ಸಿ ಎಚ್ ಹನುಮಂತರಾಯರ ’ವಕೀಲರೊಬ್ಬರ ವಗೈರೆಗಳು’ ಪುಸ್ತಕ ಓದುತ್ತಾ ಕುಳಿತಿದ್ದೆ . ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು. ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು. ಇಂತಹ ಹನುಮಂತರಾಯರು ತಮ್ಮ ಊರು ಚಿಕ್ಕಬೆಳವಂಗಲದಿಂದ ಬೆಂಗಳೂರಿಗೆ ಬಂದು ತಟ್ಟಿದ್ದು ಸೇಂಟ್ ಜೋಸೆಫ್ ಕಾಲೇಜಿನ ಬಾಗಿಲು. ಇಂಗ್ಲೀಷ್ ನ ಸೆಂಟು ವಾಸನೆಯ ನಡುವೆ ಅಪ್ಪಟ ಕನ್ನಡದ ಹುಡುಗ . ಡಿಬೇಟ್ ಎಂದರೆ ಹನುಮಂತರಾಯರಿಗೆ ಪಂಚಪ್ರಾಣ. ಎಲ್ಲಿ ಹೋದರು ಶೀಲ್ಡ್ ಕಟ್ಟಿಟ್ಟ ಬುಟ್ಟಿ. ಏಳು ವರ್ಷ ಡಿಬೇಟ್ ನಲ್ಲಿ ಸೋತು ಸುಣ್ಣಗಾಗಿದ್ದ ಕಾಲೇಜಿಗೆ ಹನುಮಂತರಾಯರು ಶೀಲ್ಡ್ ತಂದುಕೊಟ್ಟರು. ಸಂತಸಗೊಂಡ ಪ್ರಿನ್ಸಿಪಾಲರು ಹನುಮಂತರಾಯರನ್ನು ಚೇಂಬರ್ ಗೆ ಕರೆಸಿದರು. ತನ್ನ ಮುಂದೆ ನಿಂತ ಹುಡುಗನನ್ನು ಪ್ರಿನ್ಸಿಪಾಲ್ ಪ್ರೀತಿಯಿಂದ ‘ವಾಟ್ ಈಸ್ ಯುವರ್ ಫಾದರ್ ?’ ಅಂತ ಕೇಳಿದರು ತಕ್ಷಣ ಹನುಮಂತರಾಯರು ‘my father is a man’ ಅಂದರು. ಕಕ್ಕಾವಿಕ್ಕಿಯಾದ ಪ್ರಿನ್ಸಿಪಾಲರಿಗೆ ಮಾತೇ ಹೊರಡಲಿಲ್ಲ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್






0 Comments