ಬೆಂಗಳೂರೇ ಹಾಗೆ.
ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ.
ತುಂಬ ದಿನ ಇಲ್ಲಿದ್ದು ಮರಳಿದ ನಂತರವೂ ನೆನಪಾಗುವುದಿಲ್ಲ.
ಅದು ನೆಲೆಯಲ್ಲ, ನೆಲವಲ್ಲ.
ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ.
ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸುತ್ತಾರೆ.
ಆದರೆ, ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರವ್ಯೂಹದ ಒಳಗೆ ಹೊಕ್ಕವರು ಹೋರಾಡಿಯೇ ಮಡಿಯಬೇಕು.
ಯುದ್ಧ ಗೆದ್ದ ಸುದ್ದಿ ತಿಳಿಯುವ ಮೊದಲೇ ಅಸುನೀಗಬೇಕು





When is the release function..?
Writing machine.
ee uuringe nenapugalhannu srutisivu shaktiyu illa,..satyada maathu…pustakada nireeksheyalli