ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು!'

ಡಾ ಬಿ ಎ ವಿವೇಕ ರೈ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲನೆಯ ಬಾರಿ ನಾನು ಭಾಗವಹಿಸಿದ್ದು ೧೯೭೦ರಲ್ಲಿ ಬೆಂಗಳೂರಿನಲ್ಲಿ. ದೇಜಗೌ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೇಂದ್ರೆ ಅವರ ಕವಿಗೋಷ್ಠಿಯ ಅಧ್ಯಕ್ಷತೆ ಸಹಿತ ಕನ್ನಡ ಹಿರಿಯ ಮತ್ತು ಆಗಿನ ನವ್ಯದ ಸಾಹಿತಿಗಳನ್ನು ಕಂಡದ್ದು, ಅವರ ಮಾತುಗಳನ್ನು ಕೇಳಿದ್ದು ಒಂದು ಸುಂದರ...

read more
ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಶರತ್ ಕಲ್ಕೋಡ್ ಎಲ್ಲಾ ಭಾಷೆಗಳಲ್ಲೂ ಇರುವಂತೆ ಕನ್ನಡದಲ್ಲೂ ಪ್ರಾದೇಶಿಕ ಆಡು ನುಡಿಗಳಿವೆ. ಉದಾಹರಣೆಗೆ: ಧಾರವಾಡದ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಇತ್ಯಾದಿ. ಆಯಾಯ ಪ್ರಾದೇಶಿಕ ಜೀವನ ಶೈಲಿ, ಉಡುಗೆ ತೊಡುಗೆಗಳಂತೆ ಭಾಷೆಯಲ್ಲೂ ವೈವಿಧ್ಯವಿರುವುದು ಸಹಜ. ಆದರೆ ಈ ಪ್ರಾದೇಶಿಕ ವೈವಿಧ್ಯವೇ ನಮ್ಮಲ್ಲಿ ತಮಾಷೆಯ...

read more
ಮಡಿಕೇರಿ ಥೇಟ್ ಮದುಮಗಳು!

80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಡಿಕೇರಿ ಥೇಟ್ ಮದುಮಗಳು ಇಲ್ಲಿ ಈಗ ಸಾಹಿತ್ಯಾಸಕ್ತರ, ಭಾಷಾಭಿಮಾನಿಗಳ ಉತ್ಸಾಹವನ್ನೊಮ್ಮೆ ನೋಡಿಯೇ ತಿಳಿಯಬೇಕು. ದೂರದ ದೆಹಲಿಯಿಂದ ಬಂದಿರುವ ವೇದಿಕೆ ರೂಪಿಸುವವರಿಂದ ಹಿಡಿದು , ಕಿರಿಯರಿಗೆ ಉತ್ಸಾಹ ತುಂಬುತ್ತಾ ಮೈಸೂರಿನಿಂದ 6000 ಛೇರ್ ಗಳನ್ನು ನೀಟಾಗಿ ಹೊಂದಿಸಿ 'ನಮ್ಮದೊಂದು...

read more
ಮಡಿಕೇರಿ ಸಿಂಗಾರ ಬಂಗಾರ ಹಿಂಗಿದೆ ನೋಡ್ರಿ

೮೦ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗ ಕ್ಷಣ ಗಣನೆ ಎಷ್ಟು ತಯಾರಿ ಮಾಡಿಕೊಂಡರೂ ಮುಗಿಯದ ಮದುವೆ ಮನೆಯಂತೆ, ಎಷ್ಟು ಅಲಂಕರಿಸಿಕೊಂಡರೂ ಕೊನೆಗೊಮ್ಮೆ ಕನ್ನಡಿಯ ಕಡೆ ನೋಡಿ ಎನಾದರೂ ಮರೆತೆನಾ ಎಂದು ಕೊಳ್ಳುವ ಮದುವಣಗಿತ್ತಿಯಂತೆ ಮಡಿಕೇರಿ ತಯಾರಾಗುತ್ತಲೇ ಇದೆ. ಸಮ್ಮೇಳನದ ಆರಂಭಕ್ಕೀಗ ಕ್ಷಣಗಣನೆ... ಫೋಟೋಗಳು : ಶಿವು ಮೊರಿಗೇರಿ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಂದ್ರನ ಒಡಲಿಂದ ನೆಲಕ್ಕೆ ಜಾರಿದ ಮೊಲ

(ಇಲ್ಲಿಯವರೆಗೆ...) ಅಳು ಅಲೆಯಲೆಯಾಗಿ ಚಿಟ್ಟಿಯನ್ನು ದಾಟಿ ಇಡೀ ಪ್ರಕೃತಿಯನ್ನು ಆವರಿಸಿಕೊಂಡಾಗ ಮಳೆ ಹನಿಹನಿಯಾಗಿ ನೆಲಕ್ಕಿಳಿಯಿತು. ‘ಯಾಕೆ ಹೀಗಾಯಿತು? ನನ್ನ ಪುಟ್ಟ ಹೃದಯಕ್ಕೆ ಇಂಥಾ ದೊಡ್ಡ ಏಟನ್ನು ಆ ದೇವರು ಯಾಕೆ ಕೊಟ್ಟ? ನಮ್ಮದೇ ಜಗತ್ತನ್ನು ಸೃಷ್ಟಿಸ ಹೊರಟ ನಮ್ಮಿಬ್ಬರನ್ನು ಯಾಕೆ ಬೇರೆ ಮಾಡಿದ? ಇಷ್ಟೆಲ್ಲಾ ಹತ್ತಿರ ಇದ್ದ...

read more
ಶುಭ ಸಂಕಲ್ಪ: ಗುಣಮುಖ

ನೋವೇ ಅನಾರೋಗ್ಯ ಸಂತೋಷವೇ ಆರೋಗ್ಯ ಶುಭ ಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ ಗುಣಮುಖಿಗಳಿಗೆ ಮಾತ್ರ! ನೀನು ಏನನ್ನಾದರೂ ಬರಿ, ಪ್ರಕಟಿಸು ಆದರ ಸಮಾಜಕ್ಕೆ ನೀತಿ ಪಾಠ ಬೋಧಿಸಬೇಡ ಎಂದು ನನ್ನ ಗುರುಗಳಲ್ಲಿ ಒಬ್ಬರಾಗಿದ್ದ ದಿವಂಗತ ವೈಎನ್ಕೆ ಆಗಾಗ ಹೇಳುತ್ತಿದ್ದರು. ಆಯ್ತು ಸಾರ್, ನೀತಿ ಪಾಠ ಹೇಳೋದಿಲ್ಲ ಆದ್ರೆ ನೀತಿ ಕಥೆಗಳನ್ನು...

read more
ಸುಗತ ಬರೆಯುತ್ತಾರೆ: ಜಿ ಎಸ್ ಶಿವರುದ್ರಪ್ಪನವರು ನಮ್ಮ ಕೊನೆಯ ರಾಷ್ಟ್ರಕವಿ?

ಸುಗತ ಶ್ರೀನಿವಾಸರಾಜು ಕಳೆದೆರಡು ವಾರಗಳಿಂದ ಎರಡು ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ. ಮೊದಲನೆಯ ಪ್ರಶ್ನೆ, ನಮ್ಮ ರಾಷ್ಟ್ರಕವಿ ಎನಿಸಿಕೊಂಡಿದ್ದ ಜಿ ಎಸ್ ಶಿವರುದ್ರಪ್ಪನವರು ತೀರಿಕೊಂಡ ಹಿನ್ನೆಲೆ ಯಲ್ಲಿ ಹುಟ್ಟಿದ್ದು; ಎರಡನೆಯ ಪ್ರಶ್ನೆ, ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾವೊಂದು ರಾಜಕೀಯ ಪಕ್ಷವೊಂದರ ಪ್ರಚಾರದ...

read more
ಮಡಿಕೇರಿಯಲ್ಲಿ ಮೊದಲ ಸಮ್ಮೇಳನ ನಡೆದದ್ದು ೧೯೩೨ರಲ್ಲಿ

1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು ಬಿ ಆರ್ ಸತ್ಯನಾರಾಯಣ ಇಲ್ಲಿಗೆ 81 ವರ್ಷಗಳ ಹಿಂದೆ, ಅಂದರೆ, 1932 ಡಿಸೆಂಬರ್ 28ರಿಂದ 31ರವರೆಗೆ ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯನ್ನು ಶ್ರೀಯುತ ಡಿ.ವಿ.ಜಿ. ವಹಿಸಿದ್ದರು. 2014ರಲ್ಲಿ ಅದೇ ಮಡಿಕೇರಿಯಲ್ಲಿ ಸಾಹಿತ್ಯ...

read more
ಛಳಿ ಸ್ವಾಮಿ ಸ್ವೆಟರ್ ತನ್ನಿ!

