BREAKING NEWS: 'ಅವಧಿ' ಸಂವಾದದಲ್ಲಿ ಘೋಷಣೆ: ಬಹುಮತ ಸಾಬೀತಾದ ತಕ್ಷಣ ಅರವಿಂದ ಮಾಲಗತ್ತಿ ರಾಜೀನಾಮೆ

ಬಹುಮತ ಸಾಬೀತುಪಡಿಸಿದ ತಕ್ಷಣ ಅಕಾಡೆಮಿ
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ : ಅರವಿಂದ ಮಾಲಗತ್ತಿ
—-
ಹೊಸ ಸರ್ಕಾರ ತನ್ನ ಬಹುಮತ ಮಾಡಿದ ತಕ್ಷಣವೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಘೋಷಿಸಿದ್ದಾರೆ.
‘ಅವಧಿ’ ಆನ್ಲೈನ್ ಸಾಹಿತ್ಯ ಪತ್ರಿಕೆ ನಡೆಸಿದ ವಿಡಿಯೋ ಸಂವಾದದಲ್ಲಿ ಅದರ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕೇಳಿದ ಪ್ರಶ್ನೆಗೆ ಅರವಿಂದ ಮಾಲಗತ್ತಿ ಉತ್ತರಿಸಿದರು.
ಹೊಸ ಸರ್ಕಾರ ಬಂದ ತಕ್ಷಣ ರಾಜೀನಾಮೆ ನೀಡಬೇಕು ಎನ್ನುವ ನಿರ್ಬಂಧವೇನೂ ಇಲ್ಲ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ನೀಡಿದ ಶಿಫಾರಸು ಕೂಡ ಯಾವುದೇ ಅಧ್ಯಕ್ಷರು 3 ವರ್ಷದ ತಮ್ಮ ಅವಧಿ ಸಂಪೂರ್ಣಗೊಳಿಸುವ ಬಗ್ಗೆ ಒತ್ತು ನೀಡಿದೆ. ಆದರೆ ನಾನು ನೈತಿಕತೆಯ ಪ್ರಶ್ನೆಯನ್ನಿಟ್ಟಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.


 

‍ಲೇಖಕರು avadhi

July 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Kotresh T A M Kotri

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ…..ಬೇಗನೆ ಸ್ಥಾನ ತ್ಯಜಿಸಿ, ರಾಜಕೀಯ ಸೋಂಕು ತಗಲಿಸಿಕೊಳ್ಳದೆ ಸೃಜನಶೀಲ ಕೆಲಸ ಮಾಡುವವರಿಗೆ ಆ ಸ್ಥಾನ ಬಿಟ್ಟು ಕೊಡಿ.Hurry…..

    ಪ್ರತಿಕ್ರಿಯೆ
  2. Kum. Veerabhadrappa

    ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿರುವುದು ಉಪಯುಕ್ತವೆನಿಸಿತು. ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವವರೆಗೆ ಕಾಯುವ ಅಗತ್ಯವಿರಲಿಲ್ಲ, ಸಮ್ಮಿಶ್ರ ಸರ್ಕಾರದ (ಜಾತ್ಯಾತೀತ ನಿಲುವಿನ) ಮುಖ್ಯಮಂತ್ರಿ ಮಳೆ ಬರಿಸುವುದಕ್ಕೆ ಸಾರ್ವಜನಿಕ ಹಣವನ್ನು ಖರ್ಚು ಮಾಡುತ್ತಿರುವುದನ್ನು ವಿರೋಧಿಸಿ ರಾಜಿನಾಮೆ ಕೊಡಬೇಕಿತ್ತು, ಕುಕ್ಕೆ ಸುಬ್ರಹ್ಮಣ್ಯನ ಚಿನ್ನದ ರಥದ ನಿರ್ಮಾಣಕ್ಕೆ ಪದಚ್ಯುತ ಸರ್ಕಾರ ಎಪ್ಪತ್ತೆಂಭತ್ತು ಕೋಟಿ ನೀಡಿದಾಗ ಪ್ರತಿಟಿಸಬೇಕಿತ್ತು, ಮುಂದಿನ ದಿನಮಾನಗಳಲ್ಲಿ ಸ್ವಯಂಘೋಷಿತ ಕ್ರಾಂತಿಕಾರಿ ಸಾಹಿತಿಗಳು ಅಕಾಡೆಮಿ ಪ್ರಾಧಿಕಾರಗಳ ಕುರ್ಚಿ ಕಬ್ಜಾ ಮಾಡಲು ರಾಜಕಾರಣಿಗಳ ಗುರುತ್ವಾಕರ್ಷಣಕ್ಕೆ ಒಳಗಾಗಬಾರದು, ಹಾಗೆ ಅಧಿಕಾರ ಹಿಡಿದವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ಲೇಖಕರು ತಮ್ಮ ಆತ್ಮ ಸಾಕ್ಷಿ ರಕ್ಷಿಸಿಕೊಳ್ಳಬೇಕು.
    * ಕುಂವೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: