ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ’ಇಡೀ ಕಡಲನ್ನೇ ಖರೀದಿಸಿದ್ದೇನೆ…’

ಕವಿತೆ

ನಾಗರಾಜ ಹರಪನಹಳ್ಳಿ

ಇಡೀ ಕಡಲನ್ನೇ

ಖರೀದಿಸಿದ್ದೇನೆ

ಜೊತೆಗೆ ಒಂದಿಷ್ಟು ಕಡಲ

ದಂಡೆಯನ್ನು

ಆದ್ರೆ ರಿಜಿಸ್ಟ್ರೇಶನ್

ಮಾಡಿಸಿಕೊಂಡಿಲ್ಲ

ಯಾಕೆಂದರೆ

ನಾನು ಇಲ್ಲವಾದಮೇಲೆ ಅವು ನನ್ನ

ಜನಕ್ಕೆ ಇರಲೆಂದು

 

ಇಡೀ ಬೆಳದಿಂಗಳನ್ನ

ಕೊಂಡುಕೊಂಡಿದ್ದೇನೆ

ಲಕ್ಷ ಲಕ್ಷ ನಕ್ಷತ್ರಗಳನ್ನ

ನನ್ನದಾಗಿಸಿಕೊಂಡಿದ್ದೇನೆ

ಒಂದಿಷ್ಟು ಬೆಳಕನ್ನು ಕಡ

ಪಡೆದಿದ್ದೇನೆ

ಹಾಗಂತ ಪಹಣಿ ಮೂಟೇಶೆನ್

ಎಂಟ್ರಿ ಯಾವುದು ಮಾಡಿಸಿಲ್ಲ

ಯಾಕೆಂದರೆ

ಬೆಳದಿಂಗಳನ್ನ ಗೋದ್ರೆಜ್

ಕಪಾಟನಲ್ಲಿ ಬಂಧಿಸಿಡಲು

ಆಗಲ್ಲ

ನನ್ನ ಸಾವಿನ ನಂತರ

ಬೆಳದಿಂಗಳನ್ನು ಕೊಂಡೊಯ್ಯಲು

ಆಗಲ್ಲ

ಅವು ನನ್ನವರಿಗೆ ಇರಲೆಂದು

ಬಿಟ್ಟು ಹೋಗುತ್ತೇನೆ

 

ಇಡೀ ಭೂಮಿಯನ್ನ

ಗೆದ್ದಿದ್ದೇನೆ

ಆದರಿಲ್ಲಿ ಅರಮನೆ ಕಟ್ಟಿಲ್ಲ

ಇರುವ ದಾರಿಗೆ ಹೆಸರು ಸಹ

ಇಟ್ಟಿಲ್ಲ

ನದಿ ಅರಣ್ಯ ನನ್ನ ಸರ

ಹದ್ದಿನಲ್ಲಿವೆ

ಹಾಗಂತ ಯಾವುದೇ ಬೇಲಿ

ಕಾಂಪೌಂಡು ಹಾಕಿಲ್ಲ

ಯಾಕೆಂದರೆ

ಕಾಲಾನಂತರ ಜೀವಜಾಲಕ್ಕೆ

ಎಲ್ಲವೂ ಇರಲೆಂದು

ಬಿಟ್ಟು ಹೋಗುತ್ತೇನೆ ………..

‍ಲೇಖಕರು G

19 November, 2012

6 Comments

  1. shanthi

    nice..sir

  2. bmbasheer

    ತಟ್ಟಿದ ಕವಿತೆ….

  3. mmshaik

    mana muttida kavana..sir

  4. MANJUNATH.P

    UTKRUSHTA KAVITE….!

  5. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಕಡಲು,ಬೆಳದಿಂಗಳು,ಭೂಮಿ..ಬಳಕೆಯ ಭಾವಗಳ ಅರ್ಥಪೂರ್ಣ ಕವಿತೆ.

  6. ರುದ್ರೇಶ ಕಿತ್ತೂರ ಮುದ್ದೇಬಿಹಾಳ

    ಉತ್ತಮ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading