ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಯಾಕೋ ಮನಸ್ಸು ಭಾರವಾಗಿ ಕೂತಿದೆ. ಹೊರಗೆ ಜಿಟಿ ಜಿಟಿ ಮಳೆ, ಬಹುತೇಕೆ ಯಾವಾಗಲೂ ಕವಿದುಕೊಂಡಿರುವ ಕಾರ್ಮೋಡ. ಹೀಗಿರುವಾಗ  ಭೋಪಾಲ ಅನಿಲ ದುರಂತದ ತೀರ್ಪು ಮನಸ್ಸನ್ನು ಇನ್ನಷ್ಟು ಮುದುಡಿಸಿದೆ.   ನಾವಿನ್ನೂ ತಾರುಣ್ಯಕ್ಕೆ ಕಾಲಿಡುತ್ತಿದ್ದ ದಿನಗಳು ಅವು. ಆಗ ಆಗಿಹೋದ ಒಂದು ಮಹಾನ್ ದುರಂತಕ್ಕೆ ಈಗ ನಾವು ನಡು ವಯಸ್ಸು ದಾಟಿ ಇನ್ನೊಂದರತ್ತ ಸಾಗುತ್ತಿರುವಾಗ ತೀರ್ಪು ಬಂದಿದೆ. ಒಂದೆರಡು ವರ್ಷವಲ್ಲ ಬರೋಬ್ಬರಿ  25 ವರ್ಷ, ಕಾಲು ಶತಮಾನ!.

ಆತ ರಘುರಾಯ್. ಭೋಪಾಲದ ದುರಂತಕ್ಕೆ ಒಂದು ರೀತಿಯಲ್ಲಿ ಕಣ್ಣು  ನೀಡಿದಾತ. ಎಳೆ ಕಂದಮ್ಮಗಳನ್ನು  ನೆಲದಾಳದಲ್ಲಿ ಹುಗಿಯುವ ಒಂದು ಚಿತ್ರ ಅದು ಭೋಪಲವನ್ನು ದಾಟಿ, ಮಧ್ಯಪ್ರದೇಶವನ್ನು ದಾಟಿ , ದೇಶವನ್ನು ದಾಟಿ ಜಗತ್ತಿಗೆ ದುರಂತದ ಕಾರಾಳತೆಯನ್ನು ದಾಟಿಸಿತು.  ಇಂಡಿಯಾ ಟುಡೇ ಮುಖಪುಟದಲ್ಲಿ ಪ್ರಕಟವಾದ ಆ ಚಿತ್ರ ನೋಡಿ  ವಿಚಲಿತನಾಗಿ ಹೋಗಿದ್ದೆ . ಅಂದಿನಿಂದ ಎಷ್ಟೋ ವರ್ಷಗಳ ಕಾಲ ನಾನು ಹತ್ತಾರು ಮನೆ ಬದಲಿಸಿದರೂ, ಊರೂರು ಸುತ್ತಿದರೂ ಈ ಚಿತ್ರ ನನ್ನ ಜೊತೆ ಜೊತೆಗೇ ನಡೆದು ಬಂತು  .  ಇಂತಹ ಸಂಗತಿಗಳೇ ನನ್ನ ಬದುಕಿನ ಮಹತ್ವದ ಘಟನೆಗಳಾಗಿಯೂ ಉಳಿದಿದೆ.
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

June 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

Sugata recommends..

Sugata recommends..

4 ಪ್ರತಿಕ್ರಿಯೆಗಳು

  1. Dhananjaya

    ಇದನ್ನು ಓದುತ್ತಿರುವಂತೆಯೇ ನಾಗೇಶ್ ಹೆಗಡೆ ಅವರ “ಅಣು ಚಳಿಗಾಲ ಅಡುಗಲು ಸ್ಥಳವೆಲ್ಲಿ” ನೆನಪಿಗೆ ಬರುತ್ತಿದೆ….

    ಪ್ರತಿಕ್ರಿಯೆ
  2. Shreeram Jamadagni

    ಆ ದಿನದಂದು ಭಾರತದ ಇಬ್ಬರು ಮಹಾನ್ ಛಾಯಾಗ್ರಾಹಕರು ಈ ಮಗುವಿನ ಚಿತ್ರವನ್ನು ಸೆರೆಹಿಡಿದಿದ್ದರು. ಒಬ್ಬರು ರಘು ರಾಯ್ ಮತ್ತೊಬ್ಬರು ಪಾಬ್ಲೋಬಾರ್ಥಲೋಮ್ಯೊ, ರಾಯ್ ಕಪ್ಪುಬಿಳುಪಿನ ಚಿತ್ರ ತೆಗೆದರೆ ಪಾಬ್ಲೋ ವರ್ಣಚಿತ್ರ ತೆಗೆದಿದ್ದರು. ಪಾಬ್ಲೋರವರ ಚಿತ್ರಕ್ಕೆ ೧೯೮೪ ರಲ್ಲಿ ವರ್ಲ್ದ್ ಪ್ರೆಸ್ ವರ್ಷದ ಪೊಟೋ ಪ್ರಶಸ್ತಿ ಬಂದಿತ್ತು.
    http://www.famouspictures.org/mag/index.php?title=Bhopal_gas_disaster_girl
    http://www.archive.worldpressphoto.org/search/layout/result/indeling/detailwpp/form/wpp/q/ishoofdafbeelding/true/trefwoord/photographer_formal/Bartholomew%2C%20Pablo

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: