ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ನದಿಯ ನೆನಪಿನ ಲಹರಿ' – ಸ್ಮಿತಾ ಅಮೃತರಾಜ್
ಸ್ಮಿತಾ ಅಮೃತರಾಜ್ ಅಡುಗೆ, ಊಟ, ಸ್ನಾನ, ನಿದ್ದೆ ಹೀಗೆ ಮುಗಿಯದ ದಿನಚರಿಯ ಪಟ್ಟಿಯಲ್ಲಿ ಬಟ್ಟೆ ಒಗೆದು ಮಡಿ ಮಾಡುವ ಕೆಲಸವೂ ಒ೦ದು. ಇದೊ೦ದು ಮಾಡಲೇ ಬೇಕಾದ ಅಗತ್ಯದ ಕೆಲಸವೂ ಕೂಡ ಹೌದು. ಯಾಕೆ೦ದರೆ ಗುಡಿಸುವುದು, ತಿಕ್ಕುವುದು ಎರಡು ದಿನ ನಿ೦ತು ಹೋದರೂ ಏನೂ ಸ೦ಭವಿಸಲಾರದು. ಆದರೆ ಎರಡು ದಿನ ಹಾಗೇ ಮೂಲೆಯಲ್ಲಿ ಬಟ್ಟೆ ರಾಶಿ ಹಾಕಿ...
’ಆಯ್ತಪ್ಪ ಇನ್ಮೇಲೆ ಕಿತ್ತಳೆ ಬಗ್ಗೆ ಬರೆಯೋಣ’ ಅಂದ್ರು ಜೋಗಿ
ಕತ್ತಲೆ ಆವರಿಸಿದಾಗ ಕಿತ್ತಲೆಯ ಬಗ್ಗೆ ಬರೆಯಿರಿ! ಜೋಗಿ ನೀನು ದೇವರನ್ನು ನಂಬುತ್ತೀಯೋ ಇಲ್ಲವೋ, ಆದರೆ ನಂಬೋದಿಲ್ಲ ಅಂತ ಮಾತ್ರ ಬರೆಯಬಾರದು. ಹಾಗಂತ ಹುಕುಂ ಹೊರಡಿಸುವವರಿದ್ದಾರೆ. ಯಾಕೆ ಅಂತ ಕೇಳಿದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಹಾಳಾಗುತ್ತದೆ ಅಂತ ಬೈಯುತ್ತಾರೆ. ನಮ್ಮ ಸಂಸ್ಕೃತಿಯ ಒಳಗೇ ದೇವರಿಲ್ಲ ಅಂತ ಹೇಳಿದ...
ಅತ್ರಿ ಅಶೋಕವರ್ಧನರ ಪುಸ್ತಕಕ್ಕೆ ಪ್ರಶಸ್ತಿ
'ಅಭಿನವ'ಪ್ರಕಾಶನದ, ಅಶೋಕವರ್ಧನ ಬರೆದಿರುವ "ಕುಮಾರ ಪರ್ವತದ ಸುತ್ತ ಮುತ್ತ"(ಪ್ರವಾಸ ಕಥನ) ಪುಸ್ತಕಕ್ಕೆ ಕರ್ನಾಟಕ ಸಂಘದ ಪ್ರವಾಸ ಕಥನ ವಿಭಾಗದ ಪ್ರಶಸ್ತಿ ಲಭಿಸಿದೆ. ’ಅವಧಿ’ಯ...
'ಶತಮಾನಗಳುರುಳಿವೆ ಕುಸುಮಬಾಲೆಯ ನೆನಪಿನಲ್ಲಿ…'
ಕಲ್ಲು ಕರಗಿದೆ... ರಮೇಶ್ ಹಿರೇಜಂಬೂರ್ ಕನಸಿನ ಕನ್ಯೆ ಕಣ್ಣೆದುರು ಬಂದು ಬಳಿ ಸಾರಿ ನಿಂದು ಕರಗಿದವು ಮನ ಮೌನವಾಗಿ || ಅವಳ ಕಂಡ ಮೊದಲ ಕ್ಷಣ ಎದೆಯಾಳದಲೆಲ್ಲ ತಲ್ಲಣ ಕಣ್ಮರೆಯಾಗಿ ಹೋದಾಗ ಎಲ್ಲೆಲ್ಲೂ ಕಣ್ಣೀರರಾಗ ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಮಲಗಿದ್ದ ಪ್ರೀತಿ ಕೂಗಿ ಕರೆತಂದಿದೆಯವಳ... ಹೃದಯಮಿಡಿತ ಅರಿಯಲೆಂದು...
’ಎಂ ಎಸ್ ಸುಬ್ಬುಲಕ್ಷ್ಮಿ… ಈ ಹೆಸರು ಕೇಳಿದೊಡನೆ…’
’ಆಕೃತಿ’ ಪುಸ್ತಕದಿಂದ ಹೊರಬರುತ್ತಿರುವ ಎಂ ಎಸ್ ಸುಬ್ಬಲಕ್ಷ್ಮಿಯವರ ಪುಸ್ತಕಕ್ಕೆ ಎಸ್ ದಿವಾಕರ್ ಬರೆದ ಪ್ರಸ್ತಾವನೆಯ ಭಾಗ ’ಅವಧಿ’ ಓದುಗರಿಗಾಗಿ : ಎಂ.ಎಸ್. ಸುಬ್ಬುಲಕ್ಷ್ಮಿ! ಈ ಹೆಸರು ಕೇಳಿದೊಡನೆ ಎಲ್ಲೆಡೆ ಹರ್ಷೋದ್ಗಾರವೇಳುತ್ತದೆ. ನಮ್ಮನ್ನು ನಾದದ ನದಿಯೊಂದು ಮೀಯಿಸಿಬಿಡುತ್ತದೆ; ಹೃದಯವನ್ನು ಸ್ಪರ್ಶಿಸುವಂಥ ಮಧುರ...
ಅಂದ ಹಾಗೆ ತಿಪಟೂರಿನಲ್ಲಿ..
ಕೆ ವಿ ಸುಬ್ಬಣ್ಣ ಆಪ್ತಮಂದಿರಕ್ಕೆ ಬರ್ತಿದ್ದಾರೆ ’ಸ್ಕೂಲ್ ಮಾಸ್ಟರ್’
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಈ ಭಾನುವಾರ ಸಂಜೆ ೪.೩೦ಕ್ಕೆ ಕನ್ನಡ ಚಿತ್ರ ಸ್ಕೂಲ್ ಮಾಸ್ಟರ್ ಪ್ರದರ್ಶನ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಗೋಪಿನಾಥ್ Ph: 8892795666...
’ಮಿಸ್ ಯೂ ಪಪ್ಪಾ’ – ವೈಶಾಲಿ ಹೆಗಡೆ
-ವೈಶಾಲಿ ಹೆಗಡೆ, ಬಾಸ್ಟನ್ (ಯು. ಎಸ್. ಎ.) ಸಾವಿರಾರು ಮೈಲುಗಳ ದೂರದಲ್ಲಿ ನನ್ನದೊಂದು ಗೂಡನ್ನು ನಾನೇ ಕಟ್ಟುವ ಅಸ್ತಿತ್ವದಲ್ಲಿ ಬೆಳೆಯುತ್ತಿರುವ ಹೊತ್ತಲ್ಲಿ, ಅಮ್ಮ ನಿತ್ಯದ ಜಂಜಾಟಗಳಲ್ಲಿ ನೆನಪಾಗುವ ದಿನಂಪ್ರತಿ ಆಧಾರಸ್ತಂಭ. ಎಲ್ಲೋ ತೆರೆಮರೆಯಲ್ಲಿ ಸದಾ ದಾರಿತೋರುವ, ಗದರುವ ಧ್ವನಿ. ಆದರೆ ಪಪ್ಪ, ಹೊಸ ಬಿಸಿಲು ಮೂಡಿ ಎಳೆಚಿಗುರು...
ವೈ ಕೆ ಸಂಧ್ಯಾಶರ್ಮ ಬರೆದ ಹನಿಗವನಗಳು
ವೈ ಕೆ ಸಂಧ್ಯಾಶರ್ಮ ಕ್ರೌರ್ಯ ಹಸಿರುಗಿಡದ ಮೇಲೆ ಸ್ವಚ್ಛಂದ ನಗುವ ಹೂವಿನ ನಗುವನು ಚಿವುಟಿ ಆತ್ಮನ ಕಿತ್ತು ನರಳಿಸುವ ಈ ಪೂಜೆ ಅಲಂಕರಣ ಯಾವ ದೇವರಿಗೆ ಪ್ರೀತಿ? ಮುನಿಸು ಮುಗಿಲ ಸುಂದರಿ ತನ್ನ ಚಿಕ್ಕೆಗಣ್ಣ ಮುಚ್ಚಿ ಕಾರ್ಮುಗಿಲ ಸೆರಗ ಮುಸುಕಿಕ್ಕಿ ಮುಸು ಮುಸು ಅತ್ತದ್ದು ಇಳೆಗೆ ತುಂತುರು ಮಳೆ ಕತ್ತಲೆ ಯಾರಿಗೆ? ಮುಸ್ಸಂಜೆ ಹೊತ್ತಲ್ಲಿ...
ಹೀಗೆ ಕೆಲವು ’ಫುಲ್ ಬ್ಯುಸಿ ಗಿರಾಕಿಗಳು!’
ಎಚ್ ಕೆ ಶರತ್ ನಾವು ಕೈ ಕೆರ್ಕಳೋಕೂ ಪುರಸೊತ್ತಿಲ್ಲದ ಮನುಷ್ಯ ಜೀವಿಗಳನ್ನು ಕ್ಷೌರದಂಗಡಿ ಸೇರಿದಂತೆ ಇನ್ನಿತರ ಕ್ಯೂ ನಿಲ್ಲುವ ಸ್ಥಳಗಳಲ್ಲಿ ಮಾತ್ರ ಕಾಣಲು ಸಾಧ್ಯ. ಕರೆಂಟ್ ಬಿಲ್ ಕಟ್ಟೋಕೆ, ಅಂಗಡಿಗೆ ಏನಾದರೂ ತರೋಕೆ, ಹಿಟ್ಟು ಬಿಡಿಸೋಕೆ ಗಿರಣಿಗೆ ಹೋದ್ರೆ ಅಲ್ಲಿಗೆ ಕಡಿಮೆ ಎಂದರೂ ಕಾಲು ಡಜನ್ ಸಂಖ್ಯಾಬಲದ ಪುರಸೊತ್ತಿಲ್ಲದ ಮನುಷ್ಯ...
'ಹರಿ ಚಿತ್ತ ಸತ್ಯ' ಸಣ್ಣ ಕಥೆ
- ಶ್ರೀನಾಥ್ ಭಲ್ಲೆ "ಹರಿ ಚಿತ್ತ ಸತ್ಯ, ನಮ್ಮ ಹರಿ ಚಿತ್ತ ಸತ್ಯ, ನರ ಚಿತ್ತಕೆ ಬಂದದ್ದು ಲವಲೇಶ ನೆಡೆಯದು" ಈ ಹಾಡು ನನ್ನನ್ನು ಬಹಳ ಕಾಡಿದೆ ! ಕಾಡುತ್ತಲೇ ಇದೆ !! ಸಮುದ್ರದ ದಂಡೆಯ ಮೇಲೆ ಊರಿಟ್ಟ ಹೆಜ್ಜೆಯನ್ನು ಅಳಿಸಲು ಸೋತು ಹಿಂದಕ್ಕೆ ಓಡಿದ ಅಲೆಗಳು ’ಮರಳಿ ಯತ್ನವ ಮಾಡು’ ಎಂದು ತನ್ನನ್ನೇ ಹುರುದುಂಬಿಸಿಕೊಂಡು...
ಡೈಲಿ ಬುಕ್ : ಡಾ ಹಳೆಮನೆ ರಾಜಶೇಖರ ಅವರ ’ತಲೆಮಾರುಗಳ ಸಂಕಥನ’
‘ಮಾಡಿದ ಪಾಠಗಳು ಎಲ್ಲವೂ ವ್ಯರ್ಥವಲ್ಲ’ ಎನ್ನುವ ಸಮಾಧಾನವನ್ನು ತಂದುಕೊಟ್ಟ ವಿದ್ಯಾರ್ಥಿಗಳಲ್ಲಿ ರಾಜಶೇಖರ ಹಳೆಮನೆಯೂ ಒಬ್ಬ. ವಿದ್ಯಾರ್ಥಿಯ ಭವಿಷ್ಯವನ್ನು ಪ್ರತಿಭೆಗಿಂತಲೂ ಆತನ ಸತತಾಭ್ಯಾಸ, ಪರಿಶ್ರಮ, ಶ್ರದ್ಧೆ ಅವಕಾಶಗಳು ರೂಪಿಸುತ್ತವೆ ಎನ್ನುವುದು ನನ್ನ ನಂಬಿಕೆ ಈ ನಂಬಿಕೆಯನ್ನು ಕೆಲವು ಜನ ವಿಧ್ಯಾರ್ಥಿಗಳು ಉಳಿಸಿದ್ದಾರೆ.ಅಂತಹ...
ಮತ್ತೆ ನೆನಪಿಸುತ್ತಿದ್ದೇವೆ, ’ಮಾಯಾವಿ ಸರೋವರ’
ಪುಲ್ಲಿಂಗ-ಸ್ತ್ರೀಲಿಂಗದಲ್ಲಿ ನಾ ಮುಂದು, ತಾ ಮುಂದನ್ನು ಹಿಂದಿಟ್ಟರೆ, ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಗಂಡು ಕೇಳಿದ್ದೀರಿ .. ಗಂಡಲ್ಲೊಂದು ಹೆಣ್ಣು ಹೆಣ್ಣಲ್ಲೊಂದು ಗಂಡು ಕೇಳಿದ್ದೀರಾ? ಈ ಪುರುಷ-ಸ್ತ್ರೀಯ ಅನನ್ಯತೆಯಲ್ಲಿ ಅನ್ಯೋನ್ಯತೆಯನ್ನೂ ಮೀರಿದ inclusiveness ಅನ್ನೋದೂ ಒಂದಿದೆ. paradox ಅಲ್ಲ, ಅದು ಅನುಭವವೇದ್ಯ .....
ವೈಕಂ ಮೊಹಮ್ಮದ್ ಬಷೀರರ ಸಣ್ಣ ಕಥೆ ನಾಟಕವಾಗಿ
’ವರ್ಷಕ್ಕ ನಿಂದ ಬರ್ಥಡೆ ಎಷ್ಟ ಸರತೆ ಬರತದ..’ – ಪ್ರಶಾಂತ್ ಆಡೂರ್
- ಪ್ರಶಾಂತ್ ಆಡೂರ್ ಇದ ನಂದ ಲಗ್ನ ಆದ ವೆರಿ ನೆಕ್ಸ್ಟ ಇಯರದ್ದ ಮಾತ, ಆ ವರ್ಷ ನನ್ನ ಹೆಂಡತಿದ ಅತ್ತಿ ಮನ್ಯಾಗ ಅಂದರ ನಮ್ಮ ಮನ್ಯಾಗ ಮೊದ್ಲನೇ ಬರ್ಥಡೆ ಬಂತ. ಹಂಗ ಅಕಿಗೆ ಅವರವ್ವನ ಮನ್ಯಾಗ ಇಷ್ಟ ದೊಡ್ಡೊಕಿ ಆದರು ವರ್ಷಾ ಬರ್ಥಡೆ ಸೆಲೆಬ್ರೇಶನ್ ಮಾಡಿಸ್ಗೊಳೊ ಪದ್ಧತಿ ಇತ್ತ. ಅವರಪ್ಪಂತೂ "ನಮ್ಮ ಅವ್ವಕ್ಕ ಎಷ್ಟ ದೊಡ್ಡೊಕಿ ಆದರ ಏನರಿ...
ಎಚ್ ಎಸ್ ವಿ ಅವರಿಗೆ ೭೦ನೆಯ ಹುಟ್ಟುಹಬ್ಬದ ಸಂಭ್ರಮ
ಕಾಜೂರ್ ಸತೀಶ್ ಅನುವಾದಿಸಿದ ಮಲಯಾಳಂ ಕವನ
ಛಾಯೆ ಕಾಜೂರ್ ಸತೀಶ್ ಮೊದಲ ಸಲ ಮನೆಗೆ ಬಂದ ಗೆಳೆಯ ಗೋಡೆಗೆ ನೇತುಹಾಕಿದ ನನ್ನ ಹಳೆಯ ಭಾವಚಿತ್ರ ನೋಡಿ ಕೇಳಿದ : 'ನಿನ್ನ ತಮ್ಮನಲ್ವಾ?' "ಹೌದು" "ಅಲ್ಪ-ಸ್ವಲ್ಪ ನಿನ್ನದೇ ಮುಖ, ಅಡ್ಡಾದಿಡ್ಡಿ ಸರಿದ ನಿನ್ನಂಥದ್ದೇ ಕೂದಲು, ನಿನಗಿಂತಲೂ ಸವಿನೆನಪುಗಳ ಹೊತ್ತ ಮುಖಭಾವ, ನಿನ್ನಷ್ಟು ಗುಳಿಬೀಳದ ಕಣ್ಣುಗಳು , ನಿನಗಿಂತಲೂ ಚೆಲುವ..." ಅವನ...
ಎಂ ಎಸ್ ಮೂರ್ತಿ ಬರೆದ ಜಲವರ್ಣ ಕವಿತೆಗಳು
ಎಂ ಎಸ್ ಮೂರ್ತಿ ಇಲ್ಲಿ ಎಂ ಎಸ್ ಮೂರ್ತಿಯವರು ರಚಿಸಿದ ಕೆಲವು ಜಲವರ್ಣ ಚಿತ್ರಗಳಿವೆ. ಜಲವರ್ಣ ಚಿತ್ರಗಳಿಗಿಂತ ಮಿಗಿಲಾಗಿ ಇವು ಜಲವರ್ಣ ಕವಿತೆಗಳು ಅನ್ನಿಸುತ್ತವೆ. ನೀವೂ ಒಮ್ಮೆ ನೋಡಿಬಿಡಿ : ...
ಜುಗಾರಿ ಕ್ರಾಸ್ : ಇದಕ್ಕೆ ನೀವೇನಂತೀರಿ?
ನಿನ್ನೆ ಫೇಸ್‌ಬುಕ್ಕಿನಲ್ಲಿ ಕಂಡ ವಾಕ್ಯಗಳು ಇವು. ಇವು ಇಲ್ಲಿರುವ ಪ್ರಶ್ನೆಗಳಿಗಿಂತಲೂ ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಿವೆ ಅನ್ನಿಸಿತು. ಇರಲಿ, ಇದಕ್ಕೆ ನೀವೇನಂತೀರಿ? ಎನ್ ಶಂಕರ್ ಕೆಂಚನೂರು -ಪೇಟೆಯಲ್ಲಿದ್ದು ಹಳ್ಳಿಯ ನೆನಪಿನಲ್ಲಿ ಹಳಹಳಿಸುವುದು -ಪರದೇಶದಲ್ಲಿ ಇದ್ದುಕೊಂಡು ದೇಶದ ಮಹಾತ್ಮೆಯನ್ನು ಕೊಂಡಾಡುವುದು -ಸಮಾಜದಿಂದ...
ಅಜ್ಜಮ್ಮ ಅಂದ್ರೆ ಆ ಪ್ರೀತಿನೆ ಬೇರೆ ಬಿಡ್ರಿ..
ಅಜ್ಜಿಲೋಕದ ಕಕ್ಕುಲತೆಯ ಜೀಕು..! - ವಿಜಯಕಾಂತ ಪಾಟೀಲ ಇದ್ದಾಗ ಇದ್ದವರೆಲ್ಲರ ಚಿಂತೀ ಹಿಡಕೊಂಡು ಒಜ್ಜಿಯಾಗಿ ಕಾಣುತ್ತಿದ್ದ ಅಜ್ಜಿ, ಉಸುರು ನಿಂತಾಗ ಮಾತ್ರ ಹಗುರಾಗಿದ್ದಳು... ನನ್ನಪ್ಪನ ಅಮ್ಮ ಪುಟ್ಟಜ್ಜಿ ತೀರಿಕೊಂಡಾಗ `ಅಜ್ಜಿಯ ಸಾವು' ಎಂಬ ಕವಿತೆಯೊಂದರ ಮೊದಲ ಸಾಲುಗಳಲ್ಲಿಯೇ ನಾನು ನನ್ನಜ್ಜಿಯನ್ನು ತುರಿದು `ಮಸರಗಾಯಿ ಬಜ್ಜಿ'...
'ಒಂದು ಮುತ್ತಿನ ಕಥೆ' – ಗುಬ್ಬಚ್ಚಿ ಸತೀಶ್
ಗುಬ್ಬಚ್ಚಿ ಸತೀಶ್ ಅವಳ ಹೆಸರು ಪೃಥ್ವಿ. ಪೃಥ್ವಿ ಎಂದ ಮೇಲೆ ಕೇಳಬೇಕೆ? ಪೃಥ್ವಿಯಷ್ಟೇ ಸುಂದರವಾಗಿದ್ದಳು. ಗೆಳೆಯ ಮೋಹನ ನನಗೆ ಅವಳನ್ನು ಮೊದಲ ಬಾರಿಗೆ ತೋರಿಸಿದಾಗ, ಆ ಕ್ಷಣವೇ ನಾನವಳ ಸುತ್ತಾ ಒಂದು ರೌಂಡು ಹೊಡೆದಿದ್ದೆ. ಮೋಹನ ನನ್ನ ಜೀವದ ಗೆಳೆಯ. ಗೆಳೆಯರೆಂದರೆ ಕಡಲತಡಿಯ ಮುತ್ತುಗಳೆಂದೇ ನನ್ನ ಭಾವನೆ. ಅಂತಹದರಲ್ಲಿ ಜೀವದ...