ನಾಳೆಯಿಂದ ಮೂರು ದಿನ ಮಡಿಕೇರಿಯಲ್ಲಿ ಸಾಹಿತ್ಯ ಪರಿಷತ್ತು ಸಮ್ಮೇಳನ. ಹೇಳಿ ಕೇಳಿ ಮಡಿಕೇರಿ ಮಂಜಿನ ಊರು, ಜೊತೆಗೆ ಈಗ ಜನವರಿ, ಛಳಿಗೀಗ ಏರು ಯೌವ್ವನ! ಸಮ್ಮೇಳನಕ್ಕೆ ಕನ್ನಡ ಪ್ರೀತಿಯ ಜೊತೆ ಸ್ವೆಟರ್, ಶಾಲು, ಬೆಚ್ಚನೆ ಬಟ್ಟೆ ತೆಗೆದುಕೊಂಡು ಹೋಗಿ. ಜೊತೆಗೆ ನಿಮ್ಮಲ್ಲಿ ಬೆಚ್ಚನೆ ನೆನಪುಗಳಿದ್ದರೆ ಅದು ಬೋನಸ್! ಮಡಿಕೇರಿ...

read more
’ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಯಾಕಿರ್ಬಾರದು?’ ದಿಲಾವರ್ ಕೇಳ್ತಾರೆ

ದಿಲಾವರ್ ರಾಮದುರ್ಗ ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್? ನಾನ್ ವೆಜ್ಜೀ ಗಳಿಗೆ ಸಾಹಿತ್ಯಾಭಿರುಚಿ ಇರೋದೇ ಇಲ್ಲವೆಂದೋ? ವೆಜ್ಜೀಗಳು ಮಾತ್ರ ಅಂಥ ಅಭಿರುಚಿ ಹೊಂದಿರುತ್ತಾರೆಂದೋ? ಕುವೆಂಪು ನಾನ್ ವೆಜ್ ತಿನ್ನುತ್ತಿದ್ದರಾ? ನನಗೆ ಗೊತ್ತಿಲ್ಲ. ಕುತೂಹಲ ಅಷ್ಟೇ. ಅವರ ಪುತ್ರ ಪೂಚಂತೇ ಮಾತ್ರ ತಿನ್ನಬಹುದಾದ ಎಲ್ಲ ಮಾಂಸವನ್ನು ತಿಂದವರು...

read more
ಪ್ರೊ ರಾಮಚಂದ್ರ ಗೌಡ ಅವರ ನೆನಪಿನಲ್ಲಿ…

ಹಿರಿಯ ಶಿಕ್ಷಣ ತಜ್ಞ, ಹಲವು ಯುವ ಮನಸ್ಸುಗಳಿಗೆ ಮಾರ್ಗದರ್ಶಿಯಾಗಿದ್ದ ಪ್ರೊ ರಾಮಚಂದ್ರಗೌಡ ಅವರ ನೆನಪಿನಲ್ಲಿ  ಪ್ರೊ ರಾಮಚಂದ್ರಗೌಡ ದತ್ತಿ ನಿಧಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧಿಭವನದಲ್ಲಿ ಈ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಪ್ರೊ ರಾಮಲಿಂಗಾರೆಡ್ಡಿ, ಎಂ ಎ ಪೊನ್ನಪ್ಪ, ಎನ್ ಆರ್ ವಿಶು ಕುಮಾರ್, ಡಾ ಎಚ್...

read more
ತೇಜಸ್ವಿಯನ್ನು ಹುಡುಕುತ್ತಾ – ಜಿ ಹೆಚ್ ನಾಯಕ್ ತೇಜಸ್ವಿಯನ್ನು ನೆನಸಿಕೊಂಡರು

(ಇಲ್ಲಿಯವರೆಗೆ) ತೇಜಸ್ವಿಯವರ ಕಾಲೇಜು ಅಧ್ಯಾಪಕರಾಗಿದ್ದ ಡಾ|| ಪ್ರಭುಶಂಕರ್ ರವರನ್ನು ಮಾತನಾಡಿಸಿ ಅವರ ನೆನಪಿನಾಳದಿಂದ ತೇಜಸ್ವಿಯವರ ನೆನಪುಗಳನ್ನು ಜೋಪಾನವಾಗಿ ಆರಿಸಿಕೊಂಡ ನಂತರ ನಮ್ಮ ಪಯಣ ಮುಂದುವರೆದಿದ್ದು ಮೈಸೂರಿನ ಕುವೆಂಪುನಗರದ ಕಡೆ. ಏಕೆಂದರೆ  ನಮ್ಮ ಮುಂದಿನ ಚಿತ್ರೀಕರಣವಿದ್ದದ್ದು ಕುವೆಂಪುನಗರದಲ್ಲಿ ವಾಸವಾಗಿರುವ...

read more

Pin It on Pinterest

Share This