ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆರಡು ಕವಿತೆಗಳು…

ಎರಡು ಕವಿತೆಗಳು

11796342_1602705260017486_9193627475561267630_n

ಕು ಸ ಮಧುಸೂದನ್

1

ಹಾಸಿಗೆ
ಹಾಸಿಗೆ ಹೊಲಿಯುವವನು
ಹಾಸಿಗೆ ಮೇಲೇಂದೂ ಮಲಗಿಯೇ
ಇರುವುದಿಲ್ಲ
ಅನ್ನೋದು ನಮಗೆ ಗೊತ್ತಾಗೋದೇ ಇಲ್ಲ!
ಗೊತ್ತಿದ್ದರು ಹೊಸ ಹಾಸಿಗೆ ಹೊಲಿಸಿಕೊಂಡ ನಮ್ಮ
ತಲೆಯೊಳಗೆ ಗಿರಕಿ ಹೊಡೆಯೋದು
ಹೊಸದಾಗಿ ಮಾಡಿಸಿದ ಸಾಗುವಾನಿ
ಮಂಚದಳತೆಗದು ಹೊಂದಿ ಕೊಳ್ಳುತ್ತದೆಯೇ?
ಹೊಲಿದವನು ಹತ್ತಿಯ ಗಂಟು ಗಂಟು
ಮಾಡಿಟ್ಟಿಲ್ಲ ತಾನೆ?
ಅದರ ಮೇಲ್ಯಾವ ಬಣ್ಣದ ಹೊದಿಕೆ ಹಾಸುವುದು?
ಹೊಸ ಹಾಸಿಗೆಯಲಿ ಹಳೆ ಹೆಂಡತಿ
ಮೈಥುನದ ಸಮಯಕೆ ಹೂ ಹಾಕುವುದೊ ಬೇಡವೊ?
ಅವಳು ಊರಿಗೆ ಹೋದಾಕ್ಷಣ
ಕರೆಸಿಕಕೊಳ್ಳುವ ಇವಳು ಬಂದಾಗ ಅದೇ ಹಾಸಿಗೆಯ ಉಪಯೋಗಿಸಬಹುದೆ?
ಆದರೆ ಹಾಸಿಗೆ ಹೊಲಿಯುವವನಿಗೆ
ಈ ದು:ಖವಿರುವುದಿಲ್ಲ!
ಪಾಪ ದಣಿದು ಮಲಗುತ್ತಾನೆ
ಹರಿದ ಈಚಲು ಚಾಪೆಯ ಮೇಲೆ!

**

ಶೂನ್ಯ

2
ಹಗಲು ಇರುಳ ನುಂಗಿ
ಬೆಳಕು ಕತ್ತಲ ನುಂಗಿ
ಮಾತು ಮೌನವ ನುಂಗಿ
ನೆಲೆಸಿದ ಕಗ್ಗತ್ತಲ
ಮಹಾಮೌನದೊಳಗೊಂದು
ಶೂನ್ಯ ಸೃಷ್ಠಿಯಾಯಿತು
ಶೂನ್ಯದೊಳಗೇನೂ ಇರುವುದಿಲ್ಲವೆಂಬ
ತತ್ವಜ್ಞಾನಿಗಳ ಮಾತ ಸುಳ್ಳು ಮಾಡಲೆಂಬಂತೆ
ಅದರೊಳಗೊಂದು ಹೊಸ ಬಲ್ಬು ಇಳಿಬಿಟ್ಟು
ಮಾತಿನೆರಡು ಕೂಸುಗಳನಾಡಲು ಬಿಟ್ಟು
ಕಾವಲು ಕೂತ!

‍ಲೇಖಕರು G

30 September, 2015

1 Comment

  1. mounayogi

    ಹಗಲು ಇರುಳ ನುಂಗಿ
    ಬೆಳಕು ಕತ್ತಲ ನುಂಗಿ
    ಮಾತು ಮೌನವ ನುಂಗಿ
    ನೆಲೆಸಿದ ಕಗ್ಗತ್ತಲ
    ಮಹಾಮೌನದೊಳಗೊಂದು
    ಶೂನ್ಯ ಸೃಷ್ಠಿಯಾಯಿತು
    ಶೂನ್ಯದೊಳಗೇನೂ ಇರುವುದಿಲ್ಲವೆಂಬ
    ತತ್ವಜ್ಞಾನಿಗಳ ಮಾತ ಸುಳ್ಳು ಮಾಡಲೆಂಬಂತೆ
    ಅದರೊಳಗೊಂದು ಹೊಸ ಬಲ್ಬು ಇಳಿಬಿಟ್ಟು
    ಮಾತಿನೆರಡು ಕೂಸುಗಳನಾಡಲು ಬಿಟ್ಟು
    ಕಾವಲು ಕೂತ! bhavanegalannu beseyuv kavithe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading