ಪಿ ಮಹಮದ್: ಇದನ್ನು ನಾನು ಹೇಳಬಾರದು ಎಂದುಕೊಂಡಿದ್ದೆ..

 

ಪಿ ಮಹಮ್ಮದ್

ಕುಮಾರಸ್ವಾಮಿ-ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಇದ್ದ ಸಮಯ. ಕುಮಾರಸ್ವಾಮಿಯ ಪಾಲಿನ ಮುಖ್ಯಮಂತ್ರಿ ಅವಧಿ ಮುಗಿದ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಾರರು ಎಂಬ ಅನುಮಾನ ಎಲ್ಲರಲ್ಲಿ ಮೂಡುತ್ತಿತ್ತು. ರಾಜ್ಯದ ವ್ಯಂಗ್ಯಚಿತ್ರಕಾರರಿಗೆ ಐಡಿಯಾಗಳ ಸುರಿಮಳೆಯಾಗುತ್ತಿದ್ದ ದಿನಗಳು. ನಾನು ಕೂಡಾ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಾರ್ಟೂನುಗಳನ್ನು ರಚಿಸುತ್ತಾ ಹೋದೆ. ನನ್ನ ಚಿತ್ರಗಳು ಕುಮಾರಸ್ವಾಮಿ ಪಾಳಯದ ಅಸಮಾಧಾನಕ್ಕೆ ಕಾರಣವಾದರೆ ಬಿಜೆಪಿ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಬಹಳ ಆನಂದ ಉಂಟು ಮಾಡುತ್ತಿತ್ತು. ಅವರಿಂದ ನನಗೆ ಅಭಿನಂದನೆ-ಸಂದೇಶಗಳ ರಾಶಿ. ‘ಸಾರ್, ನೀವು ರಾಜ್ಯಕ್ಕೆ ದೊಡ್ಡ ಸೇವೆ ಸಲ್ಲಿಸುತ್ತಿದ್ದೀರಿ’ ಅಂತ ಒಬ್ಬ ಹೇಳಿದರೆ, ಇನ್ನೊಬ್ಬ ಬಿಜೆಪಿ ಕಾರ್ಯಕರ್ತ , ‘ಸಾರ್, ನೀವು ಮಾಡಿದ ಕಾರ್ಟೂನುಗಳನ್ನು ಒಂದು ಸೀಡಿಯಲ್ಲಿ ಹಾಕಿಕೊಟ್ಟರೆ ನಮಗೆ ಚುನಾವಣೆಯಲ್ಲಿ ಅನುಕೂಲ ಆಗುತ್ತದೆ’ ಅಂತಾನೆ.
ಬಿಜೆಪಿ ಸರ್ಕಾರ ಬಂತು. ಆಪರೇಶನ್ ಕಮಲ, ಗಣಿ, ಡಿನೋಟಿಫ಼ಿಕೇಶನ್ ಇತ್ಯಾದಿ ಹಗರಣಗಳಿಂದಾಗಿ ಇವರು ಕೂಡಾ ನನ್ನ ವೃತ್ತಿ ಬಾಂಧವರಿಗೆ ಮೃಷ್ಠಾನ್ನವನ್ನು ಬಡಿಸತೊಡಗಿದರು.

ಆದರೆ ಕುಮಾರರಸ್ವಾಮಿಯ ಬಗ್ಗೆ ನನ್ನ ಕಾರ್ಟೂನುಗಳನ್ನು ಯದ್ವಾತದ್ವಾ ಹೊಗಳುತ್ತಿದ್ದ ಬಿಜೆಪಿ ಅಭಿಮಾನಿಗಳಿಗೆ ನನ್ನ ಚಿತ್ರಗಳು ಅಪಥ್ಯವಾಗತೊಡಗಿದ್ದವು. ತಮ್ಮ ಅಸಮಾಧಾನವನ್ನು ಎಸ್ಸೆಮ್ಮೆಸ್ಗಳ ಮೂಲಕ ಹೊರಹಾಕತೊಡಗಿದರು. ಆದರೆ ನಾನು ಬಿಜೆಪಿ ನಾಯಕರ ಬಗ್ಗೆ ಯಾವುದೇ ರಿಯಾಯ್ತಿ ತೋರಿಸದೇ ನನ್ನ ಕೆಲಸವನ್ನು ಮುಂದುವರಿಸಿದೆ. ಆಗ ಈ ಜನರಿಗೆ ಏಕಾಏಕಿ ನನ್ನ ಹೆಸರು ಸೂಚಿಸುವ ಧರ್ಮ ಎದ್ದು ಕಂಡಿತು. ನಾನು ಮುಸ್ಲಿಮನಾದುದ ರಿಂದ ಬಿಜೆಪಿಯನ್ನು ಟೀಕೆ ಮಾಡುತ್ತೇನೆ ಎಂದು ಬೊಬ್ಬೆ ಹಾಕತೊಡಗಿದರು. ಇದನ್ನು ನಾನು ಹೇಳಬಾರದು ಎಂದುಕೊಂಡಿದ್ದೆ. ಆದರೆ ನನ್ನ ಕೆಲವು ತಥಾಕಥಿತ ಅಭಿಮಾನಿಗಳು ನಾನು ಮೋದಿಯ ಬಗ್ಗೆ ಮಾಡಿದ ಕಾರ್ಟೂನುಗಳ ಬಗ್ಗೆ ಮಾಡಿದ ಕಾಮೆಂಟುಗಳನ್ನು ನೋಡಿ ಇದನ್ನು ಬರೆಯಬೇಕು ಅನ್ನಿಸಿತು.




 

‍ಲೇಖಕರು G

June 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. K.Vittal Shetty

    We Indians seems to have forgotten to see a person as a person. We change it as per our own individual benefit. Some times I feel we should take our memory back to our primary school days. We never knew the religion of our class mates. We played together without any motives. We were large hearted and we were totally innocent and friendly with all. We were not educated and that’s why our parents made us study and got us to school to get educated and be a good and responsible citizen. But after completing our study and get educated we see our class mates through our religion and not as a person. We see almost everything with a selfish personal benefits. So as we grow up and study and get educated, are we becoming communal and selfish. Is this the study and education gives us? Things to ponder over. As long as Mohammed’s cartoon benefitted me I never bothered about his religion. When his cartoons shown my real colour it hurts and I search and blame his religion. I don’t know where we are leading. Can we re-educate ourselves to understand a person by his deeds rather than his religion?

    ಪ್ರತಿಕ್ರಿಯೆ
  2. ವಿಜಯ್

    ಒಂದು ಇಡಿ ಲೇಖನ ಹೇಳಬೇಕಾಗಿದ್ದನ್ನು ಪಿ.ಮಹಮ್ಮದರ ಒಂದು ವ್ಯಂಗಚಿತ್ರ ಹೇಳುತ್ತಿತ್ತು. ಕನ್ನಡ ಕಂಡ ಅಪರೂಪದ ವ್ಯಂಗಚಿತ್ರಕಾರರಲ್ಲಿ ಮಹಮ್ಮದ ಕೂಡ ಒಬ್ಬರು. ಅವರ ವ್ಯಂಗದ ಚಾಟಿ ನಿರಂತರ ಬೀಸುತ್ತಿರಲಿ! 🙂

    ಪ್ರತಿಕ್ರಿಯೆ
  3. ಬಾಲಸುಬ್ರಹ್ಮಣ್ಯ ಶಾಸ್ತ್ರಿ

    ಮಹಮ್ಮದರೆ,
    ನನಗೆ ಬೀಚಿಯವರ ಒಂದು ಮಾತು ನೆನಪಿಗೆ ಬರುತ್ತಿದೆ. ಅವರು ಲಿಂಗಾಯತರ ಬಗ್ಗೆ ಕಾದಂಬರಿ ಬರೆದಾಗ ಎಲ್ಲಾ ಬ್ರಾಹ್ಮಣರು ಹೊಗಳಲು ಶುರು ಮಾಡಿದರಂತೆ. ಹಾಗೆಯೇ ಬ್ರಾಹ್ಮಣರ ಬಗ್ಗೆ ಬರೆದಾಗ ಅವರೆಲ್ಲರೂ ಉದ್ರಿಕ್ತಗೊಂದರೆ, ಲಿಂಗಾಯತರು ಬಹಳ ಮೆಚ್ಚಿಕೊಂಡರಂತೆ!
    ನಮ್ಮಲ್ಲಿ ಬಹಳಷ್ಟು ಜನ ಕೆಲವು ಪಕ್ಷದ ಚಿನ್ಹೆ ಹಿಡಿದುಕೊಂಡೆ ಜನ್ಮ ತಾಳಿದ ಹಾಗೆ ಆಡುತ್ತಾರೆ. (ಸರಳವಾಗಿ ಹೇಳಬೇಕೆಂದರೆ, ಆ ರೀತಿ ವರ್ತಿಸುವ ಹಾಗೆ ನಮ್ಮ ನಾಯಕರು ಪ್ರಚೋದಿಸುತ್ತಾರೆ.)
    ವಾಸ್ತವವಾಗಿ ರಾಜಕೀಯ ಅನುಯಾಯಿಗಳು, ಪತ್ರಕರ್ತರ ಅಭಿಮಾನಿಗಳು ಆಗಿರಲೇ ಬಾರದು. ಹಾಗಾದಾಗ ಅಭಿಮಾನಿಗಳಿಗೆ ಇಷ್ಟವಾಗದ ಲೇಖನವೊ, ವ್ಯಂಗ್ಯ ಚಿತ್ರವೋ ಬಂದಾಗ ಪತ್ರಕರ್ತರು ಅನುಯಾಯಿಗಳ ಪಾಲಿಗೆ ಸಾಕ್ಷಾತ್ ವಿಲನು ಗಳು ಆಗಿಬಿಡುತ್ತಾರೆ. ಅಥವಾ ವಿಲನು ಆಗುವುದರಲ್ಲಿಯೇ, ವೃತ್ತಿ ದರ್ಮದ ಯಶಸ್ಸಿದೆ.
    ಮಹಮ್ಮದರೆ, ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: