Breaking News: ಮಣಿಪಾಲ ಅತ್ಯಾಚಾರ ಅರೋಪಿಗಳ ಸೆರೆ

Through Bhaskar Bangera

Photos Courtesy: Daijiworld.com

Breaking News – ಮಣಿಪಾಲ ಅತ್ಯಾಚಾರ ಅರೋಪಿಗಳ ಸೆರೆ
ಮಣಿಪಾಲ : ರಾಷ್ಟ್ರೀಯ ಮಟ್ಟದ್ದಲ್ಲಿ ಗಮನ ಸೆಳೆದ ಮಣಿಪಾಲ ವೈದ್ಯಕೀಯ ವಿಧ್ಯಾರ್ಥಿ ಅತ್ಯಾಚಾರ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ಜಿಲ್ಲಾ ಪೋಲಿಸರು ಕೊನೆಗೂ ಯಶಸ್ವೀಯಾಗಿದ್ದಾರೆ.

ಮಣಿಪಾಲದ ಪರ್ಕಳ ಬಳಿಯಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡೊದ್ದು, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅರೋಪಿತರನ್ನು ಗುರುತಿಸಲಾಗಿದ್ದು, ಯೋಗಿಶ, ಆನಂದ ಮತ್ತು ಹರಿ ಎಂಬವರನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮಣಿಪಾಲದ ಪ್ರತಿಷ್ಟಿತ ಹೋಟೆಲ್ ಮಾಲಕರರೊಬ್ಬರ ವಾಹನ ಚಾಲಕ, ಆರೋಪಿಗಳಲ್ಲೊಬ್ಬನಾದ ಆನಂದ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಆರೋಪಿಗಳು ಮೂವತ್ತು ವರ್ಷದ ಒಳಗಿನವರು. ಮಣಿಪಾಲದ ಪೋಲಿಸರ ಸಾಧನೆಯನ್ನು ಜನ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ.


‍ಲೇಖಕರು G

June 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. ನಾಗರಾಜ್ ಹೆತ್ತೂರ್

    ಅಭಿನಂದನೆಗಳು ಪೊಲೀಸರಿಗೆ…

    ಪ್ರತಿಕ್ರಿಯೆ
  2. N.Narayanaswamy

    this is karnataka police thanks for all the policemen who r take part inb this issue.

    ಪ್ರತಿಕ್ರಿಯೆ
  3. nagraj harapanahalli

    ಪಶ್ಚಿಮ ವಲಯ ಐಜಿಪಿ ಮೇಲೆ ನನಗೆ ವಿಶ್ವಾಸ ಇತ್ತು….ಪೊಲೀಸರಿಗೆ ಮುಕ್ತ ತನಿಖೆಗೆ ಅವಕಾಶ ನೀಡಿದರೆ ಏನೆಲ್ಲಾ ಸಾಧಿಸಬಹುದು ..

    ಪ್ರತಿಕ್ರಿಯೆ
  4. jagadishkoppa

    Muneer katiplla From mangalure Writes…
    ಮಣಿಪಾಲದಲ್ಲಿ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ನಡೆಸಿದ ಬಂಧಿತ ಆರೋಪಿಗಳಲ್ಲಿ ಯೋಗೀಶ ಎಂಬಾತ ಭಜರಂಗದಳದ ಮಾಜಿ ಮುಖಂಡ. ಈತ ಈ ಹಿಂದೆ ಹಿಂದೂ ಸಂಸ್ಕೃತಿ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ್ದವ. ಮೊನ್ನೆ ಮೊನ್ನೆಯವರೆ ಭಜರಂಗದಳ ಮತ್ತು ಎಬಿವಿಪಿ ಅತ್ಯಾಚಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿತ್ತು. ಗೋ ಮಾತೆಯ ಉಳಿವಿಗಾಗಿ ಹಾಜಬ್ಬ, ಹಸನಬ್ಬರನ್ನು ರಸ್ತೆಯಲ್ಲಿ ಬೆತ್ತಲೆ ಮಾಡಿ ಕೇಕೆ ಹಾಕಿದ ಭಜರಂಗದಳದ ಯಶಪಾಲ್ ಸುವರ್ಣ ನಾಯಕತ್ವದಲ್ಲಿ ಯೋಗೀಶನಂತವರು ಬೇಕಾದಷ್ಟು ಮುಖಂಡರಿದ್ದಾರೆ. ಭಜರಂಗದಳದ ಸಹಸ್ರಾರು ಕಾರ್ಯಕ್ರಮಗಳಿಗೆ ತೆರಳಿ ಉಪನ್ಯಾಸ ನೀಡಿದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಎಂತಹ ನೈತಿಕತೆಯ ಕಾರ್ಯಕರ್ತರನ್ನು ಸಮಾಜಕ್ಕೆ ಅರ್ಪಿಸಿದ್ದಾರೆ ಎಂಬುದನ್ನು ಒಮ್ಮೆ ಅವಲೋಕಿಸಬೇಕು. ಅತ್ಯಾಚಾರ ವರದಿಯಾದ ತಕ್ಷಣ ಸಾರ್ವಜನಿಕ ಪ್ರತಿಭಟನೆಯಲ್ಲಿ ಮಾತನಾಡಿದ್ದ ಭಜರಂಗ ದಳದ ಮುಖಂಡ ಯಶಪಾಲ್ ಸುವರ್ಣ “ಅತ್ಯಾಚಾರ ನಡೆಸಿದ್ದು ಮುಸ್ಲಿಂ ಯುವಕರು. ಕಾಂಗ್ರೇಸ್ ಸರಕಾರ ಅವರನ್ನು ರಕ್ಷಿಸುತ್ತಿದೆ” ಎಂದು ಬೊಬ್ಬೆ ಹೊಡೆದಿದ್ದ. ಈಗೇನಂತಾನೆ ಯಶಪಾಲ್ ಸುವರ್ಣ ? ಭಾರೀ ದೇಶ ಭಕ್ತರೂ, ಸಂಸ್ಕೃತಿ ರಕ್ಷಕರೂ ಆಗಿರುವ ಎಬಿವಿಪಿಯವರು ?…

    ಪ್ರತಿಕ್ರಿಯೆ
  5. Anonymous

    ಬಹುಶಃ ಹುಡುಗಿಯ ಅಪಹರಣವಾದ ಸುದ್ದಿ ಬಂದ ಕೂಡಲೆ ಅಪಹರಣಕಾರರು ಹೊರ ಹೋಗದಂತೆ ನಾಕಾಬಂದಿ ಹಾಕಿದ ಪೋಲೀಸರು ಇನ್ನಷ್ಟು ಸೂಕ್ಷ್ಮಮತಿಗಳಾಗಿ ಅಪರಾಧ ಘಟಿಸಬಹುದಾದ ಮಣಿಪಾಲದೊಳಗಿನ ಪ್ರದೇಶದ ಮೇಲೂ ಶೀಘ್ರ ದಾಳಿ ನಡೆಸಿದ್ದರೆ ಈ ಹೇಯ ಅಪರಾಧ ಸಂಭವಿಸದಂತೆ ತಡೆಯಬಹುದಿತ್ತೇನೊ.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ
  6. ವಿಜಯ್

    ನಾಲ್ಕೇ ದಿನಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿದ ಪ್ರತಾಪ ರೆಡ್ಡಿಯವರಿಗೊಂದು ತುಂಬು ಧನ್ಯವಾದ ಮತ್ತು ಅಭಿನಂದನೆಗಳು..
    ತಮ್ಮ ವಿಚಾರಧಾರೆಗೆ ಪೂರಕವಾಗಿ ಸಿಕ್ಕ ಸುದ್ದಿಯನ್ನು ಇಲ್ಲಿ ಬಂದು ಉತ್ಸಾಹದಿಂದ ಪ್ರಕಟಿಸಿದ ಕಮೆಂಟುದಾರರೊಬ್ಬರಿಗೆ ಅಪರಾದಿ ಯೋಗಿಶ ಹಾಲಿ ಏನಾಗಿದ್ದಾನೆ, ಯಾರ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುವ ವ್ಯವಧಾನ ಇರಲಿಲ್ಲವೇನೊ..ಆತನನ್ನು ಪುಸಲಾಯಿಸಿ ವಾಪಸ್ಸು ಕರೆಸಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಅನ್ನುವುದು ಕೂಡ ಮರೆತು ಹೊಯ್ತೇನೊ!. ರೇಪನಂತ ಹೀನ ಕೃತ್ಯಗಳಲ್ಲೂ ಜಾತಿ,ಧರ್ಮ,ಸಂಘಟನೆ ಹುಡುಕುವವರನ್ನು ಏನನ್ನಬೇಕೊ.

    ಪ್ರತಿಕ್ರಿಯೆ
    • nagesha

      ಯೋಗೀಶನನ್ನು ಪುಸಲಾಯಿಸಿ ಕರೆಯಿಸಲು ಆತನ ಪರಿಚಯ ಇರುವ ಕಾಂಗ್ರೆಸ್ ಮುಖಂಡರೊಬ್ಬರನ್ನು ಬಳಸುವ ತಂತ್ರವನ್ನು ಪೊಲೀಸರು ಬಳಸಿದ್ದಾರೆಯೇ ಹೊರತು ಆತನನ್ನು ರಕ್ಷಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸಿಲ್ಲ ಎಂಬುದು ಗಮನಾರ್ಹ. ಇಲ್ಲದೆ ಹೋಗಿದ್ದರೆ ಆತನನ್ನು ಹಿಡಿಯುವುದು ಇನ್ನಷ್ಟು ವಿಳಂಬವಾಗುತ್ತಿತ್ತು.

      ಪ್ರತಿಕ್ರಿಯೆ
      • ವಿಜಯ್

        ವಾವ್ ..ಸಮರ್ಥನೆಗೆ ಮೆಚ್ಚಬೇಕು!,,ಎತ್ತ ಬೇಕೊ ಅತ್ತ ಹೊರಳಿ ‘ಗಮನಾರ್ಹ’ ಎಂಬ ಶಬ್ದ ಬಳಸುವುದನ್ನು ಕೂಡ ಮೆಚ್ಚಬೇಕು!. ಸ್ವಾಮಿ..ಪೋಲೀಸರು ಯೋಗೀಶನ ಮೊಬಾಯಿಲ್ ಟ್ರೆಸ್ ಮಾಡಿದ ಮೇಲೆ ಈ ಮುಖಂಡರಿಗೆ ಆತ ಫೋನ ಮಾಡಿರೋದು ಗೊತ್ತಾಗಿದೆ. ಆಮೇಲೆ ಈ ಮುಖಂಡರಿಗೆ ಅವನನ್ನು ಕರೆಸಬೇಕಾದ ಅನಿವಾರ್ಯತೆ ಬಂದಿದೆ,,ಅಷ್ಟೆ. ನನಗೆ ಈ ಯೋಗೀಶನ ಇತಿಹಾಸ/ವರ್ತಮಾನ ತಿಳಿದುಕೊಂಡು ಆಗಬೇಕಾಗಿದ್ದೇನಿಲ್ಲ. ಕೆಳಗಿನ ಕಮೆಂಟವೊಂದನ್ನು ಓದಿ. ರೇಪನಂತಹ ಹೀನಕೃತ್ಯದಲ್ಲೂ ‘ಭಜರಂಗದಳ, ಎ.ಬಿ.ವಿ.ಪಿ, ಪೇಜಾವರ’ ಅಂತೆಲ್ಲ ಉತ್ಸಾಹದಿಂದ ರಾಜಕೀಯ ಮಾಡಲು ಬಂದವರಿಗೆ, ವಿಚಾರಧಾರೆ ಹರಿಸಬಂದವರಿಗೆ ನಿಮ್ಮ ಪ್ರಶ್ನೆ ಕೇಳಿ.

        ಪ್ರತಿಕ್ರಿಯೆ
        • jagadishkoppa

          ಚಡ್ಡಿಗಳು. ಜನಿವಾರಗಳು ಯಾವ ಕ್ಷಣದಲ್ಲಾದರೂ ಯಾವ ರೂಪವನ್ನಾದರೂ ತಾಳಬಹುದು. ಅಂತಹ ಕ್ರಿಮಿ, ಕೀಟ
          ಗಳು ಈಗ ಸಾಮಾಜಿಕ ತಾಣಗಳಿಗೂ ಲಗ್ಗೆ ಇಟ್ಟಿವೆ.

          ಪ್ರತಿಕ್ರಿಯೆ
          • ವಿಜಯ್

            ನಿಮ್ಮ ಪ್ರತಿಕ್ರಿಯೆ ಓದಿದವರಿಗೆ ಗೊತ್ತೆ ಆಗುತ್ತೆ ಯಾರು ಕ್ರಿಮಿ, ಕೀಟ ಅಂತ.. ಮಾಡಿದ ತಪ್ಪು ಗೊತ್ತಾದ ಮೇಲೂ..ಮೈ ಪರಚಿಕೊಂಡು..ಅದೇ ಹಳೆಯ ಹಾಕಿ ಹಾಕಿ ಸವೆದು ಹೋದ ಕ್ಯಾಸೆಟ್ ಹಾಕೊದು, ಜಾತಿ ವಿಷ ಉಗಳೊದು ಬಿಟ್ರೆ ಇನ್ನೇನು ಮಾಡ್ಲಿಕಾಗುತ್ತೆ?.. ಶೀಘ್ರ ಗುಣಮುಖರಾಗಿ ಎಂಬ ಹಾರೈಕೆ! 🙂

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: