ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಳಿನ ಬರೆದ ಸಣ್ಣಕಥೆ ’ಮುದ್ದು ಹುಡುಗಿ’
ನಳಿನ ಈ ಕತೆ ಬರೆಯದಿದ್ದರೆ ಸತ್ತೇ ಹೋಗುತ್ತೇನೆ. ಸುಮ್ಮನೇ ಕೇಳಿ... ನನಗೆ ಬುದ್ಧಿ ಬಂದಂದಿನಿಂದಲೂ ನಾನು ಹೀಗೇಯೇ ಇದ್ದೇನೆ, ಸಾಮಾನ್ಯವಾಗಿ ನಾವು ತಿನ್ನದಿರುವ ಮಾಂಸಾಹಾರದ ಬಗ್ಗೆ ಗೊತ್ತಿಲ್ಲದಿದ್ದರೂ, ತಿನ್ನುವ ಸಿಹಿತಿನಿಸುಗಳನ್ನೆಲ್ಲಾ ಸ್ವಲ್ಪ ಹೆಚ್ಚಾಗಿ ತಿನ್ನುವ ನನಗೆ ಮೈಕಟ್ಟು ಗುಂಡಾಗಿಯೇ ಇದೆ. ನನ್ನ ಲೋಕದಲ್ಲಿ ನನ್ನ...
ಜುಗಾರಿ ಕ್ರಾಸ್ : ಬುರ್ಖಾ ಧರಿಸಲು ಇಷ್ಟವಿಲ್ಲದ ಹೆಣ್ಣಿನ ಸಂವೇದನೆಯನ್ನೂ ನಾವು ಗೌರವಿಸೋಣ
ಸಿದ್ದಯ್ಯ ಚಿಕ್ಕಮಾದೇಗೌಡ ಬೂರ್ಖಾ ಹಾಕುವುದು ಸರಿಯೋ ತಪ್ಪೋ ಎಂದು ನಾನು ಇಲ್ಲಿ ವಾದಿಸುತ್ತಿಲ್ಲ. ಅದು ಅವರ ಇಚ್ಚೆಗೆ ಬಿಟ್ಟಿದ್ದು. ಬಿ ಎಂ ಬಶೀರ್ ರವರ ಸ್ವಷ್ಟತೆಯಿಲ್ಲದ ಬರಹಕ್ಕೆ ನನ್ನ ಪ್ರತಿಕ್ರಿಯೆಯಷ್ಟೆ. ಬಿ ಎಂ ಬಶೀರ್ ರವರು “ ಒಂದೆಡೆ ಬರೆಯುತ್ತಾರೆ, “ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು...
ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ : ಒಲವು ನಿಲುವು – ಬಿ ಎಂ ಬಶೀರ್
ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ: ಒಲವು ನಿಲುವು ಬಿ ಎಂ ಬಶೀರ್ ‘ಮುಸ್ಲಿಮ್ ಹೆಣ್ಣು ಮಕ್ಕಳು ಮಸೀದಿಗೆ ನಮಾಝ್‌ಗೆ ಹೋಗುವುದರ ಕುರಿತಂತೆ ನೀನ್ಯಾಕೆ ಮಾತನಾಡುವುದಿಲ್ಲ....?’ಎಂದು ಕೆಲವು ಗೆಳೆಯರು ನನ್ನ ಹಣೆಗೆ ಪಿಸ್ತೂಲ್ ಒತ್ತಿ ಕೇಳುತ್ತಿದ್ದಾರೆ. ಹೀಗೆಂದು ಕೇಳಿದವರಲ್ಲಿ, ಹೆಣ್ಣು ಮಕ್ಕಳು ತಲೆವಸ್ತ್ರ ಹಾಕಿ ಶಾಲೆಗೆ...
ಕೆ ವಿ ಸುಬ್ಬಣ್ಣ ಆಪ್ತ ಮಂದಿರದಲ್ಲಿ
ಕೆ ವಿ ಸುಬ್ಬಣ್ಣ ಆಪ್ತ ಮಂದಿರದಲ್ಲಿ ಕನ್ನಡ ನಾಟಕ ’ಲಂಕೇಶರ ಆಕ್ರಾಂತರು’ ಮತ್ತು ’ಮಲೆಗಳಲ್ಲಿ ಮದುಮಗಳು’ ಸಾಕ್ಷ್ಯ ಚಿತ್ರ KVS presents Kannada play, "Lankeshara Aakrantharu" directed by Krishnappa.L 13th of September, Saturday at 6PM and documentary film, Kuvempu's "Malegalalli...
’ಜೊತೆ ಬಾಳಬೇಕಾದವರ ಕ್ಷಣಗಳನ್ನು ಕಿತ್ತುಕೊಳ್ಳುವ ಹಕ್ಕು ನಮಗಿದೆಯ..’ – ಹೇಮಲತಾ
ಹೇಮಲತಾ ಅದು ಎಲ್ಲರ ಮನೆಯ ಸಾಮಾನ್ಯ ಸಮಸ್ಯೆಯೇ ಆದರು ಅವತ್ತು ಅಳುತ್ತಾ ಬಂದ ಗೆಳತಿಯನ್ನು ಕಂಡ ಎಂತಹವರಿಗೂ ಸಂಕಟವಾಗುವಂತಿತ್ತು .ಓದಿನಲ್ಲಿ ಅಷ್ಟೇನೂ ಜಾಣೆ ಅಲ್ಲದ್ದಿದ್ದರು ಪ್ರಾಮಾಣಿಕ ಪರಿಶ್ರಮವನ್ನಂತು ವಹಿಸುತ್ತಿದ್ದಳು .ಅದಾದಾಗಲೂ ಬಹಳ ದಿನಗಳವರೆಗೂ ಕೆಲಸ ಸಿಗದೇ ಹತಾಶೆ, ಸೋಲು , ಮನೆಯ ಆರ್ಥಿಕ ಒತ್ತಡಗಳಲ್ಲಿ ಮಾನಸಿಕವಾಗಿ...
ಓದು ಜನಮೇಜಯ : 'ಕಳ್ಳ ಕಳ್ಳ ಹಿಡಿಯಿರಿ'!
(ಇಲ್ಲಿಯವರೆಗೆ) ವರ್ಲ್ಡ್ ಕಲ್ಚರ್ ( ವಿಶ್ವ ಸಂಸ್ಕೃತಿ ) ಒಳಗೆ ಪ್ರವೇಶಿಸುವ ಕುತೂಹಲ ತೀವ್ರವಾಗಿದ್ದರೂ ಹಳ್ಳಿಯಿಂದ ಬಂದ ನನಗೆ ಹಿಂಜರಿಕೆಯೂ ಬಹಳವಾಗಿತ್ತು . ಆ ಸಂಸ್ಥೆಯ ಹೆಸರೇ ಇದರಲ್ಲಿ ನಮಗೆ ಪ್ರವೇಶವಿದೆಯೇ ಎಂಬ ಪ್ರಶ್ನೆಯನ್ನು ಹಾಕುತ್ತಿತ್ತು. ಇನ್ನು ಕಟ್ಟಡವೂ ಕೂಡ . ಕೆಲ ದಿನ ಅದರ ಮುಂದೆಯೇ ತಮ್ಮ ಮೆಚ್ಚಿನ ಹುಡುಗಿಯರ...
’ನನ್ನ ಸ್ನೇಹಿತನಂತಹ ಗಣೇಶ’ – ಶ್ರೀದೇವಿ ಕೆರೆಮನೆ
ಅವರವರ ಭಾವಕ್ಕೆ -ಶ್ರೀದೇವಿ ಕೆರೆಮನೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಮುಗಿಸಿದ್ದೇವೆ. ನಾನು ಚತುರ್ಥಿಯಂದು ಕನಿಷ್ಟ ಐದು ಗಣಪತಿಯನ್ನಾದರೂ ನೋಡಿದ ಮೇಲೆಯೇ ಊಟ ಮಾಡುವುದು ಎನ್ನುವ ಆಸ್ತಿಕರಿಂದ ಹಿಡಿದು ಒಂದೂ ಗಣಪತಿಯನ್ನೇ ನೋಡದ ನಾಸ್ತಿಕ ಎನ್ನಲಾಗದಿದ್ದರೂ ಆಸಕ್ತಿ ತೋರದವರನ್ನೂ ನೋಡಿದ್ದೇನೆ. ಗಣಪತಿಯನ್ನು ನೋಡುವುದು...
ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಡನೆ ದಿನಾಂಕ 7, 8 ಮತ್ತು 9ನೇ ನವೆಂಬರ್ 2014ರಂದು ಮೂರು ದಿನಗಳ ಅವಧಿಯ ಕಥಾ ಕಮ್ಮಟವನ್ನು ಕುಪ್ಪಳ್ಳಿಯಲ್ಲಿ ಆಯೋಜಿಸಿದೆ. ಕತೆಗಳ ಮೂಲಕ ಬೇರೆ ಬೇರೆ ಲೋಕಗಳ ಅರಿವು ಮತ್ತು ಸಾಂಸ್ಕೃತಿಕ ಜಿಜ್ಞಾಸೆ ನಡೆಸುವುದು ಈ ಕಮ್ಮಟದ ಉದ್ದೇಶ. ಖ್ಯಾತ...
’ಹೊತ್ತಿ ಉರಿದ ಬೂದಿಯಿಂದೆದ್ದು ಬರುವವರಲ್ಲಿ…’ ವಸುಧಾ ಕವಿತೆ
'ಆಳದೊಳಗಣ ಅರಿವು' - ವಸುಧಾ ರವೀಂದ್ರ ಹಿರಿಮೆ ಹೆಗ್ಗಳಿಕೆ; ಒಡಲು ಕೆಂಡದ ಮಳಿಗೆ; ಇದಿರು ಮುಗ್ದತೆಯ ಪರದೆ. ನೆರೆಮನೆಗೆ ಕಿಚ್ಚ ತಗುಲಿಸಿ ಹರಿವ, ಹರ್ಶದ ಹೊಳೆ. ಇದ್ದರು ಕಾಣದದು ಕಿಸುರು ಕೆಸರಿನ ಮಡಕೆ. ಮುಚ್ಚಿ ಮಚ್ಚಳ ಮೇಲೆ ತತ್ವ ಶಾಸ್ತ್ರಗಳ, ಹೊದಿಕೆ. ತಣ್ಣಗಿನ ಜಲ ಆವಿಯಾಗುವುದದರ, ಶಾಖಕ್ಕೆ....
ಮದುವೆಯ ಈ ಬಂಧ ಅನುರಾಗದ ಅನುಬಂಧ…
- ಮಂಜುನಾಥ್ ಧಾರವಾಡ ಹೀಗೆ ಒಂದು ರವಿವಾರ ರಜಾದಿನವಾದ್ದರಿಂದ, ಮನೇಲಿ ಕುಳಿತಿದ್ದೆ, ಹಿಂದೆ ಆಕಾಶವಾಣಿಯಲ್ಲಿ ಮಧುರವಾದ ಗೀತೆಯೊಂದು ಕೇಳಿಸುತ್ತಿತ್ತು, "ಮದುವೆಯ ಈ ಬಂಧ ಅನುರಾಗದ ಅನುಬಂಧ…..", ನನ್ನ ಅಮ್ಮ ಬಂದು ಬೇಗ ಎದ್ದು ರೆಡಿಯಾಗು ಹೆಣ್ಣು ನೋಡೋಕೆ ಹೋಗಬೇಕು ಅಂದರು. ನಾನಾಗ ಏಳನೆ ಕ್ಲಾಸಿನಲ್ಲಿ ಓದುತ್ತಾ ಇದ್ದೆ. ಅಬ್ಬಬ್ಬಾ...
ರಂಗಶಂಕರದಲ್ಲಿ ’ಬರ’
ಜುಗಾರಿ ಕ್ರಾಸಿನಲ್ಲಿ 'ಬುರ್ಖಾ ಮತ್ತು ಮಹಿಳಾ ಸಬಲೀಕರಣ'
'ಬುರ್ಖಾ ಮತ್ತು ಮಹಿಳಾ ಸಬಲೀಕರಣ' ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದ ಒಳಗೆ ಮತ್ತು ಹೊರಗೆ ಚರ್ಚೆಗಳು ನಡೆಯುತ್ತಿವೆ. ಈ ವಿಷಯದ ಬಗ್ಗೆ ಎರಡು ಬರಹಗಳು ಇಲ್ಲಿವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ದಯವಿಟ್ಟು ಗಮನಿಸಿ, ಇಲ್ಲಿ ಚರ್ಚೆ ವಸ್ತು ಪ್ರಧಾನವಾಗಿರಲಿ, ಅವಹೇಳನ ಬೇಡ. *** ಬಿ ಎಂ ಬಶೀರ್ ಸೆಪ್ಟೆಂಬರ್ ೫ರಂದು ಮಂಗಳೂರಿನಲ್ಲಿ...
ತೇಜಸ್ವಿಯ ’ಮಾಯಾಲೋಕ’ದಲ್ಲಿ ಕಂಡವರು…
’ಅವಿರತ’ ಆಯೋಜಿಸಿದ್ದ ’ತೇಜಸ್ವಿಯ ಹೆಜ್ಜೆ ಗುರುತು’ ಹಾದಿಯಲ್ಲಿ ಕಂಡವರು... ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಕೃಪೆ : ಹರೀಶ್ [gallery link="file" columns="4"...
ಓದು ಜನಮೇಜಯ : ನ್ಯಾಶನಲ್ ಹೈಸ್ಕೂಲಿನಲ್ಲಿ ಸಿಕ್ಕ ಪುಸ್ತಕಗಳು
(ಇಲ್ಲಿಯವರೆಗೆ...) ನನ್ನ ಮುಖ್ಯಮಂತ್ರಿ ಪಟ್ಟವನ್ನು ನಾನು ಕೇವಲ ಆರು ತಿಂಗಳಲ್ಲಿಯೇ ಖಾಲಿ ಮಾಡಬೇಕಾಯಿತು. ನಾನು ರಾಜೀನಾಮೆ ನೀಡದೆಯೇ ಮತ್ತು ನನ್ನ ವಿಶ್ವಾಸ ಮತ ಪಡೆಯಲು ಆದೇಶ ಇಲ್ಲದೆಯೇ ಮತ್ತು ಸೋಲಾಗದೆಯೇ . ನಮ್ಮ ತಂದೆಯವರಿಗೆ ಆರು ತಿಂಗಳ ತರಬೇತಿಗೆಂದು ಗಂಗಾವತಿಗೆ ಕಳುಹಿಸಿದ ಪರಿಣಾಮ ನಾವು ಮತ್ತೆ ಊರು ಬಿಡಬೇಕಾಯಿತು....
'ಪೂಜೆಗೆ ಬರಲೊಲ್ಲದ ಪುರೋಹಿತರಿಗೆ ಶಿಕ್ಷೆ ಸಲ್ಲುವುದೇ?' – ನಾ ದಿವಾಕರ್
ನಾ ದಿವಾಕರ್ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ವೈಶಿಷ್ಟ್ಯ ಎಂದರೆ ಇಲ್ಲಿ ಜನ್ಮತಃ ಅಂಟಿಕೊಂಡೇ ಬರುವ ಜಾತಿ ಅಸ್ಮಿತೆ, ಈ ಅಸ್ಮಿತೆಯೊಂದಿಗೆ ಸಮೀಕರಿಸುವ ಕಸುಬು, ಜನ್ಮ ಕುಂಡಲಿಯಿಂದಲೇ ಒದಗುವ ಅಧಿಪತ್ಯ ಮತ್ತು ಈ ವ್ಯವಸ್ಥೆಯನ್ನು ನಿಯಂತ್ರಿಸುವ ಹಿತಾಸಕ್ತಿಗಳ ಪಾರುಪತ್ಯ ಈ ನಾಲ್ಕೂ ವಿದ್ಯಮಾನಗಳು ಸಮಾಜದ ಸುತ್ತ ಒಂದು ಭದ್ರ...
’ನೂರೆಂಟು ಪಿಸುಮಾತು….’ – ಸೌಮ್ಯ ಕವಿತೆ
- ಸೌಮ್ಯಾ ಕೆ ಆರ್ ಗುಬ್ಬಚ್ಚಿಯ ಮರಿಗಳಂತೆ ಸದಾ ಒಳಗೊಳಗೆ ಚಿಲಿಪಿಲಿಗುಟ್ಟುವ ಪಿಸುಮಾತುಗಳು ಒಂದಲ್ಲ ಎರಡಲ್ಲ ನೂರೆಂಟು... ಅವೆಲ್ಲವೂ ಮನದಾಳದಿ ಆರ್ಭಟಿಸಿ, ಭೋರ್ಗರೆಯುತ್ತಿವೆ ನಿನಗಾಗಿ, ನೀ ಬರುವ ದಾರಿಗಾಗಿ ಅಸಹಾಯಕತೆ ಅಡಗಿ ಕುಳಿತಿದೆ ನಿನ್ನ ಎದೆಯುಸಿರ ಏರಿಳಿತದ ಸದ್ದು ಕದ್ದು ಕೇಳಿಸಿಕೊಳ್ಳಲು ಆಗದೆ ಮನ ಪರಿತಪಿಸುತ್ತಿದೆ...
ಮಿಸ್ ಮಾಡಬೇಡಿ ’ಇಂಗಳೆ ಮಾರ್ಗ’
ಆರ್ ಜಿ ಹಳ್ಳಿ ನಾಗರಾಜ್ "ಇಂಗಳೆ ಮಾರ್ಗ" ಬೆಳಗಾವಿ, ಅಥಣಿ, ರಾಯಭಾಗ ಮೊದಲಾದ ಕನ್ನಡ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಚಿತ್ರ. ಇದರ ಮೂಲ ಕತೆ ಕವಿ ಪತ್ರಕರ್ತ ಗೆಳೆಯ ಡಾ. ಸರಜೂ ಕಾಟ್ಕರ್. ಇದು ಚಲನಚಿತ್ರ ಆಗಲು ಗೆಳೆಯನ ಪ್ರಯತ್ನವೂ ಇದೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಸಾಹಿತ್ಯ ಹಾಗು ಹಾಡುಗಳನ್ನು ಇನ್ನೊಬ್ಬ ಕವಿ ಬಂಡಾಯ...
ಪಿ ಆರ್ ತಿಪ್ಪೇಸ್ವಾಮಿ ಕಲಾಸಂಭ್ರಮಕ್ಕೆ ಸ್ವಾಗತ
ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ತಾಳಿ ಅಂದ್ರೆ ತಮಾಷೇನೇ ಅಲ್ಲ
“ಆಗಿದ್ದಾಯ್ತು. ಹುಡುಗಿಗಿನ್ನೂ ಚಿಕ್ಕ ವಯಸ್ಸು ಇನ್ನೊಂದು ಮದುವೆ ಮಾಡಿ” ಮೂರೇ ದಿನಕ್ಕೆ ಓಡಿಹೋದ ಗಂಡನ ನೆನದು ಅಳುತ್ತಿದ್ದ ಹುಡುಗಿಗೂ, ಅವಳಪ್ಪ, ಅಮ್ಮನಿಗೂ ಸಮಾಧಾನಿಸುತ್ತಾ ಹೇಳಿದೆ. “ಐ ಅಂಗೂ ಉಂಟಾ? ಸಿಟಿಗಳಲ್ಲಾದ್ರ ಅದೊಂತರ, ಹೆಂಗಾರೂ ನಡೆದೋಯ್ತದ. ಹಳ್ಳಿಲಿ ಹಂಗೆಲ್ಲ ಮಾಡಕಾದ್ದ? ಮಾನಗೆಟ್ ಮೂದೇವ್ಗಳು ಅಂತ ಜನ ಆಡ್ಕಂಡ್...
ಓದು ಜನಮೇಜಯ : ಮಾಸ್ತಿಯವರು ಓದಿದ ಶಾಲೆಯಲ್ಲಿ ಮುಖ್ಯಮಂತ್ರಿಯಾದದ್ದು!
(ಇಲ್ಲಿಯವರೆಗೆ...) " ನಮ್ಮ ಊರಿನ ಪಂಚಾಯತಿ ಲೈಬ್ರರಿಯಲ್ಲಿ ಎಷ್ಟೊಂದು ಕಥೆ ಪುಸ್ತಕಗಳಿವೆ ಗೊತ್ತಾ " ಇದು ನನ್ನ ಸ್ನೇಹಿತನೊಬ್ಬ ಅವರ ಊರಿಗೆ ನನ್ನನ್ನು ಸೆಳೆಯಲು ಒಡ್ಡಿದ ಆಮಿಷ. ಅವನ ಊರಿನಲ್ಲಿ ಇದ್ದು ಓದಿದರೆ ಅವನ ಅಜ್ಜಿ ಮುದ್ದು ಮಾಡಿ ಕೆಡಿಸುತ್ತಾಳೆಂದು ಅವರ ಅಪ್ಪ ನಮ್ಮ ಮನೆಯಲ್ಲಿ ಬಿಟ್ಟಿದ್ದರು. ನಮ್ಮ ಮನೆಯಲ್ಲಿಯೇ ಇದ್ದು...
’ಅಪರಂಜಿ’ಯಲ್ಲಿ ಕಾವ್ಯ ಕಾಜಾಣ
ಭಾನುವಾರ ’ಅಪರಂಜಿ’ಯಲ್ಲಿ ಕಾವ್ಯ ಕಾಜಾಣದ ವತಿಯಿಂದ ಮಹಿಳಾ ಕವಿಗೋಷ್ಠಿ ನಡೆಯಿತು ಹೇಮಾ ಪಟ್ಟಣಶೆಟ್ಟಿ, ಎಂ ವಿ ವಸು, ಸಿ ಎಚ್ ಭಾಗ್ಯ, ವೆಂಕಟೇಶ್ ಜಿ, ಕಾಜಾಣದ ರೂವಾರಿ ಬೇಲೂರು ರಘುನಂದನ್ ಮುಂತಾದವರು ಭಾಗವಹಿಸಿದ್ದ ಈ ಕವಿಗೋಷ್ಠಿಯ ಕೆಲವು ಚಿತ್ರಗಳು ನಿಮಗಾಗಿ : ಚಿತ್ರ ಕೃಪೆ : ವೆಂಕಟೇಶ ಜಿ ಗೋವಿಂದಯ್ಯ ಚಿತ್ರಗಳನ್ನು ದೊಡ್ಡದಾಗಿ...
