ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾರುವ ಹಕ್ಕಿ ನಿಂತ ಗಿಡದಲಿ ಗೂಡು ಕಟ್ಟಿದ ಹಾಗೆ…

ಪ್ರೀತಿಯ ಕಾಲ

ದತ್ತು ಕುಲಕರ್ಣಿ

ಓಡುವ ನದಿ
ಹಾದಿ ಬದಿಯ ಹಳ್ಳಿಗೆ
ನೀರುಡಿಸಿದ ಹಾಗೆ
 
ಹಾರುವ ಹಕ್ಕಿ
ನಿಂತ ಗಿಡದಲಿ
ಗೂಡು ಕಟ್ಟಿದ ಹಾಗೆ.
 
ಈಜುವ ಮೀನು
ಅರೆಕ್ಷಣದಲಿ ಕಾಲ್ಬೆರಳ
ಕಚ್ಚಿ ಕಚಗುಳಿಸಿದ ಹಾಗೆ
 
ಜಾರುವ ಜಲಪಾತ
ಕಲ್ಲ ಮೇಲೆ ಬೋರ್ಗರಿಸಿ
ಬಿಳಿ ನೊರೆಯ ಚಿಮ್ಮಿಸಿದ ಹಾಗೆ
 
ಎಲ್ಲೆಲ್ಲೊ ಬೀಸುವ ಗಾಳಿ
ಹೂವ ನೇವರಿಸಿ
ಸುಗಂಧವ ಹೊತ್ತು ಹಂಚಿದ ಹಾಗೆ

ನಿಂತ ಗುಡ್ಡ
ಹಾರಾಡುವ ಮೋಡವ
ಸ್ಪರ್ಶಿಸಿ ಮಳೆಗರೆದ ಹಾಗೆ
 
ಮಿಂಚುವ ಸಿಡಿಲು
ಕಾರ್ಗತ್ತಲ ಸೀಳಿ
ದಾರಿ ತೋರಿಸಿದ ಹಾಗೆ
 
ಸುಡುವ ಸೂರ್ಯ ಕಿರಣ
ಮಳೆಯ ಹನಿಯ ಕಂಡು
ಕಾಮನಬಿಲ್ಲಾದ ಹಾಗೆ
 
ಕಳೆದು ಹೋಗುವ ಕಾಲ
ಪ್ರೀತಿ, ನಗುವಿನ ಕ್ಷಣದಲಿ
ಸ್ಠಬ್ಧವಾದ ಹಾಗೆ.

‍ಲೇಖಕರು G

15 February, 2014

4 Comments

  1. Nasrin

    chanagide

  2. gururaj katriguppe

    LOVELY, LIVELY, POEM. THANX FOR GIVING IT TO US.

  3. nagraj.harapanahalli

    lovely lines

  4. mmshaik

    chendada kavana..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading