
ಡಿ ವಿ ರಾಜಶೇಖರ್ ನನ್ನ ಶಿಫ್ಟ್ ಮುಖ್ಯಸ್ಥರು. 25 ವರ್ಷಗಳ ಕಾಲ ಸರಳುಗಳ ಹಿಂದೆ ಬದುಕಿದ ನೆಲ್ಸನ್ ಮಂಡೇಲಾ ಹೊರಗೆ ಬರುವ ಹೊತ್ತು. ಇಡೀ ಜಗತ್ತು ಆ ಸುದ್ದಿ ಬರೆಯಲು ಕಾಯುತ್ತಾ ಕುಳಿತಿತ್ತು. ಒಬ್ಬ ಮುಖ್ಯ ಉಪ ಸಂಪಾದಕ ಮಾಡಬೇಕಾಗಿದ್ದ ಕೆಲಸ ಅದು. ನಾನು ಪ್ರಜಾವಾಣಿ ಸೇರಿ ಅಷ್ಟೇನೂ ಕಾಲವಾಗಿರಲಿಲ್ಲ. ಆದರೆ ರಾಜಶೇಖರ್ ನನ್ನ ಹೆಗಲ ಮೇಲೆ ಕೈಯಿಟ್ಟು ನಿಮ್ಮ ಆಸಕ್ತಿ ಗೊತ್ತು. ನೀವೇ ಬರೆಯಿರಿ ಎಂದರು. ಕನ್ನಡದ ಮಟ್ಟಿಗಂತೂ ನೆಲ್ಸನ್ ಮಂಡೇಲಾ ಬಿಡುಗಡೆ ಆದದ್ದು ನಾನು ಬರೆದ ನಂತರವೇ ಎಂಬ ಖುಷಿ ಇಂದಿಗೂ ಹಸಿರು. ಎಡಿಶನ್ ನಿಲ್ಲಿಸಿದ ಆ ಮನಸ್ಸು, ಬರೆಯಿರಿ ಎಂದು ಬೆನ್ನು ತಟ್ಟಿದ ಆ ಕೈ ಎಂದೆಂದಿಗೂ ನನ್ನವೇ.. .
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments