ಬಂಡಾಯ

ಸುಕನ್ಯಾ ಕಳಸ
ಅವನು
ಅವಳ
ಬಾಲ್ಯದ ಆಟೋಗ್ರಾಫ್ ಪುಸ್ತಕಗಳ
ರಾಶಿ ಎಳೆದೆಳೆದು ಹಾಕಿ
ಒಂದು ಪುಸ್ತಕದಲ್ಲಿ ಅವಳು
ಜೀವಕ್ಕಿಂತಲೂ ಮಿಗಿಲು ಜೋಪಾನವಿರಿಸಿದ್ದ
ನವಿಲುಗರಿಯ ಒಂದೊಂದೇ ಎಳೆಗಳ
ಕಿತ್ತು ಕಿತ್ತು ಬಿಸಾಡಿ
ಹೊಸಕಿ ಹಾಕಿದ ಷೂ ಕಾಲುಗಳಡಿ.
ಅವಳು ಸೆಟೆದೆದ್ದು
ಎಲ್ಲಾ ಬಂಧನಗಳ ಹರಿದೊಗೆದು
ನಿಜವಾದ ನವಿಲನ್ನೇ ಹುಡುಕಿಕೊಂಡು
ಹೊರಟೇ ಬಿಟ್ಟಳು!!!





ಅಷ್ಟೇ !!!
ಸರಿಯಾಗೇ ಮಾಡಿದಳು