ಇಂದು ಅವಧಿಯಲ್ಲಿ...
ಕ್ಷಮೆ ಇರಲಿ ಭೀಮ್ ಜೀ…
-ಎನ್ ರವಿಕುಮಾರ್ ಟೆಲೆಕ್ಸ್ ತೀರ್ಥರೂಪ ಸಮಾನರಾದ ಬಾಬಾಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು. ನಾವಿಲ್ಲಿ ಕ್ಷೇಮ, ನೀವು ಕ್ಷೇಮವಾಗಿದ್ದೀರ ಎಂದು ಭಾವಿಸಿದ್ದೇನೆ. ನೀವು ಧರೆಗೆ ದೊಡ್ಡವರು. ನಿಮ್ಮ ನೆನಪು ಅಜರಾಮರ. ಈ ಪತ್ರ ಬರೆಯಲು ಕಾರಣವೇನೆಂದರೆ ನೀವು ಬರೆದಿಟ್ಟ ಸಂವಿಧಾನದ ಫಲವೇ ನಿಮಗೆ ಈಗ ಪತ್ರ ಬರೆಯುವಷ್ಟು ಸ್ವಾತಂತ್ರ್ಯ,...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪಂಥ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಶ್ರೀನಿವಾಸ ಪ್ರಭು ಅಂಕಣ- ನೂರು ಚೂರಿಗಳು ಬೆನ್ನಿಗೆ ನಾಟಿದ ಹಾಗೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಾಹಿತ್ಯ ಸಮ್ಮೇಳನಗಳ ಅಗತ್ಯ..
-ಎಂ ವಿ ಶಶಿಭೂಷಣ ರಾಜು ಸಾಹಿತ್ಯ ಸಮ್ಮೇಳನಗಳ ಅಗತ್ಯ ಮತ್ತು ಸ್ವರೂಪ ಜಗತ್ತಿನಾದ್ಯಂತ ಕನ್ನಡದ ಏಳಿಗೆಗೆ, ಕನ್ನಡದ ಸಾಹಿತ್ಯದ ಏಳಿಗೆಗೆ, ಕನ್ನಡ ಜನರ ಏಳಿಗೆಗೆ ಎಂದು ನೆಪ ಒಡ್ಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳೂ, ಜಾತ್ರೆಗಳೂ, ಸಂವಾದಗಳೂ ನಡೆಯುತ್ತಿವೆ . ಇವುಗಳ ಅವಶ್ಯಕತೆ ಕನ್ನಡಕೆಷ್ಟು, ಇಂತಹ ಸಮ್ಮೇಳನಗಳಿಂದ...
ಸಂಧ್ಯ ಸಾಂಗ್ಲೀಕರ್..
(ಒಂದು ತಮಾಷೆ ಪ್ರಸಂಗ) -ಪಾಲಹಳ್ಳಿ ವಿಶ್ವನಾಥ್ ಆಪರಂಜಿಯಲ್ಲಿ ನೀವು ಇದನ್ನು ಓದುತ್ತಿರುವುದರಿಂದ ತಮಾಷೆ ಎಂದರೆ ಹಾಸ್ಯ ಎಂದು ಭಾವಿಸುವುದು ಸ್ವಾಬಾವಿಕವೇ. ಆದರೆ ಈ ತಮಾಷೆಯೇ ಬೇರೆ. ಇದು ನಮ್ಮ ನೆರೆ ರಾಜ್ಯ ಮಹಾರಾಷ್ಟ್ರದ ಖ್ಯಾತ ಜನಪ್ರಿಯ ನೃತ್ಯ ಪರಂಪರೆ, ಜಾನಪದ ಶೈಲಿಯ ಸಂಗೀತ ನೃತ್ಯ ನಾಟಕಗಳು. ಇನ್ನೂ ಆಧುನಿಕತೆಗೆ...
ಚಿಣ್ಣಿದಾಂಡು…
-ರೇಣುಕಾ ಕೋಡಗುಂಟಿ ಅದೊ೦ದು ಚಿಕ್ಕ ಗ್ರಾಮ, ಹೆಚ್ಚೆಂದರೆ ಒಂದು ನೂರು ಮನೆಗಳು ಮಾತ್ರ ಇರುವಂತಹ ಊರು ಅದಾಗಿತ್ತು. ಗ್ರಾಮದ ಎಡ ಭಾಗಕ್ಕೆ ಹಳ್ಳ ಹರಿಯುತ್ತಿತ್ತು. ಊರಿನ ಜನರೆಲ್ಲರು ಬಟ್ಟೆ ತೊಳೆಯಲು, ದನಕರಗಳನ್ನ ತೊಳೆಯಲು ಇಲ್ಲಿಗೇ ಬರುತ್ತಿದ್ದರು. ಬಹಳ ವಿಶಾಲವಾಗಿ ಹರಿಯುತ್ತಿದ್ದ ಹಳ್ಳದ ಮಧ್ಯ ಭಾಗದಲ್ಲಿ ಒಂದಿಷ್ಟು ಜಾಗ...
Latest
ಬಾ ಕವಿತಾ
ಸಂಕ್ರಮಣ..
-ಉದಯಕುಮಾರ ಹಬ್ಬು ಸಂಕ್ರಮಣಆಕ್ರಮಣಹಾವುಗಳ ತೋರಣವಿಷದ ಹೂರಣ.ಭರದಿರಾವಣಕುಂಭಕರ್ಣಕಂಬಳಿ ಹೊದ್ದು.ಗಾಢವಾಗಿಮಲಗಿದಕವಿಗಳುಕವಿತೆಗಳುಬೆನ್ನೆಲುಬಿಲ್ಲದ ಹಸಿ...
ಒಂದು ಬೀಸು ಹೆಜ್ಜೆ ಹಾಸಿ..
-ಗೀತಾ ದೊಡ್ಮನೆ ಗುರುತ್ವಾಕರ್ಷಣ ಅಸೀಮ ನೀಲ-ಅನಂತ ಕಾಲ..ಒಂದು ಬೀಸು ಹೆಜ್ಜೆ ಹಾಸಿಒಳಗೊಳ್ಳುವ ವಿಶ್ವಜಾಲ.. ಇವೆಯೇ ಅಲ್ಲಿ-ನಿನ್ನೆ-ಇಂದು-ನಾಳೆಗಳು?ಮಾರ್ದವತೆಯ, ಮಾನವತೆಯಮಮತೆ...
ಪುಸ್ತಕದ ಪರಿಚಯ
Book Shelf
ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..
ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...
ಕಣ್ಣಿಗೆ ಕಟ್ಟುವಂತ ಕಥಾನಕ..
ಹರೀಶ್ ಕೇರ ಕಾದಂಬರಿ 'ನಿಲ್ಲು ನಿಲ್ಲೇ ಪತಂಗʼ 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಬರೆದ ಬಿ ಆರ್ ಲಕ್ಷ್ಮಣರಾವ್ ಅವರ ಅನಿಸಿಕೆ ಇಲ್ಲಿದೆ. -ಬಿ ಆರ್ ಲಕ್ಷ್ಮಣರಾವ್ ಪ್ರಿಯ ಹರೀಶ್, ನಿನ್ನ 'ನಿಲ್ಲು ನಿಲ್ಲೇ ಪತಂಗ' ಓದಿ ತುಂಬಾ ಖುಷಿಯಾಯಿತು. ಇದನ್ನು ನೀನು ಕಾದಂಬರಿ ಅಂತ ಕರೆದಿದ್ದೀಯ....
ಒಂದು ಹಣತೆ ಸಾಕು..
ಕಂ ಕ ಮೂರ್ತಿ ಅವರ ಕೃತಿ 'ಬೆಳಗಿನ ಮೌನ ನಿತ್ಯದ ಧ್ಯಾನ' ಈ ಕೃತಿಯ ಆಯ್ದ ಭಾಗ ಇಲ್ಲಿದೆ. -ಕಂ ಕ ಮೂರ್ತಿ (ಬೆಳಗಿನ ಮೌನ, ನಿತ್ಯದ ಧ್ಯಾನ ಕೃತಿಗೆ ಲೇಖಕ ಕಂ.ಕ.ಮೂರ್ತಿ ಬರೆದ ಟಿಪ್ಪಣಿಯಿಂದ ಆಯ್ದಭಾಗ) ಮುಸ್ಸಂಜೆ ಅಮ್ಮ ದೇವರ ಕೋಣೆಯಲ್ಲಿ ಹಚ್ಚಿಟ್ಟ ತುಪ್ಪದ ದೀಪ ಅತ್ತ ಕೃಷ್ಷನ ಪಾದಗಳನ್ನು ಬೆಳಗುವ ಜತೆಗೇ ಇತ್ತ ಇಡೀ ನಡುಮನೆಯನ್ನು...
ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..
ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ 'ಈ ಲೋಕದೊಳಗಿನ ಅನಂತ ಲೋಕಗಳು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ. -ಎಚ್ ಎಸ್ ಶಿವಪ್ರಕಾಶ್ ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











