ಲಕ್ಷ್ಮಣ ಹೂಗಾರ್
ಚಿಲ್ಲರೆ ವ್ಯಾಪಾರಿ ಕ್ಷೇತ್ರದಲ್ಲಿ ವಿದೇಶ ಬಂಡವಾಳ ಹರಿದು ಬರೋದ್ರಿಂದ ಯಾವುದೇ ಪ್ರಯೋಜನ ಭಾರತಕ್ಕೆ ಆಗೋದಿಲ್ಲ, ಬದಲಿಗೆ ವಾಲ್ ಮಾರ್ಟ್ ನಂಥ ದೈತ್ಯ ವಿದೇಶಿ ಕಂಪನಿಗಳು ತಮ್ಮ ನೆಟ್ ವರ್ಕ್ ವೃದ್ಧಿ ಮಾಡಿ ಇಲ್ಲಿನ ಮಾರುಕಟ್ಟೆ ವ್ಯವಸ್ಥೆಯನ್ನೇ ಧ್ವಂಸ ಮಾಡಲಿವೆಯಂತೆ. ಸಣ್ಣ ಪುಟ್ಟ ವ್ಯಾಪಾರಿಗಳಷ್ಟೇ ಅಲ್ಲ, ಮಾರುಕಟ್ಟೆ ಜಾಲ ಇಲ್ಲದಂತಾಗಿ ಸಂಪೂರ್ಣ ವಿದೇಶಿ ಕಂಪನಿಗಳ ಕೈಗೆ ಹೋದ್ರೆ ಆಗ ಬಾಯಿ ಬಾಯಿ ಬಡ್ಕೋಬೇಕು.
ಈ ಮಾತನ್ನು ಇಂಡಿಯಾದ FDI ವಿರೋಧಿಗಳು ಹೇಳಿದ್ದಲ್ಲ. ಬದಲಿಗೆ ಅಮೆರಿಕಾದವರೇ ಆದ ವಿಶ್ವದ ಪ್ರಸಿದ್ಧ ಆರ್ಥಿಕ ತಜ್ಞ ಜೋಸೆಫ್ ಸ್ಟಿಗ್ಲಿಜ್ ಹೇಳಿದ್ದು.
2001ರಲ್ಲಿ ಇವರು ನೋಬೆಲ್ ಪಾರಿತೋಷಕ ಪಡೆದ ಆರ್ಥಿಕ ಪಂಡಿತ. ಹಣದ ಮೇಲೇಯೇ ನಡೆದಾಡುತ್ತಿರುವ ಅಮೆರಿಕಾ ಆರ್ಥಿಕ ದಿವಾಳಿಗೆ ಸಿಲುಕುತ್ತೆ ಅಂತ ಮೊದ್ಲೇ ಹೇಳಿದ್ದೂ ಇದೇ ಜೋಸೆಫ್ ಸ್ಟಿಗ್ಲಿಜ್. ಅಮೆರಿಕಾದಲ್ಲಿನ ಆರ್ಥಿಕ ಅಸಮಾನತೆಯನ್ನು ವಿಶ್ಲೇಷಿಸುವ ಅವರ ಮಹತ್ವದ ” The price of Inequality” ಕೃತಿಯೂ ಹೊರ ಬರ್ತಿದೆ.
ತನ್ನ ಗರ್ಭದಲ್ಲಿ ಹತ್ತಾರು ಹುಳುಕಗಳನ್ನು ಇಟ್ಟುಕೊಂಡು ಪೊಳ್ಳು ನೀತಿ ಬೋಧಿಸುವ ವಿಶ್ವದ ದಫೇದಾರ್ (Head constabe)ಅಮೆರಿಕದ ಬಣ್ಣ ಬಯಲು ಮಾಡುತ್ತಿರುವ ಪ್ರಮುಖರಲ್ಲಿ ಜೋಸೆಫ್ ಸ್ಟಿಗ್ಲಿಜ್ ಮೊದಲ ಸಾಲಿನಲ್ಲಿ ನಿಂತಿದ್ದಾರೆ.







ಇದನ್ನೇ ನಾನು ಬಹಳ ಹಿಂದೆ ಪುಸ್ತಕೋದ್ಯಮಕ್ಕೆ ಅನ್ವಯಿಸಿ – ಸರಕಾರೀಕರಣ, ಸಗಟು ಖರೀದಿ, ಪ್ರಕಾಶಕರಿಂದ ನೇರ ಗಿರಾಕಿಗೆ (ನೆಟ್ ವರ್ಕ್ ಮಾರ್ಕೇಟಿಂಗ್), ಸಾಮಾನ್ಯ ಪ್ರಸಂಗಗಳಲ್ಲಿ ಪ್ರಾಯೋಗಿಕವಲ್ಲದ ಡಿಸ್ಕೌಂಟ್, ಬಹುಮಾನ ಇತ್ಯಾದಿ ಆಮಿಷಗಳನ್ನೊಡ್ಡುವ ಬುಕ್ ಮಾಲ್ ಎಲ್ಲಾ ಬರುವಾಗ ಹೇಳುತ್ತಲೇ ಬಂದಿದ್ದೆ. ಮಂಗಳೂರಿಗೆ ರಿಲಾಯನ್ಸ್ ಬುಕ್ ಮಾರ್ಟ್ ಬಂದಾಗ ಇಂಗ್ಲಿಷ್ ವಿತರಣೆಗಾರರನ್ನು ಎಚ್ಚರಿಸಿದೆ. ದೂರಗಾಮೀ ಯೋಚನೆಗಳಿಲ್ಲದವರು ನನ್ನದು ಸ್ವಾರ್ಥ ಎಂದರು. ನಾನೇನೋ ಸುಖವಾಗಿಯೇ ನಿವೃತ್ತನಾಗಿಬಿಟ್ಟೆ. ಇಂದು ಪುಸ್ತಕ ಬೇಕಾದವರಿಗೆ ಕೊಡುವವರಿಲ್ಲ – ಇಲ್ಲೇ ಮೋಯಾನ್ ಬಗ್ಗೆ ಬರೆದ ನರೇಂದ್ರ ಪೈಯವರನ್ನು ಕೇಳಿ – ಮಂಗಳೂರಿನಲ್ಲಿ ಆತನ ಒಂದೂ ಕೃತಿ ಸಿಗಲಿಲ್ಲವಂತೆ. ಪುಸ್ತಕ ಮಾಡಿದವರಿಗೆ ಕೊಡುವುದು ಬೇಕಿಲ್ಲ – ಹೊಸದಾಗಿ ನನ್ನ ಎರಡು ಪುಸ್ತಕಗಳು ಪ್ರಕಟವಾದವು. ರಾಜ್ಯಾದ್ಯಂತ ಸಮರ್ಪಕ ವಿತರಣೆ ಆಗಿಯೇ ಇಲ್ಲ 🙁
we hope that the new direct investment policy would reduce the involvement of the middlemen.consumers and the farmers would reap the benifits.you know …quality product and fair price…! sick and tired of hearing theories which villanise America.I wonder if there is any alternative to this.