ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ : 'ಹರಿವು'ಗೆ ಅತ್ಯುತ್ತಮ ಸಿನೆಮಾ ಗೌರವ

ಮನ್ಸೋರೆ

ಮನ್ಸೋರೆ


2014 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಗಳಲ್ಲಿ ಹರಿವು ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದೆ.
ಅತ್ಯುತ್ತಮ ನಟ ಪ್ರಶಸ್ತಿ ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ಪಾಲಾಗಿದೆ ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ
ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ


ಹುಲಿಕುಂಟೆ ಮೂರ್ತಿ ಕೌದಿ ಚಿತ್ರದ ಗೀತೆ ರಚನೆಗೆ ಅತ್ಯುತ್ತಮ ಗೀತ ರಚೆನೆಕಾರ ಹಾಗೂ ಗಜಕೇಸರಿ ಚಿತ್ರಕ್ಕಾಗಿ ಚಿಂತನ್ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅರ್ಜುನ್ ಸರ್ಜಾ ನಿರ್ದೇಶನದ ಅಭಿಮನ್ಯು, ದಯಾಳ್ ಪದ್ಮನಾಭ ನಿರ್ದೇಶನದ ಹಗ್ಗದ ಕೊನೆ ಎರಡು ಹಾಗೂ ಮೂರನೆಯ ಪ್ರಶಸ್ತಿ ಗಳಿಸಿದೆ
ಉಳಿದವರು ಕಂಡಂತೆ ಸಿನೆಮಾ ನಿರ್ದೇಶಕರ ಪ್ರಥಮ ಪ್ರಯತ್ನದ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.
ತುಳು ಭಾಷೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ  ಚಿತ್ರ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಹಾಗೂ ಗಜಕೇಸರಿ  ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಹಿರಿಮೆಗೆ ಪಾತ್ರವಾಗಿದೆ. ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಗೌರವ ವಿಷದ ಮಳೆ ಪಾಲಾಗಿದೆ.
 
 

‍ಲೇಖಕರು Avadhi

12 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading