ರವಿ ಕೃಷ್ಣಾ ರೆಡ್ಡಿ ಅಡಿಗರ ಕವಿತೆಯ ಸಾಲುಗಳಂತೆ ‘ಏನಾದರೂ ಮಾಡುತ್ತಿರುವ’ ಪೈಕಿಯವರು. ಅವರಿಗೆ ಸರಿ ಅನಿಸಿದ್ದನ್ನು ಮಾಡಿಯೇ ಮಾಡುವವರು. ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ಮಾಡಿ ಪತ್ರಿಕೋದ್ಯಮದ ನೇರ ಪರಿಚಯ ಪಡೆದವರು. ಚುನಾವಣೆಯಲ್ಲಿ ಸ್ಪರ್ಧಿಸಿ ಹಣಬಲ, ತೋಳ್ಬಲ ರಾಜಕೀಯದ ಸ್ಪರ್ಶ ಪಡೆದವರು.
ಕ್ಯಾಲಿಫೋರ್ನಿಯಾದಲ್ಲಿರುವ ರವಿಕೃಷ್ಣಾರೆಡ್ಡಿ ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದರು. ರಾಜ್ಯದ ಹತ್ತು ಹಲವು ಕಡೆ ಸುತ್ತಿ ಅದರ ನೋವು ಅರಿಯುವ ಪ್ರಯತ್ನ ಮಾಡಿದರು. ಅವರು ಕಂಡ ಚಿತ್ರಗಳು ಅವರ ಬ್ಲಾಗ್ ‘ಅಮೆರಿಕಾದಿಂದ ರವಿ’ ಯಲ್ಲಿದೆ.
ಈ ಸಂದರ್ಭದಲ್ಲಿಯೇ ಅವರು ಚಂದ್ರನನ್ನು ಕರೆಯಿರಿ ಭೂಮಿಗೆ ಎಂದ ಸವಿತಾ ನಾಗಭೂಷಣ ಅವರ ಕವಿತೆಗಳ ವಿಡಿಯೋ ಸಿದ್ಧಪಡಿಸಿ ‘ಯು ಟ್ಯೂಬ್’ ಗೆ ಏರಿಸಿದ್ದಾರೆ. ಅದು ಇಲ್ಲಿದೆ.
ಲೋಹಿಯಾ ಪ್ರಕಾಶನ ಸವಿತಾ ಅವರ ಹೊಸ ಸಂಕಲನ ‘ದರುಶನ’ವನ್ನು ಪ್ರಕಟಿಸಿದೆ. ಅದರ ಕವಿತೆಗಳನ್ನೂ ಇಲ್ಲಿ ಕೇಳಬಹುದು. ಥ್ಯಾಂಕ್ಸ್ ರವಿ..
ಈಗ ಕವಿತೆಯನ್ನು ಓದುವವರು ಸವಿತಾ ನಾಗಭೂಷಣ…
ನಿಮಗೆ ಇವೂ ಇಷ್ಟವಾಗಬಹುದು…





ವಾಚನದಿಂದ ಕವನವೊಂದು ಹೇಗೆ ಅದ್ಭುತವಾಗಿ ಕಣ್ಣೆದುರಿಗೆ ಮೈ ತಾಳಿ ನಿಲ್ಲುತ್ತದೆ ಎಂದು ಪ್ರತ್ಯಕ್ಷ ಮತ್ತೊಮ್ಮೆ ಕಂಡಂತಾಯಿತು . ಜಾತ್ರೆಯಲ್ಲಿ ಶಿವನ ಚಿತ್ರ ತುಂಬಾ ಇಷ್ಟವಾಯ್ತು . ಧನ್ಯವಾದಗಳು .