ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಮಾಪಕ್ಷಿ

ಲ್ಲದಕ್ಕೂ ಬೇರೆಡೆಗೇ ನೋಡುವ, ನಮ್ಮ ಹಿತ್ತಿಲ ಹಿರಿಮೆಯ ಬಗ್ಗೆ ಅದೇಕೋ ಅಜ್ಞಾನಿಗಳಂತೆಯೇ ಉಳಿಯುವ ನಮ್ಮ ಮುಂದೆ “ಹೋಮಾಪಕ್ಷಿ” ಒಂದು ಪಾಠವಾಗಿ ನಿಲ್ಲುತ್ತದೆ.

ಹೋಮಾಪಕ್ಷಿಯ ಜೀವನ ರೀತಿಯೇ ಅಂಥದ್ದು. ಅದು ಆಕಾಶದಲ್ಲಿ ತತ್ತಿಯಿಡುತ್ತದೆ. ತತ್ತಿ ನೆಲದ ಕಡೆಗೆ ಬೀಳುತ್ತ, ಬೀಳುತ್ತ, ಹಾಗೆ ಬೀಳುತ್ತಿರುವಾಗಲೇ ಅದರಿಂದ ಮರಿ ಹೊರಬರುತ್ತದೆ. ಅದೂ ನೆಲದ ಕಡೆಗೆ ಬೀಳತೊಡಗುತ್ತದೆ. ಮತ್ತೆ, ಹಾಗೆ ಬೀಳುತ್ತಿರುವಾಗಲೇ ರೆಕ್ಕೆ ಬಲಿಯುತ್ತದೆ. ನಾನು ಬೀಳುತ್ತಿದ್ದೇನೆಂಬ ಅರಿವನ್ನು ಅದು ಪಡೆಯುತ್ತದೆ. ಗುರುತ್ವದ ಕಕ್ಷೆ ತಪ್ಪಿಸಿಕೊಂಡು ಆಕಾಶದ ಕಡೆಗೆ ಹಾರತೊಡಗುತ್ತದೆ. ಮತ್ತೆ ಅದು ಆಕಾಶದಲ್ಲಿ ತತ್ತಿಯಿಡುವುದು, ತತ್ತಿ ಕೆಳಕ್ಕೆ ಬೀಳತೊಡಗುವುದು, ಅದರಿಂದ ಹೊರಕ್ಕೆ ಬರುವ ಮರಿ ಆಕಾಶಕ್ಕೆ ಹಾರುವುದು – ಹೋಮಾಪಕ್ಷಿಯ ನಿರಂತರ ಜೀವನ ಯಾನ. ತನ್ನ ನೆಲೆಯನ್ನು, ತಾಯ್ತನದ ಪರಿಸರವನ್ನು ಕಳೆದುಕೊಳ್ಳದ ಒಂದು ಪರಂಪರೆಗೇ ರೂಪಕವಾಗಿ ಕಾಣಿಸುತ್ತದೆ ಹೋಮಾಪಕ್ಷಿ.

ಅಂದಹಾಗೆ, ಹೋಮಾಪಕ್ಷಿಯ ಪ್ರಸ್ತಾಪವಿರುವುದು ಋಗ್ವೇದದಲ್ಲಿ.

‍ಲೇಖಕರು avadhi

25 March, 2008

3 Comments

  1. chetana chaitanya

    OshO hOma pakshiya bagge adbhutavada vivaraNe neeDiddAre. itteechege avarannu matte Odiruvudarinda innU svalpa dina avarade gungu.
    avadhi vibhinna barahagaLannu kalehaakutta oLLeya Odannu neeDuttide.
    thanx.

  2. malathi S

    Interesting!!!

  3. Santhosh Ananthapura

    ಒಂದು ಪರಂಪರೆಗೆ ರೂಪಕವಾಗಿರುವ ಹೇಮಾಪಕ್ಷಿ ಯನ್ನು ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading