ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಲೂಸಿಯಾ’ ನೋಡಲೇಬೇಕು – ರೂಪಾ ಲಕ್ಷ್ಮಿ ಬರೀತಾರೆ
ರೂಪಾ ಲಕ್ಷ್ಮಿ ಲೂಸಿಯಾ - ಈ ಹೆಸರಿನ ಸ್ಪಾನಿಷ್ ಚಿತ್ರವೊಂದು ೧೯೬೮ರಲ್ಲಿ ಬಿಡುಗಡೆಯಾಗಿತ್ತು. ಅದೊಂದು ಕಪ್ಪು ಬಿಳುಪು ಚಿತ್ರವಾಗಿತ್ತು. ಲೂಸಿಯಾ ಅಂದರೆ ಬೆಳಕು! ಕತ್ತಲೆಯಲ್ಲಿ ಕಪ್ಪು / ಬಿಳುಪು ಮಾತ್ರ ಕಾಣುವ ಬಣ್ಣಗಳು ಬೆಳಕಿನಲ್ಲಿ ಬಂದಾಗ ಅದರ ನಿಜ ಬಣ್ಣಗಳು ಬಯಲಾಗುವಂತೆಯೇ, ಬಣ್ಣ ಬಣ್ಣದ ಕನಸು ಹಾಗೂ ಕಪ್ಪು ಬಿಳುಪಿನ...
ಖಳನಾಯಕ ಕೀಚಕ ಈಗ ನಾಯಕ
ಶ್ಶ್ ಶ್!!! ಖಳ ಕೀಚಕ ನಾಯಕನಾಗುತ್ತಿದಾನೆ ವಿದ್ಯಾಶಂಕರ್ ಹರಪನಹಳ್ಳಿ ಕಳೆದ ಶುಕ್ರವಾರ ಬೆಳಿಗ್ಗೆಯಿಂದಲೇ ಕೀಚಕ ಕಾಡತೊಡಗಿದ್ದ. ಹದಿನೈದು ದಿನ ಮುಂಚೆ ನನಗೆ ಫೇಸ್ಬುಕ್-ನಲ್ಲಿ ಆಹ್ವಾನ ಬಂದಿತ್ತು. ನಾಟಕಕ್ಕೆ ಹೊಗಲೇಬೇಕೆಂದು ನಿರ್ಧಾರ ಮಾಡಿಯಾಗಿತ್ತು. ಭೀಮಬಲದಿಂದ ಮುಗಿಯದ ಕೆಲಸವೆಂಬ ಬೆಟ್ಟವನ್ನು ಕೊರೆದು ಸಂಜೆ ಬೇಗನೆ...
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…
http://youtu.be/CIWNi3usRAY
'ಹೆಂಚಿನ ಸಂದಿಯಲ್ಲಿ ನುಸುಳುತ್ತಿರುವ..' – ಕಾವೇರಿ ಕವನ
ಪ್ರತಿಬಿಂಬ ಕಾವೇರಿ ಎಸ್ ಎಸ್ ಹೆಂಚಿನ ಸಂದಿಯಲ್ಲಿ ನುಸುಳುತ್ತಿರುವ ಚಂದ್ರನ ಪ್ರತಿಬಿಂಬ ಕತ್ತಲೆಯ ಕಣ್ಮುಚ್ಚಿಸಲು ಯತ್ನಿಸುತ್ತಿದೆ. ಬರಿದಾದ ಗೋಡೆಯ ಮೇಲೆ ಚಿತ್ರವ ಬಿಡಿಸುತ್ತಿದೆ. ಖುಷಿಯಿಂದ ನಲಿಯುತ್ತಿದೆ, ಮುಗ್ಧ ಮಗುವಿನ ಹಾಗೆ ಖಾಲಿಯಾದ ಕೋಣೆಯೊಳಗೆ....
ಈ ಸಾವು ನ್ಯಾಯವೆ??
ಈ ಸಾವಿಗೆ ಕಾರಣರ್ಯಾರು ಮಂಜುನಾಥ ದಾಸನಪುರ ಪ್ರತಿದಿನ ಒಂದಲ್ಲಾ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನು ನೋಡಿ, ಕೇಳಿ ಮನಸ್ಸು ಮುದುಡುತ್ತದೆ. ಅಲ್ಲಿಂದ ಮತ್ತೆ ಚೇತರಿಸಿಕೊಳ್ಳಬೇಕಾದರೆ ಸಾಕಷ್ಟು ಸಮಯಬೇಕಾಗುತ್ತದೆ. ಒಮ್ಮೊಮ್ಮೆ ಆ ಅವಘಡದಲ್ಲಿ ತೀರ ನನ್ನ ಹತ್ತಿರದವರೇ ಯಾರಾದರೂ ಸಿಕ್ಕಿ ಕೊಂಡಿದ್ದರೆ ನನ್ನ ಮನಸ್ಥಿತಿ ಏನಿರುತ್ತಿತ್ತು...
ಡಾ ಎಸ್ ಬಿ ಜೋಗೂರರ ಪುಸ್ತಕಗಳು
'ಢುಂಡಿ' ಕೃತಿ ಕುರಿತ ಪ್ರತಿಕ್ರಿಯೆಗೆ ಇಲ್ಲಿದೆ ಸಿಎನ್ನಾರ್ ಉತ್ತರ
ಢುಂಡಿ ಲೇಖನ: ಪ್ರತಿಕ್ರಿಯೆ ಪ್ರೊ ಸಿ. ಎನ್. ರಾಮಚಂದ್ರನ್ ಢುಂಡಿ ಕಾದಂಬರಿಯನ್ನು ಕುರಿತ ನನ್ನ ಲೇಖನಕ್ಕೆ ನನ್ನ ನಿರೀಕ್ಷೆಯನ್ನು ಮೀರಿ ಬಂದಿರುವ ಪ್ರತಿಕ್ರಿಯೆಗಳು ಮತ್ತು ಹೆಚ್ಚಿನ ಪ್ರತಿಕ್ರಿಯೆಗಳು ಧನಾತ್ಮಕವಾಗಿರುವುದು ನನಗೆ ತುಂಬಾ ಸಂತೋಷವನ್ನು ಕೊಟ್ಟಿವೆ; ಹಾಗೂ ಕನ್ನಡ ಪ್ರಜ್ಞಾಲೋಕದ ಬಗ್ಗೆ ನನಗಿರುವ ಗೌರವವನ್ನು...
ಸಂಧ್ಯಾರಾಣಿ ಕಾಲಂ : ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು…
ಅಗಸ್ಟ್ ೨೦, ೨೦೧೩, ದೇಶ ರಕ್ಷಾಬಂಧನಕ್ಕಾಗಿ ಅಣಿಯಾಗುತ್ತಿತ್ತು. ಸಮಯ ಬೆಳಗ್ಗೆ ೭.೨೦. ಪುಣೆಯ ಓಂಕಾರೇಶ್ವರ ದೇವಸ್ಥಾನದ ಸೇತುವೆಯ ಮೇಲೆ ಸುಮಾರು ೬೭ ವಯಸ್ಸಿನ ಒಬ್ಬ ವೃದ್ಧರು ಬೆಳಗಿನ ವಾಕಿಂಗ್ ಗೆ ಹೊರಟಿದ್ದರು. ಒಂದು ಬೈಕು, ಇಬ್ಬರು ಹಂತಕರು. ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಹಾರಿದ ಗುಂಡುಗಳು, ಎರಡು ಅವರ ತಲೆಯ ಹಿಂಭಾಗವನ್ನು,...
ಸಂಪು ಕಾಲಂ : ಬೆಂಗಳೂರಿನಲ್ಲಿ ಆತ ಕೇಳಿದ್ದು ’ಮೇಡಂ ಹಿಂದೀ ಮಾಲೂಮ್?’
