ಆತ್ಮಾಭಿಮಾನವುಳ್ಳ ಪ್ರತಿಯೊಬ್ಬ ಹೆಂಗಸಿನ ಕಥೆಯಾಗಿ ಇಂಗ್ಲಿಷ್ ವಿಂಗ್ಲಿಷ್
ಶ್ವೇತಾ ಹೊಸಬಾಳೆ
ಇಂಗ್ಲಿಷ್ ವಿಂಗ್ಲಿಷ್ ಮೇಲ್ನೋಟಕ್ಕೆಇಂಗ್ಲಿಷ್ ಬರದೆ ಮುಜುಗರಕ್ಕೊಳಗಾಗುವ ಅವಮಾನ ಅನುಭವಿಸುವ ಹೆಂಗಸಿನ ಕಥೆಯಂತೆಕಂಡರೂ ಬರೀಅದಷ್ಟೇಅಲ್ಲ, ಆತ್ಮಾಭಿಮಾನವುಳ್ಳ ಪ್ರತಿಯೊಬ್ಬ ಹೆಂಗಸಿನ ಕಥೆ. ಹೆಣ್ಣಿನ ಮನಸ್ಸು, ಜೀವನದಅಸಹಾಯಕತೆ ಅನಿವಾರ್ಯ ಪರಿಸ್ಥಿತಿಗಳನ್ನು ಚಿಕ್ಕಚಿಕ್ಕ ದೃಶ್ಯಗಳ ಮೂಲಕ ಸೂಕ್ಷ್ಮವಾಗಿ ಬಿಚ್ಚಿಡುತ್ತಲೇತನ್ನ ಪರಿಮಿತಿಯಲ್ಲೇಹೊಸ ಸಾಧ್ಯತೆಯನ್ನು ಕಂಡುಕೊಳ್ಳುವ, ತನ್ನತನವನ್ನು ಬಿಟ್ಟುಕೊಡದೇ ಹೊಸ ಪ್ರಪಂಚವನ್ನು ಕಟ್ಟಿಕೊಳ್ಳುವ ಹೆಣ್ಣಿನ ಜೀವಂತಿಕೆ ಜೀವನಪ್ರೀತಿಯಕಥೆ. ಅಲ್ಲೇ ನಿದರ್ೇಶಕಿಗೌರಿ ಶಿಂಧೆ ಗೆದ್ದಿದ್ದಾರೆ; ಇಂಗ್ಲಿಷ್ ಬಾರದ ಸಮಸ್ಯೆಯನ್ನು ಮುಂದಿಟ್ಟುಕೊಂಡುಒಟ್ಟಾರೆಕಥೆಯ ವಸ್ತುವನ್ನು ನಿರ್ವಹಿಸಿದ ರೀತಿಗೆಇಷ್ಟವಾಗುತ್ತಾರೆ.
ಸಿನೆಮಾದ ಆರಂಭವೇತುಂಬ ಇಂಟ್ರೆಸ್ಟಿಂಗ್ ಆಗಿದೆ; ಬೆಳಗ್ಗೆ ಎದ್ದುಕಾಫಿ ಹೀರುತ್ತಾಆರಾಮಾಗಿ ಕುಳಿತು ಪೇಪರ್ಓದುವ ಭಾಗ್ಯ ಶಶಿ(ಶ್ರೀದೇವಿ)ಗಿಲ್ಲ. ಅತ್ತೆ, ಗಂಡ, ಮಕ್ಕಳು ಒಂದಲ್ಲಾಒಂದು ಕೆಲಸಕ್ಕೆ ಕೂಗುತ್ತಾರೆ. ಅವರೆಲ್ಲರಕರೆಗೆಓಗೊಡಬೇಕು, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕು, ಅವಶ್ಯಕತೆಗಳನ್ನು ಪೂರೈಸಬೇಕು.ಇದು ಅವಳೊಬ್ಬಳ ಕಥೆಅಲ್ಲ! ಎಲ್ಲಾ ಹೆಂಗಸರ ಬದುಕಿನಕಥೆ, ಎಲ್ಲಾಗೃಹಿಣಿಯರ ದಿನ ಆರಂಭವಾಗುವುದೇ ಹೀಗೆ.ಕುಟುಂಬದ ಪ್ರತಿಯೊಬ್ಬರ ಬೇಡಿಕೆಗಳನ್ನು ಪೂರೈಸಿ ಸಮಯ ಮಿಕ್ಕರೆ ಮಾತ್ರ ಸ್ವತಂ ಆಸೆ-ಆಸಕ್ತಿಗೆ ವಿನಿಯೋಗಿಸಿಕೊಳ್ಳುವ ಸ್ವಾತಂತ್ರ್ಯ.
ಆರಂಭದಲ್ಲಿಕಂಡುಬಂದ ಈ ಬಗೆಯ ಸೂಕ್ಷ್ಮತೆ, ಕಸುಬುಗಾರಿಕೆ ಮುಂದೆ ಸಿನೆಮಾದುದ್ದಕ್ಕೂ ಪ್ರತಿಯೊಂದುದೃಶ್ಯ ಸಂಭಾಷಣೆಯಲ್ಲೂಕಂಡುಬರುತ್ತದೆ. ಆ ಕಾರಣಕ್ಕಾಗಿಯೇ ಸಿನೆಮಾ ಆಪ್ತವಾಗುತ್ತಾ ಹೋಗಿ ಕೊನೆಯಲ್ಲಂತೂ ಶ್ರೀದೇವಿ ಇಡೀ ಮೈ ಮನವನ್ನಾವರಿಸಿಕೊಂಡುಬಿಟ್ಟಿರುತ್ತಾಳೆ; ಅಷ್ಟು ಮೋಡಿ ಮಾಡಿರುತ್ತದೆ, ಅವಳ ಪಾತ್ರಪೋಷಣೆ.
ಶಶಿಯ ಗಂಡ ಹೊರಗೆ ಆಫೀಸಿನಲ್ಲಿ ದುಡಿದರೆ ಶಶಿ ಮನೆಯಲ್ಲೇರುಚಿರುಚಿಯಾದ ಲಡ್ಡು ಮಾಡಿ ಮಾರುತ್ತಾಳೆ.ಅವಳು ತಯಾರಿಸುವ ಲಡ್ಡುಗಳಿಗೆ ಹೊರಗೆತುಂಬಾ ಬೇಡಿಕೆಯಿದೆ.ತಿಂದ ಪ್ರತಿಯೊಬ್ಬರೂಅದರ ವಿಶೇಷ ರುಚಿಯನ್ನು ಹೊಗಳುತ್ತಾರೆ, ಮೆಚ್ಚಿಕೊಳ್ಳುತ್ತಾರೆ. ಈ ಖುಷಿಯನ್ನು ಹಂಚಿಕೊಳ್ಳಲು ಶಶಿ ಗಂಡನಿಗೆ ಫೋನ್ ಮಾಡಿದರೆ ಅವನಿಗೆ ಆ ಬಗ್ಗೆ ಅಭಿಮಾನವೇನೂ ಇಲ್ಲ, ಅದು ದೊಡ್ಡ ವಿಷಯ ಎನಿಸುವುದೂ ಇಲ್ಲ, ನೀನು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬಾರದೇಕೆ? ಎನ್ನುತ್ತಾನೆ.
ಹೆಂಗಸು ತನ್ನ, ತಾನಿರುವ ಪರಿಸರದ ಇತಿಮಿತಿಗಳಲ್ಲೇ ಹೂಗಿಡಗಳನ್ನು ಬೆಳೆಸುವುದೋ, ಕರಕುಶಲ ಕೈಗಾರಿಕೆ ಮಾಡುವುದೋ ಇನ್ನೆನೋ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದರಲ್ಲೇ ಖುಷಿ ಕಂಡುಕೊಳ್ಳುತ್ತಾ ತನ್ನ ಪ್ರತಿಭೆಯ ಅಭಿವ್ಯಕ್ತಿಗೊಂದು ದಾರಿ ಕಂಡುಕೊಂಡಿರುತ್ತಾಳೆ. ಆದರೆ ಗಂಡಸು ಆ ಸೂಕ್ಷ್ಮವನ್ನರಿಯದೆ ತನ್ನ ನೀರಸ ಪ್ರತಿಕ್ರಿಯೆಯಿಂದ ಅವಳ ಉತ್ಸಾಹಕ್ಕೆ ತಣ್ಣೀರೆರಚುತ್ತಾನೆ. ಸಣ್ಣ-ಪುಟ್ಟ ವಿಷಯ ಘಟನೆಗಳಲ್ಲೂ ಖುಷಿಕಾಣುವ, ಸಂಭ್ರಮಿಸುವ ಹೆಣ್ಣಿನ ಭಾವ ಸೂಕ್ಷ್ಮತೆಯನ್ನು ಅರಿಯದ ಗಂಡಸಿನ ಸೌಜನ್ಯದ ಕೊರತೆ ಬಹುಷಃ ಎಲ್ಲರ ಮನೆ ಮನೆ ಕಥೆ.
ಮುಂದೆ ಸಂಬಂಧಿಕರೊಬ್ಬರ ಮದುವೆಯ ತಯಾರಿಯ ಸಲುವಾಗಿ ಒಬ್ಬಳೇ ಅಮೆರಿಕಾಕ್ಕೆ ಹೋಗಬೇಕಾಗಿ ಬಂದಾಗ ಶಶಿ ಅನುಭವಿಸುವ ಆತಂಕ, ಏರ್ಪೋಟರ್್ ವಿಮಾನಗಳಲ್ಲಿ ಅವಳ ಮನಸ್ಸಿನ ಅಧೀರತೆ ನೋಡುತ್ತಿರುವವರ ಮನಸ್ಸನ್ನೂ ಕಲಕಿ ಏನಾಗುತ್ತದೋ ಎಂದು ಚಡಪಡಿಸುವಂತಾಗುತ್ತದೆ. ಅವಳು ಸುರಕ್ಷಿತವಾಗಿ ಅಮೆರಿಕಾ ತಲುಪಿ ಸೇರಬೇಕಾವರನ್ನು ಸೇರಿದಾಗ ಸದ್ಯ ತಲುಪಿದಳಲ್ಲ ಎನ್ನುವ ನೆಮ್ಮದಿಯ ನಿಟ್ಟುಸಿರು. ಅಷ್ಟು ನೈಜವಾಗಿದೆ ಶ್ರೀದೇವಿಯ ಅಭಿನಯ.
ಇಲ್ಲಿಂದ ಮುಂದೆ ಅಮೆರಿಕದಂಥ ಅಪರಿಚಿತ ಪರಿಸರದಲ್ಲಿ ಇಂಗ್ಲಿಷ್ ಬರದ ಕೀಳರಿಮೆಯಿಂದ ನರಳುತ್ತಾ ಪೇಚಾಡುತ್ತಾ ಕೊನೆಗೆ ಇಂಗ್ಲಿಷ್ ಕ್ಲಾಸಿಗೆ ಸೇರಿಕೊಂಡು ಇಂಗ್ಲಿಷ್ ಕಲಿಯಲು ಮನಸ್ಸು ಮಾಡುವ ಶಶಿಯ ನಿಧರ್ಾರ ಸಿನೆಮಾದ ರೋಚಕ ಘಟ್ಟ. ಅಲ್ಲಿ ಬೇರೆ ಬೇರೆ ದೇಶದ ಇಂಗ್ಲಿಷ್ ಬರದ ವ್ಯಕ್ತಿಗಳು ವಿದ್ಯಾಥರ್ಿಗಳಾಗಿ ಸೇರಿಕೊಂಡಿದ್ದು ಅವರೊಡನೆ ಶಶಿಯ ಸ್ನೇಹ, ಅಲ್ಲಿನ ತಮಾಷೆ, ತಲೆಹರಟೆ ಎಲ್ಲವೂ ತುಂಬಾ ಲವಲವಿಕೆಯಿಂದ ಕೂಡಿದ್ದು ನಗೆಯುಕ್ಕಿಸುತ್ತವೆ. ಇಂಗ್ಲಿಷ್ ಬರದ ಫ್ರೆಂಚ್ ವ್ಯಕ್ತಿ ಮತ್ತು ಶಶಿಯ ನಡುವಿನ ಒಂದೊಂದೇ ಪದದ ಸಂಭಾಷಣೆ ಅತ್ಯಂತ ಸಹಜವಾಗಿದ್ದು ನಾವೂ ಕೂಡಾ ಎಷ್ಟೋ ಸಂದರ್ಭಗಳಲ್ಲಿ ಇಂಗ್ಲಿಷ್ ಬಾರದೆ ಕಮ್ಯುನಿಕೇಟ್ ಮಾಡಲು ಒದ್ದಾಡಿದ ಪ್ರಸಂಗಗಳನ್ನು ನೆನಪಿಗೆ ತಂದು ಸಮಸ್ಯೆ ನಮ್ಮೊಬ್ಬರದೇ ಅಲ್ಲ ಎಂದು ಕೊಂಚ ಸಮಾಧಾನವಾಗುತ್ತದೆ.
ಹೀಗೆ ಶಶಿ ಇಂಗ್ಲಿಷ್ ಕಲಿಕೆಯಲ್ಲಿ ತನ್ಮಯಳಾಗಿ ತನ್ನನ್ನು ತೊಡಗಿಸಿಕೊಂಡು ಹೊಸಾ ಪ್ರಪಂಚವೊಂದಕ್ಕೆ ಮುಖ ಮಾಡಿರುವಾಗಲೇ ಗಂಡ ಮಕ್ಕಳು ಸಡನ್ನಾಗಿ ಅಮೆರಿಕಾಕ್ಕೆ ಬಂದಿಳಿದು ಸರ್ಪ್ರೈಜ್ ಕೊಟ್ಟು ದಿಗಿಲು ಹುಟ್ಟಿಸುತ್ತಾರೆ. ಇಂಗ್ಲಿಷ್ ಕಲಿಯುವ ತುಡಿತಕ್ಕೆ ಸಂಸಾರ ಬಂಧನವಾಗುತ್ತದೆ. ಒಮ್ಮೆಯಂತೂ ಅವರಿಂದ ಹೇಗೋ ಕಳಚಿಕೊಂಡು ಯಾರಿಗೂ ಗೊತ್ತಾಗದಂತೆ ಇಂಗ್ಲಿಷ್ ಕ್ಲಾಸಿಗೆ ಹೋಗಿಬರುವ ಹೊತ್ತಿಗೆ ಶಶಿಯಮಗ ಬಿದ್ದು ಗಾಯಮಾಡಿಕೊಂಡು ಶಶಿ ಗಂಡನ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಮಕ್ಕಳ ಲಾಲನೆ-ಪಾಲನೆ ಬರೀ ಹೆಂಗಸರ ಕರ್ತವ್ಯ ಎಂದು ಭಾವಿಸಿರುವ, ಅದೇ ಅವಳ ಪರಮ ಆದ್ಯತೆಯಾಗಿರಬೇಕು ಎಂದು ಬಿಂಬಿಸಿರುವ ನಮ್ಮ ಸಮಾಜದ ಪ್ರತಿನಿಧಿಯಂತೆ ಗೋಚರಿಸುತ್ತಾನೆ ಶಶಿಯ ಗಂಡ. ಅವನ ಪ್ರತಿಯೊಂದು ಮಾತು, ನೋಟ, ವರ್ತನೆ ಎಲ್ಲವೂ ಹೆಂಡತಿ-ಹೆಂಗಸುಬರೀ ಅಡುಗೆ-ಮನೆ-ಮಕ್ಕಳು-ಸಂಸಾರಕ್ಕೆ ಸೀಮಿತ ಎನ್ನುವುದನ್ನು ಸೂಚಿಸುವಂತಿರುತ್ತವೆ.
ಅವಳ ಅನುಪಸ್ಥಿತಿಯಲ್ಲಿ ಮಗ ಬಿದ್ದು ಪೆಟ್ಟು ಮಾಡಿಕೊಳ್ಳುವುದು, ಅದಕ್ಕೆ ಗಂಡ ಅವಳನ್ನೇ ಹೊಣೆಯಾಗಿಸಿ ದೂರುವುದು ತೀರಾ ಸಣ್ಣ ಘಟನೆಯಾಗಿದ್ದರೂ ಆ ಮೂಲಕ ನಮ್ಮ ಸಮಾಜದಲ್ಲಿ ಬೇರುಬಿಟ್ಟಿರುವ ರೂಢಿಗತ ಯೋಚನೆಗಳನ್ನು ಚಿಂತನೆಗೆ ಹಚ್ಚುವಲ್ಲಿ ನಿದರ್ೇಶಕಿ ಸಫಲರಾಗಿದ್ದಾರೆ. ಮಕ್ಕಳು ಕೆಟ್ಟಕೆಲಸ ಮಾಡಿದರೆ ಅವರಮ್ಮ ಸರಿಯಾಗಿ ಬೆಳೆಸಲಿಲ್ಲ ಎಂದು ಹೆಣ್ಣಿನ ಮೇಲಷ್ಟೇ ಗೂಬೆ ಕೂರಿಸುವ ಸಮಾಜದ ಮನೋಧರ್ಮವನ್ನೇ ಪ್ರಶ್ನೆ ಮಾಡುವಷ್ಟು ಶಕ್ತಿ ಆ ದೃಶ್ಯಕ್ಕಿದೆ.
ಸಂಸಾರ ಸಾಧನೆಯಲ್ಲಿ ಆಯ್ಕೆಯ ವಿಚಾರ ಬಂದರೆ ಭಾರತೀಯ ಹೆಣ್ಣುಮಗಳು ಯಾವತ್ತೂ ಆಯ್ದುಕೊಳ್ಳುವುದು ಮೊದಲು ಸಂಸಾರವನ್ನೇ ಎನ್ನುವುದಕ್ಕೆ ರೂಪಕ ಶಶಿ ತನ್ನ ಮಹತ್ವಾಕಾಂಕ್ಷೆಯ ಇಂಗ್ಲಿಷ್ ಕ್ಲಾಸಿನ ಪರೀಕ್ಷೆಗೆ ಹೋಗದೆ ಮತ್ತೆ ಲಡ್ಡು ಮಾಡಲು ತೊಡಗಿದ್ದು. ಆದರೂ ಕೊನೆಗೆ ಮದುವೆಗೆ ಬಂದಿದ್ದ ನೆಂಟರು ಸ್ನೇಹಿತರು ಸಂಬಂಧಿಕರು ಸೇರಿರುವ ಪುಟ್ಟ ಗುಂಪಿನಲ್ಲಿ ಮದುವೆಯಾದ ಹೆಣ್ಣುಮಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ ಎದುರಾದಾಗ ಹಿಂಜರಿಯದೇ ಹೆಣ್ಣಿನ ಮನಸ್ಸು-ಭಾವನಾ ಪ್ರಪಂಚ-ಸಂಸಾರದಲ್ಲಿ ಅವಳ ಸ್ಥಾನದ ಬಗ್ಗೆ ತನ್ನದೇ ವಾಕ್ಯಗಳನ್ನು ಇಂಗ್ಲಿಷಿನಲ್ಲಿ ಪೋಣಿಸುತ್ತಾ ಮಾತನಾಡುವುದು, ಎಲ್ಲರ ಮೆಚ್ಚುಗೆ ಗಳಿಸುವುದು ಅದೇ ಹೆಣ್ಣಿನ ಛಲ ಆತ್ಮವಿಶ್ವಾಸದ ಪ್ರತೀಕ. ಅಂಜುತ್ತಾ ಅಳುಕುತ್ತಾ ವಿದೇಶಕ್ಕೆ ಹಾರಿದ ಶಶಿ ಸ್ವಂತ ಆಸಕ್ತಿ ಪರಿಶ್ರಮದಿಂದ ಇಂಗ್ಲಿಷ್ ಕಲಿತು ತನ್ನದಲ್ಲದ ಅನ್ಯ ಪ್ರಪಂಚವೊಂದನ್ನು ಗೆದ್ದ ಭಾವದಲ್ಲಿ, ತನ್ನದಾಗಿಸಿಕೊಂಡ ವಿಶ್ವಾಸದಲ್ಲಿ ಹೊಸ ಉತ್ಸಾಹದಿಂದ ತನ್ನ ದೇಶಕ್ಕೆ ಮರಳುವುದರೊಂದಿಗೆ ಸಿನೆಮಾ ಅರ್ಥಪೂರ್ಣವಾಗಿ ಅಂತ್ಯಗೊಳ್ಳುತ್ತದೆ.
ಅದೆಷ್ಟೋ ಜನರ ಕೀಳರಿಮೆಗೆ ಕಾರಣವಾಗಿ ಭವಿಷ್ಯಕ್ಕೇ ಸಂಚಕಾರವಾಗುವ ಇಂಗ್ಲಿಷ್ ಎನ್ನುವ ಭೂತವನ್ನೇ ವಸ್ತುವಾಗಿಸಿಕೊಂಡು ಕಥೆ ಹೆಣೆದು ಚಿಕ್ಕ ಚಿಕ್ಕ ಸರಳ ದೃಶ್ಯಗಳ ಮೂಲಕ ಅಗಾಧ ವಿಷಯಗಳನ್ನು ತೆರೆದಿಡುತ್ತಾ ಅನಂತ ಸಾಧ್ಯತೆಗಳನ್ನು ಹೊಳೆಯಿಸುವ ಇಂಗ್ಲಿಷ್ ವಿಂಗ್ಲಿಷ್ ನಿಜಕ್ಕೂ ಹೊಸ ಅಲೆಯ ಹೊಸ ಆಲೋಚನೆಯ ಸಿನೆಮಾ. ಇಂಗ್ಲಿಷ್ ಬರದ ಬಹುಸಂಖ್ಯಾತರ ಸಮಸ್ಯೆಗೆ ದನಿಯಾಗುತ್ತಲೇ ಅಂಥ ಕೀಳರಿಮೆಯನ್ನು ಗೆದ್ದು ಹೊಸಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆಯನ್ನು, ಮನಸ್ಸು ಮಾಡಿದರೆ ಹೆಣ್ಣು ಏನನ್ನೂ ಸಾಧಿಸಬಲ್ಲಳು ಎನ್ನುವ ಹೆಣ್ಣಿನ ಶಕ್ತಿ ಚೈತನ್ಯದ ಜೊತೆ ಜೊತೆಗೇ ಪರಿಚಯಿಸಿದ ನಿದರ್ೇಶಕಿ ಗೌರಿಶಿಂಧೆ ನಿಜಕ್ಕೂ ಅಭಿನಂದನಾರ್ಹರು.








ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಓದಿ ಖುಷಿ ಆಯಿತು.
ಮಾಲಾ