‘ಆಳದೊಳಗಣ ಅರಿವು’
– ವಸುಧಾ ರವೀಂದ್ರ

ಹಿರಿಮೆ ಹೆಗ್ಗಳಿಕೆ;
ಒಡಲು ಕೆಂಡದ ಮಳಿಗೆ;
ಇದಿರು ಮುಗ್ದತೆಯ ಪರದೆ.
ನೆರೆಮನೆಗೆ
ಕಿಚ್ಚ ತಗುಲಿಸಿ ಹರಿವ,
ಹರ್ಶದ ಹೊಳೆ.
ಇದ್ದರು ಕಾಣದದು
ಕಿಸುರು ಕೆಸರಿನ
ಮಡಕೆ.
ಮುಚ್ಚಿ ಮಚ್ಚಳ
ಮೇಲೆ ತತ್ವ ಶಾಸ್ತ್ರಗಳ,
ಹೊದಿಕೆ.
ತಣ್ಣಗಿನ ಜಲ
ಆವಿಯಾಗುವುದದರ,
ಶಾಖಕ್ಕೆ.
ಹೊತ್ತಿ ಉರಿದ
ಬೂದಿಯಿಂದೆದ್ದು ಬರುವವರಲ್ಲಿ,
ಹಚ್ಚ ಹಸಿರಿನ ಕಳೆ.
ಸಾವು ತಟ್ಟಿದೊಡೆನಾಳೆ,
ಸುರಿವುದು
ಅರಿವಿನಾ ಮಳೆ.





arthagarbhita..nice..
artha aglilla.enannu helhalu horatidare antha.really