ಹ ಹ್ಹ ಹ್ಹ ಹಸೀನಾ..

‘ಅವಧಿ’ ಓದುಗರಿಗೆ ಮಿರ್ಜಾ ಬಷೀರ್ ಅವರು ಗೊತ್ತು. ತಮ್ಮ ಕಾಡುವ ಪ್ರಾಣಿ ಕಥನಗಳಿಂದ ಮನ ಸೆಳೆದವರು.

ತುಮಕೂರಿನ ಮಿರ್ಜಾ ಅವರು ಈಗಾಗಲೇ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಹಾರುವ ಹಕ್ಕಿ ಮತ್ತು ಇರುವೆ’ ಇವರ ಇತ್ತೀಚಿನ ಕಥಾ ಸಂಕಲನ. ಹಲವು ಪ್ರಶಸ್ತಿಗಳಿಗೆ ಭಾಜನರು.

ಇನ್ನು ಮುಂದೆ ‘ಅವಧಿ’ಯಲ್ಲಿ ಪ್ರತೀ ಮಂಗಳವಾರ ಮೂಕ ಲೋಕದ ಕಾಡುವ ಕಥನವನ್ನು ನಮ್ಮ ಮುಂದಿಡಲಿದ್ದಾರೆ.

ಒಂದು ಪತ್ರ ವ್ಯವಹಾರ

ನನ್ನದು ARRANGED ಮದುವೆ. ಮದುವೆ ಆಗಲು ಹೆಣ್ಣು ಬೇಕಲ್ಲ? ಹೆಣ್ಣು ನೋಡಲು ತುಮಕೂರಿಗೆ ಹೋಗಿದ್ದು ಡಿಸೆಂಬರ್ ೧೯೮೭ ರಲ್ಲಿ. ಮದುವೆ ಆಗುವ ಹೆಣ್ಣು ಹೀಗೇ ಇರಬೇಕು ಹಾಗೇ ಇರಬೇಕು ಎಂಬ ಯಾವ ಪೂರ್ವಗ್ರಹಗಳೂ ಇಲ್ಲದೆ ಹೋಗಿದ್ದೆ.

ನನ್ನನ್ನು ಮದುವೆಯಾಗುವವಳಿಗೂ ಯಾವ ಪೂರ್ವಗ್ರಹಗಳು ಇಲ್ಲದ್ದು MADE FOR EACH OTHER ಎಂಬಂತಾಗಿತ್ತು. ಮನೆಮಂದಿಯೆಲ್ಲ ಹೋಗಿ ಒಪ್ಪಿ ‘ಸೈ’ ಎಂದು ಬಂದಿದ್ದೆವು. ಮದುವೆ ಏಪ್ರಿಲ್ ೧೦, ೧೯೮೮ ಎಂದು ನಿಗಧಿಯಾಗಿತ್ತು.

ಮದುವೆಗೆ ಮುನ್ನ ನನ್ನ ಹೆಂಡತಿಯಾಗುವವಳಿಗೂ ಮತ್ತವಳ ಆಪ್ತ ಸ್ನೇಹಿತೆ ಮಮತ ಎಂಬುವವಳಿಗೂ ಆದ ಪತ್ರ ವ್ಯವಹಾರವನ್ನಿಲ್ಲಿ ನಿಮ್ಮೆದುರು ಇಡುತ್ತಿದ್ದೇನೆ.

ಮಮತಳ ಪತ್ರ : ಏನೇ ಡಾಕ್ಟ್ರನ್ನೇ ಹೊಡೆದಿದ್ದೀಯಲ್ಲೇ?

ಇವಳ ಪತ್ರ : ಬಿಡ್ತು ಅನ್ನೇ. ಹೊಡಿಯೋದು ಬಡಿಯೋದೆಲ್ಲ ಮದುವೆ ಆದ್ಮೇಲೆ!

ಮ.ಪ. : ಎಲ್ಲೇ ಅವನು ಕೆಲಸ ಮಾಡ್ತಿರೋದು? ಯಾವ ಆಸ್ಪತ್ರೆಯೇ? ಯಾವ ಸ್ಪೆಶಲಿಸ್ಟೇ? ಕಣ್ಣು ಕಿವಿ ಕಿಡ್ನಿ ಹೃದಯ ಬುಲ್ಡೆ? ಡಾಕ್ಟರೆಂದ ಮೇಲೆ ನರ್ಸುಗಳ ಬಗ್ಗೆ ಹುಶಾರೇ! ‘ಪತಿ ಪತ್ನಿ ಔರ್ ವೋ’ ಆಗಿಬಿಟ್ಟರೆ ಗತಿ ಏನು?

ಇ.ಪ : ಛೇ ಛೇ …… ಅಸಲಿಗೆ ಅವ್ರು ಎಂ.ಬಿ.ಬಿ.ಎಸ್. ಡಾಕ್ಟರ್ ಅಲ್ಲವೇ ಅಲ್ಲ. ಯಾವ ತರಹದ ಡಾಕ್ಟರ್ ಇರಬಹುದು ಹೇಳು. GUESS ಮಾಡೇ!

ಮ.ಪ : ಆಯುರ್ವೇದ? ಹೋಮಿಯೋಪತಿ? ಯುನಾನಿ?

ಇ.ಪ : ಅಲ್ಲವೇ ಅಲ್ಲ! ಅವ್ರು ಡಾಕ್ಟ್ರೇ ! ಆದ್ರೆ ನೀನು ಸರಿಯಾಗಿ GUESS ಮಾಡಲಿಲ್ಲ! TAKE SOME MORE CHANCES.

ಮ.ಪ : ಹಂಗಾದ್ರೆ ಅವ್ನು Ph.D. ಮಾಡಿರೊ ಡಾಕ್ಟ್ರೇ ಬೇಕು!

ಇ.ಪ : ಪೆದ್ದಿ. ಅಲ್ವೇ ಅಲ್ಲ! ಸರಿಯಾಗಿ GUESS ಮಾಡು!

ಮ.ಪ : ಯಾವ್ದಾದ್ರು ಯೂನಿವರ್ಸಿಟಿಯವರು ಗೌರವ ಡಾಕ್ಟರೇಟ್ ಕೊಟ್ಟಿದ್ದಾರೇನೇ? ಮುದಿಯನೇನೇ? ಯಾರೇ?

ಇ.ಪ : ಗೌರವ ಡಾಕ್ಟರೇಟೋ ಅಲ್ಲ ಏನೂ ಅಲ್ಲ! ಏನು ದರಿದ್ರ ಪ್ರಾಣಿನೇ ನೀನು! ಸರಿ ಹೇಳಿದ್ರೆ ಮದುವೇಲಿ ನಿನಗೊಂದು ಸರಿಯಾದ ಪಾರ್ಟಿ ಕೊಡ್ತೀನಿ! GUESS ಮಾಡೇ!

ಮ.ಪ : ಕಳ್ಳ ಬಸಿರು ತೆಗಿಯೋ ಡಾಕ್ಟರೇನೆ? ಮೂಳೆ ಡಾಕ್ಟರೇನೇ? ಮೊಳೆ ಡಾಕ್ಟರೇನೇ?

ಇ.ಪ : ಅಲ್ವೇ ಅಲ್ಲ! ನೀನೊಬ್ಳು ಹುಟ್ಟು ದರಿದ್ರ ಕಣೇ!

ಮ.ಪ : ಏನೂ ಅಲ್ಲದ ಅಡ್ನಾಡಿ QUACK ಏನೇ? ೫೦೦ ರೂಪಾಯಿ ಸರ್ಟಿಫಿಕೇಟ್ ಡಾಕ್ಟರೇನೇ? ಸಂತೇಲಿ ಜಾತ್ರೇಲಿ ಬರುವ ಕಳ್ಳ ಡಾಕ್ಟರೇನೇ?

ಇ.ಪ : ಅಲ್ವೇ ಅಲ್ಲ!

ಮ.ಪ : ಅಯ್ಯೋ ಸೋತೆ ಕಣೆ! ಸೋತೆ ಸೋತೆ ಸೋತೆ! ನಿನ್ನ ಮದುವೇಲೆ ನಿನಗೊಂದು ಒಳ್ಳೆ ಪಾರ್ಟಿ ಕೊಡ್ತೀನಿ ! ಯಾವ ಡಾಕ್ಟರು ಹೇಳಮ್ಮ ನಿನ್ನ ಕಾಲಿಗೆ ಬೀಳ್ತೀನಿ!

ಇ.ಪ : ವೆಟರಿನರಿ ಡಾಕ್ಟರ್ ಕಣೆ ಪೆದ್ದಿ! ಪಶುವೈದ್ಯ! ನೀನು ಇನ್ಮೇಲೆ ಅವರತ್ರನೇ ಟ್ರೀಟ್‌ಮೆಂಟ್ ತಗೊ ಸರಿಹೋಗ್ತೀಯ!

ಮ.ಪ : ರಾಮ ರಾಮ! ಹೌದಲ್ವೇ! ವೆಟರಿನರಿ ಡಾಕ್ಟ್ರುಗಳು ಇದ್ದೂ ಇಲ್ಲದಂಗೆ ಇದ್ದಾರಲ್ವೇನೇ? ಪ್ರಚಾರ ಇಲ್ದೆ?

ಹೀಗೆ ಇವಳು ತನ್ನ ಸ್ನೇಹಿತೆಯನ್ನು ಬೇಸ್ತು ಬೀಳಿಸಿದ್ದಳು.

ಮದುವೆಗೆ ಮುಂಚೆ ನಡೆದ ಈ ಪತ್ರಗಳ ಜೊತೆ ನಾನೂ ನನ್ನವಳಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ ಅವಳ ಹೆಸರೂ ಇದೆ. ಆ ಸಮಯದಲ್ಲಿ ಎಲ್ಲರೂ ಕವಿಗಳೇ ಆದ್ದರಿಂದ ನಾನೂ ಪದ್ಯ ರೂಪದ ಪತ್ರ ಬರೆದಿದ್ದೆ. ನೀವೂ ಓದಿ. ನಗು ಉಕ್ಕಿದರೆ ನಕ್ಕು ಬಿಡಿ :

ಹ ಹ್ಹ ಹ್ಹ ಹಸೀನಾಗೆ

See  See  See ಹಸೀನಾಗೆ

ನಾ ನಾ ನಾನೇ ಹಸೀನಾಗೆ

ನಗಬೇಡ ಹುಸಿನಗೆ

ಏಪ್ರಿಲ್ ೧೦ ಎಂದಿಗೆ?

‍ಲೇಖಕರು Avadhi

September 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: