ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಕ್ವಿಜ್‌ ಗೆ ಉತ್ತರ ಇಲ್ಲಿದೆ!

ಗೋಪಾಲ ವಾಜಪೇಯಿ

ಮೊನ್ನೆ ಅವಧಿಯಲ್ಲಿ ಈ ಫೋಟೋದಲ್ಲಿರುವ ರಂಗ ಕಲಾವಿದರನ್ನು ಗುರುತಿಸಿ ಎಂದು ಕೇಳಲಾಗಿತ್ತು.

ಫೋಟೋ ಕೃಪೆ : ಶೋಭಾ ರಾಘವೇಂದ್ರ

ಉತ್ತರ ಇಲ್ಲಿದೆ!

(ಬಹುಶಃ) 1983ರಲ್ಲಿ ಕೊಲ್ಕೊತ್ತಾದಲ್ಲಿ ಪ್ರತಿವರ್ಷ ನಡೆಯುವ ‘ನಾಂದಿಕಾರ್ ನಾಟಕೋತ್ಸವ’ ಜಗತ್ಪ್ರಸಿದ್ಧ. ಅಲ್ಲಿಗೆ ಪ್ರತಿಸಲವೂ ಕನ್ನಡದ ಒಂದು ನಾಟಕ ಪ್ರಯೋಗ ಇದ್ದೇ ಇರುತ್ತದೆ. ಈ ಮೇಲಿನ ಚಿತ್ರ (ಬಹುಶಃ) 1983ರ ‘ನಾಂದಿಕಾರ್ ನಾಟಕೋತ್ಸವ’ದಲ್ಲಿ ಭಾಗವಹಿಸಿದ್ದ ‘ಜೋಕುಮಾರ ಸ್ವಾಮಿ’ ಪ್ರಯೋಗ ಸಂದರ್ಭದ್ದು.
ಚಿತ್ರದಲ್ಲಿ (ನಿಂತವರಲ್ಲಿ) ಎಡದಿಂದ ಬಲಕ್ಕೆ ಸಂಜಯ ಸೂರಿ, ಕಿಟ್ಟಿ, ಸುಂದರ್ ರಾಜ್, ಬಿ.ವಿ. ಕಾರಂತ, ನಾಟಕಕಾರ ಡಾ. ಚಂದ್ರಶೇಖರ ಕಂಬಾರ, ಚಂದ್ರಕುಮಾರ್ ಸಿಂಗ್, ಹಿರಿಯ ಬಂಗಾಲಿ ರಂಗ ಕರ್ಮಿ ಶಂಭು ಮಿತ್ರ (ಗುಲಾಬಿ ಬಣ್ಣದ ಶರ್ಟ್ ಧರಿಸಿದವರು) ಹಾಗೂ ‘ನಾಂದಿಕಾರ್ ನಾಟಕೋತ್ಸವ’ದ ಸೂತ್ರಧಾರ ರುದ್ರಪ್ರಸಾದ್ ಸೇನ್ ಗುಪ್ತಾ (ಬಿಳಿ ಶರ್ಟ್ ಧರಿಸಿದವರು) ಜಿ. ವಿ. ಶಿವಾನಂದ್, ಆಂಜನಪ್ಪ ಮುಂತಾದವರು. ಕುಳಿತವರಲ್ಲಿ (ನಡುವಿನ ಸಾಲು) ಎಡದಿಂದ ಬಲಕ್ಕೆ ರಾಣಿ ನಾಗಾಭರಣ, ಶೋಭಾ ರಾಘವೇಂದ್ರ, ಸಂಘಮಿತ್ರ, ನಾಗಾನಾಥ್ ಮುಂತಾದವರು. ನಲದ ಮೇಲೆ ಕುಳಿತವರು ಎಡದಿಂದ ಬಲಕ್ಕೆ ನಂಜಪ್ಪ, ಮೀರಾ ಕುಡುವಳ್ಳಿ, ಕಲ್ಪನಾ ನಾಗಾನಾಥ್ ಮುಂತಾದವರು.
 
ಇನ್ನುಳಿದವರ ಹೆಸರುಗಳು ಗೊತ್ತಿದ್ದವರು ಹೇಳಬಹುದು.

‍ಲೇಖಕರು avadhi

7 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading