ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದ್ವಿಪದಿಗಳು..

-ಲಡಾಯಿ ಬಸು

೧

ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು
ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ  ಮಾಡುವುದು ನನಗೊಲಿಯಲಿಲ್ಲ
೨
ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ
ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..?
೩
ಪಯಣದ ಹಾದಿಯಲಿ ಯಾರೋ ಇಳಿದು ಹೋದಾಗ ಬರದ ದುಃಖ
ಇಳಿದು ಹೋದವರು ಒಳಗೆ ಉಳಿದಾಗ ಉಮ್ಮಳಿಸಿತು
೪
ದಡದ ಮೇಲೆ ಕುಳಿತ ಕಪ್ಪೆ
ಕಲ್ಲುಬಿದ್ದು ಸದ್ದಾದ ಬಾವಿಗೇ ಹಾರುವುದು
೫
ಹೀಗೊಮ್ಮೆ ಬೆಳಕಿನ ಹೆಸರಿನವಳ ಬೆನ್ನಟ್ಟಿ ಹೊರಟ್ಟಿದ್ದೆ ನಾನು
ಒಂದು ಸಲ ಹಿಂತಿರುಗಿ ನೋಡಿದೆ  ಬೆನ್ನ ಹಿಂದೆಯೇ ಕತ್ತಲಿತ್ತು
೬
ನೀನು ಹಚ್ಚಿದ್ದು ಒಂದೇ ಮೊಂಬತ್ತಿ
ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೇ
೭
ನಿನ್ನೂರಿನಲ್ಲಿ ಬೆಳಗಾಗಿತ್ತು
ನನ್ನೂರಿನಲ್ಲಿ ಸೂರ್ಯ ಮುಳುಗಿದ್ದು ಹೆಚ್ಚು ಕಾಡಲಿಲ್ಲ
೮
ಕುಡಿ ಹಿಡಿದ ಹಣತೆ ಬಗ್ಗೆ ಏನು ಮಾತು ..?
ಒಣಗಿದ ಬತ್ತಿಯನು ಎಣ್ಣೆಯಿಂದ ಹಸಿ ಮಾಡದ ಮೇಲೆ ..
೯
ಮೇಲೇರುತ್ತ ನಡೆದಂತೆಲ್ಲ ಸೂರ್ಯನ ರೂಪವೇ ಸಣ್ಣದಾಯಿತು
ಮತ್ತೇನು ಪ್ರಿತಿಯಿತ್ತ ಭೂಮಿಯನ್ನೇ ಎಣಿಯಾಗಿಸಿದನು ನೋಡಿ
೧೦
ಕೊಳ್ಳುಬಾಕರ ಅಗಸಿಯಲ್ಲಿ ಹಾಯ್ದು ಬಂದೆ
ಬೆಳಕಾದ ಸೂರ್ಯನಿಗೆ ಬೆಲೆ ಎಷ್ಟೆಂದು ಕೇಳುವ ಮನಸಾಯಿತು ..

 

‍ಲೇಖಕರು avadhi

19 September, 2011

6 Comments

  1. Manjula.N.

    Tumba chennagide

  2. Tejaswini Hegde

    ಸುಂದರ, ಮನತಟ್ಟಿದ ದ್ವಿಪದಿಗಳು. ತುಂಬಾ ಇಷ್ಟವಾದವು… ಅದರಲ್ಲೂ “ನೀನು ಹಚ್ಚಿದ್ದು ಒಂದೇ ಮೊಂಬತ್ತಿ
    ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೇ” – ದ್ವಿಪದಿ ತುಂಬಾ ಆಪ್ತವೆನಿಸಿತು!

  3. RAMACHANDRA

    ESTU AAPTA ENDARE KANNU TUMBUVASHTU

  4. ಲಡಾಯಿ ಬಸು

    ಎಲ್ಲರಿಗೂ ಧನ್ಯವಾದಗಳು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading