BREAKING NEWS: ಫಿಲಂ ಅವಾರ್ಡ್ಸ್: ಇಲ್ಲಿದೆ Full Details

basanth-kumar-patilbaraguruಬಸಂತ್ ಕುಮಾರ್ ಪಾಟೀಲ್, ಬರಗೂರು, ಸುರೇಶ್ ಅರಸ್

ಸಂಚಾರಿ ವಿಜಯ್, ಬಿ. ಜಯಶ್ರೀ, ಹುಲಿಕುಂಟೆ ಮೂರ್ತಿ, ಪಿ.ಶೇಷಾದ್ರಿ ಸೇರಿದಂತೆ ಹಲವರಿಗೆ ಪ್ರಶಸ್ತಿ 

ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ ಘೋಷಿಸಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಯನ್ನು ಬರಗೂರು ರಾಮಚಂದ್ರಪ್ಪ ಅವರಿಗೆ ನೀಡಲಾಗಿದೆ.

ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ ನೀಡುವ ವಿಷ್ಣುವರ್ಧನ್ ಪ್ರಶಸ್ತಿಯನ್ನು ಸುರೇಶ್ ಅರಸ್ ಅವರಿಗೆ ನೀಡಲಾಗಿದೆ

ಈ ಮೇಲಿನ ಎಲ್ಲಾ ಮೂರು ಪ್ರಶಸ್ತಿಗಳು ತಲಾ 2 ಲಕ್ಷ ರೂ. ಗಳ ನಗದು ಬಹುಮಾನ ಹಾಗೂ
50 ಗ್ರಾಂ ಚಿನ್ನದ ಪದಕ ವನ್ನು ಒಳಗೊಂಡಿದೆ.

suresh urs

ಪ್ರಶಸ್ತಿಯ ಸಂಪೂರ್ಣ ವಿವರ ಇಲ್ಲಿದೆ- 

1

ಪ್ರಥಮ ಅತ್ಯುತ್ತಮ ಚಿತ್ರ : ಹರಿವು

ತಲಾ ಒಂದು ಲಕ್ಷ ರೂ. ಗಳ ನಗದು ಬಹುಮಾನ ಹಾಗೂ 50 ಗ್ರಾಂ ಚಿನ್ನದ ಪದಕ.

ನಿರ್ಮಾಪಕ -ಅವಿನಾಶ. ಯು.ಶೆಟ್ಟಿ

ನಿರ್ದೇಶಕ ಮಂಜುನಾಥ್. ಎಸ್ (ಮಂಸೋರೆ)

2

ದ್ವಿತೀಯ ಅತ್ಯುತ್ತಮ ಚಿತ್ರ : ಅಭಿಮನ್ಯು

ತಲಾ ಎಪ್ಪತ್ತೈದು ಸಾವಿರ ರೂ. ಗಳ ನಗದು ಬಹುಮಾನ ಹಾಗೂ 100 ಗ್ರಾಂ ಬೆಳ್ಳಿ ಪದಕ.

ನಿರ್ಮಾಪಕ- ಅರ್ಜುನ್ ಸರ್ಜಾ

ನಿರ್ದೇಶಕ- ಅರ್ಜುನ್ ಸರ್ಜಾ

3

ತೃತೀಯ ಅತ್ಯುತ್ತಮ ಚಿತ್ರ : ಹಗ್ಗದ ಕೊನೆ
ತಲಾ ಐವತ್ತು ಸಾವಿರ ರೂ.ಗಳ ನಗದು ಬಹುಮಾನ ಹಾಗೂ 100 ಗ್ರಾಂ ಬೆಳ್ಳಿ ಪದಕ .

ನಿರ್ಮಾಪಕ – ದಯಾಳ್ ಪದ್ಮನಾಭನ್ ಮತ್ತು ಉಮೇಶ್ ಬಣಕಾರ್
ನಿರ್ದೇಶಕ – ದಯಾಳ್ ಪದ್ಮನಾಭನ್

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ (ತುಳು)

ತಲಾ ಎಪ್ಪತ್ತೈದು ಸಾವಿರ ರೂ. ಗಳ ನಗದು ಬಹುಮಾನ ಹಾಗೂ 100 ಗ್ರಾಂ ಬೆಳ್ಳಿ ಪದಕ.

ನಿರ್ಮಾಪಕ-  ರಾಜಶೇಖರ್ ಕೋಟ್ಯಾನ್
ನಿರ್ದೇಶಕ- ಶೇಖರ್ ಕೋಟ್ಯಾನ್

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ

ವಿಷದ ಮಳೆ

ತಲಾ ಎಪ್ಪತ್ತೈದು ಸಾವಿರ ರೂ. ಗಳ ನಗದು ಬಹುಮಾನ ಹಾಗೂ 100 ಗ್ರಾಂ ಬೆಳ್ಳಿ ಪದಕ

ನಿರ್ಮಾಪಕ-  ಆತ್ಮಶ್ರೀ
ನಿರ್ದೇಶಕ- ಅಂಬಳಿಕೆ ರವಿ

ಈ ಕೆಳಕಂಡ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಕಲಾವಿದರು / ತಂತ್ರಜ್ಞರಿಗೆ
ತಲಾ ಇಪ್ಪತ್ತು ಸಾವಿರ ರೂ.ಗಳ ನಗದು ಬಹುಮಾನ ಹಾಗೂ 100 ಗ್ರಾಂ ಬೆಳ್ಳಿ ಪದಕ.

ಅತ್ಯುತ್ತಮ ನಟ -ಸಂಚಾರಿ ವಿಜಯ್  ಚಿತ್ರ : ನಾನು ಅವನಲ್ಲ ಅವಳು

ಅತ್ಯುತ್ತಮ ನಟಿ- ಲಕ್ಷ್ಮೀ ಗೋಪಾಲಸ್ವಾಮಿ ಚಿತ್ರ : ವಿದಾಯ

ಅತ್ಯುತ್ತಮ ಪೋಷಕ ನಟ- ಅರುಣ್ ದೇವಸ್ಯ ಚಿತ್ರ : ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಮಹಾತ್ಮೆ

ಅತ್ಯುತ್ತಮ ಪೋಷಕ ನಟಿ- ಬಿ.ಜಯಶ್ರೀ  ಚಿತ್ರ : ಕೌದಿ

ಅತ್ಯುತ್ತಮ ಕತೆ-  ಲಿವಿಂಗ್ ಸ್ಮೈಲ್ ವಿದ್ಯಾ  ಚಿತ್ರ: ನಾನು ಅವನಲ್ಲ ಅವಳು

ಅತ್ಯುತ್ತಮ ಚಿತ್ರಕತೆ- ಪಿ.ಶೇಷಾದ್ರಿ  ಚಿತ್ರ : ವಿದಾಯ

ಅತ್ಯುತ್ತಮ ಸಂಭಾಷಣೆ- ಬಿ.ಎಲ್.ವೇಣು  ಚಿತ್ರ: ತಿಪ್ಪಜ್ಜಿ ಸರ್ಕಲ್

ಅತ್ಯುತ್ತಮ ಛಾಯಾಗ್ರಹಣ- ಸತ್ಯ ಹೆಗಡೆ  ಚಿತ್ರ : ರಾಟೆ

ಅತ್ಯುತ್ತಮ ಸಂಗೀತ ನಿರ್ದೇಶನ-  ಬಿ.ಅಜನೀಶ್ ಲೋಕನಾಥ್  ಚಿತ್ರ : ಉಳಿದವರು ಕಂಡಂತೆ

ಅತ್ಯುತ್ತಮ ಸಂಕಲನ- ಶ್ರೀಕಾಂತ  ಚಿತ್ರ : ಉಗ್ರಂ

ಅತ್ಯುತ್ತಮ ಬಾಲ ನಟ-  ಮಾಸ್ಟರ್ ಸ್ನೇಹಿತ್  ಚಿತ್ರ : ಸಚ್ಚಿನ್ ತೆಂಡೊಲ್ಕರ್ ಅಲ್ಲ

ಅತ್ಯುತ್ತಮ ಬಾಲ ನಟಿ- ಲಹರಿ  ಚಿತ್ರ: ಆಟ-ಪಾಠ

ಅತ್ಯುತ್ತಮ ಕಲಾ ನಿರ್ದೇಶನ- ಚಂದ್ರಕಾಂತ್  ಚಿತ್ರ : 143 – ನೂರಾನಲವತ್ಮೂರು

ಅತ್ಯುತ್ತಮ ಗೀತ ರಚನೆ-  ಹುಲಿಕುಂಟೆ ಮೂರ್ತಿ  ಗೀತೆ : ಬೆಳಕ ಬತ್ತಲೆಯೊಳಗೆ ಬದುಕೊಂದು ಭ್ರಮೆಯವ್ವ  ಚಿತ್ರ : ಕೌದಿ

ಅತ್ಯುತ್ತಮ ಹಿನ್ನೆಲೆ ಗಾಯಕ-  ಚಿಂತನ್  ಹಾಡು : ಸಾಹೋರೆ ಸಾಹೋರೆ ನೀನೇ ಕಣೋ   ಚಿತ್ರ : ಗಜಕೇಸರಿ

ಅತ್ಯುತ್ತಮ ಹಿನ್ನೆಲೆ ಗಾಯಕಿ-  ವಿದ್ಯಾ ಮೋಹನ್  ಗೀತೆ : ಕಣ್ಣೆ ಇಲ್ಲದ ಮೇಲೆ ಕಣ್ಣೀರ್ ಎಲ್ಲಿ   ಚಿತ್ರ : ಸಚ್ಚಿನ್ ತೆಂಡೊಲ್ಕರ್ ಅಲ್ಲ

ತೀರ್ಪುಗಾರರ ವಿಶೇಷ ಪ್ರಶಸ್ತಿ-  ಜ್ಯೋತಿರಾಜ್  ವಿಭಾಗ : ಸಾಹಸ ಚಿತ್ರ : ಜ್ಯೋತಿ ಅಲಿಯಾಸ್ ಕೋತಿರಾಜ್

‍ಲೇಖಕರು Admin

February 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: