ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜ್ಯೋತಿ ಮಹಾದೇವ್ ಕವಿತೆ: ಕಣ್ಣು ಹೊಡೆವ ಚಿಕ್ಕೆ ಹರಳು…

ರಾತ್ರಿ ಹಕ್ಕಿ ಜ್ಯೋತಿ ಮಹದೇವ ಕುದಿಯುತಿರುವ ಕಡಲಿನೊಳಗೆ ಉರಿದು ದಣಿದ ಸೂರ್ಯ ಮುಳುಗೆ ಬೆಳಗಿನಿಂದ ಬೆಳಗಿ ಬೆಳಗಿ ಬಾಗಿ ನಿಂತ ಬಾನ ಕೆಳಗೆ ರಾತ್ರಿ ಹಕ್ಕಿ ಹಾರಿತು ಅದರ ನೆರಳು ಜಾರಿತು   ಕಪ್ಪು ಹಾಸು ಹಾಸಿ ಬಂದು ಗುಮ್ಮನನ್ನು ಕರೆವೆನೆಂದು ಬಳಲಿದವರ ಒಳಗೆ ತಂದು ಬಾಗಿಲಂಚಿನಿಂದ ಸಂದು ರಾತ್ರಿ ಹಕ್ಕಿ ಹಾರಿತು ಅದರ ನೆರಳು...

read more
ಡೈಲಿ ಬುಕ್: ಕುಪ್ಪೆ ನಾಗರಾಜರವರ 'ಅಲೆಮಾರಿಯ ಅಂತರಂಗ'

ಕುಪ್ಪೆ ನಾಗರಾಜ ಕಪ್ಪು ಮೋಡಗಳು ಕರಗಿ ಭೂಮಿಗಿಳಿದ ದಿಕ್ಕಿನತ್ತ ಹಾರುವ ವಲಸೆ ಹಕ್ಕಿಗಳಂತೆ ಬದುಕು ಹುಡುಕಿ ಊರುಕೇರಿಗಳತ್ತ ಚದುರಿ ಹೋಗುವ ಅಲೆಮಾರಿ ಜನಾಂಗ. ಅವರ ಆಚಾರ, ವಿಚಾರ, ಒಡನಾಟ, ನಂಬಿಕೆ, ಮೂಢನಂಬಿಕೆಗಳೆಲ್ಲ ಶ್ರೀಕುಪ್ಪೆ ನಾಗರಾಜ ಅವರ ಆತ್ಮಕಥೆಯ ಕವಚದಲ್ಲಿ ಅನಾವರಣಗೊಂಡಿರುವುದು ವಿಶೇಷ. ಸಮುದಾಯವನ್ನು ಮುಖ್ಯವಾಹಿನಿಗೆ...

read more
ಸುಗತ ಬರೆಯುತ್ತಾರೆ: ಕವಿಯೊಂದಿಗೆ ನಾವು ಮೃದುವಾಗಿ ವ್ಯವಹರಿಸೋಣ

ಸುಗತ ಶ್ರೀನಿವಾಸರಾಜು ಕವಿ ಮಾತಿಗೆ ಸಾವಿಲ್ಲ ನಿಜ. ಆದರೆ ಕವಿಯ ಕುರಿತಾದ ಮಾತಿಗೂ ಕೊನೆಯಿಲ್ಲ ಎಂಬುದು ಪಬ್ಲೋ ನೆರೂಡನ ವಿಚಾರಕ್ಕೆ ಬಂದಾಗ ಸತ್ಯವೆನಿಸುತ್ತದೆ. ನಲವತ್ತು ವಷಗಳ ಹಿಂದೆ (23 ಸೆಪ್ಟೆಂಬರ್ 1973) ತೀರಿಕೊಂಡ ಈ ಸ್ಪ್ಯಾನಿಷ್ ಭಾಷೆಯ, ಎಡಪಂಥೀಯ ವಿಚಾರಧಾರೆಯ ಮಹಾಕವಿಯ ಮೂಳೆಗಳನ್ನು ಮಾತನಾಡಿಸಲು ಹೊರಟಿದ್ದಾರೆ ಚಿಲಿ...

read more
ಮಂಡ್ಯ ರಮೇಶ್ ಕಾಲಂ : ’ನಟನ’ ಹುಟ್ಟಿದ ಕಥೆ (ಭಾಗ ೨)

(ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ) ಅದಾದ ಕಲವು ದಿನಗಳಲ್ಲಿ ಪತ್ರ ಬಂತು. ಪಕ್ಕದ Site... ಸಾಂಸ್ಕೃತಿಕ ಕಲಾ ಶಾಲೆಗೆಂದೇ ಮೀಸಲಾದ ಸ್ಥಳವನ್ನು ನನಗೆ ನೀಡಲಾಗಿತ್ತು. ಮತ್ತೆ ಹಣ ಕಟ್ಟಿ ಅಂದ್ರು, ಶುರು... ಯಾವುದೋ ಕೆಟ್ಟ ಸಿನೆಮಾ ದರಿದ್ರದ ರೋಲು ಮಾಡಿ ಬಂದೆ. ನಿರ್ಮಾಪಕ, ನಿರ್ದೇಶಕ, ಪ್ರೇಕ್ಷಕ ನೋಡಿ ಸಂತೋಷಿಸಿದ್ರು. ನನಗೆ ಹಣ...

read more
ಪ್ರಭಾ ಕಂಬತ್ತಳ್ಳಿ: ನಾವೆಲ್ಲಾ ಮಲೆನಾಡಿನಲ್ಲಿ ಸೇರಿ ಹೋದಂತಾಗಿತ್ತು

ಪ್ರಭಾ ಕಂಬತ್ತಳ್ಳಿ ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಿಬಂದ ಸ್ನೇಹಿತರು ಅದನ್ನು ಕುರಿತು ವರ್ಣಿಸಿದ್ದನ್ನು ಕೇಳಿ ಹಾಗು 'ಅವಧಿ'ಯಲ್ಲಿ ಹಾಕಿದ್ದ ನಾಟಕಗಳ ಚಿತ್ರಗಳು, ವಿವರಗಳು, ಅಭಿಪ್ರಾಯಗಳನ್ನು ವೀಕ್ಷಿಸಿ ಆಕರ್ಷಿತಳಾಗಿ ನಾಟಕವನ್ನು ನೋಡಲೇಬೇಕೆಂಬ ಆಕಾಂಕ್ಷೆ ಹುಟ್ಟಿ ನಾಟಕ ನೋಡಲು ಹೋಗಿದ್ದೆವು. ಸಣ್ಣ ದಿಂಬು, ನಿದ್ದೆ...

read more
ಫೇಸ್‌ಬುಕ್ ಪಿಕ್ : ಗುಟ್ಕಾ ನಿಷೇಧ ಮತ್ತು ಕೆ ಟಿ ಶಿವಪ್ರಸಾದ್ ರ ನೆನಪು…

ನಾಗರಾಜ್ ಹೆತ್ತೂರು ಗುಟ್ಕಾ ನಿಷೇಧ. ರಾಜ್ಯದಲ್ಲಿ ಗುಟ್ಕಾ ನಿಷೇಧ ಹೀಗೊಂದು ಘೋಷಣೆ ಹೊರಬಿದ್ದಿದ್ದೆ. ನಮ್ಮ ಗುರುಗಳು ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನೆನಪಾದರು. ಕಾರಣ ಅವರು ಹನ್ಸ್ ಪ್ರಿಯರು. ಹನ್ಸ್ ಇಲ್ಲದೆ ಒಂದು ಕ್ಷಣ ಇರುವವರಲ್ಲ. ಹೀಗಾಯಿತಲ್ಲ ಏನು ಅವರ ಕತೆ ಎಂದು ಹಾಗೆ ಸುಮ್ಮನೆ ಒಂದು ಕರೆ ಮಾಡಿದೆ. ಸಾರ್ ವಿಚಾರ...

read more
ಅನಿತಾ ನರೇಶ್ ಮಂಚಿ ಬರೆದ ಸಣ್ಣ ಕಥೆಗಳು

ಅನಿತಾ ನರೇಶ್ ಮಂಚಿ ಚೆಕ್ ಅಪ್ .. ಫ್ರೀ ಮೆಡಿಕಲ್ ಕ್ಯಾಂಪಿನ ಎದುರುಗಡೆ ಜನ ಆಚೀಚೆ ಸುಳಿದಾಡುತ್ತಿದ್ದರು. ಪರಿಸರವನ್ನು ನಡುಗಿಸುವ ಸ್ವರದಲ್ಲಿ ಬಂದು ನಿಂತಿತೊಂದು ಬುಲೆಟ್ ಬೈಕ್. ಅದರಿಂದಿಳಿದ ಯುವಕರಿಬ್ಬರು ಸ್ಟೈಲಾಗಿ ಒಳಗೆ ಬಂದರು. ಮೈಗೆ ಪೂಸಿರುವ ಸೆಂಟ್ ವಾತಾವರಣವನ್ನು ತುಂಬಿಕೊಂಡಿತು. ಸೀದ ತಮ್ಮ ಮನೆಗೆ ನುಗ್ಗಿದಂತೆ ಒಳ...

read more
ವಿಜಯನಗರ ಬಿಂಬದಲ್ಲಿ..

ವಿಜಯನಗರ ಬಿಂಬದ ನಾಟಕ ಡಿಪ್ಲೋಮೋ ಕೋರ್ಸ್ ಹಾಗೂ ಮಕ್ಕಳ ಶಿಬಿರದ ಆರಂಭಕ್ಕೆ ಇತ್ತೀಚಿಗೆ ಚಾಲನೆ ನೀಡಲಾಯಿತು.  ಹಿರಿಯ ರಂಗಕರ್ಮಿ ಬಾಬು ಹಿರಣ್ಣಯ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಪಿ  ಚಂದ್ರಿಕಾ, ವಿಜಯನಗರ ಬಿಂಬದ ಅಧ್ಯಕ್ಷರಾದ ಶೋಭಾ ವೆಂಕಟೇಶ್   ಹಾಗೂ 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಭಾಗವಹಿಸಿದ್ದರು. ಈ...

read more
ರಶ್ಮಿ ಕಾಸರಗೋಡು ಕವಿತೆ: ಟೀವಿ ಟಿಆರ್‌ಪಿ ಏರುತ್ತಲಿತ್ತು

ಪಾಪದ ಹೂವು ರಶ್ಮಿ ಕಾಸರಗೋಡು   ಆಷಾಢ ಮಾಸದ ಮಳೆ ಯಂತೆ ಎಡೆಬಿಡದೆ ಸುರಿದ ಕಷ್ಟಗಳು ಮೈ ಮನವನ್ನು ಹರಿದು ಚಿಂದಿಯಾಗಿ ಬಿಸಾಡಿದಾಗ ಜನ ಕಣ್ಣು ಮುಚ್ಚಿ ನಕ್ಕಿದ್ದರು!   ಇರುಳಲ್ಲಿಯೂ, ಮರೆಯಲ್ಲಿಯೂ ನನ್ನ ದೇಹ ಸುಖ ಅನುಭವಿಸ ಬಂದವರು ಹಗಲಲ್ಲಿ ಕಂಡಾಗ ಕಲ್ಲೆಸೆದರು ದಿನಕೂಲಿ ಆಳುಗಳು ಮಹಲಲ್ಲಿ ಕುಳಿತ ಮಹನೀಯರು ನನ್ನ...

read more
ಡೈರೆಕ್ಟರ್ ಸ್ಪೆಷಲ್ : ಈ ಚಿತ್ರ ಇಷ್ಟ ಆಗಲಿಲ್ಲ..

ನಾನು ನೋಡಿದ ’ಡೈರೆಕ್ಟರ್ ಸ್ಪೆಷಲ್’ ವಿಜಯ್ ಹೂಗಾರ್ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಕನ್ನಡದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಿಸಿದ ಹತಾಶ ನಿರ್ದೇಶಕ ಗಾಂಧಿನಗರದ ಮೇಲೆ ಕಥೆ ಬರೆಯುತ್ತೇನೆ ಅಂತ ಸುದ್ದಿ ಮಾಡಿ,ನಂತರ ಕಥೆಯ ದಿಕ್ಕು ಬದಲಿಸಿ ಡೈರೆಕ್ಟರ್ ಸ್ಪೆಷಲ್ ಅನ್ನೋ ಸಾಮಾನ್ಯ ಕಥೆ ನಮ್ಮ ಮುಂದಿಟ್ಟಿದ್ದಾರೆ. ಅವರ...

read more
ಸೃಜನಶೀಲತೆ ಇರುವವರಿಗೆ ವಿಕ್ಷಿಪ್ತತೆ ಇರುತ್ತದೆ: ರೂಪ ಹಾಸನ

ನಾಗರಾಜ್ ಹೆತ್ತೂರು `ಸೃಜನಶೀಲತೆ ಇರುವವರಿಗೆ ಒಂದಷ್ಟು ವಿಕ್ಷಿಪ್ತತೆ ಇರುತ್ತದೆ' ಹೀಗೆಂದವರು ಸಾಹಿತಿ, ಕವಿಯತ್ರಿ ರೂಪಾ ಹಾಸನ.  ಸೃಜನಶೀಲತೆ ಇರುವವರು ಡಿಫರೆಂಟ್ ಆಗಿ ಥಿಂಕ್ ಮಾಡುತ್ತಾರೆ. ಆ ಕಾರಣಕ್ಕಾಗಿಯೇ ಅವರು ಕೆಲವರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅದನ್ನು ವಿಕ್ಷಿಪ್ತತೆ ಎಂದಾದರೂ ಅಂದುಕೊಳ್ಳಬಹುದು. ಇದು ಪ್ರಪಂಚಕ್ಕೆ...

read more
ಫೇಸ್‌ಬುಕ್ ಪಿಕ್ : ಶಿವಸ್ವಾಮಿ ಬಂದಿದ್ದ..

ವಾಸುದೇವ ಶರ್ಮ ಗೆಳೆಯ ಎ.ಎಂ. ಶಿವಸ್ವಾಮಿ ಮೈಸೂರಿನಿಂದ ದಡುಗುಟ್ಟಿಕೊಂಡು ಬಂದಿದ್ದ. ನಮ್ಮ ಕಛೇರಿಯ ಆರೂ ಮಹಡಿಯನ್ನು ಹತ್ತಿ ಬಂದಿದ್ದ. ಕೈಯಲ್ಲೊಂದು ಚೀಲ. ಅದರಲ್ಲಿ ಪುಸ್ತಕಗಳ ಒಂದು ಕಂತೆ. ಎಲ್ಲೋ ಹೊಸ ಪುಸ್ತಕಗಳನ್ನು ಕೊಂಡಿರಬೇಕು ಎಂದುಕೊಂಡೆ. ಎಷ್ಟೇ ಹೇಳಿದರೂ, ಕೋರಿದರೂ ಮನುಷ್ಯ, ತಾನು ಮಾತ್ರ ಬರೆಯುವುದಿಲ್ಲ. ಬೇರೆಯವರಿಗೆ...

read more
ಮಳೆ ಹನಿಗಳಲಿ ಮದುಮಗಳು

ಮಲೆಗಳಲಿ ಮದುಮಗಳು  ಆಗಾಗ ಮಳೆ ಹನಿಗಳಲಿ ಮದುಮಗಳೂ ಆದದ್ದುಂಟು. ರಂಗ ಕ್ಷೇತ್ರದಲ್ಲಿ ಉತ್ತಮ ಚೇತರಿಕೆ ಕಂಡುಕೊಂಡ ಮದುಮಗಳನ್ನು ನೋಡಲು ಸ್ವತಹ ವರುಣನಿಗೂ ಕಾತರ. ಕೊನೆಯ ಮಜಲುಗಳನ್ನು ನಾನೇಕೆ ನೋಡಬಾರದೆಂಬಂತೆ ಭರಗುಟ್ಟಿದ ಧರೆಗೆ. ಆದರೆ ಪ್ರೇಕ್ಷಕರು ? ಅಡ್ಡಿಯಿಲ್ಲ. ಮಳೆಬಂದರೇನಂತೆ , ನಮ್ಮ ಬಳಿ ಕೊಡೆಗಳಿವೆ. ಹೆಲ್ಮೆಟ್, ಜರ್ಕಿನ್...

read more
ಇವಳದೊಂದೆ ಕೊರಗು, ಕುರುಹು ಮರೆಯಾಗುವುದಿಲ್ಲ…

ಹೀಗೊಂದು ಕವಿತೆ... ಎಂ. ಸಿದ್ದು ಸತ್ಯಣ್ಣವರ ಅವಳು ಅಳುತ್ತಾಳೆ ಇವನು ನಗುತ್ತಾನೆ ಅವಳು ಕ್ರೋಧದಿ ಕುದಿಯುತ್ತಿದ್ದಾಳೆ ಈತ ನರಳುತ್ತಿದ್ದಾನೆ. ಆ ಕಬ್ಬಿಣದ ಕಡ್ಡಿಗಳ ಮೇಲೆ ಗುರುತುಗಳಿವೆ ಮಾಸಿ ಹೋಗುತ್ತವೆ ಇವಳದೊಂದೆ ಕೊರಗು ಕುರುಹು ಮರೆಯಾಗುವುದಿಲ್ಲ ಹೆಣ್ಣಾಗಿದ್ದೆ ತಪ್ಪೇ? ಮತ್ತೆ ಮತ್ತೆ ಕೇಳಿಕೊಂಡು ಮೆತ್ತಗಾಗಿದ್ದಾಳೆ...

read more
ಮಾವೋನ ಕೊನೆಯ ನರ್ತಕ: ಜಯಶ್ರೀ ಭಟ್ ರವರ ಅನುವಾದ superb!

ಮೊಟ್ಟ ಮೊದಲ ಮಾವೋನ ಕೊನೆಯ ನರ್ತಕ ಜ್ಯೋತಿ ಕಡ್ಲಾಡಿ ವಸುಧೇಂದ್ರರ ಪುಸ್ತಕಗಳೆಂದರೆ ಹಾಗೆ. "ಹಂಪಿ ಎಕ್ಸಪ್ರೆಸ್" ನಷ್ಟು ವೇಗವಾಗಿ, ಸರಾಗವಾಗಿ ಸಾಫ್ಟ್ ವೇರ್ ಜಗತ್ತಿನ ಹೊರ ಒಳಗನ್ನು ತೋರಿಸಿ ಬಿಡುವಂತೆಯೇ, ನಾನು ಬೆಳೆದು, ಶಾಲಾ ಕಾಲೇಜು ಮುಗಿಸಿ ಉದ್ಯೋಗ ಜೀವನದ ಮೊಟ್ಟ ಮೊದಲ ಮೆಟ್ಟಿಲು ಮುಗಿಸಿದ ನನ್ನ ಬಳ್ಳಾರಿಯ ಬಗ್ಗೆಯೂ ಅಷ್ಟು...

read more
'ಡೈರೆಕ್ಟರ್ಸ್ ಸ್ಪೆಶಲ್'ಗೆ ನೂರು ವಿಷಲ್! – ವಿನಯ್ ಭಾರದ್ವಾಜ್

ವಿನಯ್ ಭಾರದ್ವಾಜ್ 'ಡೈರೆಕ್ಟರ್ಸ್ ಸ್ಪೆಶಲ್', ಸ್ಪೆಶಲ್ ಡೈರೆಕ್ಟರ್ ರ ಸ್ಪೆಷಾಲಿಟಿ ಪ್ರಾಡಕ್ಟ್! ಹಾಗಾಗಿ ಇದು ಅವರ ವರಿಜಿನಲ್ ಚಾಯ್ಸ್. ಪ್ರೇಕ್ಷಕರು ನಿರಾಳವಾಗಿ ಹೇಳಬಹುದು, 'ಚೀಯರ್ಸ್'. ಇಲ್ಲಿ ಇರುವುದು ಕೇವಲ ಬೆರಳೆಣಿಕೆಯಷ್ಟು ಪ್ಲೇಯರ್ಸ್, ಹಾಗಾಗಿ ಹೊಡೆದ ಪ್ರತೀ ಬಾಲು ಸಿಕ್ಸರ್, ಪ್ರತೀ ಎಸೆತವೂ ಬೌನ್ಸರ್. ಹಾಗಾಗಿ ಎಲ್ಲವೂ...

read more
ಪ್ರತಿಭಾ ನಂದಕುಮಾರ್ ಗೆ 'ಅನುಪಮಾ' ಪ್ರಶಸ್ತಿ – ಫೋಟೋ ಆಲ್ಬಂ

ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ 26 ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ  ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಕಾರ್ಯಕ್ರಮದ ಕೆಲವು ಕ್ಷಣಗಳ...

read more

Pin It on Pinterest

Share This