15th BIFFES: ದಿನ-6: ಸೀನಿಯರ್ರುಗಳದೇ ಮೇಲುಗೈ

ಜಯರಾಮಾಚಾರಿ

**

ಆರು ದಿನವಾದರೂ ಜನಸಾಗರ ಹರಿದು ಬರುತ್ತಿರುವುದು ಬೆಂಗಳೂರಿನಲ್ಲಿರುವ ಚಿತ್ರಪ್ರೇಮಿಗಳಿಗೆ, ಸಿನಿಕರ್ಮಿಗಳಿಗೆ, ಫೆಸ್ಚಿವಲ್ ಪ್ರೀತಿಗೆ ಸಾಕ್ಷಿ.

ಮುಂಬೈ ಫೆಸ್ಟಿವಲ್ ಮಾದರಿಯಲ್ಲಿ ಬೆಂಗಳೂರಿನ ಬೇರೆ ಬೇರೆ ಜಾಗದ ಪಿವಿಆರ್ ಗಳಲ್ಲಿ ನಡೆಸಿದರೆ ಇನ್ನಷ್ಟು ಸಿನಿಪ್ರೇಮಿಗಳನ್ನು ತಲುಪಬಹುದು

ಸೀನಿಯರ್ರುಗಳದೇ ಮೇಲುಗೈ

ಇಷ್ಟು ದಿನಗಳಲ್ಲಿ ಸೀನಿಯರ್ ಸಿಟಿಜನ್ನುಗಳೇ ಹೆಚ್ಚಾಗಿ ಫೆಸ್ಟಿವಲ್ ಗೆ ಹರಿದು ಬಂದಿರುವುದು, ಅಲ್ಲಿಂದ ಇಲ್ಲಿಂದ ಇಲ್ಲಿಂದ ಅಲ್ಲಿಗೆ ಓಡಾಡುತ್ತ, ಯಾವ ಸಿನಿಮಾ ಯಾವ ಸ್ಕ್ರೀನು ಎಂದು ಕೇಳುತ್ತಾ, ಜಾಗ ಸಿಕ್ಕರೆ ನುಸುಳಿಕೊಳ್ಳುತ್ತ, ಸಿನಿಮಾ ಬೋರು ಅನಿಸಿದರೆ ಮೊದಲ ಸೀನಿಗೆ ಮುಲಾಜಿಲ್ಲದೇ ಹೋಗುತ್ತ ಚಿತ್ರಪ್ರೇಮಕ್ಕೆ ಅದ್ಭುತ ಸಾಕ್ಷಿಯಾಗಿದ್ದಾರೆ.

ಸೀನಿಯರ್ ಸಿಟಿಜನ್ನುಗಳಿಗೆ ಕೆಲವು ಸಾಲು ಸೀಟುಗಳನ್ನು ಮೀಸಲಿಟ್ಟರೂ ಒಳ್ಳೆಯದು, ಸಾಲಿನಲ್ಲಿ ತುಂಬ ಹೊತ್ತು ನಿಲ್ಲಲಾಗದವರಿಗೆ ಅನುಕೂಲ

ಟು ಬಿ ಆರ್ ನಾಟ್ ಟು ಬಿ ~

ಕೆಲವು ಹಾಗೇ ಉಳಿದ ಸ್ಕ್ರೀನುಗಳಿಗೆ TBA ಅಂದ್ರೆ To be announced ಸ್ಕ್ರೀನುಗಳಲ್ಲಿ ಹಾಕುವ ಸಿನಿಮಾಗಳ ಮಾಹಿತಿ ಬಗ್ಗೆ ಬೋರ್ಡ್ ಇರುವಂತೆ ಪ್ರತಿಯೊಬ್ಬರಿಗೂ ಮೆಸೇಜು ತಲುಪಿದರೆ ಇನ್ನೂ ಚೆಂದವಿರುತ್ತದೆ.

ಕೇವಲ ಒಂದೇ ಸಲ ಆದ Monster ಎಂಬ ಅದ್ಭುತ ತುಂಬ ಜನ ಮಿಸ್ ಮಾಡಿಕೊಂಡರು.

ಮಿಥ್ಯ, ೨೦೨೩,ಕನ್ನಡ, ಸುಮಂತ್ ಭಟ್ ನಿರ್ದೇಶನದ ಚಿತ್ರ. ವಿಶ್ವ ಸಿನಿಮಾಗಳ ಮಟ್ಚಿಗೆ ಮೇಕಿಂಗ್ ಜೊತೆಗೆ ಅಷ್ಟೇ ಗಾಢವಾಗಿ ಕಾಡುವ ಕಥಾ ಹಂದರದ ಚಿತ್ರ.

ಕಣ್ಮುಂದೆಯೇ ತಂದೆ ತಾಯಿಯನ್ನು ಕಳೆದುಕೊಂಡ ಮಿಥುನ್ ಅಲಿಯಾಸ್ ಮಿಥ್ಯ ಆ ನಂತರದ ಪಯಣವನ್ನು, ತಳಮಳವನ್ನು, ಸಾವಿನ ನೆನಪಿಂದ ಹೊರಬರಲು ಒದ್ದಾಡುವುದನ್ನು ಇಂಚಿಂಚಾಗಿ ಕಟ್ಟಿಕೊಟ್ಟಿದ್ದಾರೆ.

ಕೊನೆಯ ದೃಶ್ಯ ಚಿತ್ರವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂತೆ ಮಾಡುತ್ತದೆ.

ದಿ ಮಂಕ್ & ದಿ ಗನ್, ಭೂತಾನಿಸ್, ೨೦೨೩, ಪಾವೋ ಚೋಯ್ನಿಂಗ್ ಡೋರ್ಜಿ ನಿರ್ದೇಶನದ, 96ನೇ ಅಕಾಡೆಮಿ ಅವಾರ್ಡ್ಸಿಗೆ ಭೂತಾನ್ ದೇಶದಿಂದ ಸೆಲೆಕ್ಟ್ ಆದ ಚಿತ್ರ.

ರಾಜತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೊರಟ ಭೂತಾನಿನಲ್ಲಿ ಎಲೆಕ್ಷನ್ ಪರಿಚಯಿಸಿದಾಗ, ಇತ್ತ ಮಾಕ್ ಎಲೆಕ್ಷನ್ ತಯಾರಿ, ಅತ್ತ ಮೊದಲ ಸಲ ಎಲೆಕ್ಷನ್ನಿಗೆ ತಯರಾಗುತ್ತಿರುವ ಜನ, ಟಿವಿ ಇಂಟರ್ನೆಟ್ ಇಂದ ಪ್ರಪಂಚಕ್ಕೆ ತೆರೆದುಕೊಂಡಿರುವ ಭೂತಾನಿಗೆ ಎಲೆಕ್ಷನ್ ಅಂಬೆಗಾಲು ಇಟ್ಟುಕೊಂಡು ಬರುತ್ತದೆ.

ಅದೇ ಸಮಯದಲ್ಲಿ ಉರಾ ಪ್ರಾಂತ್ಯದ ಲಾಮ ತನ್ನ ಶಿಷ್ಯನಿಗೆ ಗನ್ ಬೇಕೆಂದು ಹುಡುಕಿ ತರಬೇಕೆಂದು ಹೇಳುತ್ತಾನೆ, ಅದೇ ಸಮಯದಲ್ಲಿ ಭೂತಾನಿನಲ್ಲಿರುವ ಹಳೆಯ ಗನ್ ಹುಡುಕುತ್ತಾ ಅಮೆರಿಕಾದವನೊಬ್ಬ ಬರುತ್ತಾನೆ.

ಆ ಲಾಮಾ (ಮಂಕ್) ಗನ್ ಕೇಳಿದ್ದು ಯಾಕೆ? ಮಾಕ್ ಎಲೆಕ್ಷನ್ ಏನಾಗುತ್ತದೆ? ಅಮೆರಿಕನ್ ಪ್ರಜೆಗೆ ಗನ್ ಸಿಗುತ್ತ?

ಇದೇ ಸಿನಿಮಾ. ಹಾಸ್ಯದ ಜೊತೆ ಜೊತೆಯೇ ರಾಜಕೀಯ ಮಾನವ ಸಂಬಂಧಗಳ ಬಗ್ಗೆ ಚೆನ್ನಾಗಿ ನೇಯ್ದು, ದೊಡ್ಡ ಪ್ರಜಾಪ್ರಭುತ್ವ ದೇಶಗಳ ಕೆನ್ನೆಗೆ ಬಾರಿಸುತ್ತ, ಕೊನೆಗೆ ಮನುಷ್ಯ ಸಂಬಂಧ, ಪ್ರಕೃತಿ ಎಷ್ಟು ಮುಖ್ಯ ಎಂದು ಹೇಳುತ್ತದೆ.

ಕಮರ್ಶಿಯಲ್ ಸಿನಿಮಾದಂತೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಲೇ ಒಂದು ಗಂಭೀರ ವಿಷಯವನ್ನು ನಿರಾಳವಾಗಿ ಪ್ರೇಕ್ಷಕನಿಗೆ ದಾಟಿಸುವ ಚಿತ್ರ.

ಹೌಸ್ ಫುಲ್ ಪ್ರದರ್ಶನವಾಯ್ತು.

‍ಲೇಖಕರು avadhi

March 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: