ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ದಾಂಡೇಲಿ ದಸರಾ ಸೂಪರ್' ಅಂತಾರೆ ಸುಶ್ರುತಾ ದೊಡ್ಡೇರಿ
ಸುಶ್ರುತಾ ದೊಡ್ಡೇರಿ ದಾಂಡೇಲಿಯಲ್ಲಿ ದಸರಾ ತುಂಬಾ ಚನಾಗಾಗತ್ತೆ, ಬನ್ನಿ ಅಂತ ಅತ್ತೆ-ಮಾವ ಎರಡು ವರ್ಷದಿಂದ ಕರೀತಿದ್ರೂ ಹೋಗ್ಲಿಕ್ಕೆ ಆಗಿರ್ಲಿಲ್ಲ. ಈ ವರ್ಷ ಹೋಗಿದ್ವಿ. ನಡುರಾತ್ರಿಯವರೆಗಿನ ದಾಂಡಿಯಾ ನೃತ್ಯಗಳು, ಬೀದಿಬೀದಿಯಲ್ಲೂ ದೀಪಸರಗಳು, ಪರಿಸರ ಜಾಗೃತಿಯ ಬೀದಿ ನಾಟಕಗಳು, ದಾಂಡೇಲಪ್ಪನ ಜಾತ್ರೆ, ರಾವಣ ದಹನ, ಭರ್ಜರಿ ಪಟಾಕಿ...
ನವೆಂಬರ್ನಲ್ಲಿ ಕಥಾಕಮ್ಮಟ
ಕೆ ಎಚ್ ಕಲಾಸೌಧದಲ್ಲಿ ’ನಮ್ಮ ಮೆಟ್ರೋ’
ವಿದ್ಯಾ ಅನುವಾದಿಸಿದ ಖಲೀಲ್ ಗಿಬ್ರಾನ್
ದುಷ್ಟ ವಿದ್ಯಾ ರಾವ್ ಹಸಿವಿನಿಂದ ದುರ್ಬಲನಾದ ಸುಧೃಢ ಶರೀರದ ಯುವಕನೊಬ್ಬ ಹಾದಿಬದಿಯಲ್ಲಿ ಕೂತು, ಹಸಿವು ಮತ್ತು ಅಪಮಾನಗಳಿಂದ ನೋಯುತ್ತ ತನ್ನ ಜೀವನದ ಸೋಲನ್ನೇ ಹಾಡಾಗಿಸಿ ದಾರಿಹೋಕರತ್ತ ಕೈಚಾಚಿ ಭಿಕ್ಷೆ ಬೇಡುತ್ತಿದ್ದ. ರಾತ್ರಿಯ ಹೊತ್ತಿಗೆ ಅವನ ನಾಲಿಗೆ ಒಣಗಿತ್ತು, ಆದರೆ ಅವನ ಹೊಟ್ಟೆಯಂತೆಯೇ ಅವನ ಕೈಯೂ ಬರಿದಾಗಿತ್ತು. ತನ್ನೆಲ್ಲ...
'ಕತ್ತಲೆ ದಾರಿ ದೂರ' – ನಡೆವ ನಾಲ್ಕು ಹೆಜ್ಜೆಯ ಮರ್ಮ
ರಾಯಚೂರಿನಲ್ಲಿ ಸಮುದಾಯ ತಂಡದಿಂದ ನಡೆದ ಆ್ಯಂಟನ್ ಚೆಕಾಫ್ ರವರ 'ವಾರ್ಡ ನಂ-6' ನಾಟಕದ ರೂಪಾಂತರವಾದ 'ಕತ್ತಲೆ ದಾರಿ ದೂರ' ನಾಟಕದ ಒಂದು ಅವಲೋಕನ ರಮೇಶ ಗಬ್ಬೂರ್ ಬೆಳಕನ್ನೇ ಕಾಣದ ಅನಂತ ಕಾಲದ ನೆನಪುಗಳನ್ನು ನಮ್ಮ ಇತಿಹಾಸದುದ್ದಕ್ಕೂ ಕಾಣತ್ತಲೇ ಬಂದಿದ್ದೇವೆ. ಬೆಳಕೆಂದು ಭ್ರಮಿಸಿ ಇದೇ ಅಂತಿಮವೆಂದು, ಇನ್ನು ಮುಂದೆ ನಮಗ್ಯಾವ ಅಡ್ಡಿ...
'ಗಂಗೆ ನೀನು ಸದಾ ಕೊಳಕಿ' – ಸಿ ಎ ಜಿ ವರದಿಯ ಅನುವಾದ
ಅನುವಾದ : ನಾ ದಿವಾಕರ ಇನ್ನೆಷ್ಟೇ ನರೇಂದ್ರ ಮೋದಿಗಳು ಭಾರತದ ಪ್ರಧಾನಿಗಳಾದರೂ ಗಂಗಾ ನದಿಯಲ್ಲಿನ ಕೊಳಕು ನೀರನ್ನು ಶುಚಿಗೊಳಿಸುವುದು ಅಸಾಧ್ಯ. ' ಗಂಗಾ ನೀನು ಸದಾ ಕೊಳಕಿ ' ಎಂಬ ಹಣೆಪಟ್ಟಿ ಹೊತ್ತಿರುವ ಪವಿತ್ರ ಗಂಗೆ ಪರಿಶುದ್ಧಳಾಗಬೇಕಾದರೆ ಜನರು ತಮ್ಮ ಮನೋಭಾವ, ವರ್ತನೆ, ನಡವಳಿಕೆ, ಧೋರಣೆಗಳನ್ನು ಬದಲಾಯಿಸಿಕೊಂಡು ತಮ್ಮ ಮೂಢ...
ಪ್ರೀತಿಯೊಂದು ಮಾಯೆ, ಆದರೆ ….
-ಸುಜಾತಾ ವಿಶ್ವನಾಥ ಮೌನದ ತುದಿಯಲ್ಲಿ ಅವಿತು ಕುಳಿತ ಅರ್ಥ ಕೈಗೆಟುಕುವುದು ಬಲು ಅಪರೂಪ. ಬದುಕು ಹೇಳದೆ ಕೇಳದೆ ಹೊತ್ತಿ ಉರಿಯುವ ದೀಪ. ಹಚ್ಚುವವರು ನಾವಲ್ಲ, ಕೊನೆಗೆ ನಂದಿಸುವವರೂ ನಾವಲ್ಲ. ಉರಿಯುವಾಗ ಮಾತ್ರ ನಾವು ಅದರಲ್ಲಿ ಭಾಗಿಗಳು. ಜೀವನದ ಪಯಣ ಹುಟ್ಟಲು, ನಿಲ್ಲಲು, ಮತ್ತೆ ಬದುಕು ಶುರುವಾಗಲು ನೆನೆಪುಗಳು ಬೇಕು....
ಒಡೆದ ಮುತ್ತು ನಮ್ಮಿಬ್ಬರ ಕೊಂಡಿ …..
ಭ್ರಮೆ - ಪೃಥ್ವಿ ಶೆಟ್ಟಿ ನಾನೊಂದು ಭ್ರಮೆ ಬೆನ್ನತ್ತ ಬೇಡ ಕಳೆದುಕೊಂಡದ್ದು ಒಡಲಾಳ ಒಡೆದ ಮುತ್ತು ನಮ್ಮಿಬ್ಬರ ಕೊಂಡಿ ..... ನಾನೊಂದು ಮರೀಚಿಕೆ ಹುಡುಕಾಡಬೇಡ ಭಾವನೆಗಳ ಸಮ್ಮಿಲನಕ್ಕೊಂದು ಸ್ಥಬ್ದ ಉದಾಹರಣೆ ...... ಸ0ವತ್ಸರಗಳು ಕಳೆದಿವೆ ಮನಸು ಮಾಗಿದೆ ಹ್ರದಯ ಬಾಡಿದೆ ಸನಿಹವು ಅಪಸ್ವರದ ಭಾವವಷ್ಟೆ ……… ...
ಸುಚಿತ್ರಾದಲ್ಲಿ ಇಂದು ಸಂಜೆ
ಇಂದು ಜಗದೀಶ್ ಕೊಪ್ಪ ಪುಸ್ತಕ ಬಿಡುಗಡೆ
ಸಂಧ್ಯಾರಾಣಿ ಕಾಲಂ : ಇವು ತುಟಿಕಚ್ಚಿ ಬಿಕ್ಕು ತಡೆಹಿಡಿದವರ ಕಥೆಗಳು
ಸಿಟ್ಟಿನಿಂದ ಮೈ ಥರ ಥರ ನಡುಗುತ್ತಿರುತ್ತದೆ, ಅಸಹಾಯಕತೆಯಿಂದ ಕಣ್ಣಲ್ಲಿ ನೀರು ಹನಿ ಹನಿಯಾಗಿ ಸೇರುತ್ತಿರುತ್ತದೆ, ಅಳಲಾರನೆಂಬ ಹಠ, ತುಟಿ ಕಚ್ಚಿ ಹಿಡಿದ ಬಿಕ್ಕು, ಆಡಬೇಕಾಗಿದ್ದ ಮಾತುಗಳ ಸಂತೆ ಗದ್ದಲ ಮನದ ತುಂಬಾ, ಮಾತುಗಳ ಬಿಸಿ ತುಪ್ಪ ನಾಲಿಗೆಯಲಿ, ಉಗಿದು ಬಿಡಲೇ, ಅಂದು ಬಿಡಲೇ, ಅತ್ತು ಬಿಡಲೇ, ಹಗುರಾಗಿ ಬಿಡಲೇ, ಮಂಡಿಯೂರಿ...
’ಜಾರಿಬಿದ್ದ ಹನಿಯೊಂದು ಅವಳ ತುಟಿಕಚ್ಚಿ’ – ಹೇಮಲತಾ ಕವಿತೆ
ಇಳೆಗೆ ಮಳೆ ಹೇಮಲತಾ ರಾತ್ರಿ ಮಳೆ ಜುನುಗುತ್ತಿದೆ ಹೀಗೆ ನೆನೆಯೋ ಅಭೀಪ್ಸೆ ಹೊತ್ತುರಿಯುವ ಹಾಗೆ ಬೆಳಗಾನ ಸುರಿಯುತ್ತಿರಬೇಕು ಹನಿದು ತೊಪ್ಪೆಯಾಗಬೇಕು ಮತ್ತು ಮಿಂದು ಬೆಚ್ಚಗಾಗಬೇಕು ದಿಗಂತದಲ್ಲಿ ಕಾಣೆಯಾದ ಚುಕ್ಕಿ ಚಂದ್ರಮರು ಅವನ ಕಣ್ಣಲ್ಲಿ ಇಳಿದು ಇಣುಕಿದ್ದಾರೆ ಜಾರಿಬಿದ್ದ ಹನಿಯೊಂದು ಅವಳ ತುಟಿಕಚ್ಚಿ ಜೇನಮುತ್ತಾಗಿ...
’ಅಮ್ಮ’ ಪ್ರಶಸ್ತಿಗೆ ಕೃತಿಗಳ ಆಹ್ವಾನ
’ಸ್ತ್ರೀ ವೇಶ್ಯೆಯಾಗಿದ್ದಾಳೆ ಎಂದರೆ ನೂರಾರು ಪುರುಷರು ವ್ಯಭಿಚಾರಿಗಳಾದ್ದಾರೆಂದೇ ಅರ್ಥ’
ವೇಶ್ಯಾವೃತ್ತಿಯನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸುವುದರ ಪರ ಮತ್ತು ವಿರೋದವಾಗಿ ಸಾಕಷ್ಟು ಲೇಖನಗಳು ಬಂದಿವೆ, ಬರುತ್ತಲಿವೆ. ಆ ಮೂಲಕ ಈ ವೃತ್ತಿಯಲ್ಲಿರುವವರ ನಿಟ್ಟುಸಿರು ಎಲ್ಲರನ್ನೂ ತಲುಪಿ, ಅವರ ಜೀವನಕ್ಕೊಂದು ಘನತೆ, ಸಮಸ್ಯೆಗಳಿಗೆ ಪರಿಹಾರದ ಬೆಳಕು ಸಿಗಬಹುದೇ? ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ *** ಅವರಿಗೂ ನಾಳೆಯ ನೆಮ್ಮದಿಯ...
ಸುರೇಶ್ ಆನಗಳ್ಳಿ ನಿರ್ದೇಶನದ ನಾಟಕ
ರಂಗಾಯಣದಲ್ಲಿ ’ಎಂದೆಂದೂ ಮುಗಿಯದ ಕಥೆ’
ಹಿರಿಯ ಪತ್ರಕರ್ತ ಎಂ ವಿ ಕಾಮತ್ ಇನ್ನಿಲ್ಲ
೧೯೨೧ರಲ್ಲಿ ಉಡುಪಿಯಲ್ಲಿ ಜನಿಸಿದ ಮಾಧವ್ ವಿಟ್ಠಲ್ ಕಾಮತ್ ರವರು ಕರ್ನಾಟಕದ ಪತ್ರಿಕೋದ್ಯಮದಲ್ಲಿ ಹಿರಿಯ ತಲೆ. ೧೯೪೬ ರಲ್ಲಿ ಬೊಂಬಾಯಿನ 'ಫ್ರೀ ಪ್ರೆಸ್ ಜರ್ನಲ್ ಪತ್ರಿಕೆ,' ಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿ ಆರಂಭಿಸಿದ ಅವರು ಕಾನ್ಸ್‌ಟಿಟ್ಯೂಯಂಟ್ ಅಸ್ಸೆಂಬ್ಲಿ, ನಾಥೂರಾಮ್ ಗೋಡ್ಸೆ ವಿಚಾರಣೆ, ಪ್ರಥಮ ಸ್ವಾತಂತ್ರ್ಯೋತ್ಸವ...
ಅವಧಿ….
The Hindu ಪತ್ರಿಕೆಯಲ್ಲಿ ’ಅವಧಿ’ *** Two Kannada literary sites fold up K. V. ADITYA BHARADWAJ Kannada culture web portals suffer from lack of revenue models Two popular Kannada web portals, dedicated to culture and literature, have shut shop over the past six months....
ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ವೈದ್ಯಕೀಯ ಲೋಕದಲ್ಲಿ…
ವೈದ್ಯಕೀಯದ ಬದುಕಿನಲ್ಲಿ ದಿನ ನಿತ್ಯ ಜರುಗುವ ನೈಜ ಘಟನೆಗಳನ್ನು ಆಧರಿಸಿದ ಬರಹಗಳನ್ನು ಬರೆಯಬೇಕೆಂಬುದು ಬಲು ದಿನದ ಆಸೆ. ಆದರೆ ಸಾಧ್ಯವಾಗುವುದು ಕಡಿಮೆ. ಯಾಕೆಂದರೆ ವೈದ್ಯಕೀಯದಲ್ಲಿ ಒಂದೊಂದು ದಿನ ಬೇಸರವಾಗುವಷ್ಟು ಫ್ರೀ ಸಮಯ ಸಿಗುತ್ತದೆ. ಒಮ್ಮೊಮ್ಮೆ “ಸಾಯಲೂ” ಸಮಯ ಸಿಗುವುದಿಲ್ಲ. ಸಮಯ ಸಿಕ್ಕಾಗ ಸೋಮಾರಿ ಮನಸ್ಸು...
ನಿನ್ನೆ ಟಿ ಎಸ್ ಗೊರವರ ಕೇಳಿದ್ದ ಪ್ರಶ್ನೆಗೆ ಉತ್ತರ ಇಲ್ಲಿದೆ
ಒಂದು ಫೋಟೋ ಹಾಕಿ, ಗೊರವರ ಒಂದು ಪ್ರಶ್ನೆ ಕೇಳಿದ್ದರು. ಟಿ ಎಸ್ ಗೊರವರ ಪ್ರಶ್ನೆಗೆ ಉತ್ತರವನ್ನು ಗೊರವರ ಅವರೇ ಕಳಿಸಿಕೊಟ್ಟಿದ್ದಾರೆ. ಇದು ನಿಮಗಾಗಿ : ನಾನೂ ಯೋಚಿಸಿದ್ದೆ. ಇವರು ಯಾರೆಂದು ಯಾರಿಗೂ ಗೊತ್ತಾಗಲಿಕ್ಕಿಲ್ಲ ಅಂತ. ಅದಕ್ಕೇ ಲಂಕೇಶ್ ಹೇಳಿದ್ದು ಇವರು ' ಎಲೆ ಮರೆಯ ಘಮ ಘಮ ಹೂ' ಎಂದು. ನಾನೇ ಹೇಳಿಬಿಡುತ್ತೇನೆ. ಇವರ...
’ಶೇಕ್ಸ್‌ಪಿಯರ್…’ – ಕೆ ವಿ ತಿರುಮಲೇಶ್
ಕನ್ನಡಕ್ಕೆ: ಕೆ.ವಿ. ತಿರುಮಲೇಶ್ (ಮೂಲ ಇಂಗ್ಲಿಷ್: ಮ್ಯಾಥ್ಯೂ ಅರ್ನಾಲ್ಡ್) ಉಳಿದವರು ನಮ್ಮ ಪ್ರಶ್ನೆಗೊಳಗಾಗುವರು. ನೀ ಮಾತ್ರ ಮುಕ್ತ. ನಾವು ಮತ್ತೆ ಮತ್ತೆ ಕೇಳುತ್ತೇವೆ; ನೀನು ನಸುನಗುತ್ತೀ ಅರಿವಿನಾಚೆಗಿನ ಅರಿವಾಗಿ ಇರುತ್ತೀ. ಯಾಕೆಂದರೆ ತಾರೆಗಳಿಗಷ್ಟೆ ತನ್ನ ರಾಜಗಾಂಭೀರ್ಯವ ತೆರೆದು ತೋರಿಸುವ ಅತೀ ಉತ್ತುಂಗ...
