂದು ಲಹರಿ ಗೋಪಾಲ ವಾಜಪೇಯಿ ಮಾರ್ಚ್ 7 ಮತ್ತು ಡಿಸೆಂಬರ್ 29 ಇವೆರಡೂ ಕನ್ನಡದ ಸಾಹಿತ್ಯ ಮತ್ತು ಸಂಗೀತಪ್ರೇಮಿಗಳಿಗೆ ಅತಿ ಮಹತ್ವದ ದಿನಾಂಕಗಳು. ಯಾಕಂದರೆ, ಕನ್ನಡದ ಅನುಭಾವ ಸಾಹಿತ್ಯದ ಇಬ್ಬರು ವಿಭೂತಿ ಪುರುಷರು ಈ ದಿನಾಂಕಗಳಂದು ನಮಗೆ ನೆನಪಾಗುತ್ತಾರೆ. ಅವರು ''ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು...

read more
ಕಂಬಾರ, ಸೂರಿ ಹಾಗೂ ಮಾರೀ ಕಾಡು
ಕಂಬಾರ, ಸೂರಿ ಹಾಗೂ ಮಾರೀ ಕಾಡು

ರಂಗ ಶಂಕರದಲ್ಲಿ ಸಂಕೇತ್ ನಾಟಕ ಮಾರೀ ಕಾಡು. (ಶೇಕ್ಸ್ ಪಿಯರನ ‘ಮ್ಯಾಕ್ ಬೆತ್’ ಆಧಾರಿತ) ರಚನೆ: ಡಾ ಚಂದ್ರಶೇಖರ ಕಂಬಾರ ವಿನ್ಯಾಸ ಮತ್ತು ನಿರ್ದೇಶನ; ಎಸ್ ಸುರೇಂದ್ರನಾಥ್ ಎಪ್ರಿಲ್ 2 ರಿಂದ ಎಪ್ರಿಲ್ 7. ಪ್ರತಿದಿನ ಸಂಜೆ 7:30ಕ್ಕೆ. ವಿಲಿಯಂ ಶೇಕ್ಸ್ ಪಿಯರನ ‘ಮ್ಯಾಕ್ ಬೆತ್’ ಕಂಬಾರರ ಕೈಲಿ ಒಂದು ಕನ್ನಡ ಜಾನಪದ ಕಥೆಯಾಗಿಬಿಟ್ಟಿದೆ....

read more
ತಾಯಿಯ ಕಣ್ಣು
ತಾಯಿಯ ಕಣ್ಣು

ತಾಯಿಯ ಕಣ್ಣು ಮರಾಠಿ ಲೇಖಕರು: ಪ್ರವೀಣ್ ದವಣೆ ಕನ್ನಡಕ್ಕೆ ಅನುವಾದ: ಅಕ್ಷತಾ ದೇಶಪಾಂಡೆ ಹತ್ತನೆಯ ತರಗತಿಯಲ್ಲಿ ರ್ಯಾಂಕ್ ಪಡೆದ ಸಲೀಲ್ನನ್ನು ಅಭಿನಂದಿಸಲು ಕೈಯಲ್ಲೊಂದು ಹೂವಿನ ಗುಚ್ಛ ಹಿಡಿದು ಆತನ ಮನೆ ಹುಡುಕುತ್ತ ನಡೆದೆ. ಅಕ್ಕಪಕ್ಕದ ಕೊಳಚೆ -ಪ್ರದೇಶ ನೋಡಿ ಸಲೀಲ್ ಇಂತಹ ಗುಡಿಸಲುಗಳೊಂದರಲ್ಲಿ ವಾಸಿಸುತ್ತಾನೆ ಅನ್ನುವುದನ್ನು...

read more
ಬದಲಾದ ಬಿಹಾರ
ಬದಲಾದ ಬಿಹಾರ

ಹೊಸ ನಾಗರೀಕತೆಯ ಲಕ್ಷಣಗಳು - ಸುನಿಲ್ ರಾವ್ ಕೃಪೆ : ವಾರ್ತಾಭಾರತಿ ಬಿಹಾರದ ಕೊಳಕು ಹಾಗು ವಿಲಕ್ಷಣತೆಯ ಬಗ್ಗೆ ಬೇಕಾದಷ್ಟು ಮಾತಾಡಬಹುದು, ಆದರೆ ಅದನ್ನೆಲ್ಲಾ ಮರೆಗೆ ಸರಿಸಲು ಹೊಸದೊ೦ದು ನಾಗರೀಕತೆಯ ಲಕ್ಷಣಗಳು ಅಲ್ಲಿ ಉದಯಿಸುತ್ತಿದೆ. ಬಿಹಾರದ ಜನ ಎಲ್ಲರೂ ಊಹೆ ಮಾಡಿಕೊ೦ಡ೦ತೆ ತೀರಾ ಅನಾಗರೀಕರಾಗಲಿ ಅಥವ ಕ್ರೂರಿಗಳಾಗಲಿ ಅಲ್ಲ....

read more
ಸುಗತ ಬರೆಯುತ್ತಾರೆ: ಸ್ನೇಹಕೂಟದಲ್ಲಿ ಹುಟ್ಟಿದ ಕೆಲವು ಪ್ರಶ್ನೆಗಳು
ಸುಗತ ಬರೆಯುತ್ತಾರೆ: ಸ್ನೇಹಕೂಟದಲ್ಲಿ ಹುಟ್ಟಿದ ಕೆಲವು ಪ್ರಶ್ನೆಗಳು

ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕದಲ್ಲಿ ಪ್ರಕಟಿತ ಮಾರ್ಚ್ 15 ಬ್ರಿಟನ್‌ನ ಮಹಾರಾಣಿ ಎರಡನೇ ಎಲಿಜಬೆತ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರು ಬ್ರಿಟನ್‌ನಲ್ಲಿ ಮಾತ್ರ ಆಚರಿಸದೆ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲೂ ಆಚರಿಸುತ್ತಾರೆ. ಮುಖ್ಯವಾಗಿ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಇದಕ್ಕೊಂದು ವಿಶೇಷ ಮೆರುಗಿರುತ್ತದೆ....

read more
’ಈ ಹೊತ್ತಿಗೆ’ಯಲ್ಲಿ ಚೇಳು!
’ಈ ಹೊತ್ತಿಗೆ’ಯಲ್ಲಿ ಚೇಳು!

  - ಎನ್ ಸಂಧ್ಯಾರಾಣಿ ಈ ಹೊತ್ತಿಗೆಯ ಈ ಸಲದ ಪುಸ್ತಕ ವಸುಧೇಂದ್ರ ಅವರು ಬರೆದ ಚೇಳು. ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಅನ್ನುವ ಸರಳ ವಾಕ್ಯ ಮತ್ತು ಹಾಗೇ ಸರಳವಾದ ಮತ್ತು ಸರಳತೆಯಿಂದಲೇ ನಮಗೆ ಹತ್ತಿರವಾಗುವ ಪ್ರಬಂಧಗಳ ಮೂಲಕ ವಸುಧೇಂದ್ರ ನಮಗೆ ಪರಿಚಿತರಾದರು.  ಸಾಫ್ಟ್ ವೇರ್ ಲೋಕದ ಬಗ್ಗೆ ಒಂದು ಸ್ಟೇಟ್‍ಮೆಂಟ್ ಅನ್ನುವ...

read more
ನಾ ದಿವಾಕರ ನೇರನುಡಿ: ಪಕ್ಷಾಂತರಿಗಳ ಪ್ರಜಾತಂತ್ರದ ಸೋಗು
ನಾ ದಿವಾಕರ ನೇರನುಡಿ: ಪಕ್ಷಾಂತರಿಗಳ ಪ್ರಜಾತಂತ್ರದ ಸೋಗು

ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ ಎಂಬ ಪದಕ್ಕೆ ಬಹಳಷ್ಟು ಮಹತ್ವ ಇದ್ದ ಕಾಲ ಒಂದಿತ್ತು. ಮೌಲ್ಯಾಧಾರಿತ ರಾಜಕಾರಣ ಎಂದರೆ ಇಡೀ ದೇಶವೇ ಕರ್ನಾಟಕದತ್ತ ನೋಡುತ್ತಿದ್ದ ಕಾಲವೂ ಒಂದಿತ್ತು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜಕೀಯ ಅಸ್ಥಿರತೆ, ಅರಾಜಕತೆ, ಪಕ್ಷಾಂತರ ಈ ಎಲ್ಲ ಅನಿಷ್ಠಗಳು ರಾಜ್ಯ ರಾಜಕಾರಣವನ್ನು ಕಾಡುತ್ತಿದ್ದರೂ ಎಲ್ಲೋ...

read more
ಬಿ ಎಂ ಬಷೀರ್ ಕವಿತೆ: ಹೆಣ್ಣು ಮಲಗೋದು…!
ಬಿ ಎಂ ಬಷೀರ್ ಕವಿತೆ: ಹೆಣ್ಣು ಮಲಗೋದು…!

ಬಿ ಎಂ ಬಷೀರ್ ಗುಜರಿ ಅಂಗಡಿ   ಮಲಗೋದು ಎನ್ನೋ ಶಬ್ದ ಹೆಣ್ಣಿನ ಪಾಲಿಗೆ ಅನೈತಿಕ... ಯಾರ ಜೊತೆಗೆ ಎಂಬ ಜೋಡಿ ಪದ ತಕ್ಷಣ ಪ್ರಶ್ನೆಯಾಗಿ ಎರಗುತ್ತದೆ...   ಅವಳು ಗಂಡನ ಜೊತೆ ಮಲಗಬೇಕು.. ಅಥವಾ ಮಗುವಿನ ಜೊತೆಗೆ... ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತ ಸಾವಿರ ಕಣ್ಣುಗಳು.... ಅದಕ್ಕಾಗಿಯೆ ಹೆಣ್ಣು ಗಂಡನ ಕನಸು...

read more
ತಿಗಣೆ ಮೀಮಾಂಸೆ
ತಿಗಣೆ ಮೀಮಾಂಸೆ

ತಿಗಣೆ ಮೀಮಾಂಸೆ ಪುರೂರವ ಕೆ.ವಿ ತಾನಿರುವ ವ್ಯವಸ್ಥೆಗೆ ಹೊಂದಿಕೊಳ್ಳದ ಪ್ರಾಣಿ ಹೆಚ್ಚು ಕಾಲ ಆ ಪರಿಸರದಲ್ಲಿ ಬದುಕುವುದು ಕಷ್ಟ. ಕೆಲವರಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದೆಂದರೆ ಊಸರವಳ್ಳಿ ಬಣ್ಣ ಬದಲಿಸಿದಷ್ಟೆ ಸುಲಭ ಮತ್ತೆ ಕೆಲವರು ಡೈನೋಸಾರ್‌ಗಳಂತೆ ನಿರ್ಣಾಮವಾದರೂ ಆಗುತ್ತಾರೆ ಆದರೆ ಹೊಂದಾಣಿಕೆಗೆ ಮನಸ್ಸು ಮಾಡುವುದಿಲ್ಲ....

read more
ಗೋಪಾಲ ವಾಜಪೇಯಿ ಕಾಲಂ: ಮತ್ತೆ ಮತ್ತೆ ಕಾರಂತ
ಗೋಪಾಲ ವಾಜಪೇಯಿ ಕಾಲಂ: ಮತ್ತೆ ಮತ್ತೆ ಕಾರಂತ

ಸುಮ್ಮನೇ ನೆನಪುಗಳು -  40 ''ಸರಿ. ಮೊದ್ಲು ನಿಮ್ ವರ್ಕಶಾಪ್ ಹುಡುಗರಿಗೆ ಪಾಠ ಮುಗಿಸಿಬಿಡ್ತೀನಿ, ಬನ್ನಿ... ಆಮೇಲೆ ನೋಡಿಕೊಂಡ್ರಾಯ್ತು...'' ಅಂತ ಅವತ್ತು ಪ್ರವಾಸಿಮಂದಿರದಿಂದ ಹೊರಟುಬಿಟ್ರಲ್ಲ ಕಾರಂತರು... ಶಿಬಿರ ಸ್ಥಳವನ್ನು ಸೇರಿದ ಕೂಡಲೇ ಎದ್ದು ನಿಂತ ಶಿಬಿರಾರ್ಥಿಗಳನ್ನು ಕೂರಲು ಹೇಳಿ, ತಾವು ತಡವಾಗಿ ಬಂದುದಕ್ಕೆ ಕ್ಷಮೆ...

read more
ಚಿನುವಾ ಅಚಿಬೆ ಕಥೆ: ಸತ್ತವರ ಹಾದಿ
ಚಿನುವಾ ಅಚಿಬೆ ಕಥೆ: ಸತ್ತವರ ಹಾದಿ

ಮೂಲ ಇಂಗ್ಲೀಷ್: ಚಿನುವ ಅಚಿಬೆ ಕನ್ನಡಕ್ಕೆ: ಉದಯ್ ಇಟಗಿ ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ. ಆ ಶಾಲೆ ಬಹಳ ದಿವಸಗಳಿಂದ ಹಿಂದುಳಿದ ಶಾಲೆಯಾಗಿಯೇ ಉಳಿದಿತ್ತು. ಹೀಗಾಗಿ ಅದರ...

read more

Pin It on Pinterest

Share This