ಬಾ ಕವಿತಾ ಲೇಖನಗಳು
ನೊಬೆಲ್ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್ ನ ಎರಡು ಕವನಗಳು..
-ವಿಜಯರಾಘವನ್ ರಾಮ್ ಕುಮಾರ್ ದಿ ಗ್ರೇಟ್ ಎನಿಗ್ಮಾ ತ್ರಾನ್ಸ್‌ತೋಮರ್‌ನ ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು […]
‘ಬಾಪೂ ನಮನ’ ಕವಿತೆಗಳ ಆಹ್ವಾನ
‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ […]
ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..
-ನರೇಶ್ ಮಯ್ಯ ನೇಹಿಗನ ನೆನಪಿನ ನೊಗ ಹೊತ್ತು ನಡೆದಿದ್ದೇನೆ. ಆಗರ್ಭ ಆಲಿಂಗನದೊಂದಿಗೆ ಸಂಗ ತೊರೆದಿದ್ದೆವಲ್ಲ; ಹಿಂಗೇ ಅಂಗ-ಭಂಗ ಅನಂಗ ರಾತ್ರಿಯ ಅವಾಂತರ ಅರಿತೆದ್ದೇಳಿದ್ದೇ ತಡ ನಡೆದಿದ್ದೆ ನಾಕದ ಯಾನಕ್ಕೆ, ನರಕ-ಪುಲಕಗಳನ್ನೊತ್ತ ನವ್ಯನೌಕೆಯ ಸನಿಹಕ್ಕೆ. ತೇಲು ತೇಲುತ್ತ ಲೋಲುಪತೆಯ ಲೋಕದೊಳಗೆ ಲೀನವಾಗುತ್ತೆ, […]
ಸಂಚಯ ಸಾಹಿತ್ಯ ಸ್ಪರ್ಧೆ ..
ಇಂದು ಸಂಜೆ ‘ಕವಿಮನ’
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ […]
ರೂಪಕಗಳ ರೂಪ ಬದಲಾಗಬೇಕಿದೆ!..
–ರಾಘವೇಂದ್ರ ಜೋಶಿ ಕನಸು-ಕನವರಿಕೆ ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು […]
— ದಸರಾ ನಿನ್ನಾಲ್ಕ ಉಧೋ ಉಧೋ
-ಸುಬ್ರಾಯ ಮತ್ತೀಹಳ್ಳಿ ಹಸಿರು ತೇರನ್ನೇರುತೀಯಂತೆ ವರ್ಷವರ್ಷವೂ ಬರುತೀಯಂತೆ 1 ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಸ್ವರ್ಗವ ಧರೆಗೆ ತರುತೀಯಂತೆ ದಸರೇ-ಇದು ನಿನ್ನ ಹೆಸರೇ—? ಇವನಮ್ಮ ಅವನಮ್ಮ […]
ರಾಜು ಹೆಗಡೆ ಕವಿತೆ-‘ನಡು ವಯಸ್ಸು’
– -ರಾಜು ಹೆಗಡೆ.. ಕನಸು ಕಾಣುತ್ತಿದ್ದ ಹುಡುಗನಿಗೆ ಕೂದಲು ಹಣ್ಣಾಗಿದೆ ಹೊತ್ತು ಗೊತ್ತಿಲ್ಲದೆ ಹೊಗುತ್ತಿದ್ದ ಹುಡುಗಿಯರು ಅಂಕಲ್ ಎಂದು ಆಚೆ ನಡೆಯುತ್ತಾರೆ ಏಜಾದವರು ಮಾತ್ರ ಪ್ರೀತಿಯೊ ವಿಶ್ವಾಸವೊ ಮುಗುಳು ನಗುತ್ತಾರೆ ಮರಗಿಡಗಳು ಪ್ರತಿ ವಸಂತದಲ್ಲೂ ಹೂ ಅಗಲಿಸಿ ದುಂಬಿಯ ಜತೆ ಗುಣಗುಡುತ್ತವೆ […]
ಇರುಳ -ಬೆಳಕಿನ ಸೊಲ್ಲು – ೨
-ಲಡಾಯಿ ಬಸು ೧ ಬೆಳಕಿದ್ದಾಗ ಲೋಕ ನನ್ನನ್ನಷ್ಟೇಯಲ್ಲ ನನ್ನ ನೆರಳನ್ನೂ ಗುರುತಿಸಿತು ಕತ್ತಲಾಯಿತು ನೋಡಿ ಲೋಕದ ಕಣ್ಣಿಗೆ ನನ್ನ ನೆರಳಲ್ಲ ನಾನೂ ಕಾಣದಾದೆನು ೨ ಹಗಲಿನಲಿ ದಾಟಲಾಗದ ಗಡಿಗಳನು ಇರುಳು ದಾಟಿದೆ ಏನು ಮಾಡಲಿ ಪ್ರೀತಿ ಇರುವುದು ಬದನಾಮ ರಸ್ತೆಯಲ್ಲೇ ..! […]
ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?
-ಚಂದ್ರಶೇಖರ ಕಂಬಾರ ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ? ಗಂಧ ಲೇಪನವ್ಯಾತಕೆ? -ಈ ದೇಹಕೆ.. ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ? ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ? ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ.. ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ ಉಸಿರಿನ ಬಿಸಿ ಅವಗೆ ತಾಗದೇ […]
ದ್ವಿಪದಿಗಳು..
-ಲಡಾಯಿ ಬಸು ೧ ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ ೨ ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..? ೩ […]
ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..
‘ಕವಿ ಸತ್ಕಾರ’ ದಲ್ಲಿ ಬಿ.ಆರ್.ಲಕ್ಷ್ಮಣರಾವ್..
ಎರಡು ಸದ್ದುಗಳು, ನಡುವೆ ಒಂದು ಮೌನ…
-ವಿಜಯರಾಘವನ್ ರಾಮ್ ಕುಮಾರ್ ಶಿಷ್ಯ ಹ್ಸಿಯಾಂಗ್- ಯೆನ್ ಚಿ-ಸಿಯೆನ್ ಕಸಬಳಿಯುತ್ತಿದ್ದ ರಾಜಗುರು ನಾನ್ ಯಾಂಗ್ ನ ಸಮಾಧಿಯನ್ನು ಶುಚಿಮಾಡಲು ಅವನ ಪೊರಕೆ ಸೆಳೆದ ಕಲ್ಲೊಂದು ಹಾರಿ ಬಿದಿರು ಬೊಂಬಿನ ಆಸರೆಗಂಬಕ್ಕೆ ಬಡಿದು ಮಾಡಿಯೇ ಬಿಟ್ಟಿತು ಸದ್ದು ಟೊಕ್ ನಿಜ ಟೊಕ್ ಸದ್ದು […]
ಇರುಳ – ಬೆಳಕಿನ ಹನಿಗಳು..
ಇರುಳ – ಬೆಳಕಿನ ಸೊಲ್ಲು -ಲಡಾಯಿ ಬಸು ೧ ಹಗಲೆಂದರೆ ಬೆಳಕು ಇರುಳೆಂದರೆ ಕತ್ತಲು ಹೆಚ್ಚೇನಿಲ್ಲ ಕುರುಡರ ಪಾಠಕ್ಕೆ ಒಂದೇ ಸಾಲು ….! ೨ ಲೋಕದ ಪಟ್ಯದಲಿ ಇನ್ನೂ ನೋವು , ಬಡತನ ಜಾತಿ -ಮತದ ಪದಗಳು ಹೇರಳವಾಗಿ ಕಾಣುತ್ತಿವೆ ; ಈ […]
ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರಧಾನ-ಬೆಳ್ಳಿ ಹಬ್ಬ..
ಸಂಭ್ರಮ…
-ವಿಜಯರಾಘವನ್ ರಾಮ್ ಕುಮಾರ್ ಸಂಭ್ರಮ ರಾಲಿ ಮರದಲ್ಲಿ ಹಳದಿ ಹೂ ಗೊಂಚಲನ್ನ ತನ್ನ ಎಲೆತೊಟ್ಟಿನ ಇರುಕಿನಲ್ಲಿ ಹೊತ್ತ ಒಂದೆಲೆಗೆ ವಯಸ್ಸಾಗಿ ಹಳದಿಯಾಗಿ ತೊಟ್ಟು ಕಳಚಿ ಸುಳಿಗಾಳಿಗೆ ಅದು ನೆಲಕ್ಕೆ ಬೀಳುತ್ತಿರುವಾಗ ಬೀಳುವ ಭಯಕ್ಕೆ ತರತರಗುಟ್ಟುತ್ತ ನೆಲಕ್ಕೆ ಬಿದ್ದದ್ದೆ ಆ ಅಲ್ಲಿದ್ದ […]
ಒಂಟಿತನ..
– ಎಂ. ಎಸ್. ರುದ್ರೇಶ್ವರಸ್ವಾಮಿ. ಒಂಟಿತನ ಅವಳೀಗ ಬೆಳಕಿಗೆ ಮುಖ- ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಬೆಳಕೆಂದರೆ ಅವಳಿಗೆ ಭಯ ಸಾಕೆನಿಸಿದೆ ಅವಳಿಗೆ ಬೆಳಕಿನ ಸದ್ದು ಸಂಭ್ರಮ ಹೊಸಹುಟ್ಟು ಅವಳ ಪಾಡು ಅವಳಿಗೆ. ಯಾರಿಗೂ ಬೇಕಿಲ್ಲದ ನಡುಪ್ರಾಯದ ಅವಳಿಗೆ ನಡುಕ, ಕದ್ದುಮುಚ್ಚಿ ಬೆಳಕು ಒಳಗೆ […]
ಹನಿಗಳು.. ಹನಿಗಳು ..
-ಲಡಾಯಿ ಬಸು ೧ ಬೆಳಗಾಯಿತೆಂಬ ಸಂಭ್ರಮ ಕತ್ತಲಲ್ಲಿ ಬೆಳಕಾದ ಹಣತೆಗಳ ಆರಿಸುವುದು ..! ೨ ಹೂ ಗಿಡದಿಂದ ಉದುರಿಬಿದ್ದರೇನಾಯ್ತು …/ ಗಾಳಿ ಹೊತ್ತೊಯ್ದ ಗಂಧದಲಿ ಬದುಕುವುದು ..! ೩ ಕಣ್ಣೆದುರಿನ ಕತ್ತಲನು ಇಂಚಿಂಚಾಗಿ ನುಂಗದೆ ಬೆಳಕಾಗಲು ಬರದು … ಆ ಸೂರ್ಯ […]
























