ಗುಲ್ಜಾರ್

ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನೊಬ್ಬ ನಟ.
ನಾನು ನಟನಾಗಿರುವುದರಿಂದ
ಹಲವಾರು ಬದುಕುಗಳನ್ನು ಬಾಳಬೇಕು
ಒಂದೇ ಜೀವನದಲ್ಲಿ.
ಪ್ರತಿದಿನ ನನ್ನ ಪಾತ್ರ ಬದಲಾಗುತ್ತಿರುತ್ತದೆ
ಹಾಗೆಯೇ ಅವಸ್ಥೆಯೂ.
ಕಥೆಯ ಪ್ರಕಾರ
ಮುಖ ಚರ್ಯೆ, ನಡತೆ ಎಲ್ಲ
ಚೇಂಜ್ ಆಗುತ್ತವೆ.
ಆದರೆ ಧರಿಸುವ ಪೋಷಾಕುಗಳ
ಮೇಲಿರುವ ಕಲೆ
ಅಷ್ಟು ಸುಲಭವಾಗಿ ಮಾಸುವುದಿಲ್ಲ.
ಯಾವದೋ ಒಂದು
ದುರಂತ ಪಾತ್ರದ ನೋವು
ಒಳಗೆಲ್ಲೋ ಉಳಿದುಕೊಂಡು ಬಿಡುತ್ತದೆ.
ಒಂದು ಮೊನಚಾದ ಪಾತ್ರ
ರಕ್ತದಲ್ಲೆಲ್ಲಾ ಹರಿದಾಡಿತೆಂದರೆ
ಹೃದಯದ ಮೇಲೆ
ಗೀಚು ಗಾಯಗಳು
ಎಷ್ಟೋ ದಿನ ಹಾಗೆಯೇ ಇರುತ್ತವೆ.
ಫ್ಯಾನುಗಳ ಗಾಳಿಗೆ ಸಿಕ್ಕು
ಚದುರಿ ಹೋಗುವ
ಕಾಲ್ಪನಿಕ ಪಾತ್ರಗಳಲ್ಲ ಇವು,
ಸೀದಾ ಬದುಕಿನ ದಾರಿಯಿಂದ
ಎತ್ತಿಕೊಂಡಂಥವು,
ಎದೆಯ ಯಾವುದೋ ಮೂಲೆಯಲ್ಲಿ
ಡೈಲಾಗುಗಳ ಮಸಿ
ಹಾಗೆಯೇ ಉಳಿದು ಬಿಡುತ್ತದೆ.
ಪರದೆಗಾಗಿಯೇ ಬರೆದಿರುವ
ಜೀವಂತ ಸಾಲುಗಳಂತೆ ಕಾಣಿಸಿಕೊಳ್ಳುತ್ತೇನೆ.
ನಾನೊಬ್ಬ ನಟ
ಆದರೆ ಬರೀ ನಟನಲ್ಲ
ಕಾಲದ ಸಂಕ್ಷಿಪ್ತ ಸಾಕ್ಷಿಪ್ರಜ್ಞೆ.
– Gulzar





ಚೆನ್ನಾಗಿದೆ
sundaragiyu, arthavattagiyu ide.