ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೇಶದ ಸಾಲವ ಹೆಗಲಿಗೆ ಹೊತ್ತ..
ಜನ ಗಣ ಮನ --ಅಕ್ಕಿಮಂಗಲ ಮಂಜುನಾಥ ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿಧಾತ ರೈತನ ಬಾಳಿನ ಭಾಗ್ಯವು ಖೋತ ಎಲ್ಲಾ ರಂಗದಿ ಸೋತ ದುಡಿವನು ಹೆಂಡತಿ ಮಕ್ಕಳ ಸಹಿತ ಲಾಭವ ಭ್ರಮಿಸುತ ಸತತ ಅನ್ನುವ ನೀಡುವನೆಂದೇ ಪ್ರಖ್ಯಾತ ಹಸಿವೆಗೆ ಅವನೇ ಅತ್ತ ವಾಸ್ತವ ವಿಷಯ ಏನಿದೆ ಗೊತ್ತಾ? ಸತತವೂ ಇವನು ಪತಿತ. 'ರೈತನ ಬದುಕು ಬಲು ಬಲು...
ಶಬ್ದಗಳ ಗೊಂದಲ, ಓದುಗ ವಿಲವಿಲ
-ಮಹೇಶ ಕಲಾಲ ಯಾದಗಿರಿ ಪತ್ರಿಕಾರಂಗ ಈಗ ಕಳೆಕಳೆದುಕೊಳ್ಳುತ್ತಾ ಉದ್ಯಮವಾಗಿ ಪತ್ರಿಕೋಧ್ಯಮವಾದಂತೆಲ್ಲ ಅದರಲ್ಲಿ ಭಾಷೆಯ ಬಳಕೆ ಕೂಡ ಭಿನ್ನ ವಿಭಿನ್ನವಾಗುತ್ತಿದೆ. ಸಾಹಿತ್ಯೀಕ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಓದುಗನ ಅಭಿರುಚಿಗಿಂತ ತಮ್ಮ ತಮ್ಮ ಶೈಲಿಯಲ್ಲಿ ಭಾಷೆಯ ಪದ ಬಳಕೆ ಈಗ ಹೆಚ್ಚಾಗುತ್ತಿದೆ ಆದ್ದರಿಂದ ಈ...
ರಂಗಶಂಕರದಲ್ಲಿ ’ಆತಂಕವಾದಿಯ ಆಕಸ್ಮಿಕ ಸಾವು’
’ನಟನ’ ದಸರಾ ಸಡಗರ
ಕೆ ವಿ ತಿರುಮಲೇಶ್ ಕರೆತಂದ ಶೇಕ್ಸ್‌ಪಿಯರ್
ಕೆ ವಿ ತಿರುಮಲೇಶ್ `ಈ ಇಂಥ ರಾತ್ರಿ' ಮೂಲ: ವಿಲಿಯಂ ಶೇಕ್ಸ್‌ಪಿಯರ್: In such a night [ಇದು ವಿಲಿಯಂ ಶೇಕ್ಸ್‌ಪಿಯರ್ ನ Merchant of Venice ನಾಟಕದ ಕೊನೆಯ ಅಂಕದಲ್ಲಿ ಬರುವ ''In such a night'' ಎಂಬ ಪದ್ಯಭಾಗ. ಲೋರೆಂಝೋ ಎಂಬ ತರುಣ ಮತ್ತು ಜೆಸ್ಸಿಕಾ ಎಂಬ ತರುಣಿ ಪ್ರಣಯಿಗಳು. ಜೆಸ್ಸಿಕಾ ಶೈಲಾಕ್ನ ಮಗಳು....
’ಜಿ ಕೆ ವೆಂಕಟೇಶ್ ಎಂಬ ಸಂಗೀತದ ಅವಧೂತ’ – ಎನ್ ಎಸ್ ಶ್ರೀಧರ ಮೂರ್ತಿ
- ಎನ್ ಎಸ್ ಶ್ರೀಧರ ಮೂರ್ತಿ ಭಾರತೀಯ ಚಿತ್ರಸಂಗೀತಕ್ಕೆ ಹೊಸತನವನ್ನು ನೀಡಿದ ಸಂಗೀತ ನಿರ್ದೇಶಕರು ಜಿ.ಕೆ.ವೆಂಕಟೇಶ್. ಸಂಗೀತ ನಿರ್ದೇಶಕರೆಂದರೆ ಹಾಡುಗಳಿಗೆ ಸ್ವರಸಂಯೋಜಿಸುವವರು ಮಾತ್ರ ಎಂಬ ಮನೋಭಾವವಿದ್ದಾಗ ಇಡೀ ಚಿತ್ರವನ್ನು ಸಂಗೀತದ ಮೂಲಕ ಪ್ರಬುದ್ಧಗೊಳಿಸುವ ಧ್ವನಿ ವಿನ್ಯಾಸವನ್ನು ರೂಪಿಸಿದ ಅವರು ಚಲನಚಿತ್ರದ ಸಾವಯವ ಬಂಧದ...
'ಬಾರದ ಮಳೆ ಬಂದು' – ಸಣ್ಣ ಕಥೆ
ತಿರುಪತಿ ಭಂಗಿ ಆ ವರ್ಷ ನಿಸರ್ಗ ದೇವಿ ಮುನಿಸ್ಕೊಂಡಿದ್ಳು. ಮಳೆ ಮಿತಿಮೀರಿ ಸುರಿದು ಹಳ್ಳ-ಕೊಳ್ಳ , ಬಾವಿ,ಕೆರೆ ಕಟ್ಟೆ ತುಂಬಿ ದೇವರ ಹಳ್ಳಿ ಸುತ್ತಲೂ ನೀರು ಸುತ್ತುವರೆದಿತ್ತು. ಮನೆ ಅಂಗಳದಲ್ಲಿ ಮನಕಾಲ ಮಟಾನೀರು , ಈ ಊರಿನ ಸಹಾಯಕ್ಕೆ ಸರಕಾರ ಮನಸು ಮಾಡಲಿಲ್ಲ. ಅನೇಕರು ಮನೆ ಕುಸಿದು ಜೀವಂತ ಶವವಾದ್ರು , ಅನೇಕರಿಗೆ ವಿಪರೀತ ಜಡ್ಡು...
’ಸ್ವಯಂ ರತಿಯತ್ತ ವಾಲುತ್ತಿದ್ದೇವೆಯೇ ನಾವು?’ – ಶ್ರೀದೇವಿ ಕೆರೆಮನೆ
ತಮ್ಮ ಬೆನ್ನು ತಾವೇ ತಟ್ಟುಕೊಳ್ಳುವವರು ಶ್ರೀದೇವಿ ಕೆರೆಮನೆ ನೀವ್ಯಾಕೆ ಇನ್ನೂ ನಿಮ್ಮ ಪ್ರೊಪೈಲ್ ಫೋಟೋ ಛೇಂಜ್ ಮಾಡಲಿಲ್ಲ ಕೆಲವು ದಿನಗಳ ಹಿಂದೆ ಯಾರೋ ಫೇಸ್ ಬುಕ್ ಸ್ನೇಹಿತರು ಕೇಳುತ್ತಿದ್ದರು. ಅದಕ್ಕೆ ಇನ್ನೂ ಇನ್ನೂರರ ಮೇಲೆ ಲೈಕ್ ಬರಲಿಲ್ಲ ನಾನು ತಮಾಶೆಯಾಗಿ ನುಡಿದೆ. ಅಂದ್ರೆ? ಅವರಿಗೆ ಆಶ್ಚರ್ಯ. ನನಗೆ ಮುವತ್ತರಿಂದ ನಲವತ್ತು...
ಕುಂದಾಪುರದಲ್ಲಿ ’ಅನಂತ ಪ್ರಜ್ಞೆ’
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಆಯರಳ್ಳಿಗೂ ಬಂತು ಸುನಾಮಿ ಕಾಸು
ಭೂತಾಳೆ ನಾರು. ಮತ್ತು ಕಡ್ಡಿಗಳನ್ನ ಉಪಯೋಗಿಸಿಕೊಂಡು ಮಂದಲಿಗೆ ನೇಯುತ್ತಿದ್ದ ನಮ್ಮೂರ ನೇಕಾರರು. ಪ್ಲಾಸ್ಟಿಕ್ ಚಾಪೆಗಳು ಬಂದು ಹೇಗೆ ಧೂಳೀಪಟವಾದರೆಂದು ಕಳೆದವಾರ ಹೇಳಿದ್ದೆ. ಅದರ ಮುಂದುವರೆದ ಭಾಗವಿದು. ಈ ನೇಕಾರು ಕೃಷಿಕರೂ ಆಗಿದ್ದರು. ಮಳೆ ಆಶ್ರಿತ ಕೃಷಿ. ವರ್ಷಪೂರ್ತಿ ಏನೂ ಕೆಲಸವಿರುತ್ತಿರಲಿಲ್ಲ. ಹಾಗಾಗಿ, ಕೃಷಿ ಮತ್ತು...
ಬರ್ತಿದೆ ಜೋಗಿ ಹೊಸ ಪುಸ್ತಕಗಳು
ಈ ಭಾನುವಾರ ಜೋಗಿಯವರ ಪುಸ್ತಕಗಳ ಬಿಡುಗಡೆ ಕಥಾಸಂಕಲನದ ಒಂದು ಕತೆಯ ಹೆಸರು ಖಾಲಿ ಜೇಬು, ರಾಲಿ ಸೈಕಲ್. ಅದರ ಒಂದು ಭಾಗ ’ಅವಧಿ’ ಓದುಗರಿಗಾಗಿ : ಕಾಮಾಕ್ಷಿ ಮೂಡಿಸಿದ ಕಂಪನ ಇಡಿಯೂರು ಸೇರುವ ಹೊತ್ತಿಗೆ ಕುಂಡಿ ತರಚಿಕೊಂಡಿತ್ತು. ಅಣ್ಣನ ತೊಡೆಯ ಎರಡೂ ಬದಿಗಳು ಸೈಕಲಿನ ಸೀಟಿಗೆ ವರೆಸಿವರೆಸಿ ಕೆಂಪಾಗಿದ್ದವು. ನೆಟ್ಟಗೆ ನಡೆಯವುದಕ್ಕೂ...
ಓದು ಜನಮೇಜಯ : ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..
(ಇಲ್ಲಿಯವರೆಗೆ...) ಅಂದು ಹೆಬ್ಬಾಳದಲ್ಲಿದ್ದ ಕೃಷಿ ವಿಶ್ವ ವಿದ್ಯಾನಿಲಯದ ಕೃಷಿ ಕಾಲೇಜಿಗೆ ಸೇರಿದ್ದಾಯ್ತು. ನಮ್ಮ ಮನೆಯೂ ಕೂಡ ಹೆಬ್ಬಾಳಕ್ಕೆ ಸ್ಥಳಾಂತರವಾಯಿತು. ಇದು ನನ್ನ ಓದು ಪುರಾಣದಲ್ಲಿ ಒಂದು ಮುಖ್ಯ ತಿರುವು.ಮಾತ್ರವಲ್ಲ ನನ್ನ ಜೀವನದಲ್ಲಿಯೂ . ನನ್ನ ಇಚ್ಚೆಯಂತೆ ಕನ್ನಡ ಪದವಿಗೆ ಸೇರಿದ್ದರೆ ವಾತಾವರಣವೇ ಬೇರೆಯಾಗುತ್ತಿತ್ತು....
ಸತ್ತ ಸಮಾಜದಲ್ಲಿ ಉಸಿರಾಡುತ್ತೇನೆ, ಅಪರಾದವಾಯಿತು ಕ್ಷಮಿಸಿಬಿಡಿ..
ಚಲಂ ಹೌದು ನೀವೇಳುವುದು ಸರಿ ನನ್ನ ತಲೆಯಲ್ಲಿ ಗೊಬ್ಬರ ತುಂಬಿದೆ ಅದಕ್ಕಾಗಿಯೆ ಪದ್ಯ ಬರೆಯುತ್ತೇನೆ ತುಂಬಿದ ಸಭೆಯಲ್ಲಿ ವಾಚಿಸುತ್ತೇನೆ ನಿಮ್ಮ ಅಪ್ಪಣೆ ಪಡೆಯದೇ ಪುಸ್ತಕ ಮಾಡಿ ಮಾರಲಿಕ್ಕಾಗದೇ ಹಂಚುತ್ತೇನೆ ಸತ್ತ ಸಮಾಜದಲ್ಲಿ ಉಸಿರಾಡುತ್ತೇನೆ ಅಪರಾದವಾಯಿತು ಕ್ಷಮಿಸಿಬಿಡಿ ಹೌದು ನೀವೇಳುವುದು ಸರಿ ಮಾತನ್ನೇ ಶತಶತಮಾನಗಳಿಂದ...
ಸಿಪ್-ಗಾಸಿಪ್ ಎರಡೂ ಡೇಂಜರ್ರು ಕಣ್ರೀ
ಎಚ್ ಜಿ ಮಳಗಿ ಸಿಪ್ ಹಾಗೂ ಗಾಸಿಪ್ ಎರಡೂ ಡೇಂಜರಸ್ ಜೆಂಡರ್ ಡಿಫಾಲ್ಟ್ ವಿಷಯಗಳು. ಒಬ್ಬ ಸಿಪ್ಪಣ್ಣ ಇನ್ನೊಬ್ಬಳು ಗಾಸಿಪ್ಪಮ್ಮ! ಇಬ್ಬರಿಗೂ ಅವಿನಾಭಾವ ಸಂಬಂಧ. ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರು ಗಂಟೆ ಗಾಸಿಪ್ ಸೂಪರ್ ಪ್ರೈಮ್ ಟೈಮ್. ಸಾಯಂಕಾಲ ಆರರಿಂದ ರಾತ್ರಿ ಹನ್ನೆರಡರ ವರೆಗೆ ಸಿಪ್ ಪ್ರೈಮ್ ಟೈಂ. ಗಾಸಿಪ್ಗೆ ಕೆಲವು ಲೇಡೀಜ್...
'ಭೂಮಿ' ನಾಟಕಕ್ಕೆ ಒಂದು ಪ್ರತಿಕ್ರಿಯೆ
ಕಾಲ ಬದಲಾದರೂ, ಆಶಯಗಳು ಬದಲಾಗಲಿಲ್ಲ - ವೆಂಕಟೇಶ ಜಿ ಬೇಲೂರು ರಘುನಂದನ ಅವರ ಆಧುನಿಕ ವಚನಗಳೆಂಬ ಕಟ್ಟು ಪದಗಳ ಆಧರಿಸಿದ “ಭೂಮಿ” ನಾಟಕಕ್ಕೆ ಒಂದು ಸಣ್ಣ ಪ್ರತಿಕ್ರಿಯೆ. ರಂಗ ಪ್ರಯೋಗಗಳ ಇತಿಹಾಸದಲ್ಲಿ, ಅದೂ ಹವ್ಯಾಸಿ ರಂಗಪ್ರಯೋಗಗಳಲ್ಲಿ ಕಥೆ, ಕಾದಂಬರಿಗಳ ಆಧರಿಸಿದ ನಾಟಕಗಳಾದ, ಮಲೆಗಳಲ್ಲಿ ಮದುಮಗಳು, ಕಿರುಗೂರಿನ ಗಯ್ಯಾಳಿಗಳು,...
ರಂಗಶಂಕರದಲ್ಲಿ ’ಲಜ್ಜೆ’
’ಧಿಘ’ ಬೀಚಿನಲ್ಲಿ ಶಿವು ಕಂಡ ಕೆಂಪು ಕಣಗಲೆ ಹೂಗಳು
ಶಿವು ಕೆ ೨೦೧೪ ರ ಜುಲೈ ೨೮ ಸಂಜೆ ಐದು ಗಂಟೆ ಪಶ್ಚಿಮ ಬಂಗಾಲ ರಾಜ್ಯದ ದಕ್ಷಿಣಕ್ಕಿರುವ ಮಿಡ್ನಾಪುರ ಜಿಲ್ಲೆಯ "ಧಿಘ" ಬೀಚಿನೊಳಗೆ ಕಾಲಿಟ್ಟಾಗ ಎದುರಿಗೆ ವಿಶಾಲ ಬಂಗಾಲ ಕೊಲ್ಲಿ ಸಮುದ್ರ ಶಾಂತವಾಗಿತ್ತು. ಮೇಲೆ ನೀಲಾಕಾಶವೂ ಕೂಡ ತೆಳು ಮೋಡಗಳ ಚಿತ್ತಾರದಿಂದಾಗಿ ಕಣ್ಣಿಗೆ ಮತ್ತು ಕ್ಯಾಮೆರಕ್ಕೆ ಅಪ್ಯಾಯಮಾನವೆನಿಸಿತ್ತು. ಅಲೆಗಳಿಂದ...
ಓದು ಜನಮೇಜಯ : ಫಿಸಿಕ್ಸ್ ಪರೀಕ್ಷೆಗೆ ’ತಿರುಗು ಬಾಣ’
(ಇಲ್ಲಿಯವರೆಗೆ...) ಪಿಯುಸಿಯಲ್ಲಿ ನಾನು ಎದುರಿಸಿದ ಒಂದು ಪರೀಕ್ಷೆಯ ಬಗೆಯನ್ನು ವಿವರಿಸಿದ್ದೇನೆ . ವಿಜ್ಞಾನದ ವಿದ್ಯಾರ್ಥಿಗೆ ಕನ್ನಡಕ್ಕಿಂತ ಮುಖ್ಯವಾದದ್ದು ಐಚ್ಛಿಕ ವಿಷಯವಾದ ವಿಜ್ಞಾನದ ವಿಷಯಗಳು ಅದೇ ಮುಂದಿನ ಭವಿಷ್ಯಕ್ಕೆ ತಿರುವು ಕೊಡುವಂತಹದು ಎಂದು ಎಲ್ಲರಿಗೂ ತಿಳಿದ ವಿಷಯ. ಅದಕ್ಕಾಗಿಯೇ ಎರಡು ವರ್ಷ ಪೂರ್ತಿ...
ಸಮೂಹ ಚಳುವಳಿಗೆ ನಾಯಕತ್ವ ಅಗತ್ಯವೇ?
ನಾ ದಿವಾಕರ್ ದಲಿತ ಸಾಹಿತ್ಯ ಸಮ್ಮೇಳನದ ರೂಪು ರೇಷೆಗಳು ಏನೇ ಇರಲಿ ಐದನೆಯ ಬಾರಿಗೆ ಆಯೋಜಿಸಲಾದ ಸಮ್ಮೇಳನದಲ್ಲಿ ಮುಂದಿನ ಹೆಜ್ಜೆಗಳನ್ನು ಕುರಿತ ಗಂಭೀರ ಚರ್ಚೆ ವಿಭಿನ್ನ ರೀತಿಯಲ್ಲಿ ನಡೆಯಬೇಕಿತ್ತು. ಇಂದು ದಲಿತ ಸಾಹಿತ್ಯ ಮತ್ತು ದಲಿತ ಚಳುವಳಿಯನ್ನು ಕಾಡುತ್ತಿರುವ ಪ್ರಶ್ನೆಗಳು ಹಲವಾರು. ಜಾಗತೀಕರಣದ ಭ್ರಮಾಲೋಕ, ಶೋಷಕ ವರ್ಗಗಳ...
ಎಂಥಾ ಮರುಳಯ್ಯ ಇದು ಎಂಥಾ ಮರುಳು…
http://youtu.be/X10mWHSrURg
ಹೀಗೊಂದು ಮಕ್ಕಳ ಪದ್ಯ
ಕುಂಭ ಕರ್ಣನ ನಿದ್ದೆ -ಅಕ್ಕಿಮಂಗಲ ಮಂಜುನಾಥ ಕುಂಭ ಕರ್ಣ ಕರಿಯ ಹಾಗೆ ಕಪ್ಪಗಿದ್ದನು ಮುಗಿಲಿಗಿಂಥ ಮಿಗಿಲುವಂಥ ದಪ್ಪಗಿದ್ದನು ನಿದ್ದೆಯಲ್ಲೇ ಕಳೆವ ಕಾಲ ಮಾಸಗಟ್ಟಲೆ ಎದ್ದ ಮೇಲೆ ತಿನ್ನುತ್ತಿದ್ದ ಲೋಡುಗಟ್ಟಲೆ ಅಲ್ಪ ಸುಖದಿ ಕಳೆಯುತ್ತಿದ್ದ ಕಾಲ ಎಲ್ಲವ ಊಟ-ಹೆಂಡ-ನಿದ್ದೆ ಮಾತ್ರ ಬಯಸುತ ಇವ ಜಗದ ಜನತೆ...