ಆಫೀಸ್ ನಲ್ಲಿ ಮೊನ್ನೆ ಒಮ್ಮೆ ನಮ್ಮ ಪ್ಯಾಂಟ್ರೀಗೆ ಫೋನಾಯಿಸಿ, "ಭಯ್ಯಾ, ಚಾಯ್ ರೆಡಿ ಹೈ ಕ್ಯಾ" ಎಂದು ಅತ್ಯಂತ ಸ್ವಾಭಾವಿಕವಾಗಿ ಕೇಳಿಬಿಟ್ಟೆ. ಅದನ್ನು ಕೇಳಿದ ನನ್ನ ತಮಿಳು ಸಹೋದ್ಯೋಗಿಯೊಬ್ಬಳು "ನಿಮ್ಮಂಥವರೇ ಆ ಹಿಂದಿಯವರನ್ನು ತಲೆಯ ಮೇಲೆ ಕೂರಿಸಿಕೊಂಡಿರುವುದು" ಎಂದು ಬಿಟ್ಟಳು. ನನ್ನ ಭಾಷಾ ಪ್ರೇಮದ ಬಗ್ಗೆ ಅಪಾರ ನಂಬಿಕೆಯಿದ್ದ...
’ಮೈಯೇ ಸೂರು, ಮನವೇ ಮಾತು’ – ಬಸವರಾಜು ಕಲ್ಗುಡಿ ಅವರ ಹೊಸ ಪುಸ್ತಕ
೫-೯-೨೦೧೩ ರಂದು ಬಿಡುಗಡೆಯಾದ ಬಸವರಾಜ ಕಲ್ಗುಡಿ ಅವರ ಮೈಯೇ ಸೂರು, ಮನವೇ ಮಾತು ಪುಸ್ತಕಕ್ಕೆ ಅವರು ಬರೆದ ಮೊದಲ ಮಾತುಗಳು ಅವಧಿ ಓದುಗರಿಗಾಗಿ. ಅಭಿನವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಬಸವರಾಜ ಕಲ್ಗುಡಿ ಮೊದಲ ಮಾತುಗಳು ಯು. ಆರ್. ಅನಂತಮೂರ್ತಿಯವರ ಗೌರವ ಮಾಲಿಕೆಯಲ್ಲಿ ನನ್ನ ಈ ಪುಸ್ತಕವು ಬರುತ್ತಿರುವುದು ಸಂತೋಷವನ್ನು...
ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ?
ಕುವೆಂಪುರವರ 'ಬಲಿದಾನ'ದಲ್ಲಿ ಸಾರ್ವಕಾಲಿಕ ದರ್ಶನ ಶಶಿಕಾಂತ ಯಡಹಳ್ಳಿ ಬಲಿಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ, ಪಡೆಯೆ ಬಲಿದಾನಂ; ಪಡೆದುದ ಪಿಡಿಯೇ ಬಲಿದಾನಂ; ಪಿಡಿದುದಂ ನಡೆಯೆ ಬಲಿದಾನಂ! ಬಲಿದಾನಕುಂಟೆ ಕೊನೆ ? ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ ! ಮೇಲಿನ ಈ ಸಾಲುಗಳು ಇಡೀ 'ಬಲಿದಾನ' ನಾಟಕದ ಅಂತಃಸತ್ವವಾಗಿದೆ....
ಶ್ರೀನಿವಾಸ ವೈದ್ಯ, ವಸುದೇಂಧ್ರರವರ ಕಥೆಗಳ ರಂಗಪ್ರಯೋಗ
ಟಿಕೆಟ್ ಗಳಿಗೆ : 9880695659 Online Tickets : http://indianstage.in/EventDetails.do?eventId=5142#.UiXGyT_3Oxh ನಮ್ಮ ದಿನ ನಿತ್ಯದ ಜಂಜಾಟದಲ್ಲಿ ಏನೆಲ್ಲಾ ಮರೆತಿದ್ದೇವೆ ಎಂದು ನೆನಪಿಸಲು ವಟಿ ಕುಟೀರ ಎರೆಡು ಸುಂದರ ನಾಟಕಗಳನ್ನು ಸೆಪ್ಟೆಂಬರ್ ೧೧ ಮತ್ತು ೧೨ರಂದು ರಂಗಶಂಕರದಲ್ಲಿ ನಿಮ್ಮ ಮುಂದೆ ತರಲಿದೆ....
ಸರ್ವಸ್ವ ಅರ್ಪಿಸುತ್ತಿದೆ "ಭೀಷ್ಮೋತ್ಪತ್ತಿ"
ಸರ್ವಸ್ವ ಅರ್ಪಿಸುತ್ತಿದೆ “ಭೀಷ್ಮೋತ್ಪತ್ತಿ”
ನನ್ನ ಗುರು ಕಾರಂತ- ಸುಂದರರಾಜ್ ನೆನಪು
ವಿದ್ಯಾರಶ್ಮಿ ಪೆಲತಡ್ಕ ಮಾತಾಡಿಸಿದಾಗ ಸುಂದರರಾಜ್ ತಮ್ಮ ಗುರುಗಳ ನೆನಪು ಬಿಚ್ಚಿಟ್ಟದ್ದು ಹೀಗೆ ಬದುಕು ರೂಪಿಸಿದ ಮಾರ್ಗದರ್ಶಿ ವ್ಯಕ್ತಿಯೊಬ್ಬನ ಮಾತು, ಬುದ್ಧಿಯನ್ನೆಲ್ಲ ಶಾರ್ಪ್ ಮಾಡುವವನು ಗುರು. ನನಗೆ ಬಿ.ವಿ.ಕಾರಂತರು ಇಂತಹ ಗುರುಗಳಾಗಿ ಸಿಕ್ಕಿದರು. ಅವರ ಜತೆಗಿನ 30 ವರ್ಷಗಳ ಒಡನಾಟದಲ್ಲಿ ಅವರು ನನ್ನ ನಟನೆಯನ್ನಷ್ಟೇ ಅಲ್ಲ,...
'ಢುಂಢಿ' ವಿವಾದ: ಇಬ್ಬರು ವಿದ್ಯಾರ್ಥಿಗಳು ಕಂಡಂತೆ
ಢುಂಢಿ ವಿವಾದಾತ್ಮಕ ಕೃತಿಯಾಗಬೇಕಿರಲಿಲ್ಲ ಮಂಜುಳ ಹುಲಿಕುಂಟೆ ಬದುಕು ಕಮ್ಯುನಿಟಿ ಕಾಲೇಜ್ ಯೋಗೇಶ್ ಮಾಸ್ಟರ್ ರವರ 'ಢುಂಢಿ' ಕೃತಿಯು ಒಂದು ವೈಚಾರಿಕ ಕೃತಿಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಪ್ರಜ್ಞಾವಂತರು ಗಮನಿಸಬೇಕಾದ ಅಂಶವಾಗಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ದೇವರಾಗಿ ಪ್ರಥಮ ಪೂಜೆ...
ವಿವೇಕ ರೈ ಬರೀತಾರೆ: ನನ್ನ ಇಬ್ಬರು ಗುರುಗಳು
ಪ್ರೊ ಬಿ ಎ ವಿವೇಕ ರೈ ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಲೆನಾಡಿನಲ್ಲಿ ಹುಟ್ಟಿ ,ನಿಸರ್ಗದ ನಡುವೆ ಬೆಳೆದ ಪರಮೇಶ್ವರ ಭಟ್ಟರು ಸಹಜ ಕವಿಯಾಗಿ ಬೆಳೆದವರು.’ರಾಗಿಣಿ’ ಕವನ ಸಂಕಲನ ಅವರ ಮೊದಲ ಕೃತಿ.ಅವರ ಎಲ್ಲ ಸಾಹಿತ್ಯಸಾಧನೆಗಳ ವಿಸ್ತಾರದ...
ಕುಂ ವೀ ಕಥೆ : ಸಿದ್ಧಾರೂಢ ಪುರಾಣವು…
(ಭಾಗ ೧) ಆ ಹಳ್ಳಿಗೂ ಬಿಸಿಲಿಗೂ ಬಾದರಾಯಣ ಸಂಬಂಧ. ವೈಶಾಖ ಮಾಸ. ಮಟಮಟ ಮಧ್ಯಾಹ್ನ ಬೇರೆ. ದೃಷ್ಟಿ ದೋಷ ಉಳ್ಳವರು ಇವರನ್ನು ಅವರೆಂದೋ, ಅವರನ್ನು ಇವರೆಂದೋ ಗುರುತಿಸುವುದು, ನಗೆಪಾಟಲಿಗೀಡಾಗುವುದು ಮಾಮೂಲು. ಶಾಲೆಗೆ ಕೈಯಳತೆ ದೂರದಲ್ಲಿದ್ದ ಈಶ್ವರ ದೇವರ ಗುಡಿಯಲ್ಲಿ ಕಳೆದ ಕೆಲವು ದಿವಸಗಳಿಂದ ಸಿದ್ಧಾರೂಢ ಪುರಾಣ...
ಅಹವಿ ಹಾಡು : ‘ಲೀ … ಇನ್ನ ಶಲ್ಪ ಪಲಾವ್ ಹಾಕ್ಲಿ ಲೀ …’!
ಬದುಕಿಗೊಂದು ಗುರುವಿರಬೇಕು. ನಮ್ಮನ್ನು ತಿದ್ದುವ, ತೀಡುವ, ಸಾಕ್ಷಾತ್ಕಾರ ಮಾಡಿಸುವಂತ ಗುರು ಒಬ್ಬ ಸಿಕ್ಕರೆ ಅದು ನಿಜಕ್ಕೂ ಪುಣ್ಯ ಅನ್ನಬೇಕು. ಇದಕ್ಕೆಲ್ಲ ಯಾವುದೋ ಸಾಧು ಸಂತ ಅಥವಾ ವಿದ್ಯೆ ಕಲಿಸುವ ಗುರು ಮಾತ್ರ ಗುರುವಾಗಬಲ್ಲರು ಅನ್ನುವುದು ಸುಳ್ಳು. ನಮ್ಮ ಸುತ್ತ ಮುತ್ತ ಇರುವ ಯಾರೋ ಒಬ್ಬರು, ಯಾವುದೋ ಜ್ಞಾನ...
ತೇಜಸ್ವಿ ಬರ್ತಿದಾರೆ ಬೆಂಗಳೂರಿಗೆ
ಸರ್, ನಿಮ್ಮೊಳಗೆ ಅವ್ವನಂತ ಮನಸಿತ್ತು…
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಟಿ ಎಸ್ ಗೊರವರ ಅವರ ’ಆಡು ಕಾಯೋ ಹುಡುಗನ ದಿನಚರಿ’ ಯ ಒಂದು ಅಧ್ಯಾಯ ನಿಮಗಾಗಿ ಟಿ ಎಸ್ ಗೊರವರ ನನಗೆ ಕ್ಲಾಸಿನಲ್ಲಿ ಕುಳಿತುಕೊಳ್ಳೋದು ಅಂದ್ರೆ ಅವ್ವ ಈಚಲು ಮರದ ಗರಿಗಳಿಂದ ಹೆಣೆದ ಬುಟ್ಟಿಯಲ್ಲಿ ಕೋಳಿ ಮರಿಗಳನ್ನು ಮುಚ್ಚಿದಂತೆ ಉಸಿರುಗಟ್ಟಿಸುತ್ತಿತ್ತು. ಗ್ವಾದಲಿಯ ಗೂಟಕ್ಕೆ ಚಿನ್ನಾಟವಾಡುವ ಆಕಳು...
