ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಜುತ್ತಲೇ ಇದ್ದೇವೆ ಅಕ್ವೇರಿಯಂ ಒಳಗೆ

ಅಕ್ವೇರಿಯಂ

1908151_1585804178374261_1684363437604448889_n

ಕು ಸ ಮಧುಸೂದನ್ ನಾಯರ್

1
ಹಳೆಯದಾಯಿತು ಬಿಡಿ
ಕೂಪಮಂಡೂಕದ ಕಥೆ ವ್ಯಥೆ
ಇದು ಅಕ್ವೇರಿಯಂಗಳ ಕಾಲ
ಸಾಗರವೆಂದು ಬಾವಿಸಿ ಈಜುತ್ತಿವೆ
ಈ ತುದಿಯಿಂದ ಆ ತುದಿವರೆಗೂ
ಬಣ್ಣಬಣ್ಣದ ತರೇವಾರಿ ಮೀನುಗಳು
ಗಾಜಿನ ಗೋಡೆಗೆ ಡಿಕ್ಕಿ ಹೊಡೆಯುವ ತನಕ
ಗಾಜುಪೆಟ್ಟಿಗೆಯನ್ನೇ ಕಡಲೆಂದು ಬಾವಿಸಿದ
ಮೂರ್ಖ ಛೇ! ಛೇ!
ಮುಗ್ದ ಮೀನುಗಳು!
ಗೊತ್ತದರು ಮೋಸ ಹೋಗಿದ್ದು ಹೊರ ನೆಗೆಯಲಾಗುವುದಿಲ್ಲ
ಇರುವ ಮನೆಯಾಚೆಗೆ;
ಬುದ್ದಿವಂತರೆಂದುಕೊಂಡ ಮನುಷ್ಯರು ನಾವು
ಈಜುತ್ತಲೇ ಇದ್ದೇವೆ
ಸಮಾಜದ ಅಕ್ವೇರಿಯಂ ಒಳಗೆ
ಶತಮಾನಗಳಿಂದ
ವ್ಯವಸ್ಥೆಯ ಗಾಜಿನ ಪೆಟ್ಟಿಗೆ
ಒಡೆದು ಹೊರಬರಲಾರದೆ!

‍ಲೇಖಕರು G

16 September, 2015

3 Comments

  1. Raj

    Nice concept.
    People getting trapped in their own cocoons, some small, some small, some breakable, some unbreakable..

  2. Javalin

    Beutifiul sir

  3. Noorulla thyamagondlu

    ಕವನದ ಪ್ರತಿಮಾ ಶೈಲಿ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading