ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


ರಾಜ್ ಕುಮಾರ್ ಇಲ್ಲವಾದರು. ಈಟಿವಿ ಬೆಂಗಳೂರು ಚೀಫ್ ಮ್ಯಾನೇಜರ್ ಸುಬ್ಬಾನಾಯ್ಡು ಫೋನ್ ಮಾಡಿದ್ರು. ‘ಜಾಸ್ತಿ ಲೇಡಿ ರಿಪೋರ್ಟರ್ಸ್ ತಗೊಳ್ಳಬೇಡಿ ಅಂತ ಹೇಳಿದ್ದೆ. ಈಗ ಏನು ಮಾಡ್ತಿರಾ?’ ಅಂದ್ರು. ರಾಜ್ ಕುಮಾರ್ ನಿಧನದ ನಂತರ ಉಂಟಾದ ದೊಡ್ಡ ಹಾಹಾಕಾರದಲ್ಲಿ ಈ ಹುಡುಗಿಯರೇನು ಮಾಡಲು ಸಾಧ್ಯ ಎನ್ನುವ ಹತಾಶೆ ಅವರ ಮಾತಲ್ಲಿತ್ತು. ‘ಏನು ಮಾಡೋಣ ಹೇಳಿ ಸರ್’ ಅಂತ ಮರು ಪ್ರಶ್ನೆ ಮುಂದಿಟ್ಟೆ. ಅವರು ಅಕ್ಕ ಪಕ್ಕದ ಡಿಸ್ಟ್ರಿಕ್ಟ್ ನವರನ್ನೆಲ್ಲಾ ಕರೆಸಿಬಿಡಿ. ಇಲ್ಲಾ ಅಂದ್ರೆ ಕಷ್ಟ ಅಂದರು. ಯಾಕೆ ಕಷ್ಟ? ಅನ್ನೋ ಪ್ರಶ್ನೆ ಆಗಲೇ ನನ್ನ ಮುಂದಿತ್ತು. ಶಾರದಾ  ನಾಯಕ್ , ಜ್ಯೋತಿ ಇರ್ವತ್ತೂರ್, ಭುವನೇಶ್ವರಿ ಹೀಗೇ ದೊಡ್ಡ ದಂಡೇ ಇತ್ತು . ಮರುಕ್ಷಣ ಅವರು ಇದ್ದದ್ದು ಬೆಂಕಿ ಹಚ್ಹುತ್ತಿದ್ದವರ, ಗೋಲಿಬಾರ್ ಮಾಡುತ್ತಿದ್ದವರ, ಮೆರವಣಿಗೆಯ ಗೊಂದಲ, ರಾಜ್ ಕುಮಾರ್ ಮನೆಯ ಜನಜಂಗುಳಿ ಮಧ್ಯೆ . ನೂರಾರು ಜನರ ತಳ್ಳಾಟದ ಮಧ್ಯೆ ಪಿಟಿಸಿ ನೀಡುತ್ತಿದ್ದ ಜ್ಯೋತಿ ಇರ್ವತ್ತೂರ್ ಮುಖ ಗಮನಿಸಿದೆ. ಬೆದರಿದ್ದಳಾ ಅಂತ. ಹಾಗೆ ಒಂದು ಕ್ಷಣ ಅಂದುಕೊಂಡಿದ್ದಕ್ಕೆ ನನಗೇ ನಾಚಿಕೆಯಾಗುವಂತೆ ‘ಕ್ಯಾಮೆರಾ ಮ್ಯಾನ್  ಶಿವಪ್ಪ ಅವರೊಂದಿಗೆ ಗಲಭೆಯ ಸ್ಥಳದಿಂದ ಜ್ಯೋತಿ ಇರ್ವತ್ತೂರು’ ಅಂತ ಸೈನ್ ಆಫ್ ಮಾಡಿದಳು. ಈ ಕಡೆ ನೇರಪ್ರಸಾರಕ್ಕೆ ಬೇಕಾದ ಓ ಬಿ ವ್ಯಾನ್ ಇರಲಿಲ್ಲ.ಫೀಲ್ಡ್ ನಲ್ಲಿ ಶೂಟ್  ಮಾಡಿದ ವಿಶುಯಲ್ಸ್ ಗಳು ಆಫೀಸಿ ಗೆ ಬರಲಾಗುತ್ತಿಲ್ಲ. ಶಾರದಾ ನಾಯಕ್ ಹಲ್ಲು ಕಚ್ಹಿ ನಿಂತೇ ಬಿಟ್ಟರು. ಇದು ನೇರ ಪ್ರಸಾರ ಅಲ್ಲ ಅಂತ ಯಾರೂ ಹೇಳಲು ಸಾಧ್ಯವಾಗದಂತೆ  ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋಗೆ ವಿಶುವಲ್ಸ್ ಗಳ ಮಹಾಪೂರ ಹರಿಯಿತು. ಯಾಕೋ ಗಾಂಧಿ ಹೇಳಿದ ಮಾತು ನೆನಪಾಯಿತು.ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಅಂತ. ಅದು ಪತ್ರಿಕೋದ್ಯಮಕ್ಕೂ ನಿಜವಾದ ಮಾತು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

12 October, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

1 Comment

  1. ಅರಕಲಗೂಡು ಜಯಕುಮಾರ್

    ಸರ್ ಈ ಲೇಖನ ಮಿಸ್ ಆಗಿತ್ತು… but Media Mind ನಲ್ಲಿ ಲೇಖನದ Continuation ಸಿಗಲಿಲ್ಲಲ ಬದಲಿಗೆ ಜಯಶ್ರೀ ಕಿಕ್ಕಿಂಗ್ ಕಾಲಂ ಸಿಗ್ತಿದೆ. ಪೂರ್ಣ ಲೇಖನ ಇಲ್ಲೆ ಹಾಕಿದಿದ್ರೆ ಚೆನ್ನಾಗಿರ್ತಿತ್ತು. ಅಂದ ಹಾಗೆ ಬ್ಲಾಗರ್ ಗಳ ಸಮಾವೇಶಕ್ಕೆ ಹಿಂದೊಮ್ಮೆ ಯೋಜಿಸಿದ್ದೀರಿ.. ಈಗ ಅದು ಸಾಧ್ಯವಾಗಬಹುದೇ???????

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading