ಉತ್ಪಾತವಾಗಬೇಕಿದೆ ಈಗ

ರವಿ ಕುಂಬಾರ

ಕನ್ನಡ ಬ್ಲಾಗರ್ಸ್

“ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು”

ಎಚ್. ಎಸ್. ವೆಂಕಟೇಶಮೂರ್ತಿ

 

ಉತ್ಪಾತವಾಗಬೇಕಿದೆ ಈಗ

ಮನೆಗಳಲ್ಲಿ ಗುಡಿಗಳಲ್ಲಿ

ಚರ್ಚು ಮಸೀದಿಗಳಲ್ಲಿ

ಮತ್ತೆಲ್ಲಕ್ಕಿಂತ ಹೆಚ್ಚಾಗಿ

ನಮ್ಮ ಮನಗಳಲ್ಲಿ.

.

ಹಸಿದ ಹೊಟ್ಟೆಗಳ

ನರಳಾಟ ಕೇಳದೆ

ಕಂತೆ ಕಂತೆ ನೋಟು

ಹುಂಡಿಗೋ, ಜೋಳಿಗೆಗೋ

ಡಬ್ಬಿಗೋ ಹಾಕಿ

ದೈವ ಸಂಪನ್ನವಾದ ಹಾಗೆ

ಹುಸಿ ತೃಪ್ತಿಯಲ್ಲಿರದಂತೆ

ಉತ್ಪಾತವಾಗಬೇಕಾಗಿದೆ ಈಗ.

.

ಅನಾಥ ಕಣ್ಣಲಿ

ಜಿನುಗುವ ಹನಿಗಳ

ಒರೆಸದೆ ವರ್ಷಕ್ಕೊಮ್ಮೆ

ಹಣ್ಣು- ಬಟ್ಟೆ ಕೊಟ್ಟು

ಬೀಗದಿರುವಂತೆ

ಉತ್ಪಾತವಾಗಬೇಕಾಗಿದೆ ಈಗ.

.

ಸಾವಿರ ಒಸಾಮರು

ಸತ್ತು ನರಿಮೊಗದ

ಒಬಾಮರು ಹುಟ್ಟಿದರೂ

ಸುಳ್ಳು ಸಾಂತ್ವನದ ಬದುಕ

ನೆಚ್ಚಿಕೊಳ್ಳದಂತೆ

ಉತ್ಪಾತವಾಗಬೇಕಿದೆ ಈಗ.

.

ಭಾವ ಲೋಕದ

ತಲ್ಲಣಗಳಿಗೆ ಕಿವುಡಾಗಿ

ಸುಳ್ಳೇ ನಿರ್ಲಿಪ್ತವಾಗಿರದಂತೆ

ಶೋಷಣೆಯ ಹಲ

ಮುಖವಾಡಗಳು ಜಯಭೇರಿ

ಹೊರಟಿರುವಾಗ ಸುಮ್ಮನಿರದಂತೆ

ಉತ್ಪಾತವಾಗಬೇಕಿದೆ ಈಗ.

.

ಇದೆಲ್ಲಕ್ಕಿಂತ ಮಿಗಿಲಾಗಿ

ಮನುಷ್ಯತ್ವದ ಹಲವು

ಸೊಗಸಾದ ಗುಣಗಳ

ಮರೆತು ಇರಲಾರದಂತೆ

ಉತ್ಪಾತವಾಗಬೇಕಾಗಿದೆ ಈಗ

ನಿಮ್ಮಲ್ಲಿ, ನನ್ನಲ್ಲಿ

ಮುಂದುವರೆದು….

ನಮ್ಮ ಎಳೆಯರಿಗೆ

ನಾವು ಕಟ್ಟಿಕೊಡುತ್ತಿರುವ

ಕನಸುಗಳಲ್ಲಿ……….

 

‍ಲೇಖಕರು G

May 9, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. parimala

    wonderful poem anna.ninna bhavanegalu,ninna tallanagalu ninnavu matra aagade sarvara manada tallanagalagive.ninage devaru hecchecchu shakti kodali bareyalu mattee odalu.

    ಪ್ರತಿಕ್ರಿಯೆ
  2. ravikumar kumbar

    ನಿನ್ನ ಸುಂದರ ಹಾರೈಕೆಗಳಿಗೆ ವಂದನೆಗಳು ಸಹೋದರಿ. ನಿನ್ನ ಪ್ರೋತ್ಸಾಹ ಹೀಗೆ ಇರಲಿ ಎಂದು…….. ಅಣ್ಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: