
ಯಾರ್ ಹೇಳಿದ್ರು ನಿಮಗೆ ಆ ಚಾಕಲೇಟ್ ತಿನ್ನೋಕೆ?- ಅಂತ ಗದರಿಸಿದ್ದು ನಿಗೆಲ್ ಪ್ರಾಗ್ಬೇಡ್ . ಸಿ ಎನ್ ಎನ್ ನ ಕಾನ್ಫರೆನ್ಸ್ ರೂಮಲ್ಲಿ ಕುಳಿತಿದ್ದ ನಾನೆಂಬ ನಾನೂ, ಪಕ್ಕದಲ್ಲಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಜಪಾನಿನ ಮೆಗ್, ಸ್ಲೊವೇನಿಯಾದ ಪೋಲೊಂಕಾ, ಆಸ್ಟ್ರೇಲಿಯಾದ ಗೆರ್ದಾ, ರೊಮೇನಿಯಾದ ಕ್ರಿಸ್ಟಿ, ಇರಾನಿನ ಹಮೀದ್, ಕೆನ್ಯಾದ ಏಂಜೆಲೋ, ಜೆಕ್ ನ ಮೆರೆಕ್ ಎಲ್ಲರೂ ದಂಗಾಗಿ ಹೋದೆವು. ನುಂಗಲೂ ಆಗದೇ, ಉಗುಳಲೂ ಆಗದಂತೆ ಚಾಕಲೇಟ್ ನಮ್ಮ ಬಾಯೊಳಗೆ ಕುಳಿತಿತ್ತು. ಯಾವ್ಯಾವುದೋ ದೇಶದಿಂದ ಬಂದು ಇಲ್ಲಿ ಚಾಕಲೇಟ್ ತಿಂದು ಬೈಸಿಕೊಳ್ಳಬೇಕಾಗಿ ಬಂತಲ್ಲಪ್ಪಾ ಎನ್ನುವ ಭಾವವೇ ಎಲ್ಲರ ಮುಖದಲ್ಲಿ ನಾಟ್ಯವಾಡುತ್ತಿತ್ತು.
ಆಗಿದ್ದು ಇಷ್ಟೇ. ಸಿ ಎನ್ ಎನ್ ಚಾನಲ್ ನಲ್ಲಿ ಪಬ್ಲಿಕ್ ರಿಲೇಶನ್ ನಿಭಾಯಿಸುವ ನಿಗೆಲ್ ಟಕ ಟಕ ಹೆಜ್ಜೆ ಹಾಕುತ್ತಾ ನಮ್ಮ ಕ್ಲಾಸ್ ರೂಂ ಒಳಗೆ ಬಂದರು. ಕೈಯಲ್ಲಿ ದೊಡ್ಡ ಚಾಕಲೇಟ್ ಪ್ಯಾಕೆಟ್. ಎದುರಿಗಿದ್ದ ಬೌಲ್ ಗೆ ಆ ಚಾಕಲೇಟ್ ಗಳನ್ನೆಲ್ಲಾ ಸುರಿದರು. ನಂತರ ತಮ್ಮ ಪಾಡಿಗೆ ತಾವು ಪಾಠ ಶುರು ಹಚ್ಚಿಕೊಂಡರು. ಏನೋ ಬರೆಯಲು ನಿಗೆಲ್ ಬೋರ್ಡ್ ಕಡೆ ತಿರುಗಿದ್ದೇ ತಡ ನಮ್ಮ ತಂಡದಲ್ಲೇ ಅತಿ ತರಲೆ ಎನಿಸಿಕೊಂಡಿದ್ದ ಮೆಗ್ ಒಂದು ಚಾಕಲೇಟ್ ಎತ್ತಿ ಬಾಯಿಗೆ ಎಸೆದುಕೊಂಡವಳೇ ‘ಹೆಂಗೆ’ ಅನ್ನುವಂತೆ ಎಲ್ಲರ ಕಡೆ ನೋಡಿದಳು. ಆ ಕಲೆ ಅವಳೊಬ್ಬಳಿಗೆ ಮಾತ್ರ ಬರುತ್ತದೆಯೇ? ಅಂತ ನಾವೆಲ್ಲರೂ ಪೈಪೋಟಿಗೆ ಬಿದ್ದೆವು. ಆಮೇಲೆ ಬಟ್ಟಲು ಕುಳಿತ ಕಡೆ ಕುಳಿತಿರಲಿಲ್ಲ. ಎಲ್ಲರ ಮುಂದೆ ಸುತ್ತುತ್ತಾ ಹೋಯಿತು. ಆಗಲೇ ನಿಗೆಲ್ ನಮ್ಮೆಡೆ ತಿರುಗಿ ಗದರಿದ್ದು.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್
Sugata recommends..






ಈ ಗಿಫ್ಟೆಡ್ ಜರ್ನಲಿಸ್ಟ್ ಬಗ್ಗೆ ಹೇಳಬೇಕೆನಿಸಿತು. ಮಹಾ ತಿಂಡಿಪೋತನೆಂದೂ ಹೆಸರು ಮಾಡಿದ್ದ ಈತ ಸಂಪಾದಕನಾಗಿದ್ದಾಗ ಒಂದು ಸ್ವೀಟ್ಸ್ ಅಂಗಡಿಯ ಪ್ರಾರಂಭೋತ್ಸವಕ್ಕೆ ಆಹ್ವಾನ ಬಂದಿತು. ಸಮಾರಂಭಕ್ಕೆ ಹೋಗಲು ಆಗುತ್ತಿರಲಿಲ್ಲ. ಆದರೆ ಸಿಹಿ ತಿಂಡಿಯನ್ನು ಬಿಡಲು ಇಷ್ಟವಿರಲಿಲ್ಲ. ಅದಕ್ಕೆ ಈತ ಏನು ಮಾಡಿದ? ಮಾಲೀಕರಿಗೆ ಫೋನ್ ಹಚ್ಚಿದ. ಪರಿಚಯಿಸಿಕೊಂಡ. ಸಮಾರಂಭಕ್ಕೆ ಬರಲು ಆಗುತ್ತಿಲ್ಲ. ಆದುದರಿಂದ ಒಂದು ಪ್ಯಾಕೆಟ್ ಸ್ವೀಟ್ಸ್ ಇಲ್ಲಿಗೇ ಕಳಿಸಿಕೊಡಿ. ಎಷ್ಟು ರುಚಿ ತಿಳಿಯೋಣ ಎಂದ. ಪಾಪ ಅಂಗಡಿಯವರು ಒಂದು ಕಿಲೋ ಪ್ಯಾಕೆಟ್ ಕಳಿಸಿದರು. ಅದನ್ನು ಕಚೇರಿಯಲ್ಲಿ ಹಂಚಿದನೆ? ಇಲ್ಲ ಮನೆಗೆ ಕೊಂಡೊಯ್ದ. ಮರುದಿನ ಮೌಲ್ಯಗಳ ಕುಸಿತದ ಬಗ್ಗೆ ಒಂದು ಸ್ಟ್ರಾಂಗ್ ಎಡಿಟೋರಿಯಲ್ ಬರೆದ!
-ಆನಂದ