Breaking News: ವಿ ಮಿಸ್ ಯೂ ಸರ್..

ಪೂರ್ಣ ಚಂದ್ರ ತೇಜಸ್ವಿಯವರು ಗೋವಿಂದಗೌಡರ ಕುರಿತು ಹೇಳಿದ ಮಾತು: “ನಾನು ಕಂಡಂತೆ ಗೋವಿಂದಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪೃಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ ಶಕ್ತಿ ಮೀರಿ ದುಡಿದ ಮೂರು ನಾಲ್ಕು ಮಂತ್ರಿಗಳಲ್ಲಿ ಗೋವಿಂದಗೌಡರು ಪ್ರಮುಖರೆಂದು ಹೇಳಬಹುದು. ಇಂಥವರು ರಾಜಕೀಯಕ್ಕೆ ವಿದಾಯ ಹೇಳಲು ತೀರ್ಮಾನಿಸಿದಾಗ ನನಗೆ ವಿಷಾದವಾಯಿತು. ಆದರೆ ಅದಕ್ಕಿಂತ ಹೆಚ್ಚು ವಿಷಾದವಾಗಿದ್ದು ಇಂಥವರು ನಿರ್ಗಮಿಸಿದಾಗ ರಾಜಕಾರಣಿಗಳು ಜನರೂ ಇದನ್ನು ಬಹುದಿನಗಳಿಂದ ನಿರೀಕ್ಷಿಸಿದ್ದವರಂತೆ ಪ್ರತಿಕ್ರಿಯೆ ತೋರಿಸಿದ್ದಕ್ಕಾಗಿ.”

ತೇಜಸ್ವಿ ಹೇಳಿದಂತೆ ಗೋವಿಂದಗೌಡರು ಕರ್ನಾಟಕದ ಪ್ರಾಮಾಣಿಕ ರಾಜಕಾರಣದ ಅಳುದುಳಿದ ಕೊಂಡಿಗಳಲ್ಲಿ ಒಂದಾಗಿದ್ದರು. ಮತ್ತೊಂದು ಮಲೆನಾಡ ನಕ್ಷತ್ರ ನೇಪಥ್ಯಕ್ಕೆ ಸರಿದುಹೋಯಿತು. ವಿ ಮಿಸ್ ಯೂ ಸರ್.

-ಎಸ್ ಸಿ ದಿನೇಶ್ ಕುಮಾರ್

ಗೋವಿ೦ದೇಗೌಡರ ಸಾವು ನನ್ನನ್ನು ವಿಷಣ್ಣನನ್ನಾಗಿಸಿದೆ….ತಮ್ಮ ಪ್ರಾಮಾಣಿಕತೆ, ಸರಳತೆ, ಸಥ್ಯ ನಿಷ್ಠೂರತೆಗಳನ್ನು ತೃಣ ಮಾತ್ರವೂ ಬಿಟ್ಟುಕೊಡದೆ ಎರಡು ಬಾರಿ ಸಚಿವರಾಗಿ ಅತ್ಯುಪಯುಕ್ತ ಕೆಲಸಗಳನ್ನು ಮಾಡಿ ವಿರೋಧ ಪಕ್ಷಗಳವರಿ೦ದ ಕೂಡ ಭೇಷ್ ಎನ್ನಿಸಿಕೊ೦ಡವರು…ಗಾ೦ಧಿ ಯುಗದ ಆದರ್ಶದ ಕನಸುಗಳ ಕೊನೆಯ ಪ್ರತಿನಿಧಿಗಳಲ್ಲಿ ಒಬ್ಬರು….ಇ೦ಥವರು ಮತ್ತೆ ಹುಟ್ಟಿ ಬರಬೇಕು ಎನ್ನುವ ನಿಜವಾಗಲಾರದ ಪ್ರಾರ್ಥನೆಯೊ೦ದಿಗೆ….

-ಟಿ ಎನ್ ಸೀತಾರಾಂ

‍ಲೇಖಕರು Admin

January 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಜಯ ಕುಮಾರ್

    ಶ್ರೀಯುತ ಗೋವಿಂದೇಗೌಡರು ಕರ್ನಾಟಕ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ ಒಬ್ಬರು. ಶಿಕ್ಷಣ ಸಚಿವ ರಾಗಿ ಅವರು ಮಾಡಿದ ಶಿಕ್ಷಕರ ನೇಮಕಾತಿ ಅತ್ಯಂತ ಪಾರದರ್ಶಕ. ವಾಗಿತ್ತು. ಅವರ ಆದರ್ಶ ಗಳು ಎಲ್ಲರಿಗೂ ಮಾದರಿ.

    ವಿಜಯ ಕುಮಾರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: