ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸವರ್ಷಕ್ಕೆ ಶುಭಾಶಯ ಹೇಳುತ್ತಲೇ…

ಕುಸಿಯುತ್ತಿರುವ ಮಾನವೀಯ ಮೌಲ್ಯಗಳು

ಮಹೇಶ ಶ್ರೀ ದೇಶಪಾಂಡೆ

ದಿನಗಳು ಉರುಳುತ್ತಿವೆ. ವರ್ಷಗಳು ಕಳೆಯುತ್ತಿವೆ. ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಆದರೆ ನಿಜವಾಗಿಯೂ ನಾವು ಸಂಭ್ರಮದಲ್ಲಿದ್ದೇವೆಯೇ? ನಮ್ಮ ಸುತ್ತ ನಡೆದಿರುವ ನೂರಾರು ಕಹಿ ಘಟನೆಗಳು ನಮ್ಮ ಮನಗಳನ್ನು ಕೊರೆಯುತ್ತಿರುವಾಗ ಮುಖವಾಡದ ಸಂಭ್ರಮಾಚರಣೆ ಎಷ್ಟು ಸಮಂಜಸ? ಇತಿಹಾಸ ಮರುಕಳಿಸುತ್ತಲೇ ಇದೆ. ಆದರೆ ನಾವು ಮಾತ್ರ ಪಾಠ ಕಲಿಯಲೇ ಇಲ್ಲ. ಪಾಠ ಕಲಿಯುವ ತಾಳ್ಮೆ ಕಳೆದು ಹೋಗಿದೆಯೋ? ತಾತ್ಸಾರವೋ? ಉದಾಸೀನವೋ? ಅಂತೂ ನಾವು ಪಾಠ ಕಲಿಯಲಿಲ್ಲ.
ಕಳೆದ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕಿದಾಗ ಮನಸ್ಸು ಹಿಡಿಯಾಗುತ್ತದೆ. ಒಂದರ ಹಿಂದೆ ಒಂದರಂತೆ ನಡೆದ ಅವಘಡಗಳನ್ನು ಅವಲೋಕಿಸಿದಾಗ ನಾವೆಲ್ಲೋ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಹಾಗು ದೂರವಾಗುತ್ತಿದ್ದೇವೆ ಅಂತ ಅನ್ನಿಸಲು ಶುರುವಾಗುತ್ತದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂಬ ಭಾವ ಮಡುಗಟ್ಟುತ್ತದೆ.
ದೆಹಲಿಯ ಮೃಗಾಲಯವಂದರಲ್ಲಿ ಅಕಸ್ಮಾತ್ತಾಗಿ ಹುಲಿಯಬೋನಿನಲ್ಲಿ ಜಾರಿಬಿದ್ದ ಯುವಕನು ಹುಲಿಯನ್ನು ಜೀವ ಉಳಿಸುವಂತೆ ಬೇಡಿಕೊಳ್ಳುವ ಪರಿ ಎಂತಹ ಕಟುಕನನ್ನು ಕೂಡ ಮಲ್ಮಲ ಮರಗುವಂತೆ ಮಾಡುತ್ತದೆ. ಆದರೆ, ಅಲ್ಲಿದ್ದ ಜನಸ್ತೋಮ ಅವನ ರಕ್ಷಣೆ ಮಾಡುವ ಗೋಜಿಗೆ ಹೋಗದೆ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಆ ದುರ್ಘಟನೆಯನ್ನು ಸೆರೆಹಿಡಿದು ಯೂ-ಟ್ಯೂಬ್ಗೆ ಅಪ್ಲೋಡ್ ಮಾಡಿ ಸಾಹಸ ಮೆರೆಯುತ್ತಾರೆ. ಇನ್ನು ಆ ಮೃಗಾಲಯದ ಸಿಬ್ಬಂದಿಗಳಿಗೆ ಜವಾಬ್ದಾರಿ ಎಂದರೆ ಏನು? ಎಂಬುದೆ ಗೊತ್ತಿಲ್ಲದಂತೆ ವತರ್ಿಸಿದ್ದಾರೆ. ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಆ ಯುವಕನ ಜೀವ ಉಳಿಸಬಹುದಾಗಿತ್ತು. ಹಾಗಾಗಲಿಲ್ಲ! ಆತ ಉಳಿಯಲಿಲ್ಲ. ಹುಲಿಯು ಕರುಣೆ ತೋರಿ ಅವನನ್ನು ಜೀವಂತ ಬಿಟ್ಟಿದ್ದರೆ ಪುಣ್ಯಕೋಟಿಯ ಕಥೆ ಮರುಕಳಿಸಿದ ನೆನಪಾದರೂ ಉಳಿಯುತ್ತಿತ್ತು.

ಬೆಂಗಳೂರು ರೈಲುನಿಲ್ದಾಣದಲ್ಲಿ ಆಕಸ್ಮಿಕವಾಗಿ ಚಲಿಸುತ್ತಿದ್ದ ರೈಲಿಂದ ಕಾಲುಜಾರಿಬಿದ್ದು ತನ್ನ ಎರಡುಕಾಲುಗಳನ್ನು ಕಳೆದುಕೊಂಡ ಅನ್ಯರಾಜ್ಯದ ಉದ್ಯಮಿಯಪಾಡು ಇದಕ್ಕಿಂತ ಭಿನ್ನವಾಗೇನೂ ಇಲ್ಲ. ದೂರದಲ್ಲಿ ಬಿದ್ದಿದ್ದ ತನ್ನ ಮೋಬೈಲ್ ಫéೋನನ್ನು ತಗೆದುಕೊಳ್ಳಲು ತೆವಳುತ್ತಿದ್ದ ದೃಶ್ಯ ನೆನೆಸಿಕೊಳ್ಳುವದು ಕಷ್ಟಕರವೆ. ಅಂತಹದರಲ್ಲಿ ಅಲ್ಲಿ ನೆರೆದಿದ್ದ ಜನರು, ಪ್ರಯಾಣಿಕರು ತಮ್ಮ ಮೋಬೈಲ್ ಫéೋನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಆ ಜನರ ಗುಂಪಿನಲ್ಲಿ ದೃಶ್ಯವನ್ನು ಮಾಧ್ಯಮದ ಪ್ರತಿನಿಧಿಗಳು ಕೂಡ ಇದ್ದರೆಂದು ಪತ್ರಿಕೆಯಲ್ಲಿ ಓದಿದ ನೆನಪು. ಇರಲಿ. ಆತ ಮೊಬೈಲ್ ಫéೋನನ್ನು ಕೈಯಲ್ಲಿ ತಗೆದುಕೊಂಡು ದೂರದ ಊರಲ್ಲಿದ್ದ ತನ್ನ ಹೆಂಡತಿಗೆ ಫéೋನ್ ಮಾಡಿ ನಡೆದ ಘಟನೆಯನ್ನು ವಿವರಿಸಿ, ಅವಳು ಬೆಂಗಳೂರಿನ ಅಸ್ಪತ್ರೆಯೊಂದಕ್ಕೆ ಫéೋನ್ ಮಾಡಿ ತುತರ್ುಚಿಕಿತ್ಸೆಯ ವ್ಯವಸ್ಥೆ ಮಾಡಿದಳು. ಇದನ್ನೆಲ್ಲಾ ನೋಡುತ್ತಾ ನಿಂತ ಜನರಿಗೆ ಏನಾಗಿತ್ತು? ಸಹಾಯಮಾಡುವ ಯೋಚನೆ ಕೂಡ ಇವರಿಗೆ ಬರಲಿಲ್ಲವೆ? ಇದನ್ನು ಮನಸ್ಥಿತಿಯ ವಿಕೃತಿಯನ್ನದೆ ಇನ್ನೇನು ಹೇಳಲು ಸಾಧ್ಯ . ಸಹಾಯಮಾಡುವುದು ಹಾಳಾಗಿಹೋಗಲಿ! ಈ ದುರಂತವನ್ನು ಚಿತ್ರೀಕರಿಸಿದ ಇವರ ಮನಸ್ಥಿತಿ ಎಂತಹದು? ಈ ನಿಟ್ಟಿನಲ್ಲಿ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಇನ್ನು ಚಿಕ್ಕಮಕ್ಕಳು, ಶಾಲಾವಿದ್ಯಾಥರ್ಿಗಳು ಹಾಗು ಮಹಿಳೆಯರ ಮೇಲೆ ನಡೆದ ಅದೆಷ್ಟೋ ಲೈಂಗಿಕ ದೌರ್ಜನ್ಯದ ಸಂಗತಿಗಳು ವರದಿಯಾದವು. ಮಾನವೀಯ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿವೆಯೇ! ಅಪ್ಪ-ಅಮ್ಮ, ಅಪ್ಪ-ಮಗ, ಅಪ್ಪ-ಮಗಳು, ತಾಯಿ-ಮಗ, ಅಣ್ಣ-ತಂಗಿ, ಅಕ್ಕ-ತಮ್ಮ, ಗೆಳೆಯ-ಗೆಳತಿ, ಗುರು-ಶಿಷ್ಯ ಸಂಬಂಧಗಳಿಗೆ ಗ್ರಹಣ ಹಿಡಿದಂತೆ ಭಾಸವಾಗುತ್ತಿದೆ. ನಡೆದ ದುರಂತಗಳನ್ನು ಟಿ.ಆರ್.ಪಿ. ನೆಪದಲ್ಲಿ ದೃಶ್ಯಮಾಧ್ಯಮಗಳು ವೈಭವೀಕರಿಸಿ ಆಘಾತಕ್ಕೊಳಗಾದ ಮನಸುಗಳಿಗೆ ಉಪ್ಪು ಖಾರ ಸವರುವ ಕೆಲಸ ಮಾಡುತ್ತಿದೆ.ಜನರಿಗೆ ತಲುಪಿಸುವ ರೀತಿ ಇದೇನಾ? ಆಧುನಿಕ ತಾಂತ್ರಿಕತೆಯ ಸದ್ಬಳಕೆಯಾಗುವ ಬದಲು ದುರ್ಬಳಕೆ ಮಿತಿ ಮಿರುತ್ತಿದೆ. ಕ್ರೌರ್ಯಕ್ಕೆ ಒಂದು ಮಿತಿಯೇ ಇಲ್ಲದಂತಾಗಿದೆ. ಈ ರೀತಿಯ ವರ್ತನೆಗಳಿಗೆ ಕಠಿಣ ಕಾನೂನುಕ್ರಮಗಳ ಅಗತ್ಯತೆಯ ಜೊತೆಗೆ ಅಂತಹ ವ್ಯಕ್ತಿಗಳನ್ನು ಶಾಶ್ವತವಾಗಿ ಸಮಾಜ ಬಹಿಷ್ಕಾರದ ಶಿಕ್ಷೆಗೆ ಗುರಿಪಡಿಸುವದು ಸೂಕ್ತವೆನಿಸುತ್ತದೆ.
ಇನ್ನು ಉಗ್ರವಾದದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಶಾಂತಿಯುತವಾದ ರೀತಿಯಲ್ಲಿ ಸಾಧಿಸಲು ಸಾಧ್ಯವಿರುವದನ್ನು ಉಗ್ರರೀತಿಯಲ್ಲಿ ಸಾಧಿಸಹೊರಟು ಯಾವ ಸಂದೇಶವನ್ನು, ಯಾರಿಗೆ, ಯಾವ ರೀತಿಯಲ್ಲಿ ತಲುಪಿಸುವ ಉದ್ದೇಶವೋ ತಿಳಿಯದು! ಅಮಾಯಕ ಜನರು ಜಗತ್ತಿನಾದ್ಯಂತ ಇಂದು ಈ ಉಗ್ರ ದಾಳಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಮೊನ್ನೆ ಮೊನ್ನೆ ಪಾಕಿಸ್ತಾನದ ಪೇಷಾವರದಲ್ಲಿ 140ಕ್ಕೂ ಹೆಚ್ಚು ಶಾಲಾಮಕ್ಕಳು ಉಗ್ರರ ಗುಂಡಿಗೆ ಆಹುತಿಯಾದರು. ಪಾಪ! ಏನೂಅರಿಯದ ಮಕ್ಕಳು ಇವರಿಗೇನು ಕೇಡು ಮಾಡಿದ್ದರು? ಹೋಗಲಿ, ಅಮಾನುಷವಾಗಿ ಮಕ್ಕಳ ಜೀವ ತಗೆದವರು ಜಗತ್ತಿಗೆ ಕೊಡುತ್ತಿರುವ ಸಂದೇಶವಾದರೂ ಏನು? ಅವರು ಕೊಡುತ್ತಿರುವ ಸಂದೇಶವನ್ನು ಜನರು ನಂಬಲೇಬೇಕೆಂಬ ಮಂಕುವರ್ಗಕ್ಕೆ ಸೇರಿಲ್ಲವೆಂದು ಇವರಿಗೆ ತಿಳಿದಿಲ್ಲವೆ? ಇವರನ್ನು ನಾವು ಮನುಷ್ಯರೆನ್ನಬೇಕೆ? ಮೃಗಗಳೆನ್ನಬೇಕೆ? ಮೃಗಗಳು ಕೂಡ ಕೆಲವೊಂದು ಸಮಯಮಾತ್ರ ಮೃಗೀಯವತರ್ೆನೆ ತೋರುತ್ತವೆ. ಆದರೆ, ಇವರು ಮೃಗಕ್ಕಿಂತಲೂ ಕಡೆ.
ಇಂತಹ ಇನ್ನೂ ನೂರಾರು ನಡೆಯಬಾರದ, ನೋಡಬಾರದ ಘಟನೆಗಳು ನಮ್ಮ ಮುಂದೆ ನಡೆಯುತ್ತಲೇ ಇವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಲಕ್ಷಣಗಳಲ್ಲವೇ? ಈ ರೀತಿಯ ಮನೋವಿಕಾರಗಳನ್ನು ತಿದ್ದುವ ದಾರ್ಶನಿಕ ಹುಟ್ಟಿಬರದಿದ್ದರೆ ಇಡೀ ಮಾನವ ಜನಾಂಗ ಒಂದಿಲ್ಲೊಂದು ದಿನ ನಶಿಸಿ ಹೋಗುವ ಅಪಾಯ ಸಾಧ್ಯವಿಲ್ಲದೇಇಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಮೌಲ್ಯಗಳ ಬದುಕು ಶಾಂತಿಯನ್ನು ತಂದು ಕೊಟ್ಟೀತು. ಮಾನವಜನಾಂಗದ ಉಳಿವಿಗೆ ದಾರಿಯಾದೀತು ಇಲ್ಲದಿದ್ದರೆ ಪಳಿಯುಳಿಕೆ ಯಾದೀರಿ ಜೋಕೆ!!
 

‍ಲೇಖಕರು G

1 January, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading