ಮೈತ್ರಿ ಪ್ರಕಾಶನ ಸಂಸ್ಥೆಯ 2021ರ ಸಾಲಿನ ಪುಸ್ತಕ ಬಹುಮಾನ ಹಾಗೂ ಹಲವು ಕೃತಿಗಳ ಬಿಡುಗಡೆಯನ್ನು ಈ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
‘ಒಂದು ಇಡಿಯ ಬಳಪ’ ಹಸ್ತಪ್ರತಿಗಾಗಿ ಬಹುಮಾನ ಗೆದ್ದ ಸುಧಾ ಆಡುಕಳ ಅವರಿಗೆ ಪ್ರಶಸ್ತಿ ವಿತರಣೆಯನ್ನು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಅವರು ಮಾಡಿದರು.
ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ʻಕೂರ್ಗ್ ರೆಜಿಮೆಂಟ್’, ಗುರುಪ್ರಸಾದ ಕುರ್ತಕೋಟಿ ಅವರ ʻಕೇಶ ಕ್ಷಾಮʼ, ಸುಧಾ ಆಡುಕಳ ಅವರ ʻಒಂದು ಇಡಿಯ ಬಳಪʼ, ಅಂಜನಾ ಹೆಗಡೆ ಅವರ ʻಹೂ ನಗೆʼ, ಟಿ. ಎಸ್. ಶ್ರವಣಕುಮಾರಿಯವರ ʻಸಂಜೆಯ ಮಳೆʼ ಹೀಗೆ ಐದು ಪುಸ್ತಕಗಳು ಬಿಡುಗಡೆಗೊಂಡವು.
ಸಮಾರಂಭದಲ್ಲಿ ಜಿ ಎನ್ ಮೋಹನ್, ಮೇಘನಾ ಸುಧೀಂದ್ರ ಮುಖ್ಯ ಅತಿಥಿಗಳಾಗಿದ್ದರು. ಪ್ರಕಾಶಕರಾದ ಉಮೇಶ್ ಹಾಗೂ ಅಂಜಲಿ ದೇಸಾಯಿ ಅವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಛಾಯಾಗ್ರಾಹಕ ವೆಂಕಟೇಶ್ ಮೂರ್ತಿ ಅವರು ಕಂಡಂತೆ ಪುಸ್ತಕಗಳ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.























ಸಮಾರಂಭವು ಚೆನ್ನಾಗಿ ಮೂಡಿಬಂತು.