ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಕೊನೆಯ ಬೇಡಿಕೆ' – ಸಣ್ಣ ಕಥೆ
ನಾಗರಾಜ್ ಹರಪನಹಳ್ಳಿ ಮನೆಗೆ ಬರುವಾಗ ಟಮೋಟೋ, ಈರುಳ್ಳಿ ಇಡ್ಕೊಂಡು ಬಾ...ಸಾಂಬಾರು ಮಾಡಲು ಏನು ಇಲ್ಲ. ಬಂಗ್ಡೆ ಇದ್ದರೆ ತಗಂಬಾ. ಫ್ರೈ ಮಾಡಿದ್ರಾಯ್ತು . ದೂರವಾಣಿ ಕರೆಯಲ್ಲಿ ಹೆಂಡ್ತಿ ಆದೇಶಿಸಿದ್ದಳು. ಮಧ್ಯಾಹ್ನ ಡಿ.ಸಿ. ಕಚೇರಿ ಬಳಿ ಇದ್ದ ಪ್ರೋಟೆಸ್ಟ್ ನ್ಯೂಸ್ ಕವರ್ ಮಾಡಿಕೊಂಡು ಸೀದಾ ಬೈಕ್ ಹತ್ತಿದೆ. ಗ್ರೀನ್ ಸ್ಟ್ರೀಟ್ನಲ್ಲಿ...
ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರೀಸ್
ಜಯಲಕ್ಷ್ಮಿ ಶೇಖರ್ ಪತಿ (ಜ್ಞಾನಶೇಖರ) ಜರ್ಮನಿಗೆ 6 ವಾರಗಳ ಆಫೀಸ್ ಕೆಲಸಕ್ಕೆಂದು ಹೋಗುವವರಿದ್ದರು. ಜರ್ಮನಿ ಅವರಿಗೆ ಹೊಸತಲ್ಲ, ಓಡಾಡಿ,ತಂಗಿ,ತಾನು ಬಹಳ ಮೆಚ್ಚಿದ ದೇಶವನ್ನು ಪತ್ನಿ,ಮಕ್ಕಳಿಗೂ ತೋರಿಸುವ ಉಮೇದು ಅವ್ರಿಗೆ. ನಮ್ಮ ದೇಶವನ್ನೇ ನೋಡದೆ ಸೀದಾ ಪರದೇಶವನ್ನು ನೋಡಿ ಹೆಮ್ಮೆ ಪಡುವುದು ಸರಿಯೆ ಎಂಬ ಭಾವ ನನ್ನದು. ಆದರೆ ಪತಿಯ...
ನಾನು ಕನ್ನಡ ಮೇಷ್ಟ್ರಾಗಿದ್ದು…
ಕನ್ನಡ ಕಲಿಸುವ ಕಷ್ಟಗಳು ಸೂರಿ ಹಾರ್ದಳ್ಳಿ ಬೆಂಗಳೂರಿನಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಯೊಂದರ ತರಬೇತಿ ಕೇಂದ್ರದ ಅಧಿಕಾರಿಗಳೊಬ್ಬರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಹೊರ ರಾಜ್ಯದವರು ಮತ್ತು ಹೊರ ದೇಶದವರು ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ, ಯಾರಾದರೂ ಭೋಧಕರು ಸಿಗುತ್ತಾರೆಯೇ ಎಂದು ನನ್ನನ್ನು ಕೇಳಿದರು. ಕಂಪನಿಯಲ್ಲಿ...
ಗಡಿಯಾರದ ಕಾಲಿಗೆ ಪೋಲಿಯೋ ಹೊಡೆದ ಸವಿಗನಸು..
ಬ್ಯಾಟರಿ ಬೆಳಕು ಬೆನ್ನು ಬಿಡುತ್ತಿಲ್ಲ ಪ್ರವೀಣ ಹೇಗೆ ಹಾಡಲಿ ಗೆಳತಿ, ಹೃದಯದಲಿ ನೆಟ್ಟ ಮುಳ್ಳನ್ನ ಕರುಳ ಕಟ್ಟಿ ತೂಗಿದ ಉಯ್ಯಾಲೆಯನ್ನ ಮುಸ್ಸಂಜೆ ಪಿಸುಮಾತನಾಡಲು ಕರೆದಾಗ ಸೂರ್ಯ ಇಳಿಯುವ ಮುನ್ನ ಒಮ್ಮೆ ಕಾಣೋ ಎಂದಾಗ ಬಣ್ಣಗಳು ಬಿಳಿಹಾಳೆಯ ಮೇಲೆ ನರ್ತಿಸಲು ಗೆಜ್ಜೆ ಕಟ್ಟಿದಾಗ ಎಡೆಬಿಡದ ಬಿರುಬಿಸಿಲಿನ ಬೆವರು...
ಮತ್ತೆ ’ಪುರುಷ ಸೂಕ್ತ’
On 15th OCTOBER 2013 At 7.30pm Venue: RANGA SHANKARA
ಕನ್ನಡ ಮತ್ತು ತೆಲಂಗಾಣ
ಕನ್ನಡಗಳ ಮತ್ತು ತೆಲಂಗಾಣದ ಸಮಸ್ಯೆ, ಏಕೀಕರಣ ಇತ್ಯಾದಿ ಸುರೇಶ್ ನಾಗಲಮಡಿಕೆ ಒಂದು ಭಾಷೆಯನ್ನು ಮಾತನಾಡುವ ಜನರ ಸಮಸ್ಯೆಗಳು ಹಾಗೂ ಆ ಭಾಷೆಯ ಸಮಸ್ಯೆಗಳನ್ನು ಬೇರೆ ಬೇರೆಯಾಗಿ ನೋಡಬೇಕೇ? ಅಥವಾ ಒಂದಾಗಿ ನೋಡಬೇಕೆ. ಬರೀ ಭಾಷೆಯ ಅಭಿವೃದ್ದಿಯನ್ನು ಮಾತ್ರ ಗಮನಿಸಿದರೆ ರಾಜಕೀಯ, ಸಾಮಾಜಿಕ, ಆಥರ್ಿಕ ಸಮಸ್ಯೆಗಳನ್ನು ಅಲ್ಲಗಳೆದಂತೆ...
'ಉಪಾಸನಾ'ದಿಂದ ಹೊಸ ಸಿ ಡಿ
‘ಉಪಾಸನಾ’ದಿಂದ ಹೊಸ ಸಿ ಡಿ
'ಸಂಚಯ' ನಾಟಕೋತ್ಸವ
‘ಸಂಚಯ’ ನಾಟಕೋತ್ಸವ
ಜಿ ಎನ್ ಮೋಹನ್ ಕಾಲಂ : ಬಂದೂಕಿನ ನಳಿಗೆಯ ಬಾಯಲ್ಲಿ..
ಜಿ ಎನ್ ಮೋಹನ್ ಗುಲ್ಬರ್ಗಾದ ಮಹಾಗಾಂವ ಗ್ರಾಮದ ಕಾನ್ಸ್ಟೇಬಲ್ ನೈಟ್ ರೌಂಡ್ಸ್ ಹೊರಟ. ಅಮಾವಾಸ್ಯೆಯ ರಾತ್ರಿ. ದಟ್ಟ ಕತ್ತಲು. ಕತ್ತಲಿದ್ದ ಮೇಲೆ ಕಳ್ಳರಿರಲೇಬೇಕಲ್ಲ. ಹುಡುಕುತ್ತಾ ಹುಡುಕುತ್ತಾ ಹೊರಟ. ಇಡೀ ರಾತ್ರಿ ಅಲೆದರೂ ಉಹೂಂ ಕೈಗೆ ಒಬ್ಬ ಕಳ್ಳನೂ ಸಿಗಲಿಲ್ಲ, ಕಳ್ಳತನವೂ ಆಗಿರಲಿಲ್ಲ. ಕೈ ಚೆಲ್ಲಿ ಕೂತು ಆಕಾಶ ನೋಡಿದ. ಎದೆ...
ಅಶೋಕ ಶೆಟ್ಟರ್ ಕಾಲಂ : ಶ್ವಾನ ಪುರಾಣಂ
ಒಂದಾನೊಂದು ಕಾಲದಲ್ಲಿ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಆಗಿನ್ನೂ ಯುಕೇಜಿಯಲ್ಲೋ ಒಂದನೇ ತರಗತಿಯಲ್ಲೋ ಇದ್ದ ನನ್ನ ಮಗ ನಾಯಿಮರಿಯೊಂದನ್ನೆತ್ತಿಕೊಂಡು ಬಂದು "ಮಮ್ಮೀ, ಇನ್ ಮ್ಯಾಲ ಇದ ನಮ್ ಮನ್ಯಾಗ ಇರ್ತsತಿ.. ನಾಂವಿದನ್ನ ಸಾಕೂಣು" ಎಂದು ಘೋಷಿಸಿದ. ಆ ನಾಯಿಕುನ್ನಿಯನ್ನು ಅವನು ನಮ್ಮ ಯೂನಿವರ್ಸಿಟಿ ಗೆಸ್ಟ್ ಹೌಸ್ ನ ಅಡಿಗೆಯಾತನ...
ಇವರು ಯಾರು ಹೇಳಿ ನೋಡುವ?! – ಅವಧಿ ಕ್ವಿಜ಼್
ಇದೊಂದು ಅಪರೂಪದ ಫೋಟೋ. ಈ ಚಿತ್ರದಲ್ಲಿರುವವರು ಯಾರು ಹೇಳಿ?!
ವೈಶಾಲಿ ಹೆಗಡೆ ಹೇಳಿದ ಶೆಟ್ಟಿ ಮಾಮ್ ಕಥೆ
ಬದಲಾವಣೆ ವೈಶಾಲಿ ಹೆಗಡೆ ಹರಿಪ್ರಸಾದ್ ಶೆಟ್ಟಿ ಇತ್ತಿತ್ತಲಾಗಿ ಒಂದು ನಮೂನೆ ಪಿರ್ಕು. ಇದು ಈಗ ಅವನ ಮಕ್ಕಳಿಗೂ ಗೊತ್ತಿರುವ ವಿಷಯ. ಅಷ್ಟಷ್ಟು ದಿವಸಕ್ಕೆ ಮಳ್ಳು ಏರಿದವನಂತೆ ಎಲ್ಲರಮೇಲೆ ಹರಿಹಾಯುತ್ತಾನೆ. ಬಾಡಿಗೆದಾರರ ಬಾಗಿಲು ಬಡಿದು ಜಗಳ ಕಾದು ಬರುತ್ತಾನೆ. ಮಗ, ಸೊಸೆಯರಿಗೆಲ್ಲ ಫೋನಿನಲ್ಲಿ ವಾಚಾಮಗೋಚರ ಬಯ್ಯುತ್ತಾನೆ. ಮಗಳಿಗೆ...
ಮಹಿಳೆಯರು ಮತ್ತು ಆತ್ಮಕಥೆಗಳು – ಜಯಶ್ರೀ ಬಿ ಕದ್ರಿ ಬರೀತಾರೆ
ಸ್ವ-ಗತ / ಮಹಿಳಾ ಸಾಹಿತ್ಯದ ಇತಿಮಿತಿಗಳು ಜಯಶ್ರೀ ಬಿ ಕದ್ರಿ ಇತ್ತೀಚಿಗೆ ನಾನು ಕನ್ನಡದ ಪ್ರಮುಖ ಲೇಖಕ-ಲೇಖಕಿಯರ ಆತ್ಮ ಕಥೆಗಳನ್ನು ಪಟ್ಟು ಹಿಡಿದು ಜಿದ್ದಿಗೆ ಜಿದ್ದಂತೆ ಓದಿದೆ. ಇದು ಸಂಶೋಧನಾ ಲೇಖನವೇನಲ್ಲವೆಂದೂ, ಕೇವಲ ಆಸಕ್ತಿಯಿಂದ ಗಮನಿಸಿದ ಅಂಶಗಳೆಂದೂ ಮೊದಲೇ ಸ್ಪಷ್ಟಪಡಿಸಿಕೊಳ್ಳುತ್ತ ಕೆಲವೊಂದು ವಿಚಾರಗಳನ್ನು...
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ’ಚಿಟ್ಟಿ ನೀನ್ ಮಾತ್ರ ಪ್ರೀತಿಯಲ್ಲಿ ಬೀಳಬೇಡ…'
ಕಳಚಿಬಿದ್ದ ಕಾಮನಬಿಲ್ಲಿನ ಚೂರು ಕಣ್ಣೀರ ಹನಿಯಲ್ಲಿ. . . ಚಿಟ್ಟಿಯ ಕಣ್ಣಲ್ಲಿ ಬೆಂಕಿಯು ಧಗಧಗನೆ ಹೊತ್ತಿ ಉರಿಯುತ್ತಿತ್ತು. ಕುಟ್ಟಿಯ ಆರ್ತನಾದ, ಮಕ್ಕಳ ಅಳು ಅವಳ ಕಿವಿಯನ್ನು ಮುಟ್ಟಿ ಬೆಚ್ಚಿ ಬೀಳುವ ಹಾಗಾಯಿತು. ಊರಿಗೂರೇ ಸ್ಮಶಾನ ಮೌನದಲ್ಲಿ ಮುಳುಗಿತು. ಯಾರ ಬಾಯಲ್ಲೂ ಮಾತಿಲ್ಲ. ಅಡುಗೆ ಆಗಿದೆ ಎಂದು ಹೆಂಗಸರು ಹೇಳಿದರೂ ಗಂಡಸರು...
’ಹನಿ ಹನಿ ಪ್ರೇಮ್ ಕಹಾನಿ!’ – ರೂಪಾ ಹಾಸನ್
ರೂಪಾ ಹಾಸನ್ ನೀರ ಹನಿಗಳ ದೃಶ್ಯ ಕಾವ್ಯ ! ಪ್ರಕೃತಿ ನಮ್ಮರಿವಿಗೆ ಬಾರದಂತೆ ಕವಿತೆ ಬರೆಯುತ್ತಿರುತ್ತಾಳ? ಈ ಗುಮಾನಿ ನನಗೆ ಸದಾ ಕಾಡುತ್ತಿರುತ್ತದೆ. ಅದಕ್ಕೆ ಉದಾಹರಣೆ ಈ ಚಿತ್ರಗಳು. ಮೊನ್ನೆ ಬೆಳಗ್ಗೆ ಚುಮು ಚುಮು ಮಳೆಯಲ್ಲಿ ಸಕಲೇಶಪುರ ಬಳಿಯ ಮಂಜರಾಬಾದ್ ಕೋಟೆಗೆ ಹೋದಾಗ, ಎಲೆ, ಹುಲ್ಲು, ಬಂಡೆ, ಜೀಡರ ಬಲೆ .... ಎಲ್ಲದರ...
'ಅವನು, ಅವಳು ಮತ್ತು ….' – ಸಣ್ಣ ಕಥೆ
ಅವನು, ಅವಳು ಮತ್ತು ಕಿತಾಪತಿ ಗೆಳೆಯ ವಿ ಎಚ್ ವೀರಣ್ಣ ಮಂಠಾಳಕರ್ ಅವಳೀಗ ಅವನನ್ನು ಪೂರ್ತಿ ಮರೆತು ಬಿಟ್ಟಿದ್ದಾಳೆ. ಅವನು ಕೂಡ ಅವಳಿಗಾಗಿ ಮೊದಲಿನಂತೆ ಮೊಬೈಲ್ ಕರೆಗಳು, ಮೆಸೇಜ್ ಮಾಡುವುದಕ್ಕೆ ಹಿಂಜರಿಯುತಿದ್ದಾನೆ. ಮೊದಲೆಲ್ಲ ಗಂಟೆಗಟ್ಟಲೆ ಫೋನ್ಕಾಲ್ ಇಲ್ಲವೇ ಹತ್ತಾರು ಸಂದೇಶಗಳು ಕಳುಹಿಸುತಿದ್ದವರು ಇದೀಗ ಒಂದು ಮಿಸ್ಟ್...
’ಭೂಮಿಗೆ ಬಂದ ಭಗವಂತ’ – ಶಾಂತಲಾ ಅನಿಲ್ ಬರೀತಾರೆ
ವಿಶ್ವ(ಕು)ರೂಪದರ್ಶನ ಶಾಂತಲಾ ಅನಿಲ್ ಸಹ ಧರ್ಮಿಣಿಯಿಂದ ಬೆಳಗು-ಬೈಗೆನ್ನದೆ ಬೈಗುಳಗಳನ್ನು ತಿನ್ನುತ್ತ-ಅಲ್ಲ-ತುರಿಕಿಸಿಕೊಳ್ಳುತ್ತಾ ಮತ್ತೊಂದು ಹಗಲನ್ನು ದೂಡಲಾಗದೆ ಆಟೋ ಸಂಜಯ್ ಬೆಳಗಾಗುತ್ತಲೇ ಆಟೋ ಹಾಕಿಕೊಂಡು (ಅಥವ ಆಟೋ ಅವನನ್ನು ಹೇರಿಕೊಂಡು) ಹೊರಟಿದ್ದ. ಮನುಷ್ಯನಿಗೆ ಎಂಟು ಗಂಟೆ ಕೆಲಸ ಎಂಟು ಗಂಟೆ ನಿದ್ದೆಯ ಅಗತ್ಯವಿದ್ದರೂ,...
ನಂ ಬೆಂಗ್ಳೂರು!
ಎಸ್ ಜಿ ಶಿವಶಂಕರ್ ಬೆಂಗ್ಳೂರೆಂದ್ರೆ ನಂಗೊಂತರಾ ಅಲರ್ಜಿ! ನಾನೆಂದ್ರೆ ಬೆಂಗ್ಳೂರಿಗೂ ಅಲರ್ಜಿ ಇರಬಹುದು. ಬೆಂಗಳೂರಿಗೆ ಹೋಗುವುದನ್ನು ಏನಾದರೂ ನೆಪವೊಡ್ಡಿ ತಪ್ಪಿಸಿಕ್ಕೊಳ್ಳುತ್ತೇನೆ, ಅನಿವಾರ್ಯವಾದರೆ ಹೋಗುವ ದಿನವನ್ನು ಆದಷ್ಟೂ ಮುಂದೆ ತಳ್ಳುತ್ತೇನೆ. ಆದರೆ ಮುಂದೂಡಲಾಗದ ಕೆಲವು ಅನಿವಾರ್ಯ ಸಂದರ್ಭಗಳು ಬಂದೇ ಬರುತ್ತವೆ....
ಮಾಧವ ಬರಲಿಲ್ಲ…..
ಒಂದು ಕವಿತೆ ದಯಾನಂದ್ ಮಾಧವ ಬರಲಿಲ್ಲ ತಡವಿಕೊಳ್ಳುತ್ತಾ ನಡೆದಿತ್ತು ಕಾಲ ಅಕಾಲದಲ್ಲಿ ಮರೆತ ಮೂರೂಮುಕ್ಕಾಲು ಪಾವು ಮುತ್ತುಗಳ ಪೋಣಿಸುವ ಮುತ್ತಿನ ಸರದ ಹುಡುಗಿಯರ ಸಾವಿನ ಸಂಕಟಕ್ಕೆ; ಅವರದಾರಿಯಲ್ಲಿ ಮುತ್ತೇ ಮುತ್ತು. ಗೋಕುಲದಲ್ಲಿ ನಡೆಯಲಿಲ್ಲ ಸಾವಿರ ಸೂಳೆಯರ ಸತ್ಯಾಗ್ರಹ ಡೌಲು ಉಪವಾಸ ಕುಂತು ಬಿಸ್ಕೆಟ್ಟು, ಬೋಮರ್ೀಟಗಳ...
