ಬ್ರೇಕಿಂಗ್ ನ್ಯೂಸ್ : ೨೦೧೨ – ೧೩ರ ಮಾಧ್ಯಮ ಪ್ರಶಸ್ತಿ ಪ್ರಕಟ, ಜಿ ಎನ್ ಮೋಹನ್, ಸುಗತ ಶ್ರೀನಿವಾಸರಾಜು, ಅನಂತ ಚಿನಿವಾರ್, ತಿಮ್ಮಪ್ಪ ಭಟ್, ರವಿ ಹೆಗ್ಡೆ ಸೇರಿ ಹಲವರಿಗೆ ಪ್ರಶಸ್ತಿ ಗರಿ

ದಿನಾಂಕ 23-1-2014ರಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀ ಎಂ.ಎ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
2012ಕ್ಕೆ ಜೀವಮಾನದ ಸಾಧನೆಯನ್ನು ಪರಿಗಣಿಸಿ ಒಬ್ಬರಿಗೆ ವಿಶೇಷ ಪ್ರಶಸ್ತಿ ಹಾಗೂ 20 ಸಾಧಕರಿಗೆ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಈಗ 30ರ ಸಂಭ್ರ್ರಮ. ಈ ಸಂಭ್ರಮದ ಹಿನ್ನೆಲೆಯಲ್ಲಿ 2013ನೇ ಸಾಲಿಗೆ 30 ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ ಇಬ್ಬರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2013ನೇ ಸಾಲಿಗೆ ಮಣಿಪಾಲ ಮೀಡಿಯ ನೆಟ್ ವರ್ಕ್ ಮುಖ್ಯಸ್ಥರಾದ ಶ್ರೀ ಟಿ. ಸತೀಶ್. ಯು. ಪೈ ಅವರನ್ನು ವಾರ್ಷಿಕವಾಗಿ ನೀಡಲಾಗುವ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಕಾಡೆಮಿಗೆ 30ರ ಸಂಭ್ರಮದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಾಧ್ಯಾಪಕರೊಬ್ಬರನ್ನು ಗೌರವಿಸಲು ನಿರ್ಧರಿಸಲಾಗಿದ್ದು ಅದರಂತೆ ಸಂವಹನ ತಜ್ಞರಾದ ಪ್ರೊ. ಎಚ್. ಎಸ್. ಈಶ್ವರ ಅವರನ್ನು ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಗಳ ಜೊತೆಗೆ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡ 2012 ಮತ್ತು 13ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ‘ಸಾಮಾಜಿಕ ಸಮಸ್ಯೆ’ ಲೇಖನಕ್ಕೆ ನೀಡುವ ‘ಅಭಿಮಾನಿ ಪ್ರಶಸ್ತಿ’, ‘ಮಾನವೀಯ ಸಮಸ್ಯೆ’ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಘನತೆವೆತ್ತ ರಾಜ್ಯಪಾಲರಾದ ಶ್ರೀ ಹಂಸರಾಜ್ ಭಾರದ್ವಾಜ್, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ, ವಾರ್ತಾ, ಹಜ್ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ಶ್ರೀ ಆರ್. ರೋಷನ್ ಬೇಗ್, ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ.

2012ನೇ ಸಾಲಿನ ಪ್ರಶಸ್ತಿ

2012-ಜೀವಮಾನದ ಸಾಧನೆ ಪರಿಗಣಿಸಿ ವಿಶೇಷ ಪ್ರಶಸ್ತಿ
1. ಶ್ರೀ ಎಚ್.ಎಸ್. ಬಲರಾಂ, ಅಂಕಣಕಾರರು ಹಾಗೂ ಹಿರಿಯ ಪತ್ರಕರ್ತರು(ಬೆಂಗಳೂರು)
2012-ವಾರ್ಷಿಕ ಪ್ರಶಸ್ತಿ
1. ಶ್ರೀ ತಿಮ್ಮಪ್ಪ ಭಟ್, (ಉತ್ತರ ಕನ್ನಡ), ಸಂಪಾದಕರು, ವಿಜಯವಾಣಿ
2. ಶ್ರೀ ಇ.ವಿ. ಸತ್ಯನಾರಾಯಣ, (ಶಿವಮೊಗ್ಗ), ನಿವೃತ್ತ ಸುದ್ದಿ ಸಂಪಾದಕರು, ಪ್ರಜಾವಾಣಿ
3. ಶ್ರೀ ಯಗಟಿ ಕೃಷ್ಣಮೂತರ್ಿ, (ಬೆಂಗಳೂರು)
4. ಶ್ರೀ ಅನಂತ ಚಿನಿವಾರ್, (ಶಿವಮೊಗ್ಗ), ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ 24ಥ7
5. ಶ್ರೀ ಬಿ.ಎಂ. ಹನೀಫ್, (ದಕ್ಷಿಣ ಕನ್ನಡ)
6. ಶ್ರೀ ಕೆ.ಎಸ್. ಶಾಂತರಾಮರಾವ್, (ಬೆಂಗಳೂರು), ಹಿರಿಯ ಛಾಯಾಚಿತ್ರಗ್ರಾಹಕರು
7. ಶ್ರೀ ಮು. ಷಣ್ಮುಗಂ, (ತುಮಕೂರು)
8. ಶ್ರೀ ಖಾದ್ರಿ ಎಸ್ ಅಚ್ಯುತನ್, (ಮಂಡ್ಯ), ನಿವೃತ್ತ ನಿದರ್ೇಶಕರು, ದೂರದರ್ಶನ
9. ಶ್ರೀ ಜಿ.ಎನ್. ಮೋಹನ್, (ತುಮಕೂರು)
10. ಶ್ರೀ ಬಿ.ಆರ್. ಶ್ರೀಕಾಂತ್, (ಕೋಲಾರ)
11. ಶ್ರೀಮತಿ ರೂಪಾ ರಾಜೀವ್ರಾವ್, (ಬೆಂಗಳೂರು)
12. ಶ್ರೀ ಜಿ.ಎಸ್. ನಾರಾಯಣ ರಾವ್ (ಜೆಸುನಾ), (ಕೋಲಾರ)
13. ಶ್ರೀ ಜಿ.ವಿ. ಚೂಡಾನಾಥ ಅಯ್ಯರ್, (ಚಿಕ್ಕಮಗಳೂರು)
14. ಶ್ರೀ ಸುರೇಂದ್ರ ಎಸ್. ವಾಗ್ಳೆ, (ದಕ್ಷಿಣ ಕನ್ನಡ), ವಿಜಯವಾಣಿ
15. ಶ್ರೀ ಮಲ್ಲಿಕಾಜರ್ುನ ಸಿದ್ದಣ್ಣವರ, (ಬಾಗಲಕೋಟೆ)
16. ಶ್ರೀ ರೌಫ್ ಅಹಮದ್ .ಎ ಹಳ್ಳೂರ್, (ಬಾಗಲಕೋಟೆ) ವರದಿಗಾರರು, ಈಟಿವಿ ಉದರ್ು
17. ಶ್ರೀ ಬಿ. ವೆಂಕಟಸಿಂಗ್, (ರಾಯಚೂರು), ಮುಖ್ಯ ವರದಿಗಾರರು, ಸುದ್ದಿ ಮೂಲ
18. ಶ್ರೀ ಚೆಲುವರಾಜು, (ರಾಮನಗರ)
19. ಶ್ರೀ ಹೆಚ್. ಎಸ್. ವೃಷಭರಾಜ್, (ತುಮಕೂರು)
20. ಶ್ರೀ ಬಿ.ಎಂ. ಪದಕಿ, (ಹುಬ್ಬಳ್ಳಿ)
 

ಪ್ರಶಸ್ತಿ 2013

2013-ಜೀವಮಾನದ ಸಾಧನೆ ಪರಿಗಣಿಸಿ ವಿಶೇಷ ಪ್ರಶಸ್ತಿ
1. ಶ್ರೀ ಟಿ. ಸತೀಶ್ ಯು. ಪೈ, (ಉಡುಪಿ), ಮುಖ್ಯಸ್ಥರು, ಮಣಿಪಾಲ ಮೀಡಿಯ ನೆಟ್ವರ್ಕ್
2. ಪ್ರೊ. ಎಚ್. ಎಸ್. ಈಶ್ವರ, (ಶಿವಮೊಗ್ಗ), ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂವಹನ ತಜ್ಞರು
 
2013-ವಾರ್ಷಿಕ ಪ್ರಶಸ್ತಿ
 
1. ಶ್ರೀ ರವಿ ಹೆಗಡೆ, (ಉತ್ತರ ಕನ್ನಡ), ಸಮೂಹ ಸಂಪಾದಕರು, ಉದಯವಾಣಿ, ಬೆಂಗಳೂರು
2. ಶ್ರೀ ಸುಗತ ಶ್ರೀನಿವಾಸರಾಜು, (ಬೆಂಗಳೂರು), ಸಂಪಾದಕರು, ವಿಜಯ ಕನರ್ಾಟಕ
3. ಶ್ರೀ ಪಿ.ಎಸ್. ಚಂದ್ರಶೇಖರ್, (ಉಡುಪಿ)
4. ಶ್ರೀ ಬಿ.ವಿ. ನಾಗರಾಜು, (ಬೆಂಗಳೂರು)
5. ಶ್ರೀಮತಿ ಆಶಾ ಕೃಷ್ಣಸ್ವಾಮಿ, (ಬೆಂಗಳೂರು), ಡೆಕ್ಕನ್ ಹೆರಾಲ್ಡ್
6. ಶ್ರೀ ಎಸ್. ರವಿಕುಮಾರ್, (ಚಿಕ್ಕಬಳ್ಳಾಪುರ), ಪ್ರಧಾನ ನಿಮರ್ಾಪಕರು, ಟಿವಿ9
7. ಶ್ರೀ ಬಿ.ಎನ್. ಗುರುಮೂರ್ತಿ, (ಬೆಂಗಳೂರು), ನಿವೃತ್ತ ಜಂಟಿ ನಿರ್ದೇಶಕರು, ದೂರದರ್ಶನ
8. ಶ್ರೀ ಮಲ್ಲಿಕಾರ್ಜುನ ಬಿರಾದಾರ್, (ಬೀದರ್)
9. ಶ್ರೀ ವಿಜಯ್ ಗ್ರೋವರ್, (ಬೆಂಗಳೂರು)
10. ಶ್ರೀ ಸದಾಶಿವ ಶೆಣೈ, (ದಕ್ಷಿಣ ಕನ್ನಡ)
11. ಶ್ರೀ ಎಸ್.ಕೆ. ಶ್ಯಾಮಸುಂದರ, (ಚಿತ್ರದುರ್ಗ), ಒನ್ ಇಂಡಿಯ ಡಾಟ್ ಕಾಮ್
12. ಶ್ರೀ ಎಂ.ಎನ್. ಗುರುಮೂರ್ತಿ, (ಚಿಕ್ಕಮಗಳೂರು), ಹಿರಿಯ ವರದಿಗಾರರು, ಸಂಯುಕ್ತ ಕರ್ನಾಟಕ
13. ಶ್ರೀ ದಯಾಶಂಕರ ಮೈಲಿ, ಹಿರಿಯ ವರದಿಗಾರರು, ಕನ್ನಡಪ್ರಭ, ಹಾಸನ
14. ಶ್ರೀ ಕೆ. ಶಿವಕುಮಾರ್, (ಕೋಲಾರ), ಹಿರಿಯ ವರದಿಗಾರರು, ಇಂಡಿಯನ್ ಎಕ್ಸ್ಪ್ರೆಸ್, ಮೈಸೂರು
15. ಶ್ರೀ ಕೂಡ್ಲಿ ಗುರುರಾಜ, (ಮೈಸೂರು), ವಿಜಯ ನೆಕ್ಸ್ಟ್
16. ಶ್ರೀ ಬಿ.ಜಿ. ಗುಜ್ಜಾರಪ್ಪ, (ತುಮಕೂರು), ವ್ಯಂಗ್ಯ ಚಿತ್ರಕಾರರು
17. ಶ್ರೀ ಜಿ.ಎನ್. ಹನುಮಂತರಾಯಪ್ಪ, ಪಾವಗಡ
18. ಶ್ರೀ ಎಂ.ಎಸ್. ಮಣಿ, (ಬೆಂಗಳೂರು)
19. ಶ್ರೀ ಅಫ್ಸಾನ್ ಯಾಸ್ಮೀನ್, (ಬಳ್ಳಾರಿ), ಹಿರಿಯ ವರದಿಗಾರರು, ದಿ ಹಿಂದು
20. ಶ್ರೀ ಎನ್. ನಾಗರಾಜ, ಸಂಪಾದಕರು, ಈಶಾನ್ಯ ಟೈಮ್ಸ್, ರಾಯಚೂರು
21. ಶ್ರೀ ಕೆ.ಎಸ್. ಗಣೇಶ್, (ಕೋಲಾರ)
22. ಶ್ರೀ ವಿ. ಮಹೇಶ್ ಕುಮಾರ್, (ಕೊಳ್ಳೇಗಾಲ), ಸಂಪಾದಕರು, ಜಸ್ಟ್ ಕನ್ನಡ ಡಾಟ್ ಇನ್
23. ಶ್ರೀ ಪ್ರಗತಿ ಗೋಪಾಲಕೃಷ್ಣ, ಹಿರಿಯ ಛಾಯಾಚಿತ್ರಗ್ರಾಹಕರು, ಮೈಸೂರು
24. ಶ್ರೀ ಎನ್. ಮಂಜುನಾಥ್, ಸಂಪಾದಕರು, ಕ್ರಾಂತಿದೀಪ, ಶಿವಮೊಗ್ಗ
25. ಶ್ರೀ ರಾಜಶೇಖರ ಹತಗುಂದಿ, (ಗುಲ್ಬರ್ಗ)
26. ಶ್ರೀ ಸೈಯದ್ ಪೀರ್ ಪಾಷ ಖಾದ್ರಿ, (ಬೆಂಗಳೂರು), ಡೈಲಿ ಸಾಲಾರ್
27. ಶ್ರೀ ಎಂ.ಎಸ್. ರಾಜೇಂದ್ರಕುಮಾರ್, (ಮಂಡ್ಯ), ಹಿರಿಯ ವರದಿಗಾರರು, ಪ್ರಜಾವಾಣಿ, ಮೈಸೂರು
28. ಶ್ರೀ ತಿಪ್ಪಣ್ಣ್ಣಾ ಭೋಸ್ಲೆ, (ಬೀದರ್), ಸಂಪಾದಕರು, ಕಾರಂಜ ಎಕ್ಸ್ಪ್ರೆಸ್
29. ಶ್ರೀ ಎಚ್.ಎಸ್. ರಾಮಣ್ಣ, (ತುಮಕೂರು)
30. ಶ್ರೀ ರಾಘವೇಂದ್ರ ಭಟ್, (ಉತ್ತರ ಕನ್ನಡ), ಹಿರಿಯ ವರದಿಗಾರರು, ಕನ್ನಡಪ್ರಭ
 
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ
 
ಆಂದೋಲನ ಪ್ರಶಸ್ತಿ-2012 : ನಮ್ಮ ನಾಡು-ಶಿವಮೊಗ್ಗ
ಆಂದೋಲನ ಪ್ರಶಸ್ತಿ-2013 : ಕಿತ್ತೂರ ಕರ್ನಾಟಕ-ಗದಗ
 
‘ಸಾಮಾಜಿಕ ಸಮಸ್ಯೆ’ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ
 
ಅಭಿಮಾನಿ ಪ್ರಶಸ್ತಿ-2012 : ಶ್ರೀ ಉಗಮ ಶ್ರೀನಿವಾಸ್-ಕನ್ನಡ ಪ್ರಭ:
ಶೀರ್ಷಿಕೆ-ಬತ್ತಿದ ಅಂತರ್ಜಲ,
ಎದೆಹಾಲು ಹಾಲಾಹಲ.
 
ಅಭಿಮಾನಿ ಪ್ರಶಸ್ತಿ-2013 : ಶ್ರೀ ಸಚ್ಚಿದಾನಂದ ಕುರಗುಂದ-ಪ್ರಜಾವಾಣಿ
ಶೀರ್ಷಿಕೆ: ಬಾರದ ಮಳೆ ಎಳೆದಿದೆ ಬರೆ
 
‘ಮಾನವೀಯ ಸಮಸ್ಯೆ’ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ
ಮೈಸೂರು ದಿಗಂತ ಪ್ರಶಸ್ತಿ-2012 : ಶ್ರೀ ಚೇತನ್ ಪಡುಬಿದ್ರಿ-ಉದಯವಾಣಿ:
ಶೀರ್ಷಿಕೆ- ಅಂಗವೈಕಲ್ಯ ಅಡ್ಡಿಯಾಯಿತೆ?
 
ಮೈಸೂರು ದಿಗಂತ ಪ್ರಶಸ್ತಿ-2013 : ಶ್ರೀ ರಾಜ ಮನ್ನಾರ್- ಈ ಸಂಜೆ
ಶೀರ್ಷಿಕೆ: ಸರ್ಕಾರಗಳನ್ನು ಗಡಗಡ ನಡುಗಿಸುವ
ಈರುಳ್ಳಿ ಕಣ್ಣೀರಿನಿಂದಲೇ ಕೋಟ್ಯಾಧಿಪತಿಗಳು


 

‍ಲೇಖಕರು G

February 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. nagraj.harapanahalli

    ಎಲ್ಲ ಹಿರಿಯರಿಗೂ ಧನ್ಯವಾದಗಳು….ಪ್ರಶಸ್ತಿಗೆ ಉತ್ತಮರನ್ನು ಆಯ್ಕೆ ಮಾಡಲಾಗಿದೆ.

    ಪ್ರತಿಕ್ರಿಯೆ
  2. ಜಿ.ಎನ್ ನಾಗರಾಜ್

    ಎಲ್ಲರಿಗೂ ಅಭಿನಂದನೆಗಳು, ಜನಪರ ಮಾಧ್ಯಮ ರೂಪಿಸುವಲ್ಲಿ ಹೊಸ ಎತ್ತರಕ್ಕೆ ಏರಲು ಈ ಪ್ರಶಸ್ತಿಗಳು ಸ್ಫೂರ್ತಿ ನೀಡಲಿ.

    ಪ್ರತಿಕ್ರಿಯೆ
  3. ಡಾ.ಪ್ರಕಾಶ ಗ.ಖಾಡೆ

    ಮಾಧ್ಯಮ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು.

    ಪ್ರತಿಕ್ರಿಯೆ
  4. Kavya Nagarakatte

    ಕಂಗ್ರಾಕ್ಚುಲೇಶನ್ಸ್ ಸರ್, ತುಂಬ ಸಂತೋಷವಾಯಿತು.

    ಪ್ರತಿಕ್ರಿಯೆ
  5. y k sandhya sharma

    saarthaka sevege uthama prashasthi-ellariguu abhinandanegalu.utthama kelasa gurutisida maadhyama academyge dhanyavaadagalu.

    ಪ್ರತಿಕ್ರಿಯೆ
  6. shobha

    prashati padeda g n mohan hagu ella patrika mitrarigu dhanyavadagalu
    prashasti padeda g n mohan ,ananth chinnivar,hagu ella patrika mitrarigu abhinandanegalu vijayanagara bimba rangashikshnada yellara paravagi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: