`ಅಮ್ಮ ಪ್ರಶಸ್ತಿ’ಗೆ ೨೫ನೇ ವರ್ಷ- ಬೆಳ್ಳಿ ಸಂಭ್ರಮ
ಪ್ರತಿಭಾ ನಂದಕುಮಾರ, ಪದ್ಮಲತಾ ಮೋಹನ್, ಸಂತೆಬೆನ್ನೂರು ಫೈಜ್ನಟ್ರಾಜ್, ಮಹಾದೇವ ಹಡಪದ, ಜಯರಾಮಚಾರಿ, ಮಮತಾ ಅರಸೀಕೆರೆ, ಬೇಲೂರು ರಘುನಂದನ್, ಚೀ.ಜ.ರಾಜೀವ್, ಡಾ.ಸಂತೋಷ ಹಾನಗಲ್ ಹಾಗೂ ಡಾ.ಶರಣಮ್ಮ ಪಾಟೀಲ ಕಲಬುರಗಿ
೧೦ ಕೃತಿಗಳಿಗೆ ಅಮ್ಮ ಪ್ರಶಸ್ತಿ’ ಕಲಬುರಗಿ, ನ.೧೬ – ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ’ಗೆ ಸಾಹಿತಿಗಳಾದ ಪ್ರತಿಭಾ ನಂದಕುಮಾರ, ಪದ್ಮಲತಾ ಮೋಹನ್, ಸಂತೆಬೆನ್ನೂರು ಫೈಜ್ನಟ್ರಾಜ್, ಮಹಾದೇವ ಹಡಪದ, ಜಯರಾಮಚಾರಿ, ಮಮತಾ ಅರಸೀಕೆರೆ, ಬೇಲೂರು ರಘುನಂದನ್, ಚೀ.ಜ.ರಾಜೀವ್, ಡಾ.ಸಂತೋಷ ಹಾನಗಲ್ ಹಾಗೂ ಡಾ.ಶರಣಮ್ಮ ಪಾಟೀಲ (ಕಲಬುರಗಿ) ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾವ್ಯ ವಿಭಾಗದಲ್ಲಿ ಪ್ರತಿಭಾ ನಂದಕುಮಾರ ಬೆಂಗಳೂರು (ಇಳಿದು ಬರುವುದಿಲ್ಲ ತಾಯಿ) ಹಾಗೂ ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ (ದ್ರೌಪದಿಯ ವಾಷಿಂಗ್ ಮಿಷನ್ನು), ಕಥಾ ವಿಭಾಗದಲ್ಲಿ ಜಯರಾಮಚಾರಿ ಬೆಂಗಳೂರು (ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ) ಹಾಗೂ ಡಾ.ಶರಣಮ್ಮ ಪಾಟೀಲ ಕಲಬುರಗಿ (ರರಾಚಿ), ಕಾದಂಬರಿ ವಿಭಾಗದಲ್ಲಿ ಮಹಾದೇವ ಹಡಪದ ಧಾರವಾಡ (ಅನಿಮಿಷಯೋಗಿ) ಹಾಗೂ ಪದ್ಮಲತಾ ಮೋಹನ್ ದಕ್ಷಿಣ ಕನ್ನಡ (ಎಲ್‌ಬಿಡಬ್ಲೂ), ನಾಟಕ ವಿಭಾಗದಲ್ಲಿ ಮಮತಾ ಅರಸೀಕೆರೆ ಹಾಸನ (ಗೂಡು ಸೇರಿದ ಹಕ್ಕಿಗಳು) ಹಾಗೂ ಬೇಲೂರು ರಘುನಂದನ್ ಬೆಂಗಳೂರು (ಶರ್ಮಿಷ್ಠೆ), ಲೇಖನ ಸಂಕಲನ ವಿಭಾಗದಲ್ಲಿ ಡಾ.ಸಂತೋಷ ಹಾನಗಲ್ ಹಾವೇರಿ (ಭಾಷೆ ಮತ್ತು ಬದುಕು) ಹಾಗೂ ಚೀ.ಜ.ರಾಜೀವ್ ಮೈಸೂರು (ಪ್ರಿಯ ಗಾಂಧೀ) ಕೃತಿಗಳನ್ನು ೨೬ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊAಡಿದ್ದು, ಇದೇ ನವೆಂಬರ್ ೨೬ ರಂದು ಸಂಜೆ ೫.೩೦ ಕ್ಕೆ ಸೇಡಮ್‌ನ ಶ್ರೀ ಪಂಚಲಿ೦ಗೇಶ್ವರ ದೇವಾಲಯದ ಶಾಂಭವಿ ರಂಗಮ೦ಟಪದಲ್ಲಿ ನಡೆಯುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿಗೆ ೨೬ ರ ಸಂಭ್ರಮ
ಕಳೆದ ೨೬ ವರ್ಷಗಳಿಂದ ನಿರಂತರವಾಗಿ ತಾಲೂಕು ಕೇಂದ್ರವೊ೦ದರಿ೦ದ ದಿನಾಂಕ, ಸ್ಥಳ ಬದಲಿಸದಂತೆ, ಎಲ್ಲವನ್ನೂ ಬದ್ಧತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಮ್ಮ ಪ್ರಶಸ್ತಿ’ಗೆ ಈ ಬಾರಿ ೨೬ ನೇ ವರ್ಷದ ಸಂಭ್ರಮ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿ’ಗೆ ಈಗ ೨೬ ನೇ ವರ್ಷ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.






0 Comments